Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾದ್ರಪದ ನಕ್ಷತ್ರಕ್ಕೆ ರಾಹು ಸಂಚಾರ: ಈ ಮೂರು ರಾಶಿಯವರಲ್ಲಿ ಆರ್ಥಿಕ ಪ್ರಗತಿಗೆ ದಾರಿ!!
ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹುವನ್ನು ಛಾಯಾ ಗ್ರಹ ಎಂಬುದಾಗಿ ಪರಿಗಣಿಸಲಾಗಿದೆ. ರಾಹು ಯಾವುದೇ ಗ್ರಹದಲ್ಲಿ ಸಂಚರಿಸಿದರೂ ಅದರ ಪರಿಣಾಮ ಮಾತ್ರ ಎಲ್ಲಾ 12 ರಾಶಿಗಳ ಮೇಲೆಯೂ ಆಗಲಿದೆ. ಅದರಲ್ಲೂ ರಾಹುವಿನಿಂದ ಸಮಸ್ಯೆಗೆ ಒಳಗಾಗುವುದು ಹಾಗೆ ಅದರ ವಕ್ರದೃಷ್ಟಿಗೆ ಗುರಿಯಾದರೆ ವರ್ಷಗಳ ಕಾಲ ನೀವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಬೇಕಾಗಬಹುದು. ಹೀಗಾಗಿ ರಾಹುವಿಗೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ.
ರಾಹುವಿನ ದಿಕ್ಕು ಬದಲಾವಣೆಯು ಪ್ರತಿಯೊಂದು ರಾಶಿಯ ಮೇಲೆ ಪರಿಣಾಮ ಬೀರುವಂತೆ ಈಗ ರಾಹು ತನ್ನ ನಕ್ಷತ್ರ ಬದಲಾಯಿಸುತ್ತಿರುವುದು ಕೂಡ ಹಲವು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾದ್ರೆ ರಾಹು ಉತ್ತರ ಭಾದ್ರಪದ ನಕ್ಷತ್ರದಿಂದ ಭಾದ್ರಪದ ನಕ್ಷತ್ರಕ್ಕೆ ಆತ ಚಲಿಸಲಿದ್ದಾನೆ. ಮಾರ್ಚ್ 16ರಂದು ಈ ಪ್ರಕ್ರಿಯೆಗೆ ರಾಹು ಸಾಕ್ಷಿಯಾಗಲಿದ್ದಾನೆ.

ರಾಹುವಿನ ಈ ನಕ್ಷತ್ರದಲ್ಲಿನ ಬದಲಾವಣೆಯು ಹಲವು ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಅದರಲ್ಲೂ ಈ ರಾಶಿಯಲ್ಲಿ ಜನಿಸಿದ ಮಂದಿಗೆ ಧನಾತ್ಮಕವಾದ ಲಾಭಕ್ಕೆ ಕಾರಣವಾಗಲಿದ್ದಾನೆ. ರಾಹು ಧನಾತ್ಮಕ ರೀತಿಯ ಪರಿಣಾಮ ಬೀರುವುದು ಹಲವು ರೀತಿಯ ಯೋಗಗಳ ಪಡೆಯಬಹುದಾದ ನಿರೀಕ್ಷೆ ಇಡಬಹುದು. ಹಾಗಾದ್ರೆ ರಾಹುವಿನ ಈ ಚಲನೆ ಯಾರಿಗೆಲ್ಲಾ ಶುಭಕರವಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ವೃಷಭ ರಾಶಿಯ 11ನೇ ಮನೆಯಲ್ಲಿ ರಾಹುವಿನ ಉಪಸ್ಥಿತಿಯು ನಿಮಗೆ ಯಶಸ್ಸು ಮತ್ತು ಸಂಪತ್ತು ವೃದ್ಧಿಗೆ ಕಾರಣವಾಗಲಿದೆ. ಭಾದ್ರಪದ ನಕ್ಷತ್ರವೂ ಗುರುವಿನ ಆಳ್ವಿಕೆಯ ನಕ್ಷತ್ರವಾಗಿದೆ. ಇನ್ನು ವೃಷಭ ರಾಶಿಯವರಲ್ಲಿ ನೀವು ಅಂದುಕೊಂಡಿರುವ ಹಲವು ಕೆಲಸ ಕಾರ್ಯಗಳಿಗೆ ಗುರುಬಲ ಬರಲಿದೆ. ಸರಿಯಾದ ಸಮಯಕ್ಕೆ ನಿಮಗೆ ಸಿಗಬೇಕಾದ ಗೌರವ, ಪ್ರತಿಫಲ ಸಿಗಲಿದೆ. ಹಾಗೆ ನಿಮ್ಮ ಬಯಕೆಯ ವಸ್ತುಗಳು, ಕೆಲಸಗಳು ನಿಮ್ಮದಾಗಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿಗಳು ಸುಧಾರಣೆಯಾಗಲಿದೆ. ಹಳೆಯ ಬಾಕಿ ಸಾಲಗಳು ಮರುಪಾವತಿಯ ನಿರೀಕ್ಷೆ ಇಡಿ. ಕುಟುಂಬದಲ್ಲಿ ಶಾಂತಿ ಹಾಗೂ ನಿಮ್ಮ ಮೇಲಿನ ಗೌರವ, ಶ್ರಮಕ್ಕೆ ತಕ್ಕ ಪ್ರತಿಫಲ ಕೂಡ ಸಿಗಲಿದೆ. ಅವಿವಾಹಿತರಲ್ಲಿದ್ದ ಬಹುದೊಡ್ಡ ದೋಷವೊಂದು ನಿವಾರಣೆಯಾಗಲಿದೆ.
ಮಕರ ರಾಶಿ
ಮಕರ ರಾಶಿಯಲ್ಲಿ ಜನಿಸಿದವರಿಗೆ ಭಾದ್ರಪದ ನಕ್ಷತ್ರದಲ್ಲಿ ರಾಹುವಿನ ಸಂಚಾರವು ಉತ್ತಮ ಫಲಿತಾಂಶ ತರಲಿದೆ. ಮಕರ ರಾಶಿಯ ಮೂರನೇ ಮನೆಯಲ್ಲಿ ರಾಹು ಇರುವುದು ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ನೋಡಬಹುದಾಗಿದೆ. ನಿಮ್ಮಲ್ಲಿ ಹಲವು ದಿನಗಳಿಂದ ಕಾಡುತ್ತಲಿದ್ದ ಸಮಸ್ಯೆಯೊಂದು ದೂರಾಗಲಿದೆ. ನೀವು ಬಹಳ ಕಷ್ಟ ಪಟ್ಟು ಮಾಡುತ್ತಿರುವ ಕೆಲಸದಲ್ಲಿ ಸಮಾಧಾನಕರ ಫಲಿತಾಂಶ ನೋಡಲಿದ್ದೀರಿ. ಕೆಲಸದ ಸ್ಥಳದಲ್ಲಿನ ಒತ್ತಡ ಕಡಿಮೆಯಾಗಲಿದೆ, ಭವಿಷ್ಯದ ದೃಷ್ಟಿಯಲ್ಲಿ ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತೀರಿ. ಶಾಂತಿ ನೆಲೆಸಲು ನೀವು ಮಾಡುವ ಕೆಲಸದಿಂದ ಫಲ ಸಿಗಲಿದೆ. ದೂರ ಪ್ರಯಾಣದಿಂದಲು ನಿಮ್ಮಲ್ಲಿ ಶಾಂತಿ ನೆಲೆಸಲಿದೆ. ವ್ಯಾಪಾರದಲ್ಲಿ ಲಾಭದಾಯಕ ದಿನಗಳ ನೋಡಬಹುದು.
ಮೀನ ರಾಶಿ
ರಾಹು ಭಾದ್ರಪದ ನಕ್ಷತ್ರದಲ್ಲಿ ಸಂಚಾರ ಮಾಡುವುದರಿಂದ ಮೀನ ರಾಶಿಯವರಲ್ಲಿ ಅತ್ಯುತ್ತಮ ಲಾಭದ ಫಲಿತಾಂಶಗಳ ನೋಡಬಹುದು. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಅಂತಿಮವಾಗಿ ಪೂರ್ಣಗೊಳ್ಳಬಹುದು. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ವೃದ್ಧಿಯಾಗುವುದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸಲಿದೆ. ನೀವು ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ. ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಬಹಳ ಅನುಕೂಲ ಸ್ಥಿತಿ ನಿರ್ಮಾಣ ಆಗುವುದು ನೋಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications