ಜನವರಿಯಲ್ಲಿ ಅಪರೂಪದ ರಾಜಯೋಗ: 12 ರಾಶಿಗಳಿಗೂ ಇದೆ ಅದೃಷ್ಟ; ಬಯಸಿದ ಬದುಕು ಸಿಗುವ ಸಮಯ

ಜ್ಯೋತಿಷ್ಯದಲ್ಲಿ ಪಂಚಗ್ರಹಿ ಯೋಗವನ್ನು ಅತ್ಯಂತ ಶಕ್ತಿಶಾಲಿ ಮತ್ತು ಅಪರೂಪದ ಸಂಯೋಜನೆ ಎಂದು ಪರಿಗಣಿಸಲಾಗುತ್ತದೆ. ಐದು ಗ್ರಹಗಳು ಒಂದೇ ರಾಶಿ ಅಥವಾ ಮನೆಯಲ್ಲಿ ಏಕಕಾಲದಲ್ಲಿ ನೆಲೆಗೊಂಡಾಗ ಪಂಚಗ್ರಹಿ ಯೋಗವು ರೂಪುಗೊಳ್ಳುತ್ತದೆ. ಅಂತಹ ಒಂದು ವಿಶೇಷ ಪಂಚಗ್ರಹಿ ಯೋಗವು ಜನವರಿ 2026 ರಲ್ಲಿ ರೂಪುಗೊಳ್ಳುತ್ತಿದ್ದು, ಇದು ಎಲ್ಲಾ 12 ರಾಶಿ ಜನರ ಜೀವನದ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು.

ಮಕರ ಸಂಕ್ರಾಂತಿಯ ಸಮಯದಲ್ಲಿ ಈ ಎಲ್ಲಾ ಗ್ರಹಗಳು ಸಹ ತಮ್ಮ ಸ್ಥಾನ ಬದಲಾಯಿಸಲಿವೆ. ಅದ್ರಲ್ಲೂ ಸೂರ್ಯ, ಚಂದ್ರ, ಮಂಗಳ, ಬುಧ, ಜೊತೆಗೆ ಶುಕ್ರ, ಗುರು ಅಥವಾ ಶನಿ ಗ್ರಹಗಳು ಒಂದೇ ರಾಶಿಯಲ್ಲಿ ನೆಲೆಗೊಂಡಾಗ ಪಂಚಗ್ರಹಿ ಯೋಗವು ರೂಪುಗೊಳ್ಳುತ್ತದೆ. ಈ ಯೋಗವು ವ್ಯಕ್ತಿಯ ಜೀವನದಲ್ಲಿ ಹಲವು ರೀತಿ ಬದಲಾವಣೆಗಳಿಗೆ ಕಾರಣವಾಗಲಿದೆ.

Rare Raja Yoga In January

ಜನವರಿಯಲ್ಲಿ ಕೆಲವು ಪ್ರಮುಖ ಗ್ರಹಗಳ ಸ್ಥಾನ ಪಲ್ಲಟವು ಪಂಚಗ್ರಹಿ ಯೋಗಕ್ಕೆ ಕಾರಣವಾಗುತ್ತಿವೆ. ಈ ಸಮಯದಲ್ಲಿ ಸೂರ್ಯನು ತನ್ನ ಪ್ರಬಲ ಸ್ಥಾನದಲ್ಲಿದ್ದರೆ ಬುಧನು ಬುದ್ದಿವಂತಿಕೆ, ವ್ಯವಹಾರಕ್ಕೆ ಸಂಬಂಧಿಸಿದ ಗ್ರಹ. ಮಂಗಳ ಶಕ್ತಿ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ. ಶುಕ್ರನು ಸಂಬಂಧಗಳು ಮತ್ತು ಸೌಕರ್ಯಗಳ ಮೇಲೆ ಪ್ರಭಾವ ಬೀರುತ್ತಾನೆ. ಚಂದ್ರನು ಮನಸ್ಸು ಮತ್ತು ಭಾವನೆಗಳ ಮೇಲೆ ಪ್ರಭಾವ ಬೀರುತ್ತಾನೆ. ಈ ಗ್ರಹಗಳ ಸಂಯೋಗವು ಜೀವನದಲ್ಲಿ ಅನಿರೀಕ್ಷಿತ ಅವಕಾಶಗಳು ಮತ್ತು ಸವಾಲುಗಳನ್ನು ತರುತ್ತದೆ.

ಸೂರ್ಯ, ಮಂಗಳ, ಬುಧ, ಶುಕ್ರ ಮತ್ತು ಚಂದ್ರರು ಮಕರ ರಾಶಿಯಲ್ಲಿ ಸಂಯೋಗದಲ್ಲಿ ಇರುತ್ತಾರೆ. ಶುಕ್ರನು ಜನವರಿ 13 ರಂದು ಮಕರ ರಾಶಿಗೆ, ಜನವರಿ 14 ರಂದು ಸೂರ್ಯ, ಜನವರಿ 16 ರಂದು ಮಂಗಳ, ಜನವರಿ 18 ರಂದು ಚಂದ್ರ ಮತ್ತು ಜನವರಿ 24 ರಂದು ಬುಧ ರಾಶಿಗೆ ಪ್ರವೇಶಿಸುತ್ತಾರೆ. ಜನವರಿ 24 ರಂದು ಬುಧನು ಮಕರ ರಾಶಿಗೆ ಪ್ರವೇಶಿಸಿದ ತಕ್ಷಣ, ಪಂಚಗ್ರಹಿ ಯೋಗವು ಸಂಪೂರ್ಣವಾಗಿ ಸಕ್ರಿಯಗೊಳ್ಳುತ್ತದೆ. ಹಾಗಾದ್ರೆ ಈ ಅಪರೂಪದ ಯೋಗದಿಂದ ಯಾರಿಗೆಲ್ಲಾ ಶುಭಕರ ಯಾರಿಗೆ ಲಾಭದಾಯಕ ಅನ್ನೋದನ್ನು ತಿಳಿದುಕೊಳ್ಳೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಒಂದು ಪ್ರಮುಖ ವಿಚಾರದಲ್ಲಿ ಶುಭವಾಗುತ್ತದೆ. ಅದ್ರಲ್ಲೂ ನಿಮ್ಮ ಹಳೆಯ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಮನೋಸ್ಥೈರ್ಯ ಬರಲಿದೆ. ಆಪ್ತರಿಂದ ಹಣ ಬರಲಿದೆ. ನಿಮ್ಮ ಹಲವು ವಿಚಾರಗಳು ಧನಾತ್ಮಕ ಫಲಿತಾಂಶ ತರಲಿದೆ.

ವೃಷಭ ರಾಶಿ

ನಿಮಗೆ ಈ ಸಮಯವು ಆದಾಯದ ವಿಚಾರದಲ್ಲಿ ಶುಭವಾಗಿರಲಿದೆ. ಹೂಡಿಕೆಗಳು ಲಾಭದಾಯಕವಾಗಲಿದೆ. ಖರ್ಚುಗಳು ಕಡಿಮೆಯಾಗಲಿದೆ. ಕೌಟುಂಬಿಕ ಸಮಸ್ಯೆ ದೂರಾಗಲಿದೆ.

ಮಿಥುನ ರಾಶಿ

ಈ ಸಮಯದಲ್ಲಿ ನಿಮಗೆ ಅನುಕೂಲಕರ ವಾತಾವರಣವಿದೆ. ಆಪ್ತರ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದ್ದರೆ ಲಾಭ ಮಾಡುವಿರಿ. ಮನೆ ವಿಚಾರದಲ್ಲಿ ನಿಮಗೆ ಶುಭವಿದೆ. ಅವಿವಾಹಿತರಿಗೆ ವಿವಾಹ ಸಂಬಂಧಿತ ವಿಚಾರದಲ್ಲಿ ಅನುಕೂಲಕರ ದಿನಗಳಿವೆ.

ಕರ್ಕ ರಾಶಿ

ನಿಮಗೆ ಈ ಸಮಯವು ಅನುಕೂಲಕರ. ದಾಂಪತ್ಯ ವಿಚಾರದಲ್ಲಿನ ಸಮಸ್ಯೆಗಳು ಈ ಸಮಯದಲ್ಲಿ ದೂರಾಗಲಿದೆ. ಮನೆಗೆ ಹೊಸ ಅತಿಥಿಯ ಆಗಮನವಾಗಬಹುದು.

ಸಿಂಹ ರಾಶಿ

ನಿಮ್ಮ ಹಣಕಾಸಿನ ವಿಚಾರದಲ್ಲಿ ಧನಾತ್ಮಕ ಬದಲಾವಣೆ ನೋಡುವಿರಿ. ಹಳೆಯ ಸಾಲಗಳು ಮರುಪಾವತಿ ಸಂಭವವಿದೆ. ಆಪ್ತರಿಂದ ಸಿಹಿ ಸುದ್ದಿಗಳು ಬರಲಿವೆ.

ಕನ್ಯಾ ರಾಶಿ

ನಿರುದ್ಯೋಗಿಗಳು ಈ ಸಮಯದಲ್ಲಿ ಉತ್ತಮ ಉದ್ಯೋಗ ಪಡೆಯುವ ಸಮಯ ಆಗಿರಲಿದೆ. ನಿಮ್ಮ ಹಲವು ಕೆಲಸಗಳು ಅದೃಷ್ಟದಿಂದ ಕೂಡಿರಲಿದೆ.

ತುಲಾ ರಾಶಿ

ನಿಮಗೆ ಈ ಪಂಚಗ್ರಹಿ ಯೋಗವು ಅದೃಷ್ಟ ತರಲಿದೆ. ನಿಮ್ಮಲ್ಲಿ ಹಣ‍ಕಾಸಿನ ಹರಿವು ನೋಡಬಹುದು. ಆಪ್ತರ ಸಹಕಾರವಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ ಜನರಲ್ಲಿ ಈ ದಿನವು ಅತ್ಯುತ್ತಮವಾಗಿರಲಿದೆ. ನಿಮ್ಮಲ್ಲಿ ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳಲಿದೆ. ಅನೇಕರಲ್ಲಿ ಈ ಸಮಯ ಮಧುರ ಕ್ಷಣಗಳಿಗೆ ಕಾರಣವಾಗಲಿದೆ.

ಧನು ರಾಶಿ

ಧನು ರಾಶಿ ಜನರಲ್ಲಿದ್ದ ದೊಡ್ಡ ಚಿಂತೆ ದೂರಾಗಲಿದೆ. ನಿಮ್ಮ ವಾಹನ ಖರೀದಿಯಂತಹ ಬಯಕೆಗಳನ್ನು ಈಡೇರಿಸಿಕೊಳ್ಳುವಿರಿ.

ಮಕರ ರಾಶಿ

ಮಕರ ರಾಶಿ ಜನರಲ್ಲಿ ಈ ಸಮಯವು ಬಹಳಷ್ಟು ಉತ್ತಮ ಕೆಲಸಗಳ ಮಾಡಲು ಪ್ರೇರೇಪಿಸಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ಧನಲಾಭವಿದೆ. ಬಹಳ ಸಮಯದ ದೂರುಗಳಿಂದ ಮುಕ್ತಿ ಪಡೆಯಲಿದ್ದೀರಿ.

ಕುಂಭ ರಾಶಿ

ಈ ಅಪರೂಪದ ಯೋಗದಿಂದ ಕುಂಭ ‍ರಾಶಿ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಹಾಗೆ ನಿಮ್ಮ ಆಸ್ತಿ, ಮನೆ ಕುರಿತಾದ ವಿಚಾರದಲ್ಲಿ ಹಲವು ರೀತಿ ಲಾಭಗಳಿವೆ.

ಮೀನ ರಾಶಿ

ನಿಮಗೆ ಈ ಸಮಯವು ಅದೃಷ್ಟದಿಂದ ಕೂಡಿರಲಿದೆ, ಬ್ಯಾಂಕಿಂಗ್ ವಿಚಾರಗಳು, ಆರ್ಥಿಕ ವಿಚಾರದಲ್ಲಿ ಸ್ವಾವಲಂಬಿಗಳಾಗಬಹುದು.

English summary

Rare Raja Yoga In January: All 12 Zodiac signs are lucky

During Makar Sankranti, all these planets will also change their positions. Panchagrahi Yoga is formed when the Sun, Moon, Mars, Mercury, along with Venus, Jupiter or Saturn, are in the same sign.
Story first published: Monday, January 12, 2026, 19:57 [IST]
X
Desktop Bottom Promotion