Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಗುರು-ಶನಿಯ ಅಪರೂಪದ ಸಂಗಮ: 100 ವರ್ಷಗಳ ಬಳಿಕ ಈ ರಾಶಿಗಳಲ್ಲಿ ಅದೃಷ್ಟ, ನಷ್ಟಗಳು ದೂರ!
ಜ್ಯೋತಿಷ್ಯದ ಪ್ರಕಾರ ನವಗ್ರಹಗಳ ಚಲನೆ, ಸ್ಥಾನಪಲ್ಲಟವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡಲಿವೆ. ಆದ್ರಲ್ಲೂ ಹಲವು ರಾಶಿಗಳಲ್ಲಿ ಶುಭ ಹಾಗೂ ಅಶುಭ ಪರಿಣಾಮಗಳಿಗೆ ಗ್ರಹಗಳ ಸ್ಥಾನಪಲ್ಲಟ ಕಾರಣವಾಗಲಿದೆ. ಅದ್ರಲ್ಲೂ ವ್ಯಕ್ತಿಯೊಬ್ಬರ ಜೀವನದ ಮೇಲೆ ಪರಿಣಾಮ ಬೀರುವ ಗ್ರಹಗಳ ಪೈಕಿ ಗುರು ಹಾಗೂ ಶನಿ ಬಹಳ ಪ್ರಮುಖ ಎನಿಸಿವೆ.
ಶನಿ ಮಕರ ಮತ್ತು ಕುಂಭ ರಾಶಿಯ ಅಧಿಪತಿಯಾಗಿದ್ದರೆ ಗುರು ಧನು ಹಾಗೂ ಮೀನ ರಾಶಿಯ ಅಧಿಪತಿಯಾಗಿದ್ದಾನೆ. ಗುರು ಸದ್ಯ ಮಿಥುನ ರಾಶಿಯಲ್ಲಿ ಪ್ರಯಾಣಿಸಿ ಈಗ ಕರ್ಕ ರಾಶಿಯ ಪ್ರವೇಶಿಸಿದ್ದಾನೆ. ಗುರು ಕರ್ಕ ರಾಶಿಯನ್ನು ಪ್ರವೇಶಿಸಿದಾಗಿನಿಂದ, ಗುರುವಿನ ಪ್ರಭಾವ ಮೀನ ರಾಶಿಯಲ್ಲಿನ ಶನಿಯ ಮೇಳೆ ಬೀಳಲಿದೆ. ಆದ್ರೆ ಶನಿಯು ಗುರುವಿನ ನಕ್ಷತ್ರವಾದ ಪೂರ್ವ ಭಾದ್ರಪದ ನಕ್ಷತ್ರದಲ್ಲಿ ಪ್ರವೇಶಿಸುತ್ತಿದ್ದಾನೆ.

ಇದು ಗುರುವಿನ ಪ್ರಭಾವದಿಂದಾಗಿ ಶನಿ ವಾಸ್ತವ್ಯದ ರಾಶಿಗಳ ಮೇಲೆ ಶುಭಕರ ಪರಿಣಾಮ ಬೀಳುತ್ತದೆ. ಶನಿ ಹಾಗೂ ಗುರುವಿನ ಈ ರೀತಿಯ ಅಪರೂಪದ ಸಂಯೋಗವು 100 ವರ್ಷಗಳಿಗೊಮ್ಮೆ ಸಂಭವಿಸಲಿದೆ. ಹೀಗಾಗಿ ಈ ಸಮಯದಲ್ಲಿ ಹಲವು ರಾಶಿಗಳಿಗೆ ಶುಭಕರವಾಗಿರಲಿದೆ. ಹಾಗಾದ್ರೆ ಗುರು ಹಾಗೂ ಶನಿಯ ಸಂಯೋಗದಿಂದ ಯಾರಿಗೆಲ್ಲಾ ಶುಭವಾಗಲಿದೆ ಅನ್ನೋದನ್ನು ತಿಳಿದುಕೊಳ್ಳೋಣ.
ಮಕರ ರಾಶಿ
ಮಕರ ರಾಶಿಯ ಅಧಿಪತಿ ಶನಿ 3ನೇ ಮನೆಯಲ್ಲಿದ್ದಾರೆ. ಅದೇ ಸಮಯದಲ್ಲಿ, ಗುರು 7ನೇ ಮನೆಯಲ್ಲಿದ್ದಾರೆ. ಹೀಗಾಗಿ ಗುರುವಿನ ದೃಷ್ಟಿ ಶನಿಯ ಮೇಲೆ ಬೀಳುವುದರಿಂದ, ಮಕರ ರಾಶಿಯವರು ತಮ್ಮ ಕಠಿಣ ಬಹು ಸಮಯದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೋಡಬಹುದು. ನೀವು ಈವರೆಗೂ ಎದುರಿಸಿದ್ದ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ನೀವು ಇಲ್ಲಿಯವರೆಗೆ ಕೆಲಸದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಆ ಸಮಸ್ಯೆ ಕೊನೆಗೊಳ್ಳುತ್ತದೆ. ಗುರು ಮತ್ತು ಶನಿಯ ಕೃಪೆಯಿಂದ ಸೃಜನಶೀಲತೆ, ಆಲೋಚನಾ ಸಾಮರ್ಥ್ಯ ಮತ್ತು ದಕ್ಷತೆ ಹೆಚ್ಚಾಗುತ್ತದೆ. ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ. ನಿಮ್ಮ ದಾಂಪತ್ಯ ವಿಚಾರದಲ್ಲಿದ್ದ ಮನಸ್ತಾಪಗಳು ದೂರಾಗಲಿದೆ. ಅದ್ರಲ್ಲೂ ನೀವು ಕುಟುಂಬ ಅಥವಾ ಸಂಬಂಧಿಕರಿಂದ ದೊಡ್ಡ ಒತ್ತಡ ಎದುರಿಸುತ್ತಿದ್ದರೆ ಅದರಿಂದ ಹೊರಬರಲಿದ್ದೀರಿ.
ಧನು ರಾಶಿ
ಧನು ರಾಶಿಯ ಜನರಿಗೆ ಶನಿ ಹಾಗೂ ಗುರುವಿನ ಅಪರೂಪದ ಸಂಗಮವು ಹಲವು ರೀತಿ ಲಾಭ ತರಲಿದೆ. ಶನಿಯ 10 ನೇ ಅಂಶವು ಗುರುವಿನ ಧನು ರಾಶಿಯ 12 ನೇ ಮನೆಯಲ್ಲಿ ಬರುತ್ತದೆ. ಇದು ವಿದೇಶ ಪ್ರಯಾಣ, ಉಲ್ಲಾಸದ ಕ್ಷಣಗಳು, ದಾಂಪತ್ಯ ಸುಖ, ಅನಗತ್ಯ ವೆಚ್ಚಗಳಲ್ಲಿನ ಆದಾಯದಲ್ಲಿ ಹೆಚ್ಚಳವಾಗುತ್ತದೆ. ಸಮಾಜದಲ್ಲಿ ಪ್ರಭಾವ ಹೆಚ್ಚಾಗುತ್ತದೆ. ಗುರುವಿನ ಅಂಶವು 3 ನೇ ಮನೆಯ ಮೇಲೆ ಪರಿಣಾಮ ಉಂಟುಮಾಡಲಿದೆ. ನಿಮ್ಮ ಪ್ರಯತ್ನಗಳಿಗೆ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ವ್ಯಾಪಾರಿ ವಲಯದಲ್ಲಿ ಶುಭವಿದೆ.
ಕನ್ಯಾ ರಾಶಿ
ಶನಿ ದೇವರು ಕನ್ಯಾ ರಾಶಿಯ 7ನೇ ಮನೆಯಲ್ಲಿದ್ದಾರೆ. ಗುರುದೇವರು 10ನೇ ಮನೆಯಿಂದ 11ನೇ ಮನೆಗೆ ಪ್ರವೇಶಿಸುತ್ತಿದ್ದಾರೆ ಮತ್ತು ಪ್ರಯಾಣ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ, ಗುರುವಿನ ಅಂಶವು ಶನಿಯ ಮೇಲೆ ಬೀಳುವುದರಿಂದ, ನೀವು ಅತ್ಯುತ್ತಮ ಫಲಿತಾಂಶಗಳ ನೋಡಬಹುದು. ನಿಮ್ಮ ಹಲವು ಪ್ರಯತ್ನಗಳಲ್ಲಿ ಸುಲಭದ ಯಶಸ್ಸು ಇದೆ. ಹಲವು ರೀತಿಯ ಸಂಕಲ್ಪಗಳು ಈಡೇರಲಿದೆ. ಅದ್ರಲ್ಲೂ ಹೆಚ್ಚಿನವರು ದೊಡ್ಡ ವ್ಯವಹಾರಗಳುಯ, ಉಳಿತಾಯದಂತಹ ಯೋಜನೆಗಳಿಗೆ ಮುಂದಾಗಲಿದ್ದೀರಿ. ಗುರುವಿನ 5ನೇ ಅಂಶವು 3ನೇ ಮನೆಯಲ್ಲಿ, 7ನೇ ಅಂಶವು 5ನೇ ಮನೆಯಲ್ಲಿ ಮತ್ತು 9ನೇ ಅಂಶವು 7ನೇ ಮನೆಯಲ್ಲಿ ಬೀಳುತ್ತದೆ. ನಿಮ್ಮ ಗೌರವ ಹೆಚ್ಚಾಗುವಂತಹ ಕೆಲಸ ಮಾಡುವಿರಿ. ಮಕ್ಕಳ ವಿಚಾರವಾಗಿ ಸಂತೋಷದ ದಿನಗಳ ನೋಡುವಿರಿ.



Click it and Unblock the Notifications