18 ವರ್ಷದ ಬಳಿಕ ಕುಂಭ ರಾಶಿಗೆ ರಾಹು ಸಂಚಾರ: 4 ರಾಶಿಯವರಿಗೆ ದೊಡ್ಡ ಸವಾಲು!

ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಗಳ ಚಲನೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುವುದು ನೋಡಬಹುದು. ಹಾಗೆ ಪ್ರತಿಯೊಂದು ಗ್ರಹಗಳ ಚಲನೆಯು ವ್ಯಕ್ತಿಗಳ ಜೀವನದಲ್ಲಿ ಬದಲಾವಣೆ ತರಲಿದೆ. ಈಗ ರಾಹು ಗ್ರಹದ ಚಲನೆ ಉಂಟಾಗುತ್ತಿರುವುದು ಹಲವು ರಾಶಿಗಳಲ್ಲಿ ಶುಭದ ಜೊತೆಗೆ ಅಶುಭ ಕೂಡ ನಡೆಯುತ್ತಿದೆ. ರಾಹುವನ್ನು ನೆರಳಿನ ಗ್ರಹ ಎಂದು ಪರಿಗಣಿಸಲಾಗಿದೆ. ಹಾಗೆ ರಾಹುವನ್ನು ದುಷ್ಟ ಗ್ರಹವೆಂದು ಹಾಗೆ ಕೆಟ್ಟ ಕೆಲಸಗಳಿಗೆ ಕಾರಣವಾಗುವ ಗ್ರಹವೆಂದು ಪರಿಗಣಿಸಲಾಗಿದೆ.

ಹಾಗೆ ಈ ರಾಹುವಿನಿಂದ ಹಲವು ರೀತಿಯ ಸಮಸ್ಯೆಗಳ ಎದುರಿಸಬಹುದು. ಈಗ ರಾಹು ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ರಾಹು ಬರೋಬ್ಬರಿ 18 ವರ್ಷಗಳ ಬಳಿಕ ಕುಂಭ ರಾಶಿ ಪ್ರವೇಶಿಸುತ್ತಿದೆ. ಮೇ 18ರಂದು ಹಿಮ್ಮುಖ ಚಲನೆಯಲ್ಲಿರು ರಾಹು ಮೀನ ರಾಶಿಯಿಂದ ಕುಂಭ ರಾಶಿಗೆ ಚಲಿಸಲಿದ್ದಾನೆ. ಇದರಿಂದ ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಬೀರುವುದು ನೋಡಬಹುದು. ಆದ್ರೆ ನಾವಿಂದು ರಾಹುವಿನಿಂದ ಸಂಕಷ್ಟಗಳ ಎದುರಿಸುವ ರಾಶಿ ಯಾವುದು ಎಂಬುದನ್ನು ತಿಳಿದುಕೊಳ್ಳೋಣ.

Rahu s Transit To Aquarius After 18 Years Leads New Challenge For These Zodiac Signs

ಹಾಗಾದ್ರೆ ಯಾವ ರಾಶಿಯವರಿಗೆ ರಾಹುವಿನಿಂದ ಸಮಸ್ಯೆ ಕಾಡಬಹುದು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ರಾಹುವಿನ ಸಂಚಾರದಿಂದಾಗಿ ಈ ಸಮಯದಲ್ಲಿ ಭಾರೀ ಬದಲಾವಣೆಗಳನ್ನು ಎದುರಿಸಬೇಕಾಗಬಹುದು. ನೀವು ಯಾವುದಾದರು ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿದ್ದರೆ ಈ ಸಮಯದಲ್ಲಿ ಅದು ದೊಡ್ಡದಾಗಬಹುದು. ನಿಮ್ಮ ಪರಿಶ್ರಮಗಳಿಗೆ ತಕ್ಕ ಪ್ರತಿಫಲ ಸಿಗದೆ ಇರಬಹುದು. ನೀವು ಬಹಳಷ್ಟು ಓಡಾಟ ನಂತರ ಆರ್ಥಿಕ ಸಮಸ್ಯೆಗಳ ಸರಿ ಪಡಿಸಲು ಖರ್ಚು ಮಾಡಬೇಕಾಗಬಹುದು. ಹಾಗೆ ವ್ಯಾಪಾರದಲ್ಲಿ ಅಡ್ಡಿ ಆತಂಕ ಹೆಚ್ಚಾಗಬಹುದು. ಮನೆಯವರಲ್ಲಿ ನಿಮ್ಮ ಮೇಲಿನ ಚಿಂತೆ ಹೆಚ್ಚಾಗುವುದು ನಿಮಗೂ ಒತ್ತಡ ತರಲಿದೆ. ನೀವು ತಾಳ್ಮೆಯಿಂದ ಎದುರಿಸಬೇಕಾದ ವಿಚಾರಗಳು ನಿಮ್ಮ ಕೈ ತಪ್ಪಬಹುದು. ಅವಿವಾಹಿತರಲ್ಲಿ ವಿವಾಹ ಸಂಬಂಧಿ ಸಮಸ್ಯೆಗಳು ಎದುರಾಗಬಹುದು.

ಸಿಂಹ ರಾಶಿ

ಸಿಂಹ ರಾಶಿಯವರ 7ನೇ ಮನೆಗೆ ರಾಹು ಸಂಚರಿಸಲಿದ್ದಾನೆ. ಇದರಿಂದ ನಿಮ್ಮ ಆದಾಯದಲ್ಲಿ ಸ್ವಲ್ಪ ಏರುಪೇರು ಉಂಟಾಗಬಹುದು. ನೀವು ಅಂದುಕೊಂಡರೆ ಕೆಲಸ ಕಾರ್ಯಗಳು ನಡೆಯದೆ ಇರಬಹುದು. ಅದರಲ್ಲೂ ದೊಡ್ಡ ವ್ಯಾಪಾರಗಳು, ವ್ಯವಹಾರಗಳಿಗೆ ಆರ್ಥಿಕ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ತೊಡಕು ಕಾಣಿಸಿಕೊಳ್ಳಬಹುದು. ಕುಟುಂಬದಲ್ಲಿ ಅಶಾಂತಿಗೆ ಕಾರಣವಾಗುವ ಘಟನೆಗಳು ನಡೆಯಬಹುದು. ನೀವು ಹೊಸ ವ್ಯವಹಾರ ಆರಂಭಿಸಿದ್ದರೆ ಅದರಿಂದ ನಾನಾ ರೀತಿಯ ಸಮಸ್ಯೆಗಳ ಎದುರಿಸಬೇಕಾಗಬಹುದು.

ತುಲಾ ರಾಶಿ

ತುಲಾ ರಾಶಿಯವರ 5ನೇ ಮನೆಯಲ್ಲಿ ರಾಹು ಚಲಿಸಲಿದ್ದಾನೆ. ಇದರಿಂದ ನಿಮ್ಮ ನಿತ್ಯದ ಕೆಲಸ ಕಾರ್ಯಗಳಿಗೆ ಸಣ್ಣ ಪುಟ್ಟ ಅಡೆತಡೆಗಳ ನೋಡಬಹುದು. ಆಧ್ಯಾತ್ಮದ ಕಡೆಗಿನ ನಿಮ್ಮ ಒಲವು ಕಡಿಮೆಯಾಗುವಂತಹ ಘಟನೆಗಳಿಗೆ ನೀವು ಸಾಕ್ಷಿಯಾಗಬಹುದು. ಖರ್ಚು ಹೆಚ್ಚಾಗುವಂತಹ ಕ್ಷಣಗಳಿಗೆ ನೀವು ಎದುರಿಸುತ್ತೀರಿ. ಮಕ್ಕಳ ಕುರಿತಾದ ಚಿಂತೆ ನಿಮಗೆ ಕಾಡಬಹುದು.

ಮಕರ ರಾಶಿ

ಮಕರ ರಾಶಿಯ 2ನೇ ಮನೆಯಲ್ಲಿ ರಾಹು ಸಂಚರಿಸಲಿದ್ದಾನೆ. ಇದು ಈ ರಾಶಿ ಜನರ ಸಂಪತ್ತಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ನೀವು ಯಾವುದಾದರು ದೊಡ್ಡ ಒಪ್ಪಂದಗಳಿಗೆ ಒಳಗಾಗುವಾಗ ಎಚ್ಚರಿಕೆಯಿಂದರಬೇಕು. ಕೊಟ್ಟ ಮಾತಿನಂತೆ ನಡೆಯಲು ಸಾಧ್ಯವಾಗದೆ ಇರಬಹುದು. ಹೂಡಿಕೆಯಂತಹ ಕೆಲಸಗಳು ಖರ್ಚಿಗೆ ಕಾರಣವಾಗಬಹುದಷ್ಟೆ. ಹಾಗೆ ನಿಮ್ಮ ಕೌಟುಂಬಿಕ ಮನಸ್ತಾಪಗಳು ಹೆಚ್ಚಾಗಬಹುದು.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Rahu's Transit To Aquarius After 18 Years Leads New Challenge For These Zodiac Signs!

You may face many types of problems due to Rahu. Now Rahu is going to enter Aquarius. Rahu is entering Aquarius after exactly 18 years.
Story first published: Thursday, May 22, 2025, 18:54 [IST]
X
Desktop Bottom Promotion