Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುರು-ಶುಕ್ರನಿಂದ ಅಪರೂಪದ ರಾಜಯೋಗ: 500 ವರ್ಷಗಳ ಬಳಿಕ ಮರಳಿ ಬರಲಿದೆ ಅದೃಷ್ಟ!
ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳ ಸಂಚಾರವನ್ನು ಬಹಳ ಪ್ರಮುಖ ವಿದ್ಯಮಾನ ಎಂದು ಹೇಳಲಾಗಿದೆ. ಪ್ರತಿಯೊಂದು ಗ್ರಹಗಳ ಸಂಚಾರವು ಒಂದಲ್ಲಾ ಒಂದು ರೀತಿಯ ಶುಭ ಹಾಗೂ ಅಶುಭ ಕಾರಕಕ್ಕೆ ಕಾರಣವಾಗುವುದು ನೋಡಬಹುದು. ಈ ಸಮಯದಲ್ಲಿ ಗ್ರಹಗತಿಗಳಲ್ಲಿನ ಬದಲಾಬಣೆಯು ಹಲವು ವ್ಯಕ್ತಿಗಳಲ್ಲಿ ಬದಲಾವಣೆಗಳ ತರುವುದು ನೋಡಬಹುದು. ಅದ್ರಲ್ಲೂ ಗ್ರಹಗಳಿಂದ ಉಂಟಾಗುವ ಯೋಗಗಳು ವ್ಯಕ್ತಿಯೊಬ್ಬರ ಜೀವನದಲ್ಲಿ ಹಲವು ಕಾರಣಗಳಿಂದ ಶುಭ ಎನಿಸಲಿವೆ.
ಹಾಗೆ 2026ರಲ್ಲಿ ಗುರು ಹಾಗೂ ಶುಕ್ರನಿಂದ ಎರಡು ಪ್ರಬಲ ರಾಜಯೋಗ ಸೃಷ್ಟಿಯಾಗುತ್ತಿದೆ. ಗುರು ಕರ್ಕ ರಾಶಿ ಪ್ರವೇಶಿಸಿದಾಗ ಹಂಸರಾಜ ಯೋಗ ಸೃಷ್ಟಿಯಾಗುತ್ತದೆ. ಇನ್ನೊಂದು ಕಡೆ ಶುಕ್ರನು ಮೀನ ರಾಶಿ ಪ್ರವೇಶಿಸಿದಾಗ ಅಲ್ಲಿ ಮಾಳವ್ಯ ರಾಜಯೋಗವು ಸೃಷ್ಟಿಯಾಗುತ್ತದೆ. ಶುಕ್ರ ಈ ಸಮಯದಲ್ಲಿ ಉತ್ತುಂಗ ಸ್ಥಿತಿಯಲ್ಲಿ ಇರಲಿದ್ದಾನೆ. ಇದರಿಂದ ಶುಕ್ರದೆಸೆ ಆರಂಭವಾಗಲಿದೆ ಎಂದು ಹೇಳಬಹುದು.

2026ರ ಮಧ್ಯಾಂತರದಲ್ಲಿ ಈ ಎರಡೂ ಯೋಗಗಳು ರೂಪುಗೊಳ್ಳುವುದು ನೋಡಬಹುದು. ಈ ಎರಡು ವಿಶೇಷ ಯೋಗದ ಕಾರಣದಿಂದಾಗಿ ಹಲವು ರಾಶಿಗಳ ಅದೃಷ್ಟ ಬದಲಾಗಲಿದೆ. ವಿಶೇಷವಾಗಿ ಗುರು ಹಾಗೂ ಶುಕ್ರನ ರಾಶಿಗಳು ಇದರಿಂದ ಪ್ರಭಾವಕ್ಕೊಳಗಲಿದೆ. ಹಾಗೆ 500 ವರ್ಷಗಳ ಅದೃಷ್ಟ ನಿಮಗೆ ಒಲಿದು ಬರಲಿದೆ. ಹಾಗಾದ್ರೆ ಈ ಎರಡೂ ವಿಶೇಷ ಯೋಗದ ಪರಿಣಾಮವಾಗಿ ಯಾವೆಲ್ಲಾ ರಾಶಿಯವರಿಗೆ ಅನುಕೂಲಕರ ದಿನಗಳಿಗೆ ಈ ವರ್ಷದಿಂದ ಯಾರ ಅದೃಷ್ಟ ಬದಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಕನ್ಯಾ ರಾಶಿ
2026 ರಲ್ಲಿ ರೂಪುಗೊಳ್ಳುವ ಮಾಲವ್ಯ ಮತ್ತು ಹಂಸ ರಾಜಯೋಗಗಳು ಕನ್ಯಾ ರಾಶಿಯವರಿಗೆ ಉತ್ತಮವಾಗಿರುತ್ತವೆ. ನಿಮ್ಮ ಹಲವು ಕೆಲಸಗಳು ಅದೃಷ್ಟದಿಂದ ಕೂಡಿರಲಿದೆ. ಶುಕ್ರನು 7 ನೇ ಮನೆಯಿಂದ ಮಾಲವ್ಯ ರಾಜ್ಯಯೋಗವನ್ನು ಸೃಷ್ಟಿಸುತ್ತಾನೆ ಮತ್ತು ಗುರು 11 ನೇ ಮನೆಯಲ್ಲಿ ಹಂಸ ರಾಜ್ಯಯೋಗವನ್ನು ಸೃಷ್ಟಿಸುತ್ತಾನೆ. ಇವುಗಳಿಂದಾಗಿ ಆದಾಯದಲ್ಲಿ ಉತ್ತಮ ಹೆಚ್ಚಳ ನೋಡಬಹುದು. ಇದರಿಂದ ನಿಮ್ಮ ಆದಾಯಗಳು ದುಪ್ಪಟ್ಟಾಗಲಿವೆ. ನಿಮ್ಮ ವ್ಯವಹಾರಗಳು ಲಾಭದಾಯಕವಾಗಬಹುದು. ಯೋಜಿತ ಕೆಲಸಗಳು ಅದರಲ್ಲೂ ನಿಮ್ಮ ಉಳಿತಾಯ ಹಾಗೂ ಹೂಡಿಕೆಗಳಿಂದ ಅದೃಷ್ಟ ಬದಲಾಗುತ್ತದೆ. ಬಹಳಷ್ಟು ಆತ್ಮವಿಶ್ವಾಸದ ಕೆಲಸಗಳನ್ನು ಮುಗಿಸುವಿರಿ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ.
ಕುಂಭ ರಾಶಿ
2026 ರಲ್ಲಿ ಮಾಳವ್ಯ ಮತ್ತು ಹಂಸ ರಾಜಯೋಗಗಳ ರಚನೆಯಿಂದಾಗಿ ಕುಂಭ ರಾಶಿ ಜನರಿಗೆ ಅದೃಷ್ಟದ ದಿನಗಳು ಹುಡುಕಿ ಬರಲಿವೆ. ಇದಲ್ಲದೆ ಈ ರಾಜಯೋಗಗಳು ಆದಾಯದಲ್ಲಿ ಉತ್ತಮ ಹೆಚ್ಚಳಕ್ಕೆ ಕಾರಣವಾಗುತ್ತವೆ. ಹಠಾತ್ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ನ್ಯಾಯಾಲಯದ ಪ್ರಕರಣಗಳಲ್ಲಿ ನೀವು ಉತ್ತಮ ಯಶಸ್ಸು ಗಳಿಸುವಿರಿ. ಶತ್ರುಗಳ ಸಮಸ್ಯೆ ದೂರಾಗಲಿದೆ. ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳದ ವಿಚಾರದಲ್ಲಿ ನಿಮ್ಮ ಪರವಾದ ದಿನಗಳಿವೆ. ಗುರುವಿನ ಪ್ರಭಾವದಿಂದಾಗಿ ನಿಮ್ಮ ಆದಾಯ ಹಾಗೂ ವ್ಯಾಪಾರ ವಿಚಾರದಲ್ಲಿನ ಅಡ್ಡಿಗಳು ನಿವಾರಣೆಯಾಗಲಿದೆ. ನಿಮ್ಮ ಮನೆಯಲ್ಲಿನ ಕೌಟುಂಬಿಕ ಸಮಸ್ಯೆಗಳು, ಅಥವಾ ದಾಂಪತ್ಯ ವಿಚಾರದಲ್ಲಿನ ಮುನಿಸು ಹಾಗೂ ಮನಸ್ತಾಪಗಳು ಬದಲಾಗುತ್ತವೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ 2026 ರಲ್ಲಿ ಮಾಳವ್ಯ ಮತ್ತು ಹಂಸ ರಾಜಯೋಗಗಳ ರಚನೆಯಿಂದಾಗಿ ತಮ್ಮ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ನೋಡಬಹುದು. ಸಮಾಜದಲ್ಲಿ ಗೌರವ ಮತ್ತು ಗೌರವ ಹೆಚ್ಚಾಗುತ್ತದೆ. ಕೆಲವರು ವಿದೇಶ ಪ್ರವಾಸ ಮಾಡಲು ಅವಕಾಶಗಳನ್ನು ಕಂಡುಕೊಳ್ಳುತ್ತಾರೆ. ನಿಮ್ಮ ಮನೆಗಾಗಿ ನೀವು ಮಾಡಿದ್ದ ಕೆಲಸ ಅಥವಾ ಜವಾಬ್ದಾರಿಯನ್ನು ನೀವು ನಿಭಾಯಿಸುತ್ತೀರಿ. ಕುಟುಂಬ ಜೀವನವು ಸುಖವಾಗಿರಲಿದೆ. ಆಪ್ತರಿಂದ ನಿಮಗೆ ಬರಬೇಕಿದ್ದ ದೊಡ್ಡ ಮೊತ್ತವೊಂದು ಕೈ ಸೇರಲಿದೆ. ಆರ್ಥಿಕ ವಿಚಾರದಲ್ಲಿನ ಅಡ್ಡಿಗಳನ್ನು ನಿವಾರಿಸಿಕೊಳ್ಳುವಿರಿ. ಯಾರೊಂದಿಗಾದರು ಹಣಕಾಸಿನ ಸಮಸ್ಯೆಗಳ ಎದುರಿಸಿದ್ದರೆ ನಿವಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications