Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಕ್ಷಾ ಬಂಧನಕ್ಕೆ ಯಾವ ರಾಶಿಯವರಿಗೆ ಯಾವ ಗಿಫ್ಟ್ ನೀಡಬೇಕು..! ಇಲ್ಲಿದೆ ಮಾಹಿತಿ
ಶ್ರಾವಣ ಮಾಸದಲ್ಲಿ ಬರುವಂತಹ ರಕ್ಷಾ ಬಂಧನವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 9ರಂದು ಈ ರಕ್ಷಾ ಬಂಧನ ಆಚರಿಸಲಾಗುತ್ತಿದೆ. ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧನ ಆಚರಣೆ ಮಾಡಲಾಗುತ್ತಿದೆ. ಈ ದಿನ ಸಹೋದರಿ ತನ್ನ ಸಹೋದರನಿಗೆ ರಾಖಿ ಕಟ್ಟುತ್ತಾರೆ. ಸಹೋದರಿಯು ತನ್ನ ಸಹೋದರನ ಕೈಗೆ ರಾಖಿ ಕಟ್ಟುವ ಮೂಲಕ ಅವನ ರಕ್ಷಣೆಯನ್ನು ಕೋರುತ್ತಾಳೆ.
ಇನ್ನು ರಕ್ಷಾ ಬಂಧನದಂದು ಸಹೋದರಿ ರಕ್ಷೆಯನ್ನು ಬೇಡಿ ಪೂಜೆ ಮಾಡುತ್ತಾಳೆ. ಇದು ಸಹೋದರನ ಜವಾಬ್ದಾರಿ ಹೆಚ್ಚು ಮಾಡುತ್ತೆ. ಹಾಗೆ ರಾಖಿ ಕಟ್ಟಿದ ಸಹೋದರಿಗೆ ಆತ ಉಡುಗೊರೆ ನೀಡಬೇಕಿದೆ. ಅದ್ರೆ ಸಹೋದರಿಗೆ ಯಾವ ಉಡುಗೊರೆ ನೀಡಬೇಕು ಎಂಬುದು ನಿಮಗೆ ಗೊತ್ತಾ? ಹಾಗೆರ ರಾಶಿಯ ಪ್ರಕಾರವಾಗಿ ಉಡುಗೊರೆ ನೀಡುವುದು ಉತ್ತಮ.

ಹಾಗಾದ್ರೆ ಯಾವ ರಾಶಿಯಲ್ಲಿ ಜನಿಸಿದವರಿಗೆ ಯಾವ ಉಡುಗೊರೆ ನೀಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಷ ರಾಶಿ
ನಿಮ್ಮ ಸಹೋದರಿ ಮೇಷ ರಾಶಿಯವರಾಗಿದ್ದರೆ, ಕೆಂಪು ಬಣ್ಣವು ಅವರಿಗೆ ಶುಭಕರವಾಗಿರಲಿದೆ. ಹೀಗಾಗಿ ಅವರಿಗೆ ಕೆಂಪು ಬಣ್ಣದ ಬಟ್ಟೆ, ಉಡುಪು, ಸುಗಂಧ ದ್ರವ್ಯ, ಅಥವಾ ಕೆಂಪು ಬಣ್ಣದಲ್ಲಿರುವ ಯಾವುದೇ ಗಿಫ್ಟ್ ನೀಡಬಹುದು.
ವೃಷಭ ರಾಶಿ
ವೃಷಭ ರಾಶಿ ಸಹೋದರಿಯರು ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಹೀಗಾಗಿ ಅವರಿಗೆ ಒಪ್ಪುವಂತಹ ಬಟ್ಟೆ, ಸಿಹಿಗಳು, ವಜ್ರದ ಆಭರಣ, ಬೆಳ್ಳಿ ಆಭರಣ, ಇದು ಅವರಲ್ಲಿ ಅದೃಷ್ಟ ತರಬಹುದು.
ಮಿಥುನ ರಾಶಿ
ಮಿಥುನ ರಾಶಿಯಲ್ಲಿ ಜನಿಸಿದವರಿಗೆ ನೀವು ದುಬಾರಿ ವಸ್ತುಗಳ ನೀಡಬಹುದು. ಅದ್ರಲ್ಲೂ ಮೊಬೈಲ್ ಫೋನ್, ಸ್ಮಾರ್ಟ್ ಗ್ಯಾಜೆಟ್, ಸ್ಟೈಲಿಶ್ ಪೆನ್ನುಗಳು, ಅಂಕಾರಿಕ ವಸ್ತಗಳ ನೀಡಬಹುದು. ಅದ್ರಲ್ಲೂ ಉಡುಗೊರೆ ಬಿಳಿ ಬಣ್ಣದಾಗಿದ್ದರೆ ಉತ್ತಮವಾಗಿರಲಿದೆ.
ಕರ್ಕ ರಾಶಿ
ಕರ್ಕ ರಾಶಿಯಲ್ಲಿ ಜನಿಸಿದ ಮಂದಿ ಆಧ್ಯಾತ್ಮಿಕ ಪ್ರಿಯರು ಹೀಗಾಗಿ ನೀವು ದೇವರ ಮೂರ್ತಿ, ಫೋಟೋ ಫ್ರೇಮ್, ಬೆಳ್ಳಿ ಆಭರಣ, ಕೈ ಖಡ್ಗಗಳು, ಉಡುಪುಗಳ ಉಡುಗೊರೆಯಾಗಿ ನೀಡಬಹುದು.
ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಜನಿಸಿದವರಿಗೆ ನೀವು ಈ ದಿನ ಮೇಕಪ್ ಕಿಟ್ ನೀಡಬಹುದು. ಅವರು ಆಭರಣ ಪ್ರಿಯರು, ಹಾಗೆ ಆಭರಣಗಳು ಅವರ ಸಂಪತ್ತು, ಸಂತೋಷಕ್ಕೆ ಕಾರಣವಾಗುತ್ತದೆ. ಅಲ್ಲದೆ ವಾಚ್, ಅಲಂಕಾರಿಕ ವಸ್ತು ಉಡುಗೊರೆಯಾಗಿ ನೀಡಬಹುದು.
ಕನ್ಯಾ ರಾಶಿ
ಸಹೋದರಿ ಕನ್ಯಾ ರಾಶಿವರಾಗಿದ್ದರೆ. ಅವರಿಗೆ ಅಲಂಕಾರ ಎಂದರೆ ಬಹಳ ಇಷ್ಟವಾಗುತ್ತೆ. ಹಾಗೆ ವೈಯಕ್ತಿಕ ವಿಚಾರದಲ್ಲೂ ಅವರು ಬಹಳ ಜಾಗೃತೆ ವಹಿಸುವವರು. ಹೀಗಾಗಿ ನೀವು ಮನೆಯ ಅಲಂಕಾರ, ಇಲ್ಲವೆ ಮೇಕ್ ಅಪ್‌ಗೆ ಸಂಬಂಧಿಸಿದ ವಿಚಾರವಾಗಿ ಯಾವುದಾದರು ವಸ್ತುವನ್ನು ಉಡುಗರೆಯಾಗಿ ನೀಡಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಫ್ಯಾಷನ್ ಆಭರಣಗಳು, ಬ್ರಾಂಡೆಡ್ ಸುಗಂಧ ದ್ರವ್ಯಗಳು, ವರ್ಣರಂಜಿತ ಸೀರೆಗಳು ಅಥವಾ ಉಡುಪು ಉಡುಗೊರೆಯಾಗಿ ನೀಡಬಹುದು. ಅವರಿಗೆ ನೀಲಿ ಬಣ್ಣದಲ್ಲಿದ್ದರೆ ಬಹಳ ಉತ್ತಮ.
ವೃಶ್ಚಿಕ ರಶಿ
ವೃಶ್ಚಿಕ ರಾಶಿಯ ಸಹೋದರಿಯರಿಗೆ ಆಧ್ಯಾತ್ಮಿಕತೆಗೆ ಸಂಬಂಧಿಸಿದ ಯಾವುದಾದರು ವಸ್ತುವನ್ನು ನೀಡುವುದು ಉತ್ತಮ. ಅದ್ರಲ್ಲೂ ರುದ್ರಾಕ್ಷಿ ಇರುವ ಸರ, ಹಸಿರು ಬಣ್ಣದ ಕೈ ಬಳೆ, ಚಾಕೋಲೆಟ್, ಗ್ಯಾಜೆಟ್ ಕೂಡ ನೀಡಬಹುದು.
ಧನು ರಾಶಿ
ಧನು ರಾಶಿ ಸಹೋದರಿಯರು ಜ್ಞಾನ ಮತ್ತು ಪ್ರಯಾಣವನ್ನು ಇಷ್ಟಪಡುತ್ತಾರೆ. ಹೀಗಾಗಿ ನೀವು ಅವರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಬಹುದು. ಇಲ್ಲವೆ ಯಾವುದಾದರು ಪ್ರವಾಸದ ಪ್ಯಾಕೆಜ್ ಅನ್ನು ಉಡುಗೊರೆಯಾಗಿ ನೀಡಬಹುದು.
ಮಕರ ರಾಶಿ
ಮಕರ ರಾಶಿಯವರು ಔದ್ಯೋಗಿಕ ವಿಚಾರವಾಗಿ ಬಹಳ ಚಿಂತಿಸುವವರು, ಹೀಗಾಗಿ ಅವರ ಕೆಲಸಕ್ಕೆ ಸಂಬಂಧಿಸಿದ ವಸ್ತು, ಗ್ಯಾಜೆಟ್ ನೀಡಬಹುದು.
ಕುಂಭ ರಾಶಿ
ಕುಂಭ ರಾಶಿಯವರು ವೈಯಕ್ತಿಕ ಲಾಭ ಹಾಗೂ ವ್ಯವಹಾರದಲ್ಲಿ ಚತುರರು ಹೀಗಾಗಿ ಅವರಿಗೆ ನೀವು ಹಣ ಇಲ್ಲವೆ ಉಡುಪು, ಶೂಗಳು, ಪುಸ್ತಕದಂತಹ ಉಡುಗೊರೆ ನೀಡಿ.
ಮೀನ ರಾಶಿ
ಮೀನ ರಾಶಿಯವರು ಕಲೆಯನ್ನು ಇಷ್ಟಪಡುವ ಮಂದಿ ಹೀಗಾಗಿ ನೀವು ಅವರಿಗೆ ಅಪರೂಪದ ಚಿತ್ರಕಲೆ, ದೇವರ ವಿಗ್ರಹಗಳು, ಕರಕುಶಲ ವಸ್ತುವಿನಿಂದ ಮಾಡಿರುವ ಕಲಾತ್ಮಕ ವಸ್ತು ನೀಡಬಹುದು.
(ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು, ಜ್ಯೋತಿಷ್ಯ, ಪಂಚಾಂಗ, ಧಾರ್ಮಿಕ ಗ್ರಂಥಗಳು ಇತ್ಯಾದಿಗಳ ಆಧರಿಸಿದೆ. ಇಲ್ಲಿ ನೀಡಲಾದ ಮಾಹಿತಿ ಮತ್ತು ಸಂಗತಿಗಳ ನಿಖರತೆ, ಸಂಪೂರ್ಣತೆಗೆ ಬೋಲ್ಡ್ ಸ್ಕೈ ಕನ್ನಡ ಜವಾಬ್ದಾರಿಯಲ್ಲ. ಈ ಮೇಲಿನ ಯಾವುದೇ ವಿಷಯವನ್ನು ಅನುಸರಿಸುವ ಮೊದಲು ನಿರ್ದಿಷ್ಟ ಅಥವಾ ಸೂಕ್ತ ತಜ್ಞರ ಭೇಟಿಗೆ ಸಲಹೆ ನೀಡಲಾಗುತ್ತದೆ)



Click it and Unblock the Notifications