Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶತಭಿಷ ನಕ್ಷತ್ರಕ್ಕೆ ರಾಹು ಸಂಚಾರ: 3 ರಾಶಿಯವರಲ್ಲಿ ಕಂಡು ಕೇಳರಿಯದ ಲಾಭ, ಈ ಸಮಸ್ಯೆ ದೂರ!
ಜ್ಯೋತಿಷ್ಯದಲ್ಲಿ ರಾಹುವನ್ನು ನೆರಳು ಗ್ರಹವೆಂದು ಪರಿಗಣಿಸಲಾಗುತ್ತದೆ. ಯಾರ ಜಾತಕದಲ್ಲಿ ರಾಹುವಿನ ಸ್ಥಾನವು ಅಶುಭ ಮನೆಯಲ್ಲಿ ಇರಲಿದ್ಯೋ ಅಂತಹ ವ್ಯಕ್ತಿಗಳ ಜೀವನದಲ್ಲಿ ಬಿರುಗಾಳಿಯೇ ಏಳಲಿದೆ. ಹೀಗಾಗಿ ರಾಹುವನ್ನು ನಾವು ಭ್ರಮೆ, ವ್ಯಸನ, ಸಮಸ್ಯೆಗಳು, ಕೇಡು, ಅಡ್ಡಿ ತರುವ ಗ್ರಹವೆಂದು ಪರಿಗಣಿಸಲಾಗುತ್ತದೆ. ಇನ್ನ ರಾಹುವಿನಿಂದ ಯಾರಿಗೆಲ್ಲಾ ಸಮಸ್ಯೆಗಳಿವೆಯೋ ಅವರು ನಿತ್ಯ ಒಂದಲ್ಲಾ ಒಂದು ರೀತಿಯ ಅಡ್ಡಿ, ಅನಾನುಕೂಲಗಳ ನೋಡುತ್ತಾರೆ.
ಇಂತಹ ರಾಹು ಹಿಮ್ಮುಖ ಚಲನೆಯಲ್ಲಿ ಒಂದೂವರೆ ವರ್ಷಗಳ ಕಾಲ ಒಂದೇ ರಾಶಿಯಲ್ಲಿ ನೆಲೆಸುತ್ತಾನೆ. ಆದ್ರೆ ರಾಹು ಹೀಗೆ ನೆಲೆಸಿರುವ ಕಾರಣಕ್ಕೆ ಆತ ಹಲವು ಗ್ರಹಗಳೊಂದಿಗೆ ಸಂಯೋಗವಾಗಿ ಶುಭ ಹಾಗೂ ಅಶುಭ ಘಟನೆಗಳ ತರುತ್ತಾನೆ. ಹಾಗೆ ಆಗಾಗ ಆತ ತನ್ನ ನಕ್ಷತ್ರ ಬದಲಾಯಿಸುತ್ತಾನೆ. ರಾಹುವಿನ ನಕ್ಷತ್ರ ಅಂತಹ ಬದಲಾವಣೆಯು ಬಹಳ ಅಪರೂಪ ಮತ್ತು ವಿಶೇಷವೆಂದು ಪರಿಗಣಿಸಲಾಗುತ್ತದೆ. ರಾಹುವಿನ ಸ್ಥಾನದಲ್ಲಿ ಬದಲಾವಣೆಯಾದಾಗ, ಅದರ ಪ್ರಭಾವವು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುವುದು ನೋಡಬಹುದು.

ಸದ್ಯ ರಾಹು ಈಗ ತನ್ನ ನಕ್ಷತ್ರ ಬದಲಾಯಿಸುವುದು ನೋಡಬಹುದು. ರಾಹು ಶತಭಿಷ ನಕ್ಷತ್ರಕ್ಕೆ ಚಲಿಸಲಿದ್ದಾನೆ. ರಾಹುವಿನ ಅಧಿಪತ್ಯ ಇರುವ ನಕ್ಷತ್ರ ಇದು. ಆದ್ರೆ ತನ್ನ ಸ್ವಂತ ನಕ್ಷತ್ರಕ್ಕೆ ರಾಹು ಚಲನೆಯು ಅಶುಭವಲ್ಲ ಶುಭಗಳಿಗೆ ಕಾರಣವಾಗುತ್ತದೆ. ಹಾಗಾದ್ರೆ ರಾಹುವಿನ ಈ ನಕ್ಷತ್ರ ಬದಲಾವಣೆಯಿಂದಾಗಿ ಯಾವ ರಾಶಿಯವರಲ್ಲಿ ಯಾವ ರೀತಿಯ ಬದಲಾವಣೆಗಳ ನೋಡಬಹುದು ಎಂಬುದನ್ನ ನಾವಿಲ್ಲಿ ತಿಳಿದುಕೊಳ್ಳೋಣ.
ಕುಂಭ ರಾಶಿ
ರಾಹುವಿನ ಸಂಚಾರದಿಂದಾಗಿ ತಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ನೋಡಬಹುದು. ಬಹಳ ಸಮಯದ ನಿಮ್ಮ ಆರ್ಥಿಕ ಸಮಸ್ಯೆಯೊಂದು ಬಗೆಹರಿಯಲಿದೆ, ಅದ್ರಲ್ಲೂ ನಿಮಗೆ ಬರಬೇಕಿದ್ದ ಸಾಲವನ್ನು ಕೇಳಿ ಪಡೆಯಬಹುದು. ಉಳಿತಾಯದ ಹಣವು ಕೈ ಸೇರಲಿದೆ. ಹಲವರಲ್ಲಿ ದೊಡ್ಡ ಮಟ್ಟದ ಔದ್ಯೋಗಿಕ ಲಾಭವಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಅನುಭವಿಸುವ ಸಮಯವಿದು. ವಿವಾಹ ಸಂಬಂಧವಾಗಿ ಇಷ್ಟ ವರ್ಷ ಅನುಭವಿಸಿದ್ದ ಅಡ್ಡಿಯೊಂದು ದೂರಾಗಲಿದೆ. ಸಂಬಂಧದಲ್ಲಿ ಉಂಟಾಗಿದ್ದ ಮನಸ್ತಾಪಗಳು ನಿವಾರಣೆಯಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ರಾಹುವಿನ ಸಂಚಾರವು ಅದ್ಭುತವಾಗಿರುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ, ಸಮಾಜದಲ್ಲಿ ಹೆಸರು ಖ್ಯಾತಿ ಗಳಿಸುತ್ತೀರಿ. ನಿಮ್ಮ ವ್ಯಕ್ತಿತ್ವದ ಮೂಲಕ ಬೇರೆಯವರನ್ನು ಸೆಳೆಯುತ್ತೀರಿ. ಆರ್ಥಿಕ ವಿಚಾರವಾಗಿ ಇದ್ದ ಅಡ್ಡಿಯೊಂದು ದೂರಾಗಲಿದೆ. ಹಾಗೆ ವಾಹನ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗಲಿದೆ. ಬೇರೆಯವರ ಜೊತೆಗೆ ನಿಮ್ಮ ಸಂಬಂಧಗಳು ಗಟ್ಟಿಯಾಗುತ್ತದೆ. ದಾಂಪತ್ಯ ವಿಚಾರವಾಗಿ ಬಹಳ ಸಮಯದಿಂದ ಕಾಡುತ್ತಿದ್ದ ಮನಸ್ತಾಪಗಳು ದೂರಾಗಲಿದೆ. ಮಕ್ಕಳ ವಿಚಾರದಲ್ಲಿ ಇದ್ದಂತಹ ಚಿಂತೆ ಕೂಡ ದೂರಾಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ರಾಹುವಿನ ನಕ್ಷತ್ರ ಬದಲಾವಣೆಯು ಹಲವು ರೀತಿಯಲ್ಲಿ ಶುಭವಾಗುತ್ತಿದೆ. ನಿಮ್ಮ ಜೀವನ ಶೈಲಿಯಲ್ಲಿನ ಬದಲಾವಣೆಗೆ ಇದು ಕಾರಣವಾಲಿದೆ. ನಿಮ್ಮ ದೈನಂದಿನ ಕೆಲಸಗಳು, ಅಭ್ಯಾಸಗಳನ್ನು ಬದಲಾಯಿಸಬಹುದು. ನಿಮ್ಮ ಕೌಟುಂಬಿಕ ಸಂತೋಷ ದುಪ್ಪಟ್ಟಾಗಲಿದೆ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರಲಿದೆ. ಅವಿವಾಹಿತರಲ್ಲಿನ ಸಮಸ್ಯೆಯೊಂದು ದೂರಾಗಲಿದೆ. ನಿರುದ್ಯೋಗಿಗಳಿಗೆ ಈ ಸಮಯದಲ್ಲಿ ಶುಭದಾಯಕ ಕೆಲಸ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ನಮ್ಮ ಪರವಾದ ಒಲವು ಇರಲಿದೆ. ಬಹು ಸಮಯದಿಂದ ಕಾಲು ಅಥವಾ ಮೂಳೆ ಸಂಬಂಧಿತ ಸಮಸ್ಯೆಗಳಿಗೆ ನೀವು ತುತ್ತಾಗಿದ್ದರೆ ಈ ಸಮಯದಲ್ಲಿ ಸುಧಾರಣೆ ನೋಡಬಹುದು.
(ಹಕ್ಕು ನಿರಾಕರಣೆ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications