18 ವರ್ಷದ ಬಳಿಕ ರಾಹು-ಶುಕ್ರ ವಿಶೇಷ ಸಂಯೋಗ: ಹಲವರ ಬಳಿ ಬರಲಿದೆ ಅದೃಷ್ಟ, ಸುಖದ ದಿನಗಳು ಕಾದಿವೆ!

ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಅವಧಿಯಲ್ಲಿ ತನ್ನ ರಾಶಿ ಬದಲಾಯಿಸುತ್ತದೆ ಮತ್ತು ಕಾಲಕಾಲಕ್ಕೆ ಇತರ ಗ್ರಹಗಳ ಜೊತೆಯಲ್ಲಿ ಪ್ರಯಾಣಿಸುತ್ತದೆ. ಈ ಗ್ರಹಗಳ ಸಂಯೋಗಗಳಲ್ಲಿ ಕೆಲವು ಹಲವು ವರ್ಷಗಳ ನಂತರ ಸಂಭವಿಸುತ್ತವೆ. ಎಲ್ಲಾ ಗ್ರಹಗಳ ಸಂಚಾರವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರಲಿದೆ ಎಂಬುದನ್ನು ನೀವೆಲ್ಲಾ ತಿಳಿದಿದ್ದೀರಿ. ಅದೇ ರೀತಿ ಗ್ರಹಗಳ ಸಂಚಾರದಿಂದ ಕೆಲವೊಂದು ರಾಶಿಗಳಿಗೆ ಶುಭವಾದರೆ ಮತ್ತೆ ಕೆಲವು ರಾಶಿಗಳಿಗೆ ಅಶುಭಯೋಗಗಳು ಉಂಟಾಗುವುದು ನೋಡಬಹುದು.

ಸದ್ಯ ಈ ಫೆಬ್ರವರಿಯಲ್ಲಿ ಹಲವು ಗ್ರಹಗಳ ಸಂಚಾರ ನೋಡಬಹುದು. ಅದ್ರಲ್ಲೂ ಶುಕ್ರ ಹಾಗು ರಾಹುವಿನ ಸಂಚಾರ ಕೂಡ ಇದೇ ಫೆಬ್ರವರಿಯಲ್ಲಿ ಸಂಭವಿಸುತ್ತದೆ. ರಾಹು ಹಾಗೂ ಶುಕ್ರನ ಸಂಯೋಗವು ಶುಕ್ರ ಗ್ರಹಗದಲ್ಲಿ ಸಂಭವಿಸುತ್ತಿದೆ. ರಾಕ್ಷಸರ ಗುರು ಎಂದು ಪರಿಗಣಿಸಲಾದ ಶುಕ್ರನು ಫೆಬ್ರವರಿ 06 ರಂದು ಕುಂಭ ರಾಶಿಗೆ ಪ್ರವೇಶಿಸುತ್ತಾನೆ.

Rahu-Venus Transit To Same Planet After 18 Year

ಫೆಬ್ರವರಿ 06 ರಿಂದ ಕುಂಭ ರಾಶಿಯಲ್ಲಿ ರಾಹು-ಶುಕ್ರನ ಸಂಯೋಗ ಸಂಭವಿಸುತ್ತದೆ. ಈ ಸಂಯೋಗವು ಸುಮಾರು 18 ವರ್ಷಗಳ ನಂತರ ಸಂಭವಿಸುತ್ತದೆ. ಈ ಸಂಯೋಗದ ಪ್ರಭಾವವು ಎಲ್ಲಾ ರಾಶಿ ಜನರ ಜೀವನದಲ್ಲಿ ಕಂಡುಬರುತ್ತದೆ. 18 ವರ್ಷಗಳ ನಂತರ ಕುಂಭ ರಾಶಿಯಲ್ಲಿ ರಾಹು-ಶುಕ್ರ ಸಂಯೋಗವಾಗುತ್ತಿರುವುದು ಹಲವು ರಾಶಿಗಳಿಗೆ ಅದೃಷ್ಟಕರವಾಗಿರಲಿದೆ. ಹಾಗಾದ್ರೆ ಯಾರಿಗೆಲ್ಲಾ ಈ ಸಮಯವು ಅದೃಷ್ಟಕರ ಎಂಬುದನ್ನು ತಿಳಿದುಕೊಳ್ಳೋಣ.

ಮೇಷ ರಾಶಿ

ರಾಹು-ಶುಕ್ರ ಸಂಯೋಗವು ಮೇಷ ರಾಶಿಯ 11 ನೇ ಮನೆಯಲ್ಲಿ ಸಂಭವಿಸುತ್ತದೆ. ಇದು ಮೇಷ ರಾಶಿಯವರಲ್ಲಿ ಅದೃಷ್ಟಕರ. ನೀವು ಹಲವು ಮೂಲದಿಂದ ಹೊಸ ಆದಾಯ ಪಡೆಯಬಹುದು. ಮಾರಾಟ, ಖರೀದಿಯಂತಹ ವಿಚಾರದಲ್ಲಿಯೂ ನಿಮಗೆ ಬಹಳ ಅನುಕೂಲಕರ ವಾತಾವರಣ ಇರಲಿದೆ. ಅಲ್ಲದೆ ರಾಹುವಿನಿಂದ ನಿಮಗೆ ಆರೋಗ್ಯದಲ್ಲಿದ್ದ ಏರುಪೇರುಗಳು ಕಡಿಮೆಯಾಗಲಿದೆ. ನಿಮ್ಮ ವ್ಯಾಪಾರ ಸಂಬಂಧಿತ ವಿಚಾರಗಳು ಶುಭವಾಗುತ್ತವೆ. ಹೂಡಿಕೆಗಳಿಂದ ಉತ್ತಮ ಲಾಭ ಪಡೆಯುವಿರಿ. ಮೂರನೇ ವ್ಯಕ್ತಿಯೊಂದಿಗೆ ಇದ್ದಂತಹ ಬಿಕ್ಕಟ್ಟುಗಳು ದೂರಾಗಲಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ 4 ನೇ ಮನೆಯಲ್ಲಿ ರಾಹು-ಶುಕ್ರ ಸಂಯೋಗ ಸಂಭವಿಸುತ್ತದೆ. ಇದರಿಂದಾಗಿ ನಿಮ್ಮ ಆರ್ಥಿಕ ಸೌಲಭ್ಯಗಳು ಗೆಚ್ಚಾಲಿದೆ. ಹೊಸ ಮನೆ ಮತ್ತು ವಾಹನವನ್ನು ಖರೀದಿಸಲು ಅವಕಾಶಗಳಿವೆ. ನೀವು ಐಷಾರಾಮಿ ವಸ್ತುಗಳನ್ನು ಖರೀದಿಸುವ ಮೂಲಕ ಸಂತಸದ ವಾತಾವರಣ ಅನುಭವಿಸಬಹುದು. ನವವಿವಾಹಿತ ದಂಪತಿ ಈ ಸಮಯದಲ್ಲಿ ಪ್ರಯಾಣಗಳ ಮಾಡುವಿರಿ. ಅವಿವಾಹಿತರಲ್ಲಿ ವಿವಾಹ ಸಂಬಂಧಿತ ವಿಚಾರವಾಗಿ ಶುಭಕರವಾಗುತ್ತಿದೆ. ದಂಪತಿ ನಡುವೆ ಪ್ರೀತಿ ಬಾಂಧವ್ಯ ಹೆಚ್ಚಾಗುವ ಸಮಯ. ಹೊಸ ಆದಾಯ ಮೂಲವನ್ನು ಹುಡುಕುತ್ತಿದ್ದರೆ ಶುಭವಿದೆ.

ಮಕರ ರಾಶಿ

ಮಕರ ರಾಶಿಯ 2 ನೇ ಮನೆಯಲ್ಲಿ ರಾಹು-ಶುಕ್ರ ಸಂಯೋಗ ಸಂಭವಿಸುತ್ತದೆ. ಇದು ನಿಮಗೆ ಅನುಕೂಲಕರ ದಿನಗಳ ತರಲಿದೆ. ನಿಮ್ಮ ದೊಡ್ಡ ಹಣ‍ಕಾಸಿನ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಅದ್ರಲ್ಲೂ ಸಾಲದ ಪ್ರಮಾಣ ಗಣನೀಯ ರೀತಿಯಲ್ಲಿ ಇಳಿಕೆಯಾಗಲಿದೆ. ಅನೇಕ ಕೆಲಸಗಲ್ಲಿ ಶುಭವಿದೆ. ನೀವು ಉದ್ಯೋಗ ಅರಸುತ್ತಿದ್ದರೆ ಅದರಿಂದ ಲಾಭ ಶುಭವಿದೆ. ಯಾರ ಬಳಿಯಾದರು ಅಥವಾ ಎಲ್ಲಿಯಾದರು ಸಿಲುಕಿದ್ದ ನಿಮ್ಮ ಹಣ ಕೈ ಸೇರಲಿದೆ. ಅನಿರೀಕ್ಷಿತ ಲಾಭಗಳು ಹೆಚ್ಚಾಗಲಿದೆ. ಅನೇಕರಲ್ಲಿ ವೈವಾಹಿಕ ಸಂಬಂಧವಾಗಿದ್ದ ಸಮಸ್ಯೆಗಳು ಬಗೆಹರಿಯಲಿದೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. )

English summary

Rahu-Venus Transit To Same Planet After 18 Years: This Will Lead Lucky For These Zodiac Sings

Rahu-Venus conjunction will occur in Aquarius from February 06. This conjunction will occur after about 18 years. The impact of this conjunction will be seen in the lives of people of all zodiac signs.
Story first published: Monday, February 2, 2026, 16:59 [IST]
X
Desktop Bottom Promotion