Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
500 ವರ್ಷಗಳ ಬಳಿಕ ಶನಿ ಗುರುವಿನ ಅಪರೂಪದ ಚಲನೆ: ಈ ರಾಶಿಯವರ ಜೀವನ ಬದಲು!
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ನೀತಿವಂತ ಎಂದು ಕರೆಯಲಾಗುತ್ತದೆ. ಶನಿ ಕರ್ಮ ಫಲದ ಗ್ರಹ ಎಂದು ಕೂಡ ಕರೆಯಲಾಗುತ್ತದೆ. ಹಾಗೆ ಶನಿಯ ಆಳ್ವಿಕೆಯಲ್ಲಿರುವ ಗ್ರಹವು ಶುಭ ಹಾಗೂ ಅಶುಭ ಲಾಭಗಳಿಗೆ ಕಾರಣವಾಗುವುದು ನೋಡಬಹುದು. ಹಾಗೆ ಶನಿಯಿಂದ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ಸಾಮಾನ್ಯ.
ಶನಿ ಕುಂಭ ಹಾಗೂ ಮಕರ ರಾಶಿಯ ಅಧಿಪತಿ. ಶನಿ ಒಂದೇ ರಾಶಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ಚಲಿಸುತ್ತಾನೆ. ಪ್ರಸ್ತುತ ಶನಿ ಮೀನ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿದ್ದು, ನವೆಂಬರ್ ವರೆಗೂ ಇದೇ ರೀತಿಯ ಚಲನೆಯಲ್ಲಿರಲಿದ್ದಾನೆ. ನವೆಂಬರ್‌ನಿಂದ ಶನಿಯು ನೇರ ಚಲನೆಯಲ್ಲಿರಲಿದ್ದಾನೆ.

ಹಾಗೆ ಇದೇ ಸಮಯದಲ್ಲಿ ಗುರು ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ. ಅಕ್ಟೋಬರ್ 2025 ರಲ್ಲಿ ಗುರು ಕರ್ಕ ರಾಶಿಯನ್ನು ಪ್ರವೇಶಿಸುತ್ತಾನೆ. ಅದರ ನಂತರ ನವೆಂಬರ್ ತಿಂಗಳಲ್ಲಿ ಗುರು ಹಿಮ್ಮುಖವಾಗುತ್ತಾನೆ. 500 ವರ್ಷಗಳ ನಂತರ ಕರ್ಕ 2025 ರಲ್ಲಿ ಶನಿ ನೇರ ಮತ್ತು ಗುರು ಹಿಮ್ಮುಖವಾಗುತ್ತಾನೆ. ಇದರಿಂದ ಶನಿ ನೇರ ರೇಖೆಯಲ್ಲಿರುತ್ತಾನೆ ಮತ್ತು ಗುರು ಹಿಮ್ಮುಖ ಚಲನೆಯಲ್ಲಿರಲಿದ್ದಾನೆ.
ಈ ಗ್ರಹಗಳ ಸ್ಥಾನಗಳ ಪ್ರಭಾವವು ಎಲ್ಲಾ ರಾಶಿ ಜನರ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಶನಿಯ ನೇರ ಚಲನೆ ಹಾಗೂ ಗುರುವಿನ ಹಿಮ್ಮುಖ ಚಲನೆಯು 500 ವರ್ಷಗಳಲ್ಲಿ ಒಮ್ಮೆ ಸಂಭವಿಸುತ್ತಿದೆ. ಇದರ ಪರಿಣಾಮ ಈಗ ಎಲ್ಲಾ ರಾಶಿಗಳ ಮೇಲೆಯೂ ಆಗುವುದು ನೋಡಬಹುದು. ಹಾಗಾದ್ರೆ ಈ ಗ್ರಹಗಳ ಚಲನೆಯಿಂದ ಯಾರಿಗೆ ಶುಭಕರ ಲಾಭವಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ತುಲಾ ರಾಶಿ
ನವೆಂಬರ್ ತಿಂಗಳಲ್ಲಿ ಗುರು ಮತ್ತು ಶನಿಯ ಅಪರೂಪದ ಚಲನೆಯಿಂದಾಗಿ ತುಲಾ ರಾಶಿಯವರಲ್ಲಿ ಕೆಲಸ ಹಾಗೂ ವ್ಯವಹಾರ ಸಂಬಂಧವಾಗಿ ಉತ್ತಮ ದಿನಗಳ ನೋಡಬಹುದು. ನಿಮ್ಮ ನ್ಯಾಯಾಲಯ ಸಂಬಂಧ ಪ್ರಕರಣಗಳಲ್ಲಿ ಧನಾತ್ಮಕ ವಿಚಾರಗಳ ನೋಡುವಿರಿ. ಹಿಂದಿನ ಹೂಡಿಕೆಗಳು ನಿಮಗೆ ಲಾಭ ತರಲಿವೆ. ಉದ್ಯಮಿಗಳು ಲಾಭಕರವಾದ ವ್ಯವಹಾರ ಮಾಡಲಿದ್ದಾರೆ. ಹಾಗೆ ವ್ಯವಹಾರ ವಿಸ್ತರಣೆಗೆ ಅವಕಾಶಗಳ ಪಡೆಯಲಿದ್ದೀರಿ. ಕೆಲಸದ ಸಂಬಂಧವಾಗಿ ನಿಮಗೆ ಲಾಭಗಳಿವೆ. ಉದ್ಯೋಗ ಬದಲಾವಣೆ, ಬಡ್ತಿ, ವೇತನ ಹೆಚ್ಚಳದಂತಹ ವಿಚಾರಗಳು ಲಾಭಕರವಾಗಲಿವೆ.
ಕುಂಭ ರಾಶಿ
ನವೆಂಬರ್ ತಿಂಗಳಲ್ಲಿ ಗುರು ಮತ್ತು ಶನಿಯ ಅಪರೂಪದ ಸ್ಥಾನದಿಂದಾಗಿ ಕುಂಭ ರಾಶಿಯ ಜನರಲ್ಲಿ ಹಲವು ರೀತಿಯ ಬದಲಾವಣೆ ನೋಡಬಹುದು. ಈ ಸಮಯದಲ್ಲಿ ನಿಮ್ಮ ಬಹಳ ವರ್ಷದಿಂದ ಈಡೇರದೆ ಉಳಿದ ಆಸೆಯೊಂದನ್ನು ಈಡೇರಿಸಿಕೊಳ್ಳುತ್ತೀರಿ. ಪಾಲುದಾರಿಕೆ ವ್ಯವಹಾರದಲ್ಲಿರುವವರು ಉತ್ತಮ ಲಾಭ ನೋಡುವಿರಿ. ನಿಮಗೆ ಯಾರಿಂದಾರು ಹಣಕಾಸು ಸೇರಬೇಕಿದ್ದರೆ ಸುಲಭದ ಪ್ರಯತ್ನ ಫಲ ನೀಡಬಹುದು. ಸಾಲ ಮರುಪಾವತಿಯ ಕಾರಣದಿಂದಾಗಿ ನಿಮ್ಮಲ್ಲಿ ನೆಮ್ಮದಿ ಇರಲಿದೆ. ಹೊಸ ಜವಾಬ್ದಾರಿಗಳು ಸಿಗಲಿವೆ. ವಾಹನ ಲಾಭದ ದಟ್ಟವಾದ ನಿರೀಕ್ಷೆ ಇದೆ.
ಮಿಥುನ ರಾಶಿ
ನವೆಂಬರ್ ತಿಂಗಳಲ್ಲಿ ಗುರು ಮತ್ತು ಶನಿಯ ಅಪರೂಪದ ಚಲನೆಯಿಂದ, ಮಿಥುನ ರಾಶಿಯವರಿಗೆ ಕಾಲಕಾಲಕ್ಕೆ ಹಠಾತ್ ಆರ್ಥಿಕ ಲಾಭಗಳ ನೋಡಬಹುದು. ನೀವು ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುವ ಸಾಧ್ಯತೆಯಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವಾಹನ ಲಾಭ ನಿಮ್ಮದಾಗಬಹುದು. ಆಪ್ತರಲ್ಲಿ ನಿಮ್ಮಿಂದಾಗಿ ಸಂತಸ ಮೂಡುವ ಕ್ಷಣಗಳಿಗೆ ಸಾಕ್ಷಿಯಾಗುತ್ತೀರಿ. ಹಣಕಾಸು ವ್ಯವಹಾರಗಳು ನೀವು ಅಂದುಕೊಂಡಂತೆ ನಡೆಯಲಿವೆ. ಪ್ರವಾಸಗಳು, ದಾಂಪತ್ಯ ಸುಖಕರವಾಗಲಿವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications



