Latest Updates
-
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್‌ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ
100 ವರ್ಷದ ಬಳಿಕ ಮೀನರಾಶಿಯಲ್ಲಿ ಅಪರೂಪದ ಗ್ರಹಗಳ ಸಂಯೋಗ..! ಯಾವೆಲ್ಲಾ ರಾಶಿಗೆ ಶುಭಕರ
ಜ್ಯೋತಿಷ್ಯಶಾಸ್ತ್ರದಲ್ಲಿ ಎಲ್ಲಾ ಒಂಬತ್ತು ಗ್ರಹಗಳಿಗೂ ಬಹಳ ಪ್ರಾಮುಖ್ಯತೆ ನೀಡಲಾಗುತ್ತೆ. ಪ್ರತಿಯೊಂದು ಗ್ರಹದ ಚಲನೆಯು ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಬೀರುವುದನ್ನು ನಾವು ನೋಡಬಹುದು. ಆದರಲ್ಲೂ ಕೆಲವೊಂದು ಯೋಗಗಳು, ಅಪರೂಪದ ಸಂಯೋಗಗಳು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುತ್ತದೆ. ಹಾಗೆ ಶುಭ ಹಾಗು ಅಶುಭ ಲಾಭಗಳಿಗೆ ಕಾರಣವಾಗುವುದು ನೋಡಬಹುದು. ಹಾಗೆ ಗ್ರಹಗಳ ಚಲನೆಯು ವ್ಯಕ್ತಿಯೊಬ್ಬರ ಜೀವನ ಬದಲಾಯಿಸಬಹುದು.
ಪ್ರತಿಯೊಂದು ಗ್ರಹಗಳ ಚಲನೆಯು ಒಂದೊಂದು ರೀತಿಯ ಲಾಭಕ್ಕೆ ಕಾರಣವಾಗುತ್ತೆ. ನಿರ್ಧಿಷ್ಟ ಪ್ರಮಾಣದಲ್ಲಿ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಉಂಟು ಮಾಡುತ್ತದೆ. ಈಗ ಮಾರ್ಚ್‌ನಲ್ಲಿ ಹಲವು ಗ್ರಹಗಳ ಚಲನೆ ನೋಡಬಹುದು. ಅದರಲ್ಲೂ ಮೀನ ರಾಶಿಯಲ್ಲಿ 6 ಗ್ರಹಗಳ ಚಲನೆ ಉಂಟಾಗುತ್ತಿದೆ. ಅಪರೂಪದಲ್ಲಿ ಈ ರೀತಿಯ ವಿದ್ಯಮಾನ ನಡೆಯುತ್ತಿದ್ದು, ಮೀನ ರಾಶಿಯಲ್ಲಿ 6 ಗ್ರಹಗಳು ಚಲಿಸುತ್ತಿವೆ.

ಮೀನ ರಾಶಿಯಲ್ಲಿ ಈಗಾಗಲೇ ಬುಧ, ಶುಕ್ರ ಹಾಗೂ ರಾಹು ಗ್ರಹಗಳು ಸಂಚರಿಸುತ್ತಿವೆ. ಹಾಗೆ ಮಾರ್ಚ್ 14 ರಂದು ಸೂರ್ಯನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಅದಾದ ನಂತರ, ಮಾರ್ಚ್ 28 ರಂದು ಚಂದ್ರನು ಮೀನ ರಾಶಿಗೆ ಪ್ರವೇಶಿಸುತ್ತಾನೆ. ಅದರ ನಂತರ, ಮಾರ್ಚ್ 29 ರಂದು, ಶನಿ ದೇವನು ಸಹ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.
ಹೀಗಾಗಿ ಮೀನರಾಶಿಯಲ್ಲಿ ರಾಹು, ಬುಧ, ಶುಕ್ರ, ಸೂರ್ಯ, ಚಂದ್ರ ಮತ್ತು ಶನಿ ಗ್ರಹಗಳ ಅಪರೂಪದ ಸಂಯೋಗ ಉಂಟಾಗಲಿದೆ. ಇದು 100 ವರ್ಷಗಳ ನಂತರ ಸಂಭವಿಸುತ್ತಿರುವ ಅಪರೂಪದ ಸಂಯೋಗವಾಗಿದೆ. ಹೀಗಾಗಿ ಇದು ಹಲವು ರಾಶಿಗಳಲ್ಲಿ ಶುಭ ಕಾಲಕ್ಕೆ ಕಾರಣವಾಗುತ್ತಿದೆ. ಈ ಅಪರೂಪದ ಸಂಯೋಜನೆಯು ಹಲವು ರಾಶಿಯವರಿಗೆ ಇನ್ನಿಲ್ಲದ ಲಾಭಕ್ಕೆ ಕಾರಣವಾಗುತ್ತಿದೆ. ಹಾಗಾದ್ರೆ ಯಾರಿಗೆ ಈ ಅಪರೂಪದ ಸಂಯೋಗ ಲಾಭ ತರಲಿದೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಮಿಥುನ ರಾಶಿ
ಮಿಥುನ ರಾಶಿಯ 10 ನೇ ಮನೆಯಲ್ಲಿ 6 ಗ್ರಹಗಳ ಸಂಯೋಗ ಸಂಭವಿಸುತ್ತದೆ. ಈ ಅಪರೂಪದ ಸಂಯೋಗವು ದೀರ್ಘಕಾಲದ ಲಾಭಕ್ಕೆ ಕಾರಣವಾಗುತ್ತಿದೆ. ಹಲವು ರೀತಿಯಲ್ಲಿ ಈ ಮಿಥುನ ರಾಶಿಯವರ ಪ್ರಗತಿಗೆ ಇದು ಕಾರಣವಾಗಲಿದೆ. ನಿಮ್ಮ ಕಠಿಣ ಪರಿಶ್ರಮಗಳು ಈ ಸಮಯದಲ್ಲಿ ಫಲ ನೀಡಲಿವೆ. ನಿಮ್ಮ ಆರ್ಥಿಕ ಸಮಸ್ಯೆಗಳು ದೂರಾಗಲಿವೆ. ಹಾಗೆ ಹೂಡಿಕೆಗಳು, ಉಳಿತಾಯ ಹೆಚ್ಚಳವಾಗಲಿದೆ. ಯಾವುದೇ ಕೆಲಸದಲ್ಲೂ ನಿಮ್ಮ ಪರವಾದ ಒಲವು ನೋಡಬಹುದು. ಉದ್ಯಮಿಗಳು, ಪಾಲುದಾರಿಕೆ ವ್ಯವಹಾರ ಮಾಡುವವರಿಗೆ ಇದು ಅತ್ಯಂತ ಫಲದಾಯಕ ದಿನವಾಗಿರಲಿದೆ. ನಿಮ್ಮ ಆರೋಗ್ಯದಲ್ಲೂ ಸುಧಾರಣೆ ನೋಡಬಹುದು, ಕೆಲಸ ಕಾರ್ಯದಲ್ಲಿ ಅಡ್ಡಿಯಾಗುತ್ತಿದ್ದ ವಿಚಾರಗಳು ಮರೆಯಾಗಲಿದೆ. ಅವಿವಾಹಿತರು ಈ ಸಮಯದಲ್ಲಿ ಶುಭ ಸುದ್ದಿಗಳ ಕೇಳಲಿದ್ದಾರೆ.
ಕರ್ಕ ರಾಶಿ
ಕರ್ಕ ರಾಶಿಯ 9ನೇ ಮನೆಯಲ್ಲಿ 6 ಗ್ರಹಗಳ ಸಂಯೋಗ ಉಂಟಾಗುತ್ತಿದೆ. ಹೀಗಾಗಿ ಕರ್ಕ ರಾಶಿಯ ಮಂದಿಯಲ್ಲಿ ಎಲ್ಲ ಅಂದುಕೊಂಡಂತೆ ನೆರವೇರುತ್ತೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಅದೃಷ್ಟ ಕೈ ಹಿಡಿಯಲಿದೆ. ಇದು ನಿಮ್ಮ ವ್ಯಾಪಾರ ವ್ಯವಹಾರಗಳು, ಹಣಕಾಸು ವಿಚಾರಗಳು ಸುಲಭವಾಗಿ ಮುಕ್ತಾಯವಾಗಲಿದೆ. ನೀವು ಹಲವು ವರ್ಷದಿಂದ ಬಯಸಿದ್ದ ವಿಚಾರಗಳು ಈ ಸಮಯದಲ್ಲಿ ನೆರವೇರಲಿದೆ. ವ್ಯಾಪಾರಿಗಳು ಈ ಸಮಯದಲ್ಲಿ ಅತೀ ಹೆಚ್ಚು ಲಾಭ ನೋಡುತ್ತಾರೆ, ಹಾಗೆ ನಿಮ್ಮ ಕುಟುಂಬದ ಸದಸ್ಯರಲ್ಲಿದ್ದ ಅನಾರೋಗ್ಯ ಸಮಸ್ಯೆಯೂ ಸೂಕ್ತ ಆರೈಕೆಯೊಂದಿಗೆ ನಿವಾರಣೆ ಆಗಲಿದೆ. ದಾಂಪತ್ಯ ಜೀವನದಲ್ಲಿ ಸುಖ ಇರಲಿದೆ.
ಧನು ರಾಶಿ
ಧನು ರಾಶಿಯ 4 ನೇ ಮನೆಯಲ್ಲಿ 6 ಗ್ರಹಗಳ ಸಂಯೋಗ ಸಂಭವಿಸುತ್ತದೆ. ಇದರ ಪರಿಣಾಮವಾಗಿ ನಿಮ್ಮ ಹೊಸ ಆಲೋಚನೆಗಳು ಕಾರ್ಯರೂಪಕ್ಕೆ ಬರಬಹುದು. ಅಂದುಕೊಂಡಂತೆ ಉದ್ಯೋಗ ಬದಲಿಸುವ ನಿಮ್ಮ ಆಲೋಚನೆಗಳಿಗೆ ಯಶಸ್ಸು ಅಥವಾ ಹೊಸ ಮಾರ್ಗ ಸಿಗಬಹುದು. ವಾಹನ, ಮನೆ, ಆಸ್ತಿ ಲಾಭದ ನಿರೀಕ್ಷೆ ಇಟ್ಟುಕೊಳ್ಳಬಹುದು. ಬಹಳ ಕಾಲದಿಂದ ನೀವು ಬಾಕಿ ಉಳಿಸಿಕೊಂಡಿದ್ದ ಕೆಲಸ ಕಾರ್ಯಗಳಲ್ಲಿ ನೀವು ಯಶಸ್ಸು ಪಡೆಯಬಹುದು. ನಿಮಗೆ ಬಹಳ ಕಾಲದಿಂದ ಹಣಕಾಸಿನ ವಿಚಾರವಾಗಿ ಕಾಡುತ್ತಿದ್ದ ಸಮಸ್ಯೆಯೊಂದು ನಿವಾರಣೆಯಾಗಬಹುದು. ಕುಟುಂಬದಲ್ಲಿ ಶಾಂತಿ, ದಾಂಪತ್ಯದಲ್ಲಿ ಸುಖ ನೆಲೆಸಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಪರಿಶೀಲಿಸಿಲ್ಲ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











