Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಸೂರ್ಯ-ಶನಿಯ ಅಪರೂಪದ ಸಂಯೋಗ: ಈ ರಾಶಿಯವರ ಜೀವನದಲ್ಲಿ ಮಹಾ ತಿರುವು!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ಗ್ರಹಗಳ ಚಲನೆಯಿಂದ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟಾಗುತ್ತದೆ. ಅದ್ರಲ್ಲೂ ಗ್ರಹಗಳ ಚಲನೆಯನ್ನು ಬಹಳ ಪ್ರಮುಖ ವಿದ್ಯಮಾನ ಎಂದು ಕರೆಯಲಾಗುತ್ತದೆ. ಹಾಗೆ ನಿರ್ದಿಷ್ಟ ರಾಶಿಗೆ ಗ್ರಹಗಳ ಚಲನೆಯಿಂದ ವ್ಯಕ್ತಿಯ ಜೀವನದಲ್ಲಿ ಬದಲಾವಣೆಗಳ ತರುವುದು ನೋಡಬಹುದು.
ಈಗ ಗ್ರಹಗಳ ಕೇಂದ್ರಬಿಂದು ಎಂದು ಕರೆಯಲಾಗುವ ಸೂರ್ಯ ಮಾರ್ಚ್‌ನಲ್ಲಿ ಮೀನ ರಾಶಿ ಪ್ರವೇಶಿಸುತ್ತಾನೆ. ಇದೇ ಸಮಯದಲ್ಲಿ ಶನಿ ಸಹ ಮೀನ ರಾಶಿಗೆ ಚಲಿಸುವುದು ಹಲವು ರೀತಿಯಲ್ಲಿ ಲಾಭದಾಯಕವಾಗಲಿದೆ. ಈ ಎರಡು ಗ್ರಹಗಳ ಸಂಯೋಗವು ಕೆಲವು ರಾಶಿ ಜನರಿಗೆ ಸುವರ್ಣ ಅವಧಿಯನ್ನು ಪ್ರಾರಂಭಿಸಬಹುದು. ಇದಲ್ಲದೆ, ಹಲವು ರಾಶಿಯ ಜನರಿಗೆ ಅನಿರೀಕ್ಷಿತ ಆರ್ಥಿಕ ಲಾಭ ಮತ್ತು ಅದೃಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ.

ಸೂರ್ಯನು ಧೈರ್ಯ, ಆತ್ಮಸ್ಥೈರ್ಯ, ವ್ಯವಹಾರ ಸಂಬಂಧಿತ ವಿಚಾರವಾಗಿ ಮುಖ್ಯ ಅಂಶವಾಗಿರಲಿದೆ. ಹಾಗೆ ಶನಿಯು ಕರ್ಮ ಫಲಗಳ ನೀಡುವ ಅಂಶವಾಗಿದೆ. ಇದರಿಂದ ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯುವ ಸಾಧ್ಯತೆ ಇರಲಿದೆ. ಹಾಗಾದ್ರೆ ಈ ಎರಡು ಗ್ರಹಗಳ ಸಂಯೋಗದಿಂದ ಯಾವ ರಾಶಿಗಳಿಗೆ ಉತ್ತಮವಾಗಿರಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಮಿಥುನ ರಾಶಿ
ಸೂರ್ಯ ಮತ್ತು ಶನಿಯ ಸಂಯೋಗವು ನಿಮಗೆ ಪ್ರಯೋಜನಕಾರಿ ಎಂದು ಹೇಳಬಹುದು. ಈ ಅಪರೂಪದ ಸಂಯೋಗವು ನಿಮ್ಮ ರಾಶಿಯ 10ನೇ ಮನೆಯಲ್ಲಿ ಸಂಭವಿಸುತ್ತಿದೆ. ಇದು ನಿಮ್ಮ ಕೆಲಸ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಕಾರಣವಾಗಬಹುದು. ನಿರುದ್ಯೋಗಿಗಳು ಉದ್ಯೋಗವನ್ನು ಪಡೆಯಬಹುದು. ಉದ್ಯೋಗಿ ವ್ಯಕ್ತಿಗಳು ತಮ್ಮ ಕಿರಿಯರು ಮತ್ತು ಹಿರಿಯರಿಂದ ಬೆಂಬಲವನ್ನು ಪಡೆಯಬಹುದು. ಉದ್ಯಮಿಗಳು ಸಹ ಗಮನಾರ್ಹ ಆರ್ಥಿಕ ಲಾಭ ಅನುಭವಿಸಬಹುದು. ಇದಲ್ಲದೆ, ಈ ಸಮಯದಲ್ಲಿ ನಿಮ್ಮ ತಂದೆಯೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ. ನೀವು ಬಹಳ ಸಮಯದಿಂದ ಮಾಡಬೇಕಿದ್ದ ಕೆಲಸಗಳು ಅಥವಾ ಕೆಲವು ಬಯಕೆಗಳನ್ನು ಈಡೇರಿಸಿಕೊಳ್ಳಬಹುದು.
ಕುಂಭ ರಾಶಿ
ಸೂರ್ಯ ಮತ್ತು ಶನಿಯ ಸಂಯೋಗವು ಕುಂಭ ರಾಶಿಗೆ ಸಕಾರಾತ್ಮಕವೆಂದು ಸಾಬೀತುಪಡಿಸಬಹುದು. ನೀವು ಕಾಲಕಾಲಕ್ಕೆ ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ಅನುಭವಿಸಬಹುದು. ಆದಾಯದ ಹೊಸ ಮಾರ್ಗಗಳು ಸಹ ಹೊರಹೊಮ್ಮಬಹುದು. ನಿಮ್ಮ ಮಾತು ಇತರರನ್ನು ಮೆಚ್ಚಿಸುತ್ತದೆ, ಅದರ ಪ್ರಭಾವವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ಮನೆಯಲ್ಲಿನ ವಾತಾವರಣವು ಸಂತೋಷದಾಯಕವಾಗಿರುತ್ತದೆ. ನಿಮ್ಮ ಕಷ್ಟದ ಸಮಯದಲ್ಲಿ ಹಲವರು ನೆರವಿಗೆ ಧಾವಿಸಬಹುದು. ಯಾರಿಗಾದರು ನೀವು ಹಣ ನೀಡುವುದು ಬಾಕಿ ಉಳಿದಿದ್ದರೆ ಈ ಸಮಯದಲ್ಲಿ ಅದನ್ನು ಪೂರ್ಣ ಮಾಡುವಿರಿ, ಮನೆಯ ಜವಾಬ್ದಾರಿ ತೆಗೆದುಕೊಳ್ಳುವಿರಿ.
ಧನು ರಾಶಿ
ಸೂರ್ಯ ಮತ್ತು ಶನಿಯ ಸಂಯೋಗವು ಧನು ರಾಶಿ ಜನರಿಗೆ ಅನುಕೂಲಕರ ದಿನಗಳ ತರಲಿವೆ. ನಿಮ್ಮ 4ನೇ ಮನೆಯಲ್ಲಿ ಈ ಸಂಯೋಗ ನಿಮಗೆ ಅದೃಷ್ಟ ತರಲಿದೆ. ನೀವು ವಾಹನ ಅಥವಾ ಆಸ್ತಿ ಸಹ ಖರೀದಿಸಬಹುದು. ಈ ಸಮಯದಲ್ಲಿ ನೀವು ಗೌರವ ಮತ್ತು ಪ್ರತಿಷ್ಠೆಯನ್ನು ಸಹ ಪಡೆಯುತ್ತೀರಿ. ದಾಂಪತ್ಯ ವಿಚಾರದಲ್ಲಿ ಸಂತಸದ ಸಮಯ ಆಗಿರಲಿದೆ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ಯಾರೊಂದಿಗಾದರು ಮನಸ್ತಾಪಗಳಿದ್ದರೆ ನಿವಾರಣೆಯಾಗುವುದು ನೋಡಬಹುದು. ನಿಮ್ಮ ವ್ಯವಹಾರ, ವ್ಯಾಪಾರ ಸಂಬಂಧಿತ ಅಡ್ಡಿಗಳನ್ನು ನಿವಾರಿಸಿಕೊಳ್ಳುವುದು ನಿಮ್ಮ ಆದಾಯದಲ್ಲಿ ಹೆಚ್ಚಳಕ್ಕೆ ಕಾರಣಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. )



Click it and Unblock the Notifications











