Latest Updates
-
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
18 ವರ್ಷಗಳ ನಂತರ ಚಂದ್ರ-ರಾಹು ಸಂಯೋಗ: ಜುಲೈ 13ರಿಂದ ಕಾದಿದೆ ಅಶುಭಗಳ ಸರಮಾಲೆ!
ಗ್ರಹಗಳ ಚಲನೆಯನ್ನು ಜ್ಯೋತಿಷ್ಯದಲ್ಲಿ ಪ್ರಮುಖ ವಿದ್ಯಮಾನವಾಗಿ ನೋಡಲಾಗುತ್ತದೆ. ಭವಿಷ್ಯದ ಆಗು ಹೋಗುಗಳಿಗೆ ಈ ಗ್ರಹಗಳ ಸಂಚಾರ ಪ್ರಮುಖ ಕಾಣವಾಗಿರಲಿದೆ. ಹಾಗೆ ಇದರಿಂದ ಹಲವು ರೀತಿಯ ಪ್ರಯೋಜನಗಳು ಹಾಗೆ ಸಮಸ್ಯೆಗಳು ಕೂಡ ಕಾಡುವುದು ನಾವು ನೋಡಬಹುದು. ಇನ್ನು ಹಲವು ಬಗೆಯಲ್ಲಿ ಗ್ರಹಗಳ ಸಂಚಾರದಿಂದ ಆಗುವ ಲಾಭ ಹಾಗೂ ನಷ್ಟದ ಲೆಕ್ಕಚಾರ ನೋಡಬಹುದು. ಇನ್ನು ಜುಲೈನಲ್ಲಿ ಪ್ರಮುಖ ಗ್ರಹಗಳು ತಮ್ಮ ರಾಶಿ ಬದಲಾಯಿಸುತ್ತಿರುವುದು ಹಲವರಲ್ಲಿ ಬದಲಾವಣೆಗೆ ಕಾರಣವಾಗುತ್ತಿದೆ.
ಈ ಜುಲೈ 13ರಂದು ಕುಂಭ ರಾಶಿಯಲ್ಲಿ ಚಂದ್ರ ಹಾಗೂ ರಾಹುವಿನ ಸಂಯೋಗವಾಗುತ್ತಿದೆ. ಇದರಿಂದಾಗಿ 18 ವರ್ಷಗಳ ಬಳಿಕ ಕುಂಭ ರಾಶಿಯಲ್ಲಿ ಚಂದ್ರ ಹಾಗೂ ರಾಹುವಿನ ಸಂಯೋಗವಾಗುತ್ತಿದೆ, ಇದು ಗ್ರಹಣ ಯೋಗಕ್ಕೆ ಕಾರಣವಾಗುತ್ತಿದೆ. ಇದರಿಂದ ಹಲವು ರೀತಿಯ ಅಶುಭಗಳಿಗೆ ಕಾರಣವಾಗಲಿದೆ.

ಕುಂಭ ರಾಶಿಯಲ್ಲಿ ಚಂದ್ರ ಹಾಗೂ ರಾಹುವಿನ ಸಂಯೋಗವು ಬರೋಬ್ಬರಿ 18 ವರ್ಷಗಳ ಬಳಿಕ ಸಂಭವಿಸುತ್ತಿದೆ. ಇದು ಉತ್ತಮ ಕಾಲವಲ್ಲ. ಇದು ಹಣಕಾಸು, ಉದ್ಯೋಗ, ದಾಂಪತ್ಯ ಜೀವನದಲ್ಲಿ ಸಮಸ್ಯೆಗಳ ತರುವಂತಹ ಸಮಯ. ಏಕೆಂದರೆ ರಾಹುವಿನ ಸಂಚಾರವು ಕುಂಭ ರಾಶಿಯಲ್ಲಿ ಹಲವು ಕಾಲದಿಂದ ಇದೆ. ಆದ್ರೆ ಚಂದ್ರನು ಜುಲೈ 13ರಂದು ಈ ರಾಶಿಗೆ ಚಲಿಸಲಿದ್ದಾನೆ. ಹೀಗಾಗಿ ಹಲವು ರಾಶಿಗಳಿಗೆ ಇದು ಅಶುಭ ತರುವ ಕಾಲವಾಗಲಿದೆ. ಹಾಗಾದ್ರೆ ಯಾವ ರಾಶಿಯವರು ಈ ಸಮಯದಲ್ಲಿ ಎಚ್ಚರಿಕೆಯಿಂದ ಇರಬೇಕು? ಯಾರಿಗೆ ಅಶುಭ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಿಂಹ ರಾಶಿ
ಚಂದ್ರ ಹಾಗೂ ರಾಹುವಿನ ಸಂಯೋಗದಿಂದ ಉಂಟಾಗುತ್ತಿರುವ ಈ ಗ್ರಹಣ ಯೋಗವು ಸಿಂಹ ರಾಶಿಯವರಿಗೆ ಅನಾನುಕೂಲತೆಗೆ ಕಾರಣವಾಗಲಿದೆ. ಗ್ರಹಣ ಯೋಗವು ಸಿಂಹ ರಾಶಿಯ 7ನೇ ಮನೆಯಲ್ಲು ರೂಪುಗೊಳ್ಳಲಿದೆ. ಇದರಿಂದಾಗಿ ನಿಮ್ಮ ದಾಂಪತ್ಯ ಜೀವನದಲ್ಲಿ ಮನಸ್ತಾಪಗಳು ಹೆಚ್ಚಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಯಾರೊಂದಿಗಾದರೂ ವಾದಗಳು ಉಂಟಾಗಬಹುದು. ಸಾಮಾಜಿಕ ಜೀವನದಲ್ಲಿ ಅನಿಶ್ಚಿತತೆ ಮತ್ತು ಒತ್ತಡ ಇರಬಹುದು. ಹಠಾತ್ ನಿಮ್ಮ ವೆಚ್ಚಗಳ ಹೆಚ್ಚಾಗಬಹುದು. ಆರೋಗ್ಯದಲ್ಲೂ ಸಣ್ಣ ಪುಟ್ಟ ಏರುಪೇರು ನೋಡಬಹುದು.
ಕುಂಭ ರಾಶಿ
ಗ್ರಹಣ ಯೋಗವು ಕುಂಭ ರಾಶಿಯವರಿಗೆ ಹಲವು ರೀತಿಯಲ್ಲಿ ಅನಾನುಕೂಲವಾಗುತ್ತಿದೆ. ಯಾವುದೇ ಕೆಲಸದಲ್ಲಿ ನೀವು ಬಯಸಿದಂತಹ ಲಾಭ ಅಥವಾ ಫಲಿತಾಂಶ ಪಡೆಯಲು ಸಾಧ್ಯವಾಗದೆ ಇರಬಹುದು. ವ್ಯಾಪಾರಿಗಳಲ್ಲಿ ಹಣಕಾಸು ವಿವಾರವಾಗಿ ಬಹಳ ಗೊಂದಲ ಅಥವಾ ಸಮಸ್ಯೆ ಕಾಡಬಹುದು. ದೂರ ಪ್ರಯಾಣಗಳಲ್ಲಿ ನಿಮಗೆ ಶುಭವಾಗುತ್ತದೆ, ಅದರಲ್ಲೂ ವಾಹನಗಳಿಂದ ಉಂಟಾಗುವ ಸಮಸ್ಯೆಗಳು ಹೆಚ್ಚಾಗಬಹುದು. ಮಾನಸಿಕ ನೆಮ್ಮದಿ ಹಾಳು ಮಾಡುವಂತಹ ಹಲವು ಘಟನೆಗಳಿಗೆ ನೀವು ಸಾಕ್ಷಿಯಾಗುತ್ತೀರಿ.
ಧನು ರಾಶಿ
ಗ್ರಹಣ ಯೋಗದ ರಚನೆಯು ಧನು ರಾಶಿಯವರಿಗೆ ಪ್ರತಿಕೂಲವಾಗಬಹುದು. ಏಕೆಂದರೆ ಈ ಯೋಗವು ನಿಮ್ಮ 3ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಈ ಸಮಯದಲ್ಲಿ ನಿಮಗೆ ನಿಮ್ಮ ಒಡಹುಟ್ಟಿದವರ ಬೆಂಬಲ ಸಿಗುವುದಿಲ್ಲ. ದಾಂಪತ್ಯ ವಿಚಾರವಾಗಿ ನಿಮಗೆ ಹಲವು ಸಮಸ್ಯೆ ಕಾಡಬಹುದು, ಕುಟುಂಬಸ್ಥರ ಕಡೆಯಿಂದ ಹಲವು ಕೆಲಸಗಳಲ್ಲಿ, ವಿಚಾರಗಳಲ್ಲಿ ನಿಮಗೆ ಒತ್ತಡ ಇರಲಿದೆ. ಆರೋಗ್ಯದ ವಿಚಾರವಾಗಿ ನಿಮಗೆ ಬಹಳ ಕಠಿಣವಾಗಲಿದೆ. ಮನೆಯಲ್ಲಿ ಹಿರಿಯ ಸದಸ್ಯರ ಆರೋಗ್ಯ ಹದ ಗೆಡಬಹುದು, ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡೆತಡೆ ನೋಡಬೇಕಾಗುತ್ತದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
