Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
84 ವರ್ಷಗಳ ಬಳಿಕ ದ್ವಿದ್ವಾದಶ ರಾಜಯೋಗ: ಮೂರು ರಾಶಿಯವರಿಗೆ ಜಾಕ್‌ಪಾಟ್!
ವೈದಿಕ ಜ್ಯೋತಿಷ್ಯದಲ್ಲಿ ಶುಕ್ರನನ್ನು ಸೌಂದರ್ಯ, ಐಷಾರಾಮಿ, ಪ್ರೀತಿ, ಸಂಪತ್ತು ಮತ್ತು ಸಮೃದ್ಧಿಗೆ ಕಾರಣವೆಂದು ಪರಿಗಣಿಸಲಾಗುತ್ತದೆ. ಈ ಶುಕ್ರನು ಒಂದು ರಾಶಿಯಲ್ಲಿ 26 ದಿನಗಳ ಕಾಲ ಚಲಿಸುತ್ತಾನೆ. ಶುಕ್ರ ವೃಷಭ ಹಾಗೂ ತುಲಾ ರಾಶಿಯ ಅಧಿಪತಿ. ಹಾಗಾಗಿ ಶುಕ್ರ ತನ್ನ ಸ್ಥಾನ ಬದಲಾಯಿಸಿದಾಗಲೆಲ್ಲ. ಆತನಿಂದ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು.
ಶುಕ್ರನ ಸ್ಥಾನ ಮಾತ್ರವಲ್ಲದೆ ಆತನ ಸಂಚಾರದಿಂದಾಗಿ ಹಲವು ಯೋಗಗಳಿಗೂ ಕಾರಣನಾಗುತ್ತಾನೆ. ಹಲವರಲ್ಲಿ ಶುಕ್ರನ ಸ್ಥಾನ ಬದಲಾವಣೆಯು ಪ್ರೀತಿ ಪ್ರೇಮದ ವಿಚಾರ, ಹಣಕಾಸು ವಿಚಾರ, ದಾಂಪತ್ಯ ಹಾಗೆ ವ್ಯವಹಾರದ ವಿಚಾರದಲ್ಲಿ ಹಲವು ರೀತಿಯ ಬದಲಾವಣೆಗಳ ನೋಡಬಹುದು. ಶುಕ್ರನು ಮಿಥುನ ರಾಶಿಗೆ ಚಲಿಸುತ್ತಿದ್ದು, ಇದರಿಂದ ಹಲವು ರಾಶಿಗಳಿಗೆ ಲಾಭವಾಗುತ್ತಿದೆ.

ಗುರು ಈಗಾಗಲೇ ಈ ಮಿಥುನ ರಾಶಿಯಲ್ಲಿ ಪ್ರಯಾಣಿಸುತ್ತಿದ್ದಾನೆ. ಗುರು ಜೊತೆಗೆ ಶುಕ್ರನು ಗಜಲಕ್ಷ್ಮಿ ರಾಜಯೋಗವನ್ನು ಸಹ ರೂಪಿಸಲಿದೆ. ಹೀಗಾಗಿ ಆಗಸ್ಟ್ 01 ರಂದು ಶುಕ್ರನಿಂದ ಪ್ರಬಲ ದ್ವಿ ದ್ವಾದಶ ರಾಜಯೋಗವು ರೂಪುಗೊಳ್ಳುತ್ತದೆ. ಶುಕ್ರನು ಗುರು ಗ್ರಹದೊಂದಿಗೆ 30 ಡಿಗ್ರಿ ಕೋನದಲ್ಲಿ ಈ ಯೋಗವನ್ನು ರೂಪಿಸುತ್ತಾನೆ.
ಈ ರಾಜಯೋಗದಿಂದ ಹಲವು ರಾಶಿಯವರಲ್ಲಿ ಆರೋಗ್ಯಕರ ಲಾಭಕ್ಕೆ ಕಾರಣವಾಗಲಿದೆ. ಈ ರಾಜಯೋಗವು ಸುಮಾರು 84 ವರ್ಷಗಳ ನಂತರ ರೂಪುಗೊಳ್ಳುತ್ತದೆ. ಏಕೆಂದರೆ ಗುರು ಒಂದು ರಾಶಿಯಲ್ಲಿ ಸುಮಾರು 7 ವರ್ಷಗಳ ಕಾಲ ಇರುತ್ತದೆ. ಈ ದ್ವಿ ದ್ವಾದಶ ರಾಜಯೋಗದ ಪ್ರಭಾವವು ಎಲ್ಲಾ ರಾಶಿ ಮೇಲೂ ಪರಿಣಾಮ ಬೀರಲಿದೆ. ಹಾಗಾದ್ರೆ ಅಪರೂಪದ ಈ ಯೋಗದಿಂದ ಯಾರಿಗೆಲ್ಲಾ ಲಾಭವಾಗುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಿಥುನ ರಾಶಿ
ದ್ವಿ ದ್ವಾದಶ ರಾಜಯೋಗವು ಮಿಥುನ ರಾಶಿಯ ಮಂದಿಗೆ ಹೆಚ್ಚಿನ ಲಾಭ ತರಲಿದೆ. ನಿಮ್ಮ ಸೃಜನಶೀಲತೆ ಹೆಚ್ಚಾಗುತ್ತದೆ. ವೃತ್ತಿಪರ ಜೀವನದಲ್ಲಿ ಉತ್ತಮ ಬದಲಾವಣೆ ಬರಬಹುದು. ನೀವು ಕೆಲಸ ಬದಲಾಯಿಸುವುದು ಅಥವಾ ಉದ್ಯೋಗ ಸಂಬಂಧಿ ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆ ಇದೆ. ಯಂತ್ರೋಪಕರಣ ಖರೀದಿಯ ಲಾಭವಿದೆ. ಬಹಳ ಸಮಯದಿಂದ ನಿಮಗೆ ಒಲಿಯಬೇಕಿದ್ದ ವಸ್ತು ಸಿಗಲಿದೆ. ದಾಂಪತ್ಯ ಸುಖವಿದೆ. ವಾಹನ ಲಾಭವಿದೆ. ಆಸ್ತಿ ಕುರಿತಾದ ವಿಚಾರದಲ್ಲಿ ನಿಮಗೆ ಲಾಭವಿದೆ.
ತುಲಾ ರಾಶಿ
ಶುಕ್ರ ಮತ್ತು ಗುರುವಿನಿಂದ ದ್ವಿದ್ವಾದಶ ರಾಜಯೋಗವು ತುಲಾ ರಾಶಿಯವರಲ್ಲಿ ಅತ್ಯಧಿಕ ಲಾಭಕ್ಕೆ ಕಾರಣವಾಗಲಿದೆ. ಜೀವನದ ಹಲವು ಕ್ಷೇತ್ರಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೋಡಬಹುದು. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಅವರು ಕೆಲಸದ ನಿಮಿತ್ತ ಪ್ರಯಾಣಿಸಬೇಕಾಗಬಹುದು. ನಿಮ್ಮ ಹಣಕಾಸು ಸಮಸ್ಯೆಗಳಿಗೆ ಮೂರನೆ ವ್ಯಕ್ತಿಯಿಂದ ಪರಿಹಾರ ಪಡೆಯಬಹುದು. ವರ್ಷಗಳ ಕಾಲ ನೀವು ಬಯಸಿದ್ದ ವಸ್ತುವನ್ನು ಖರೀದಿಸಲು ನೀವು ಹಣ ಒಟ್ಟು ಮಾಡಬಹುದು, ಇದರಿಂದ ನಿಮಗೆ ಧನಾತ್ಮಕ ವಿಚಾರಗಳು ನಡೆಯಲಿವೆ. ಆರೋಗ್ಯ ಸಂಬಂಧಿ ಸಮಸ್ಯೆಗಳು ಪರಿಹಾರವಾಗಲಿದೆ.
ಕುಂಭ ರಾಶಿ
ಶುಕ್ರ ಮತ್ತು ಗುರು ದ್ವಿ ದ್ವಾದಶ ರಾಜಯೋಗದಿಂದಾಗಿ ಕುಂಭ ರಾಶಿಯ ಜನರು ಯಶಸ್ಸನ್ನು ಕಾಣಬಹುದು. ನಿಮ್ಮ ಹಲವು ಆರ್ಥಿಕ ಸಮಸ್ಯೆಗಳ ಪರಿಹರಿಸಲು ನಿಮ್ಮ ಪರಿಶ್ರಮವು ಫಲ ನೀಡಲಿದೆ. ನ್ಯಾಯಾಲಯ ಕುರಿತ ವಿಚಾರ, ಸರ್ಕಾರಿ ದಾಖಲೆಗಳ ವಿಚಾರದಲ್ಲಿ ನಿಮಗೆ ಲಾಭದಾಯಕ ಸಮಯ ಎನ್ನಬಹುದು. ವ್ಯಾಪಾರಿಗಳಿಗೆ ದಿಢೀರ್ ಧನಲಾಭದ ನಿರೀಕ್ಷೆ ಇದೆ. ವಿದ್ಯಾರ್ಥಿಗಳಿಗೆ ಈ ಸಮಯ ಬಹಳ ಅನುಕೂಲಕರ ದಿನಗಳು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ.)



Click it and Unblock the Notifications