Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2025ರಲ್ಲಿ ಕುಂಭ ರಾಶಿಗೆ ರಾಹು ಸಂಚಾರ..! ಯಾರಿಗೆ ತರಲಿದೆ ಶುಭಯೋಗ?
2025ರಲ್ಲಿ ಗ್ರಹಗತಿಗಳ ಬದಲಾವಣೆಯನ್ನು ನಾವು ನೋಡಬಹುದಾಗಿದೆ. ಮುಖ್ಯವಾಗಿ ಹಲವು ರಾಶಿಗಳ ಮೇಲೆ ಈ ರಾಹು ಸಂಕ್ರಮಣದ ಪ್ರಭಾವ ಬೀರುವುದು ಖಚಿತ. ರಾಹುವನ್ನು ನೆರಳಿನ ಗ್ರಹ ಎಂದು ಕರೆಯಲಾಗಿದೆ. ಹಾಗೆ 2025ರಲ್ಲಿ ರಾಹು ಕುಂಭರಾಶಿಯಲ್ಲಿ ಗೋಚರ ಆಗುತ್ತಿರುವುದು ಎಲ್ಲಾ ರಾಶಿಗಳ ಮೇಲೆಯೂ ತನ್ನ ಪ್ರಭಾವ ಉಂಟು ಮಾಡುತ್ತಿದೆ.
ವೈದಿಕ ಜ್ಯೋತಿಷ್ಯದಲ್ಲಿ ರಾಹು ಕೆಟ್ಟ ಗ್ರಹ ಎಂದು ಹಲವರು ಭಾವಿಸಲಾಗಿದೆ. ಆದ್ರೆ ರಾಹುವಿನ ಕೃಪೆ ಯಾವ ರಾಶಿಯ ಮೇಲೆ ಇರುತ್ತದೆಯೋ ಅವರಿಗೆ ಉತ್ತಮ ದಿನಗಳು ಮುಂದೆ ಬರಲಿದೆ ಎಂದರ್ಥ. ರಾಹು 18 ತಿಂಗಳವರೆಗೆ ಒಂದೇ ರಾಶಿಯಲ್ಲಿರುತ್ತಾನೆ. ಈ 2025ರಲ್ಲಿ ರಾಹು ಕುಂಭ ರಾಶಿಗೆ ರಾಹು ಚಲಿಸಲಿದ್ದಾನೆ. ರಾಹು ಮೇ 18 ರಂದು ಸಂಜೆ 5:08ಕ್ಕೆ ಮೀನ ರಾಶಿಯಿಂದ ಹೊರಟು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ.

ಈಗ ರಾಹು ಮೀನ ರಾಶಿಯಲ್ಲಿದ್ದಾನೆ. ಆದ್ರೆ ಮುಂದೆ ಆತ ಕುಂಭ ರಾಶಿಗೆ ಚಲಿಸಲಿದ್ದಾನೆ. ಕುಂಭ ರಾಶಿ ಶನಿ ದೇವರ ರಾಶಿ ಎಂದು ಹೇಳಲಾಗಿದೆ. ಹೀಗಾಗಿ ಶನಿ ಹಾಗೂ ರಾಹುವಿನ ಸಂಯೋಗವು ಹಲವು ರೀತಿಯ ಪ್ರಭಾವ ಉಂಟು ಮಾಡಲಿದೆ. ರಾಹುವು ಶನಿ ಆಡಳಿತ ಕುಂಭ ರಾಶಿಗೆ ಚಲಿಸುವಾಗ ಅದರ ಪ್ರಭಾವ 12 ರಾಶಿಗಳ ಮೇಲೂ ಆಗಲಿದೆ. 2025 ರಲ್ಲಿ ರಾಹು ಸಂಕ್ರಮಣದಿಂದ ಯಾವ ರಾಶಿಯವರಿಗೆ ಅದೃಷ್ಟ ಬರುತ್ತದೆ ಎಂದು ನೋಡೋಣ.
ಕುಂಭ ರಾಶಿ
ಕುಂಭ ರಾಶಿಯವರು 2025 ರಲ್ಲಿ ರಾಹು ಸಂಕ್ರಮಣದೊಂದಿಗೆ ಅದೃಷ್ಟಶಾಲಿಯಾಗಲಿದ್ದಾರೆ. ಮುಖ್ಯವಾಗಿ ಆತ್ಮಸ್ಥೈರ್ಯ ಹೆಚ್ಚಿಸುವುದು. ವ್ಯಕ್ತಿತ್ವ ಸುಧಾರಿಸುತ್ತದೆ. ಕೆಲಸದ ಸ್ಥಳದಲ್ಲಿ ಉತ್ತಮ ಕಾರ್ಯಕ್ಷಮತೆಯಿಂದಾಗಿ ನೀವು ಉತ್ತಮ ಯಶಸ್ಸನ್ನು ಕಾಣುವಿರಿ. ನಿಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಯಶಸ್ಸು ನೋಡುತ್ತೀರಿ, ಸಾಧ್ಯವಾದಷ್ಟು ನೀವು ಹಣಕಾಸಿನ ವ್ಯವಹಾರದಲ್ಲಿ ಇಳಿಯುವ ಮುನ್ನ ಯೋಚಿಸಿ ಹೆಜ್ಜೆ ಇಡಿ. ಆರೋಗ್ಯದ ಕಡೆಗೂ ಗಮನವಿಡಿ.
ವೃಷಭ ರಾಶಿ
2025 ರಲ್ಲಿ ರಾಹು ಸಂಚಾರವು ವೃಷಭ ರಾಶಿಯವರಿಗೆ ಧನಾತ್ಮಕ ಲಾಭಗಳನ್ನು ತರುತ್ತದೆ. ರಾಹುವಿನ ಪ್ರಭಾವವು ವೃತ್ತಿಜೀವನದ ಮೇಲೆ ಇರುವುದರಿಂದ, ನೀವು ವೃತ್ತಿಪರವಾಗಿ ಉತ್ತಮ ಪ್ರಗತಿಯನ್ನು ಕಾಣುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. ಅವಿವಾಹಿತರಿಗೆ ಶುಭ ಸುದ್ದಿಗಳಿವೆ. ಕಲಾವಿದರು, ವ್ಯಾಪಾರಿಗಳಿಗೆ ಈ ದಿನಗಳು ಬಹಳ ಉತ್ತಮವಾಗಿರಲಿದೆ. ನೀವು ಕಾರ್ಖಾನೆಗಳಲ್ಲಿ ಕೆಲಸ ಮಾಡುವವರಾಗಿದ್ದರೆ ಬಡ್ತಿ, ವೇತನ ಹೆಚ್ಚಳ ಸಾಧ್ಯತೆ ಇದೆ.
ಮಿಥುನ ರಾಶಿ
2025 ರಲ್ಲಿ ರಾಹುವಿನ ಚಲನೆಯಿಂದಾಗಿ ಮಿಥುನ ರಾಶಿಯ ಮಂದಿಗೆ ಬಾಕಿ ಕೆಲಸಗಳು ಮುಗಿದು ಅದರಿಂದ ಆಗುವ ಲಾಭ ಹೆಚ್ಚಾಗಲಿದೆ. ಹೂವು, ಹಣ್ಣಿನ ವ್ಯಾಪಾರಿಗಳು, ಭೂಮಿ ನಂಬಿರುವ ಯಾವುದೇ ಉದ್ಯಮವಿದ್ದರೂ ಲಾಭ ಖಚಿತ. ನಿಮ್ಮ ನಾಯಕತ್ವದ ಗುಣದಿಂದ ಎಲ್ಲರ ಗಮನ ಸೆಳೆಯುತ್ತೀರಿ, ನಿಮ್ಮ ಸಂಬಂಧಗಳು ಮತ್ರಷ್ಟು ವೃದ್ಧಿಯಾಗುತ್ತದೆ. ಕುಟುಂಬಸ್ಥರ ಜೊತೆಗೆ ಸಂತಸದ ದಿನಗಳ ಕಳೆಯುತ್ತೀರಿ.
ಸಿಂಹ ರಾಶಿ
ಸಿಂಹ ರಾಶಿಯವರಲ್ಲಿ ಆರ್ಥಿಕ ಲಾಭಕ್ಕೆ ಈ ರಾಹು ಸಂಯೋಗ ಕಾರಣವಾಗುತ್ತಿದೆ, ನಿಮ್ಮ ಹಳೆಯ ಸಾಲ ಮರುಪಾವತಿ, ನಿಮ್ಮ ಆರ್ಥಿಕ ಸ್ಥಿತಿಗತಿ ಸುಧಾರಿಸುವುದು ಸೇರಿ ನೀವು ಮಾಡಿರುವ ಹಣ ಹೂಡಿಕೆಯಿಂದ ಲಾಭ ಗಳಿಸುತ್ತೀರಿ. ವರ್ಷಗಳಿಂದ ಕಾಡುತ್ತಿದ್ದ ಕೆಲವು ಆರ್ಥಿಕ ಸಮಸ್ಯೆ ದೂರಾಗಲಿದೆ. ಇತರರಿಗೆ ನಿಮ್ಮಿಂದ ಸಹಾಯವಾಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಅಂದುಕೊಂಡಿದ್ದೆಲ್ಲ ಕೈಗೂಡುವ ಸಮಯವಿದು. ರಾಹುವಿನ ಸಂಚಾರ ನಿಮ್ಮ ಧನಾತ್ಮಕ ಬೆಳವಣಿಗೆೆ ಸಾಕ್ಷಿಯಾಗಲಿದೆ. ಹಾಗೆ ನಿಮ್ಮ ನಿತ್ಯದ ಕೆಲಸಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ನೆರವೇರಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಕೂಡ ನಿಮ್ಮದಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications