Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Mercury-Ketu Conjunction: 18 ವರ್ಷದ ಬಳಿಕ ಬುಧ-ಕೇತು ಸಂಯೋಗ: ಯಾವ ರಾಶಿಯವರಲ್ಲಿ ಆರ್ಥಿಕ ಪ್ರಗತಿ ನೋಡಿ!
Mercury-Ketu Conjunction: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆಯನ್ನು ಬಹಳ ಪ್ರಮುಖ ವಿದ್ಯಮಾನ ಎಂದು ಪರಿಗಣಿಸಲಾಗುತ್ತದೆ. ಪ್ರತಿಯೊಂದು ಗ್ರಹಗಳ ಚಲನೆಯು ಒಂದೊಂದು ರೀತಿಯಲ್ಲಿ ಉಪಯೋಗಕಾರಿಯಾಗಬಹುದು. ಹಾಗೆ ಪ್ರತಿಯೊಂದು ಗ್ರಹಗತಿಗಳ ಬದಲಾವಣೆ 12 ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಹಾಗೆ ಗ್ರಹಗಳು ತಮ್ಮ ರಾಶಿ ಬದಲಿಸಿದಾಗ ಉಂಟಾಗುವ ಪರಿಣಾಮಗಳು ಎಲ್ಲಾ ರಾಶಿಗಳ ಮೇಲೆ ಬೀರುತ್ತದೆ.
ಹಾಗೆ ಎರಡು ಗ್ರಹಗಳು ಒಟ್ಟಿಗೆ ಚಲಿಸುವುದು ಹಲವು ರೀತಿಯ ಯೋಗಗಳಿಗೆ ಕಾರಣವಾಗಲಿದೆ. ಸದ್ಯ ಈಗ ಕೇತು ಮತ್ತು ಬುಧ 18 ವರ್ಷಗಳ ಬಳಿಕ ಒಟ್ಟಿಗೆ ಸೇರಲಿವೆ. ಬುಧ ಹಾಗೂ ಕೇತುವಿನ ಈ ಸಂಯೋಗವು ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿವೆ. ಬುಧನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗಿದೆ. ಈ ಬುಧ ಈಗ ಸಿಂಹ ರಾಶಿ ಪ್ರವೇಶಿಸಲಿದ್ದಾನೆ.

ಇನ್ನು ಕೇತು ಈಗಾಗಲೇ ಸಿಂಹ ರಾಶಿಯಲ್ಲಿದ್ದು, ಈ ಎರಡು ಗ್ರಹಗಳ ಸಂಯೋಗವು ಹಲವು ರೀತಿಯಲ್ಲಿ ಶುಭ ಹಾಗೂ ಅಶುಭಕ್ಕೆ ಕಾರಣವಾಗಲಿದೆ. ಹಾಗಾದ್ರೆ ಆಗಸ್ಟ್‌ನಲ್ಲಿ ಸಂಭವಿಸುವ ಕೇತು ಹಾಗೂ ಬುಧನ ಈ ಸಂಯೋಗದಿಂದ ಯಾವ ರಾಶಿಯವರಿಗೆ ಯಾವ ರೀತಿಯ ಫಲಗಳು ಅಥವಾ ಶುಭ ಅಶುಭ ಲಾಭವಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಿಂಹ ರಾಶಿ
ಕೇತು ಮತ್ತು ಬುಧದ ಸಂಯೋಗದಿಂದ ಸಿಂಹ ರಾಶಿಯವರಲ್ಲಿ ಸಮಸ್ಯೆಗಳ ನೀಡಬಹುದು. ಅವರ ಜೀವನದಲ್ಲೇ ಅತೀ ದೊಡ್ಡ ಬದಲಾವಣೆಗಳು ಎದುರಾಗಬಹುದು. ಆದ್ರೆ ಈ ಬದಲಾವಣೆಯನ್ನು ನೀವು ಬಯಸಿದರುವುದಿಲ್ಲ. ಹಾಗೆ ಇದು ನಿಮ್ಮಲ್ಲಿ ಹಲವು ರೀತಿಯ ಸಮಸ್ಯೆಗಳ ತರಬಹುದು. ಕೆಲಸದಲ್ಲಿರುವವರು ಈಗ ತಮ್ಮ ಕಠಿಣ ಪರಿಶ್ರಮದ ಫಲವನ್ನು ಅನುಭವಿಸುತ್ತಾರೆ. ಜಂಟಿ ವ್ಯವಹಾರದಲ್ಲಿರುವವರು ಈಗ ದೊಡ್ಡ ಗೆಲುವುಗಳನ್ನು ಪಡೆಯುತ್ತಾರೆ. ಅವಿವಾಹಿತರಿಗೆ ಈ ಅವಧಿಯಲ್ಲಿ ಸೂಕ್ತ ಸಂಗಾತಿ ಸಿಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಕೇತು ಮತ್ತು ಬುಧ ಗ್ರಹಗಳು ಸಕಾರಾತ್ಮಕ ಬದಲಾವಣೆಗಳನ್ನು ತರಲಿವೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸಮಸ್ಯೆಗಳು ದೂರಾಗಬಹುದು. ದೊಡ್ಡ ಕೆಲಸಗಳಲ್ಲಿ ನಿಮಗೆ ಪರಿಪೂರ್ಣವಾದ ಯಶಸ್ಸು ಸಿಗದೆ ಇರಬಹುದು. ನಿಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದ ಯಾವುದಾದರು ಸಮಸ್ಯೆಗಳಿದ್ದರೆ ಅದು ನಿವಾರಣೆಯಾಗಬಹುದು. ದಾಂಪತ್ಯ ಜೀವನದಲ್ಲಿ ಮಿಶ್ರ ಫಲ ನೋಡುತ್ತೀರಿ.
ಧನು ರಾಶಿ
ಕೇತು ಮತ್ತು ಬುಧದ ಸಂಯೋಗವು ಧನು ರಾಶಿಯವರಿಗೆ ಅನೇಕ ಸಕಾರಾತ್ಮಕ ಫಲಿತಾಂಶಗಳ ತರಲಿದೆ. ಜೀವನದಲ್ಲಿ ಅನೇಕ ಅನಿರೀಕ್ಷಿತ ಆಶ್ಚರ್ಯಗಳು ಸಂಭವಿಸಬಹುದು. ನಿಮ್ಮ ವ್ಯಾಪಾರಗಳು ಲಾಭದಾಯಕವಾಗಬಹುದು. ಸುಧೀರ್ಘ ಪ್ರಯಾಣಗಳು ಅಂತ್ಯದಲ್ಲಿ ಉತ್ತಮ ಫಲಿತಾಂಶ ನೀಡಲಿವೆ. ಹಣಕಾಸು ಸಂಬಂಧಿ ವಿಚಾರದಲ್ಲಿ ಹಲವರಿಂದ ನೀವು ಬೆಂಬಲ ಪಡೆಯಬಹುದು. ಯಾರಿಗಾದರು ಸಾಲ ನೀಡಿದ್ದರೆ ಈ ಸಮುದಲ್ಲಿ ಮರಳಿ ಪಡೆಯುತ್ತೀರಿ.
ಮಕರ ರಾಶಿ
ಕೇತು ಮತ್ತು ಬುಧನ ಸಂಯೋಗವು ಮಕರ ರಾಶಿಯವರಿಗೆ ಅಪಾರ ಪ್ರಯೋಜನಗಳನ್ನು ನೀಡಲಿದೆ. ನೀವು ಹೊಸದಾಗಿ ಉದ್ಯೋಗ ಹುಡುಕುತ್ತಿದ್ದರೆ ಈ ಸಮಯದಲ್ಲಿ ಬಹಳ ಲಾಭದಾಯಕ ಕೆಲಸಗಳ ಮಾಡಿ ಮುಗಿಸುತ್ತೀರಿ. ವಿದೇಶ ಪ್ರವಾಸಗಳು ಸೇರಿ ಅನೇಕ ಕೆಲಸಗಳು ಸುಲಭವಾಗಬಹುದು. ಬಹಳ ಸಮಯದ ಆರ್ಥಿಕ ಸಮಸ್ಯೆ ನಿವಾರಣೆಯಾಗಲಿದೆ. ನಿಮ್ಮ ಕೌಟುಂಬಿಕ ಒತ್ತಡಗಳು ನಿವಾರಣೆಯಾಗಲಿದೆ. ಆರೋಗ್ಯದ ವಿಚಾರವಾಗಿಯೂ ನಿಮಗೆ ಧನಾತ್ಮಕ ಸಮಯವಿದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
