Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
100 ವರ್ಷದ ಬಳಿಕ ಅಪರೂಪದ ರಾಜಯೋಗ; ಸಂಕ್ರಾಂತಿ ಬಳಿಕ 3 ರಾಶಿಯವರ ಜೀವನದಲ್ಲಿ ಶುಭಯೋಗ!
ಗ್ರಹಗಳು ಸ್ಥಾನಪಲ್ಲಟ ಆದಾಗ ಹಲವು ರಾಶಿಗಳ ಮೇಲೆ ಅದರ ಪರಿಣಾಮ ಉಂಟು ಮಾಡುವುದು ಸಹಜ ಪ್ರಕ್ರಿಯೆ. ಹಾಗೆ ವಿಶೇಷ ಸಮಯದಲ್ಲಿನ ಗ್ರಹಗಳ ಚಲನೆಯು ಹಲವು ರಾಶಿಗಳ ಮೇಲೆ ಪರಿಣಾಮಕಾರಿಯಾಗಿ ಬದಲಾಗುವುದನ್ನು ನಾವು ನೋಡಿದ್ದೇವೆ. ಸಾಮಾನ್ಯ ದಿನಗಳಲ್ಲಿ ಅಲ್ಲದೆ ವಿಶೇಷ ದಿನಗಳಲ್ಲಿ ಗ್ರಹಗತಿಗಳಲ್ಲಿನ ಬದಲಾವಣೆಯು ಹಲವು ರೀತಿಯಲ್ಲಿ ಅಚ್ಚರಿಗಳ ತರುವುದು ನೋಡಬಹುದು.
ಅದ್ರಲ್ಲೂ ಸೌರ ಮಂಡಲದ ಪ್ರಮುಖ ಗ್ರಹವಾಗಿರುವ ಸೂರ್ಯನ ಸಂಚಾರದಲ್ಲಿ ಬದಲಾವಣೆಯಾದಾಗ ಹಲವು ಗ್ರಹಗಳು ಹಾಗೆ ಎಲ್ಲಾ ರಾಶಿಗಳ ಮೇಲೆಯೂ ಅದರ ಪರಿಣಾಮ ಇರಲಿದೆ. ಕೆಲವೊಮ್ಮೆ ಗ್ರಹಗಳು ಇತರ ಗ್ರಹಗಳೊಂದಿಗೆ ಅಥವಾ ಹೆಚ್ಚು ವಿಶೇಷ ಪರಿಣಾಮ ಬೀರುವ ಅಂಶಗಳ ಮೂಲಕ ಯೋಗಗಳನ್ನು ರೂಪಿಸುತ್ತವೆ. ಮತ್ತು ಅಂತಹ ಯೋಗಗಳು ಹಬ್ಬದ ಋತುಗಳಲ್ಲಿ ಸಂಭವಿಸಿದಾಗ, ಅವುಗಳನ್ನು ಇನ್ನಷ್ಟು ವಿಶೇಷವೆಂದು ಪರಿಗಣಿಸಲಾಗುತ್ತದೆ.

ಈಗ ಜನವರಿ 14ರಂದು ಸೂರ್ಯನು ಉತ್ತರಾಯಣಕ್ಕೆ ಪ್ರಯಾಣಿಸುವಾಗ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಧನು ರಾಶಿಯಿಂದ ಹೊರಬರುವ ಸೂರ್ಯ ಮಕರ ರಾಶಿಗೆ ಚಲಿಸುತ್ತಾನೆ. ಹಾಗೆ ಧನು ರಾಶಿಯಲ್ಲಿ ಬುಧ ಸಂಚಾರದ ಕಾರಣದಿಂದಾಗಿ ಸೂರ್ಯ ಹಾಗೂ ಬುಧನಿಂದ ಬುಧಾದಿತ್ಯ ಯೋಗ ರೂಪುಗೊಳ್ಳಲಿದೆ.
ಜನವರಿ 14, 2026 ರಂದು ಮಧ್ಯಾಹ್ನ 2.50 ಕ್ಕೆ, ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಆ ದಿನವನ್ನು ಮಕರ ಸಂಕ್ರಾಂತಿ ಎಂದು ಪರಿಗಣಿಸಲಾಗುತ್ತದೆ. ಈ ಮಕರ ಸಂಕ್ರಾಂತಿಯ ದಿನದಂದು, ಸೂರ್ಯ ಮತ್ತು ಬುಧನ ಸಂಯೋಜನೆಯು ಧನು ರಾಶಿಯಲ್ಲಿ ಅತ್ಯಂತ ಶಕ್ತಿಶಾಲಿ ಬುಧಾದಿತ್ಯ ರಾಜ್ಯಯೋಗವನ್ನು ಸೃಷ್ಟಿಸುತ್ತದೆ. ಈ ಅಪರೂಪದ ಯೋಗವು 100 ವರ್ಷಗಳಿಗೊಮ್ಮೆ ಸಂಭವಿಸುತ್ತಿದೆ. ಈ ಯೋಗದಿಂದ ಮೂರು ರಾಶಿಗಳ ಜೀವನ ಬದಲಾಗಲಿದೆ. ಹಾಗಾದ್ರೆ ಅಪರೂಪದ ಯೋಗದಿಂದ ಯಾರಿಗೆಲ್ಲಾ ಶುಭಕರ ಅನ್ನೋದನ್ನು ತಿಳಿದುಕೊಳ್ಳೋಣ.
ಕುಂಭ ರಾಶಿ
ಸೂರ್ಯ ಮತ್ತು ಬುಧ ಸಂಯೋಜನೆಯಿಂದಾಗಿ ಕುಂಭ ರಾಶಿಯ 11 ನೇ ಮನೆಯಲ್ಲಿ ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ಇದು ನಿಮ್ಮ ಹಲವು ಬಯಕೆಗಳು, ಆಸೆಗಳ ಈಡೇರಲು ಕಾರಣವಾಗುತ್ತದೆ. ಹೂರಿಕೆಗಳಿಂದ ಉತ್ತಮ ಲಾಭ ನೋಡಬಹುದು. ಪ್ರಯಾಣ ಮತ್ತು ಹೊಸ ಸ್ನೇಹದ ಮೂಲಕ ಉತ್ತಮ ಆರ್ಥಿಕ ಲಾಭವಾಗುತ್ತದೆ. ಎಲ್ಲಾ ಯೋಜಿತ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಷೇರು ಮಾರುಕಟ್ಟೆ, ಉಳಿತಾಯದಲ್ಲಿನ ಹೆಚ್ಚಳ ಕೂಡ ನೋಡಬಹುದು. ಹಲವು ಸಮಯದಿಂದ ನಿಮಗೆ ಹಣಕಾಸಿನ ಅಡ್ಡಿಯಿಂದ ಅರ್ಧಕ್ಕೆ ನಿಂತಿದ್ದ ಕೆಲವೊಂದು ಪೂರ್ಣವಾಗಲಿದೆ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ಹಲವು ಅನಾರೋಗ್ಯ ಸಮಸ್ಯೆಗಳು ಸುಧಾರಣೆ ಆಗಿರಲಿದೆ.
ಮೇಷ ರಾಶಿ
ಸೂರ್ಯ ಮತ್ತು ಬುಧನ ಸಂಯೋಜನೆಯಿಂದಾಗಿ ಮೇಷ ರಾಶಿಯ 9 ನೇ ಮನೆಯಲ್ಲಿ ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ಇದು ಪ್ರತಿಯೊಂದು ಪ್ರಯತ್ನದಲ್ಲೂ ಉತ್ತಮ ಯಶಸ್ಸನ್ನು ನೀಡುತ್ತದೆ. ಅವಿವಾಹಿತರಲ್ಲಿ ಉದ್ಯೋಗ ಸಂಬಂಧಿತ ಸಮಸ್ಯೆಗಳು ಬಗೆಹರಿಯಲಿದೆ. ಅದ್ರಲ್ಲೂ ನಿರುದ್ಯೋಗಿಗಳು ಉತ್ತಮ ಉದ್ಯೋಗವಕಾಶಗಳು ಸಿಗುವ ಸಾಧ್ಯತೆ ಹೆಚ್ಚಾಗಿರಲಿದೆ. ನಿಮ್ಮ ಹಣಕಾಸು ಕುರಿತಾಗಿ ಹಾಗೆ ವ್ಯವಹಾರ ಕುರಿತಾಗಿ ಸಂತೋಷದ ದಿನಗಳಿವೆ. ಮನೆಯಲ್ಲಿ ಶುಭ ಸಮಾಚಾರಗಳಿವೆ.
ಕನ್ಯಾ ರಾಶಿ
ಕನ್ಯಾ ರಾಶಿಯ 4ನೇ ಮನೆಯಲ್ಲಿ ಸೂರ್ಯ ಮತ್ತು ಬುಧನ ಸಂಯೋಜನೆಯು ಬುಧಾದಿತ್ಯ ರಾಜಯೋಗವನ್ನು ಸೃಷ್ಟಿಸುತ್ತದೆ. ಈ ರಾಶಿ ಜನರಿಗೆ ಉತ್ತಮ ಭೌತಿಕ ಸುಖಗಳನ್ನು ಪಡೆಯುತ್ತಾರೆ. ಹೊಸ ಮನೆ ಮತ್ತು ವಾಹನವನ್ನು ಖರೀದಿಸುವ ಅವಕಾಶಗಳು ಇರುತ್ತವೆ. ನಿಮ್ಮ ಉಳಿತಾಯಗಳು ಹಾಗೆ ಹೂಡಿಕೆಗಳು ದೊಡ್ಡ ಲಾಭಕ್ಕೆ ಕಾರಣವಾಗಲಿದೆ. ದಾಂಪತ್ಯ ವಿಚಾರಗಳಲ್ಲಿ ನಿಮಗೆ ಮಧುರ ಕ್ಷಣಗಳೂ, ದಿನಗಳನ್ನು ನೋಡಬಹುದು. ಆಧ್ಯಾತ್ಮ ವಿಚಾರದಲ್ಲಿ ನಿಮಗೆ ಹೊಸ ರೀತಿಯ ಅನುಭವಗಳ ಪಡೆಯಬಹುದು. ಪ್ರವಾಸಗಳಲ್ಲಿ ತೊಡಗುವ ನಿಮ್ಮ ಬಯಕೆಗಳು ಈಡೇರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications