Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
2026ರಲ್ಲಿ ಎರಡು ಬಾರಿ ರಾಹು ಸ್ಥಾನಪಲ್ಲಟ; ಈ ರಾಶಿಯವರಿಗೆ ಡಬಲ್ ಅವಕಾಶ, ಶುಭ ದಿನ!
2026ರಲ್ಲಿ ಹಲವು ಗ್ರಹಗಳ ಚಲನೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುವುದು ನೋಡಬಹುದು. 2026ರ ಆರಂಭದಿಂದಲೂ ಬಹಳಷ್ಟು ಗ್ರಹಗಳ ಸ್ಥಾನ ಪಲ್ಲಟ ನಾವು ನೋಡಬಹುದು. ಹಾಗೆ ಜನವರಿಯಿಂದ ಡಿಸೆಂಬರ್ ವರೆಗೂ ಹಲವು ಗ್ರಹಗಳ ಸಂಚಾರದಲ್ಲಿ ದೊಡ್ಡ ಸ್ಥಾನಪಲ್ಲಟ ನೋಡಬಹುದು. ಹಾಗೆ ರಾಹು ಕೇತು ಸಹ ಈ ವರ್ಷದಲ್ಲಿ ಪಥ ಬದಲಿಸಲಿವೆ.
2026ರಲ್ಲಿ ರಾಹು ಎರಡು ಬಾರಿ ತನ್ನ ಪಥ ಬದಲಾಯಿಸಲಿದ್ದಾನೆ. ಮೊದಲಿಗೆ ರಾಹು ಆಗಸ್ಟ್ 2ರಂದು ಕುಂಭ ರಾಶಿಗೆ ಚಲಿಸಲಿದ್ದಾನೆ, ಅದಾದ ಬಳಿಕ ಧನಿಷ್ಠಾ ನಕ್ಷತ್ರಕ್ಕೆ ಚಲಿಸಲಿದ್ದಾನೆ. ಹಾಗೆ ವರ್ಷದ ಕೊನೆಯಲ್ಲಿ ಅಂದರೆ 2026ರ ಡಿಸೆಂಬರ್‌ನಲ್ಲಿ ಮಕರ ರಾಶಿಗೆ ಚಲಿಸಲಿದ್ದಾನೆ. ಇದರಲ್ಲಿ ಎರಡು ಪ್ರಮುಖ ಚಲನೆಯ ವಿದ್ಯಮಾನ ಎಂದು ಪರಿಗಣಿಸಲಾಗಿದೆ.

ರಾಹುವನ್ನು ನೆರಳಿನ ಗ್ರಹವೆಂದು ಕರೆಯಲಾಗಿದೆ. ಇದು ಹಲವರಿಗೆ ಶುಭ ಹಾಗೂ ಮತ್ತೆ ಕೆಲವರಿಗೆ ಅಶುಭವಾಗಿಯೂ ಪರಿಣಮಿಸಬಹುದು. ಆದ್ರೆ ರಾಹುವಿನ ಕುಂಭ ರಾಶಿ ಚಲನೆ ಹಾಗೂ ಧನಿಷ್ಠಾ ನಕ್ಷತ್ರ ಚಲನೆಯು ಶುಭವೆಂದು ಕರೆಯಲಾಗಿದೆ. ಹಾಗಾದ್ರೆ 2026ರಲ್ಲಿ ರಾಹುವಿನಿಂದ ಯಾವ ರಾಶಿಯವರಿಗೆ ಅನುಕೂಲಕರ. ಯಾರಲ್ಲಿ ರಾಹು ಶುಭ ತರಲಿದ್ದಾನೆ ಎಂಬುದನ್ನು ತಿಳಿದುಕೊಳ್ಳೋಣ.
ಮಿಥುನ ರಾಶಿ
ರಾಹುವಿನ ಸಂಚಾರವು ಮಿಥುನ ರಾಶಿಯವರಿಗೆ ಅಪರೂಪದ ಅವಕಾಶಗಳ ತರಲಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ವೃತ್ತಿಜೀವನದ ಗುರಿಗಳು ಈಡೇರಬಹುದು. ಈ ಗ್ರಹ ಸಂಚಾರದಿಂದಾಗಿ ಅವರ ಹೊಸ ಪ್ರಯತ್ನಗಳು ಅವರಿಗೆ ಉತ್ತಮ ಯಶಸ್ಸನ್ನು ನೀಡುತ್ತವೆ. ಅವರ ಆರ್ಥಿಕ ಪರಿಸ್ಥಿತಿ ಈಗ ಬಲಗೊಳ್ಳುತ್ತದೆ. ಕೆಲಸದ ಹೊರೆಗಳು ಕಡಿಮೆಯಾಗುತ್ತದೆ. ವರ್ಷದ ಮಧ್ಯಂತರದ ಬಳಿಕ ನಿಮ್ಮ ಹಣಕಾಸು ಒತ್ತಡಗಳು ಕಡಿಮೆಯಾಗಲಿದೆ. ನಿಮ್ಮ ಹಲವು ಆಸೆಗಳು ಈಡೇರಿಸಿಕೊಳ್ಳಬಹುದು. ವಿವಾಹಿತರು ಸಂತೋಷ ಮತ್ತು ಶಾಂತಿಯುತ ದಾಂಪತ್ಯ ಜೀವನವನ್ನು ಹೊಂದುತ್ತೀರಿ. ಪ್ರೇಮಿಗಳಿಗೆ ಈ ವರ್ಷ ಬಹಳ ಅನುಕೂಲವಾಗಿರಲಿದೆ.
ತುಲಾ ರಾಶಿ
ರಾಹುವಿನ ಈ ಎರಡು ಸಂಚಾರವು ಕೆಲವು ರಾಶಿ ಜನರಿಗೆ ಅಪಾರ ಪ್ರಗತಿ ನೀಡಲಿದೆ. ನಿಮ್ಮ ಹಲವು ವಿಚಾರಗಳು ಈ ವರ್ಷ ಧನಾತ್ಮಕ ರೀತಿಯಲ್ಲಿ ಮುಗಿಯಲಿದೆ. ನವ ವಿವಾಹಿತರು ಹೊಸ ಅತಿಥಿ ಆಗಮನದಂತಹ ಶುಭಯೋಗಕ್ಕೆ ಕಾರಣರಾಗಲಿದ್ದಾರೆ. ಹೊಸ ವ್ಯವಹಾರಗಳು, ವ್ಯಾಪಾರಗಳು ನಿಮಗೆ ಶುಭಕರವಾಗುತ್ತವೆ. ನಿಮ್ಮ ಕುಟುಂಬದಲ್ಲಿ ನಿಮಗಾಗಿ ಭರವಸೆ ಪ್ರೋತ್ಸಾಹ ನೀಡುವುದು ನೋಡಬಹುದು. ಹಲವು ಸಮಯದಿಂದ ನಿಮಗೆ ಇದ್ದಂತಹ ಚಿಂತೆಯೊಂದು ದೂರಾಗಲಿದೆ. ಆಪ್ತರಿಂದ ನಿಮಗೆ ಬರಬೇಕಿದ್ದ ಯಾವುದೇ ಹಣ ನಿಮ್ಮ ಕೈ ಸೇರುವ ಸಮಯ ಇದಾಗುತ್ತೆ. ಹೊಸ ಆರಂಭಗಳು ತೆರೆದುಕೊಳ್ಳುತ್ತವೆ.
ಕುಂಭ ರಾಶಿ
ಈ ರಾಹು ಸಂಚಾರವು ಕುಂಭ ರಾಶಿಯವರಿಗೆ ಯಶಸ್ಸಿನ ಬಾಗಿಲು ತೆರೆಯುವ ಅವಧಿಯಾಗಿದೆ. ಬಹಳ ವರ್ಷದಿಂದ ನೀವು ಮಾಡಬೇಕಿದ್ದ ಕೆಲಸಗಳು ಈ ವರ್ಷ ಪೂರ್ಣ ಮಾಡಬಹುದು. ಮನೆ ಖರೀದಿ, ಸ್ಥಿರಾಸ್ತಿ ಖರೀದಿ, ವ್ಯಾಪಾರ ಪ್ರಗತಿಯಂತಹ ವಿಚಾರದಲ್ಲಿ ನಿಮಗೆ ಶುಭವಿದೆ. ಹೊಸದಾಗಿ ದೊಡ್ಡ ವ್ಯವಹಾರ ಕಟ್ಟುವ ನಿಮ್ಮ ಬಯಕೆಗಳು ಈಡೇರಲಿವೆ. ಆರ್ಥಿಕ ಪರಿಸ್ಥಿತಿಯು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬಹುದು, ಇದು ಅವರ ಆಸೆಗಳನ್ನು ಪೂರೈಸಲು ಅವರಿಗೆ ಸುಲಭವಾಗುತ್ತದೆ. ಈ ರಾಹು ಸಂಚಾರವು ಉದ್ಭವಿಸುವ ಅವಕಾಶಗಳನ್ನು ಬಳಸಿಕೊಳ್ಳಲು ಅವರನ್ನು ಪ್ರೇರೇಪಿಸುತ್ತದೆ. ಸರ್ಕಾರಿ ಉದ್ಯೋಗಿಗಳಿಗೆ ವೇತನ ವಿಚಾರವಾಗಿ ಶುಭವಾಗುವ ವರ್ಷವಿದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications
