Latest Updates
-
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ?
2026ರಲ್ಲಿ 2 ಬಾರಿ ರಾಹು ಸ್ಥಾನಪಲ್ಲಟ; ಮೂರು ರಾಶಿಯವರಿಗೆ ಅಶುಭ ಕಾಲ, ಏರುಪೇರು!
2026ನೇ ವರ್ಷವು ಜ್ಯೋತಿಷ್ಯದ ಪ್ರಕಾರವಾಗಿ ಬಹಳ ಪ್ರಮುಖ ಹಾಗೆ ಬಹುನಿರೀಕ್ಷೆಗಳ ತರುವಂತಹ ವರ್ಷವಾಗಿದೆ. ಈ ವರ್ಷ ಶನಿಯನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಗ್ರಹಗಳು ತಮ್ಮ ರಾಶಿ ಬದಲಾಯಿಸುವುದು ನೋಡಬಹುದು. ಅದ್ರಲ್ಲೂ ರಾಹು ಮತ್ತು ಕೇತುವಿನ ಚಲನೆ ಕೂಡ 2026ರಲ್ಲಿ ಬಹಳಷ್ಟು ಬದಲಾವಣೆಗಳ ತರಲಿದೆ.
ಜ್ಯೋತಿಷ್ಯದಲ್ಲಿ ರಾಹುವನ್ನು ನೆರಳಿನ ಗ್ರಹ, ಅನಿಶ್ಚಿತತೆ, ಗೊಂದಲ, ವಿಳಂಬ ಮತ್ತು ಹಠಾತ್ ಬದಲಾವಣೆಗಳ ಉಂಟುಮಾಡುವ ಗ್ರಹವೆಂದು ಪರಿಗಣಿಸಲಾಗುತ್ತದೆ. ರಾಹು ಉತ್ತಮ ಸ್ಥಾನದಲ್ಲಿದ್ದರೆ ಶುಭವಾಗುವ ಸಂದರ್ಭಗಳು ಹೆಚ್ಚಾಗುತ್ತದೆ. ಹಾಗೆ ಋಣಾತ್ಮಕ ಮನೆಯಲ್ಲಿದ್ದರೆ ಅಶುಭಗಳು ಕಾಣಿಸಿಕೊಳ್ಳಲಿವೆ.

ಈಗ 2026ರಲ್ಲಿ ರಾಹು ನಕಾರಾತ್ಮಕ ಮನೆಗೆ ಚಲಿಸಲಿದ್ದಾನೆ. ರಾಹು ಒಂದೇ ರಾಶಿಯಲ್ಲಿ 18 ತಿಂಗಳ ಕಾಲ ಚಲಿಸುತ್ತಾನೆ. ಈ ಸಮಯದಲ್ಲಿ ಕೆಲವು ಗ್ರಹಗಳೊಂದಿಗೆ ಆತನ ಸಂಯೋಗವು ಹಲವು ರೀತಿಯಲ್ಲಿ ಶುಭ ಹಾಗೂ ಅಶುಭ ಯೋಗಗಳಿಗೆ ಕಾರಣವಾಗುವುದು ನೋಡಬಹುದು. ಶನಿಯ ನಂತರ ರಾಹು ದೀರ್ಘಕಾಲ ಪ್ರಯಾಣಿಸುವ ಗ್ರಹವಾಗಿದೆ. ರಾಹುವಿನ ರಾಶಿ ಬದಲಾವಣೆ ಕೂಡ ಹಲವು ರಾಶಿಗಳ ಮೇಲೆ ಪರಿಣಾಮ ಉಂಟು ಮಾಡಲಿದೆ.
2026ರಲ್ಲಿ ರಾಹು 2 ಬಾರಿ ತನ್ನ ಸ್ಥಾನ ಬದಲಾಯಿಸಲಿದ್ದಾನೆ. ವರ್ಷದ ಆರಂಭದಲ್ಲಿ ಆತ ಕುಂಭ ರಾಶಿಗೆ ಪ್ರಯಾಣಿಸಿದರೆ ಅದಾದ ಬಳಿಕ ಧನಿಷ್ಠಾ ನಕ್ಷತ್ರಕ್ಕೆ ಚಲಿಸಲಿದ್ದಾನೆ. ಧನಿಷ್ಠಾ ನಕ್ಷತ್ರವು ಮಂಗಳನಿಂದ ಆಳಲ್ಪಡುತ್ತಾನೆ. ಅದಾದ ಬಳಿಕ ಡಿಸೆಂಬರ್ 2026ರಲ್ಲಿ ಕುಂಭ ರಾಶಿಯಿಂದ ರಾಹು ಮಕರ ರಾಶಿಗೆ ಚಲಿಸಲಿದ್ದಾನೆ.
ರಾಹುವಿನ ಈ ಚಲನೆಗಳು ಹಲವು ರಾಶಿಗಳ ಮೇಲೆ ಪ್ರಭಾವ ಉಂಟು ಮಾಡುವುದು ನೋಡಬಹುದು. ಅದ್ರಲ್ಲೂ ಇದು ಮಂಗಳನಿಂದ ಆಳಲ್ಪಡುವ ನಕ್ಷತ್ರಕ್ಕೆ ಚಲಿಸುವುದು ಹಲವು ರೀತಿ ಅಶುಭಗಳಿಗೆ ಕಾರಣವಾಗುತ್ತಿದೆ. ರಾಹುವಿನ ಸ್ಥಾನಪಲ್ಲಟ ಒಂದಿಷ್ಟು ಅಡ್ಡಿಗಳನ್ನು ಉಂಟು ಮಾಡಲಿವೆ. ಹಾಗಾದ್ರೆ ಯಾರಿಗೆಲ್ಲಾ ಅಶುಭ ಕಾರಕವಾಗುತ್ತಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ವೃಷಭ ರಾಶಿ
2026 ರಲ್ಲಿ ರಾಹು ಸಂಚಾರವು ವೃಷಭ ರಾಶಿಯವರ ಜೀವನದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ ಮತ್ತು ಕುಟುಂಬ ಜೀವನದಲ್ಲಿನ ಮುನಿಸುಗಳು ಹೆಚ್ಚಾಗಬಹುದು. ಕೆಲಸದ ಹೊರೆಯಿಂದ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುವುದು ನೋಡಬಹುದು. ನಿಮ್ಮ ಆರೋಗ್ಯದಲ್ಲಿ ಹಿಂದೆಂದೂ ನೋಡಿರದ ಏರಳಿತದಿಂದ ಉದ್ಯೋಗ ಅಥವಾ ದೈನಂದಿನ ಕೆಲಸ ಕಾರ್ಯಗಳಲ್ಲಿ ಅಡ್ಡಿಯಾಗುವುದು ನೋಡಬಹುದು. ಹಣಕಾಸು ಸಮಸ್ಯೆಗಳು ನಿಮ್ಮ ಒತ್ತಡಗಳ ಹೆಚ್ಚಿಸಲು ಕಾರಣವಾಗಬಹುದು. ಅವಿವಾಹಿತರು ವಿವಾಹ ಸಂಬಂಧಿತ ಅಡ್ಡಿಗಳನ್ನು ಎದುರಿಸಬೇಕಾಗುತ್ತದೆ.
ಸಿಂಹ ರಾಶಿ
2026 ರಲ್ಲಿ ರಾಹು ಸಂಚಾರದಿಂದಾಗಿ ಸಿಂಹ ರಾಶಿಯವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ. ನೀವು ದೊಡ್ಡ ಖರ್ಚುಗಳ ಮಾಡುವ ಮುನ್ನ ಬಹಳಷ್ಟು ಆಲೋಚಿಸಬೇಕಾಗುತ್ತದೆ. ಹಾಗೆ ಉದ್ಯಮಿಗಳು ಆರ್ಥಿಕ ನಷ್ಟದಂತಹ ಬಿಕ್ಕಟ್ಟು ಎದುರಿಸಬೇಕಾಗುತ್ತದೆ. ಪಿತ್ರಾರ್ಜಿತ ಆಸ್ತಿ, ಮನೆ ನಿರ್ಮಾಣ ವಿಚಾರಗಳು ಮತ್ತೆ ಮುಂದಕ್ಕೆ ಹೋಗಬಹುದು. ನಿಮ್ಮ ಆದಾಯ ಮೂಲ ಹೆಚ್ಚಿಸಿಕೊಳ್ಳುವ ನಿಮ್ಮ ಬಯಕೆ ನೀವು ಅಂದುಕೊಂಡ ಮಟ್ಟದಲ್ಲಿ ಫಲಿತಾಂಶ ನೀಡದೆ ಇರಬಹುದು.
ಕನ್ಯಾ ರಾಶಿ
2026 ರಲ್ಲಿ ರಾಹು ಸಂಚಾರದಿಂದಾಗಿ ಕನ್ಯಾ ರಾಶಿಯವರು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಶ್ರಮ ಹೆಚ್ಚಿಸುವ ಸಾಧ್ಯತೆ ಇದೆ. ಅತೀಯಾದ ಖರ್ಚುಗಳು ನಿಮ್ಮ ಆರ್ಥಿಕ ಸಮಸ್ಯೆಗಳ ಹೆಚ್ಚಿಸಬಹುದು. ಹೊಸದಾಗಿ ಯಾವುದಾದರು ವ್ಯವಹಾರ ಆರಂಭಿಸಿದ್ದರೆ ಚಿಂತೆ ಮಾಡುವಂತೆ ಮಾಡಬಹುದು. ಮಕ್ಕಳ ವಿವಾಹ ಕುರಿತಾದ ಅಡ್ಡಿಗಳು ಮುಂದುವರೆಯಲಿವೆ. ಬಹುಕಾಲದಿಂದ ನೀವು ಅಂದುಕೊಂಡಿದ್ದ ಕೆಲಸವು ಮುಂದೂಡಬಹುದು. ನ್ಯಾಯಾಲಯ ಸಂಬಂಧಿತ ವ್ಯಾಜ್ಯಗಳು ಮತ್ತಷ್ಟು ಖರ್ಚು ಮಾಡಿಸಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications