Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ದೀಪಾವಳಿಯಲ್ಲಿ ಅಪರೂಪದ ಗ್ರಹಗಳ ಸಂಯೋಗ: ಈ ರಾಶಿಯವರಿಗೆ ಅದೃಷ್ಟ, ಕೈ ತುಂಬ ಹಣ, ವಾಹನ ಲಾಭ!
ದೀಪಾವಳಿ ಆಗಮಿಸುತ್ತಿದೆ, ಕೆಲವೇ ದಿನಗಳು ಬಾಕಿ ಉಳಿದಿವೆ. ಅದ್ರಲ್ಲೂ ಅಕ್ಟೋಬರ್‌ನಲ್ಲಿ ಉಂಟಾಗುತ್ತಿರುವ ಹಲವು ಶುಭ ಗಳಿಗೆಯ ನಡುವೆ ಈ ದೀಪಾವಳಿಯಲ್ಲಿಯೂ ಶುಭಕರ ಯೋಗಗಳಿವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆಯನ್ನು ಬಹಳ ಪ್ರಮುಖ ವಿದ್ಯಮಾನವಾಗಿ ನೋಡಲಾಗಿದೆ. ಈ ನಡುವೆ ಅಕ್ಟೋಬರ್‌ನಲ್ಲಿ ಉಂಟಾಗುತ್ತಿರುವ ಹಲವು ವಿದ್ಯಮಾನಗಳು ಶುಭಕಾಲವನ್ನು ತರಲಿವೆ.
ಅಕ್ಟೋಬರ್‌ನಲ್ಲಿ ಧಂತೇರಸ್, ದೀಪಾವಳಿ ಮತ್ತು ಛಠ್ ಪೂಜೆಯಂತಹ ಪ್ರಮುಖ ಹಬ್ಬಗಳಿವೆ. ಈ ತಿಂಗಳು ಆಚರಿಸಲಾಗುತ್ತದೆ. ಈ ಹಬ್ಬದ ತಿಂಗಳಲ್ಲಿ ಗ್ರಹಗಳ ಚಲನೆಯಲ್ಲಿ ಬದಲಾವಣೆಗಳನ್ನು ಸಹ ನೋಡಬಹುದು. ದೀಪಾವಳಿ ಸಮಯದಲ್ಲಿ ಉಂಟಾಗುತ್ತಿರುವ ಹಲವು ಗ್ರಹಗಳ ಸ್ಥಾನಪಲ್ಲಟವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುತ್ತಿವೆ.

ಹಾಗೆ ಸೂರ್ಯನು ಅಕ್ಟೋಬರ್ 17 ರಂದು ಮಧ್ಯಾಹ್ನ 1:36 ಕ್ಕೆ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಗುರುವು ಅಕ್ಟೋಬರ್ 19 ರಂದು ತನ್ನ ರಾಶಿಯನ್ನು ಬದಲಾಯಿಸಿ ಕರ್ಕ ರಾಶಿಗೆ ಚಲಿಸಲಿದ್ದಾನೆ. ಚಂದ್ರನು ಕನ್ಯಾರಾಶಿಯಿಂದ ತುಲಾ ರಾಶಿಗೆ ಸಾಗುತ್ತಾನೆ. ಬುಧನು ಅಕ್ಟೋಬರ್ 24, 2025 ರಂದು ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಾನೆ. ಈ ಎಲ್ಲಾ ಗ್ರಹಗಳ ಚಲನೆಯು ದೀಪಾವಳಿ ಸಮಯದಲ್ಲಿ ಉತ್ತಮವಾಗಿರಲಿದೆ.
ಹಾಗಾದ್ರೆ ಈ ದೀಪಾವಳಿಯು ಯಾವೆಲ್ಲಾ ರಾಶಿಯವರಿಗೆ ಶುಭಕರವಾಗುತ್ತಿದೆ. ಯಾರಿಗೆ ಲಾಭ ತರಲಿದೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ದೀಪಾವಳಿ ಸಮಯವೂ ಬಹಳ ಅನುಕೂಲಕರ ದಿನಗಳಾಗಿ ಬದಲಾಗಲಿವೆ. ಸೂರ್ಯನ ಸಂಚಾರದಿಂದಾಗಿ ನಿಮ್ಮ ಹಲವು ವಿಚಾರಗಳಲ್ಲಿ ಶುಭವಾಗುತ್ತಿದೆ. ಹಣಕಾಸಿನ ವಿಚಾರವಾಗಿ ಸ್ವಾವಲಂಬಿಗಳಾಗುತ್ತೀರಿ. ನಿಮ್ಮ ಹಲವು ಕೆಲಸಗಳಲ್ಲಿ ಶುಭವಾಗುತ್ತಿದೆ ವಾಹನ ಖರೀದಿಯ ಬಯಕೆ ಇದ್ದರೆ ಈ ಸಮಯದಲ್ಲಿ ಶುಭವಾಗುತ್ತಿದೆ. ನಿಮ್ಮ ವ್ಯವಹಾರಗಳಲ್ಲಿ ಅಡ್ಡಿಯಾಗಿದ್ದ ವಿಚಾರವೊಂದು ಬಗೆಹರಿಯಲಿದೆ. ಅನೇಕರಿಗೆ ಈ ಸಮಯದಲ್ಲಿ ವಿವಾಹ ಸಂಬಂಧಿ ಅಡ್ಡಿಗಳು ದೂರಾಗಲಿವೆ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಗ್ರಹ ಚಲನೆಯು ಬದಲಾವಣೆಗಳಿಂದ ತುಂಬಿರುತ್ತದೆ. ನೀವು ಯಾವುದೇ ಕೆಲಸ ಮಾಡಿದರೂ ಅದರಿಂದ ಲಾಭ ಮಾಡಬಹುದು. ಹೊಸ ಆದಾಯ ಮೂಲವನ್ನು ಪಡೆಯಲು ನೆರವಾಗುವ ದಿನಗಳಿವು. ಆರ್ಥಿಕ ವಿಚಾರವಾಗಿ ಹಾಗೆ ನಿಮ್ಮ ವ್ಯವಹಾರದಲ್ಲಿ ಹೊಸ ರೀತಿಯ ಲಾಭದಾಯಕ ದಿನಗಳಿವೆ. ಸ್ವಂತ ಉದ್ಯೋಗ ಮಾಡುತ್ತಿದ್ದವರಿಗೆ ಇಷ್ಟು ದಿನವಿದ್ದ ಅಡ್ಡಿಯೊಂದು ದೂರಾಗಲಿದೆ. ನಿರುದ್ಯೋಗಿಗಳಾಗಿದ್ದರೆ ಈ ಸಮಯದಲ್ಲಿ ನೀವು ಬಯಸಿದಂತಹ ಕೆಲಸ ಪಡೆಯಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ಸಮಯದಲ್ಲಿ ಮದುವೆ ಸಂಬಂಧ ಇದ್ದ ಅಡ್ಡಿ ದೂರಾಗಲಿದೆ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳ ವಹಿಸುವಿರಿ. ಈ ಸಮಯದಲ್ಲಿ ನೀವು ಚಿನ್ನ, ಬೆಳ್ಳಿ ಅಥವಾ ವಾಹನವನ್ನು ಖರೀದಿಸುವ ಕನಸನ್ನು ಈಡೇರಿಸುತ್ತೀರಿ. ವಿದೇಶ ಪ್ರಯಾಣ ಅಥವಾ ಪ್ರಯಾಣಗಳ ಮಾಡಲು ಕಾಲ ಕೂಡಿ ಬರಲಿದೆ. ಹೊಸ ಯೋಜನೆಗಳಲ್ಲಿ ಲಾಭ ಮಾಡಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಿದೆ.
ವೃಶ್ಚಿಕ ರಾಶಿ
ಈ ಸಮಯದಲ್ಲಿ ವೃಶ್ಚಿಕ ರಾಶಿಯ ಜನರಲ್ಲಿ ಉತ್ತಮ ದಿನಗಳಿವೆ. ಕೌಟುಂಬಿಕ ಸಮಸ್ಯೆಗಳು ನಿವಾರಣೆಯಾಗಲಿದೆ, ಬಹುದಿನದ ಕನಸೊಂದನ್ನು ನೀವು ಈಡೇರಿಸಿಕೊಳ್ಳುತ್ತೀರಿ. ಸಂಬಂಧಗಳಲ್ಲಿನ ಬದಲಾವಣೆಗಳು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಂಬಿಕೆಯನ್ನು ಹೆಚ್ಚಿಸುತ್ತದೆ. ನೀವು ಉತ್ತಮ ವಿವಾಹ ಪ್ರಸ್ತಾಪಗಳನ್ನು ಪಡೆಯಬಹುದು. ಮಕ್ಕಳ ವಿಚಾರದಲ್ಲಿ ಇದ್ದ ಒತ್ತಡ ಹಾಗೂ ಚಿಂತೆಯಂದು ಶಾಶ್ವತವಾಗಿ ದೂರಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications
