ಮೀನರಾಶಿಯಲ್ಲಿ ಅಪರೂಪದ 3 ರಾಜಯೋಗ: ಯಾವ ರಾಶಿಯವರಿಗೆ ಅದೃಷ್ಟ..!

ಜ್ಯೋತಿಷ್ಯಶಾಸ್ತ್ರದಲ್ಲಿ ಯೋಗಗಳನ್ನು ವ್ಯಕ್ತಿಯೊಬ್ಬನ ಜೀವನ ಬದಲಿಸುವ ಅಂಶಗಳೆಂದು ಪರಿಗಣಿಸಲಾಗಿದೆ. ಹಾಗೆ ಯೋಗಗಳು ಪ್ರತಿಯೊಂದು ರಾಶಿಯಲ್ಲು ಕೂಡ ಅಚ್ಚರಿ ಫಲಿತಾಂಶಗಳ ತರಲಿದೆ. ಎಲ್ಲಾ ರಾಶಿಗಳಲ್ಲೂ ಉಂಟಾಗುವ ಯೋಗವು ಹಲವು ರೀತಿಯ ಶುಭಗಳಿಗೆ ಕಾರಣವಾಗುತ್ತದೆ. ಅದರಲ್ಲೂ ಕೆಲವು ಗ್ರಹಗಳ ಸಂಚಾರದಿಂದಾಗಿ ಅಪರೂಪದ ಯೋಗಗಳು ಉಂಟಾಗುವುದು ಸಹ ನೋಡಲಿದ್ದೇವೆ.

ಈಗ ಮೀನ ರಾಶಿಯಲ್ಲಿ ಹಲವು ಗ್ರಹಗಳ ಸಂಚಾರದಿಂದಾಗಿ ಅಪರೂಪದ ಯೋಗಗಳು ಉಂಟಾಗುತ್ತಿದೆ. ಅದರಲ್ಲೂ ಮಾರ್ಚ್ ತಿಂಗಳಲ್ಲಿ ಮೀನರಾಶಿಯಲ್ಲಿ ಹಲವು ಗ್ರಹಗಳ ಸಂಚಾರ ನಾವು ನೋಡಬಹುದು. ಇದರಿಂದ ಮೀನರಾಶಿಯಲ್ಲಿ ಮೂರು ರಾಜಯೋಗ ರೂಪುಗೊಳ್ಳುತ್ತಿದೆ. ಇದು ಪ್ರತಿಯೊಂದು ರಾಶಿಯ ಮೇಲೆಯೂ ಪರಿಣಾಮ ಬೀರುತ್ತದೆ.

Rajyog In Pisces Will Lead To Good Luck For These Zodiac Signs

ಹಾಗೆ ಮಾರ್ಚ್‌ ತಿಂಗಳಲ್ಲಿ ಮೀನ ರಾಶಿಯಲ್ಲಿ ಉಂಟಾಗುತ್ತಿರುವ ಎಲ್ಲಾ ಯೋಗಗಳು ಲಾಭದಾಯಕವಾಗುತ್ತಿದೆ. ಸೂರ್ಯ ಮತ್ತು ಶುಕ್ರರ ಸಂಯೋಗದಿಂದ ಉಂಟಾಗುವ ಶುಕ್ರಾದಿತ್ಯ ರಾಜಯೋಗ, ಸೂರ್ಯ ಮತ್ತು ಬುಧರ ಸಂಯೋಗದಿಂದ ಉಂಟಾಗುವ ಬುಧಾದಿತ್ಯ ರಾಜಯೋಗ ಮತ್ತು ಶುಕ್ರ ಹಾಗೂ ಬುಧರ ಸಂಯೋಗದಿಂದ ಉಂಟಾಗುವ ಲಕ್ಷ್ಮಿ ನಾರಾಯಣ ರಾಜಯೋಗ ಹಲವರಿಗೆ ಲಾಭದಾಯಕವಾಗುತ್ತಿದೆ.

ಹಾಗಾದ್ರೆ ಈ ಮೂರು ರಾಜಯೋಗದ ಕಾರಣದಿಂದಾಗಿ ಯಾವೆಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತಿದೆ. ಹಾಗೆ ಯಾವ ರಾಶಿಯವರಿಗೆ ಹೆಚ್ಚು ಲಾಭವಾಗುತ್ತಿದೆ ಎನ್ನುವುದನ್ನು ನಾವಿಂದು ತಿಳಿದುಕೊಳ್ಳೋಣ.

ಮಕರ ರಾಶಿ

ಮಕರ ರಾಶಿಯ 3 ನೇ ಮನೆಯಲ್ಲಿ 3 ರಾಜಯೋಗಗಳು ರೂಪುಗೊಳ್ಳುತ್ತಿದೆ. ಇದು ಬಹಳ ಅಪರೂಪದಲ್ಲಿ ಅಪರೂಪಕ್ಕೆ ಸಂಭವಿಸುವಂತಹ ರಾಜಯೋಗವಾಗಿದೆ, ಹೀಗಾಗಿ ಮಕರ ರಾಶಿಯವರಿಗೆ ಈ ಯೋಗಗಳು ಲಾಭದಾಯಕವಾಗುತ್ತಿವೆ. ನಿಮ್ಮ ಎಲ್ಲಾ ಕೆಲಸಗಳು ಸರಿಯಾದ ಸಮಯಕ್ಕೆ ಪೂರ್ಣವಾಗಲಿವೆ. ಹಾಗೆ ಉದ್ಯೋಗ ಹುಡುಕುತ್ತಿದ್ದ ಯುವಕರು ಈ ಸಮಯದಲ್ಲಿ ಸೂಕ್ತ ಉದ್ಯೋಗ ಪಡೆಯಲಿದ್ದಾರೆ. ಸರ್ಕಾರಿ ನೌಕರರಿಗೆ ಶುಭಯೋಗವಿದು. ಯಾಗೆ ಸರ್ಕಾರಿ ಹುದ್ದೆಗಾಗಿ ನೀವು ಪ್ರಯತ್ನಿಸುತ್ತಿದ್ದರೆ ನಿಮಗೆ ಒಳಿತಾಗಲಿದೆ. ವ್ಯಾಪಾರಿಗಳು ಲಾಭ ಮಾಡಬಹುದು. ಹಾಗೆ ಹೊಸ ಉದ್ಯಮ ಅಥವಾ ವ್ಯಾಪಾರ ಮಾಡುವಂತಹ ನಿಮ್ಮ ಕನಸಿನ ಯೋಜನೆಗೆ ಈ ಸಮಯದಲ್ಲಿ ಸಹಕಾರಗಳು ಒಲಿದು ಬರಲಿದೆ. ಸಮಾಜದಲ್ಲಿ ನಿಮ್ಮ ಗೌರವ, ಘಟನೆ ಹೆಚ್ಚಾಗುವಂತಹ ಕೆಲಸ ಮಾಡಲಿದ್ದೀರಿ. ವಾಹನ ಮಾಲಿಕರು ಲಾಭ ಮಾಡಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ.

ವೃಷಭ ರಾಶಿ

ವೃಷಭ ರಾಶಿಯ 11 ನೇ ಮನೆಯಲ್ಲಿ 3 ರಾಜಯೋಗಗಳು ರೂಪುಗೊಳ್ಳುತ್ತವೆ. ಹೀಗಾಗಿ ವೃಷಭ ರಾಶಿಯ ಮಂದಿ ಅದೃಷ್ಟವೂ ಒಲಿದು ಬರಲಿದೆ. ನೀವು ಬಾಕಿ ಉಳಿಸಿಕೊಂಡಿದ್ದ ಬಹುದೊಡ್ಡ ಕೆಲಸವೊಂದು ಪೂರ್ಣ ಆಗಲಿದೆ, ಹಾಗೆ ವರ್ಷಗಳಿಂದ ಇಟ್ಟುಕೊಂಡಿದ್ದ ಕನಸೊಂದು ನನಸಾಗುತ್ತಿದೆ. ಮನೆಗಾಗಿ ನೀವು ಹಣ ಖರ್ಚು ಮಾಡಲು ಮುಂದಾಗುತ್ತಿರಿ. ಹಾಗೆ ನಿಮ್ಮ ಆರ್ಥಿಕ ಸಮಸ್ಯೆಗಳು ಕೂಡ ದೂರಾಗುವ ಸಮಯ ಇದಾಗಿರಲಿದೆ. ಕೆಲಸದ ಸ್ಥಳದಿಂದ ನಿಮಗೆ ಹಲವು ರೀತಿಯ ಲಾಭವಾಗಲಿದೆ. ನೀವು ಆಸ್ತಿ, ಮನೆ ಖರೀದಿಯಂತಹ ವಿಚಾರದ ಕುರಿತು ಆಲೋಚಿಸಬಹುದು. ಇನ್ನು ಹೊಸ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗಬಹುದು.

ತುಲಾ ರಾಶಿ

ತುಲಾ ರಾಶಿಯ 6ನೇ ಮನೆಯಲ್ಲಿ 3 ರಾಜಯೋಗಗಳು ರೂಪುಗೊಳ್ಳುತ್ತವೆ. ಇದರಿಂದಾಗಿ ನಿಮ್ಮಲ್ಲಿ ಹಣದ ಹರಿವು ಹೆಚ್ಚಾಗಲಿದೆ, ನೀವು ಬಹುತೇಕ ಎಲ್ಲಾ ಕೆಲಸದಲ್ಲೂ ಯಶಸ್ವಿಯಾಗುತ್ತೀರಿ. ನಿಮ್ಮ ಅನೇಕ ಕೆಲಸಗಳು ಅಡೆತಡೆಯಿಲ್ಲದೆ ನಡೆಯಲಿದೆ. ಹೊಸ ವಾಹನ ಅಥವಾ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಸಬಹುದು. ಪ್ರವಾಸ, ಪುಣ್ಯ ಸ್ಥಳದ ವೀಕ್ಷಣೆಗೆ ನೀವು ಮುಂದಾಗಬಹುದು. ವ್ಯಾಪಾರದಲ್ಲಿ ಲಾಭ ನೋಡುವಂತಹ ಕಾಲವಿದು, ಪಾಲುದಾರಿಕೆಯ ವ್ಯಾಪಾರದಲ್ಲಿದ್ದರೆ ನಿಮ್ಮ ಲಾಭ ಹೆಚ್ಚಾಗಲಿದೆ. ಹೋಟೆಲ್ ಉದ್ಯಮಿಗಳಿಗೆ ಬಹಳ ಉತ್ತಮ ದಿನಗಳಿವೆ. ದಾಂಪತ್ಯ ಜೀವನದಲ್ಲಿ ಸುಖ ಇರಲಿದೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Rajyog In Pisces Will Lead To Good Luck For These Zodiac Signs

Rare yogas are occurring due to the transit of many planets in Pisces. Especially in the month of March, we can see the transit of many planets in Pisces.
Story first published: Tuesday, March 18, 2025, 18:50 [IST]
X
Desktop Bottom Promotion