Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಶತಾಭಿಷ ನಕ್ಷತ್ರಕ್ಕೆ ರಾಹು ಸಂಚಾರ: ಮೂರು ರಾಶಿಯವರಿಗೆ ಸಮಸ್ಯೆಗಳು ದೂರ; ಸಿಹಿ ಸುದ್ದಿಗಳ ಸರಮಾಲೆ!
2025 ಮುಗಿಯುವ ಹಂತ ತಲುಪಿದೆ. ಹಾಗೆ ಈ ಎರಡು ತಿಂಗಳುಗಳಲ್ಲಿ ಅನೇಕ ಗ್ರಹಗಳು ತಮ್ಮ ಸ್ಥಾನ ಬದಲಾಯಿಸುವುದು ನೋಡಬಹುದು. ಅದ್ರಲ್ಲೂ 2025ರ ಕೊನೆಯ ತಿಂಗಳಾಧ ಡಿಸೆಂಬರ್‌ನಲ್ಲಿ ರಾಹುವಿನ ಸಂಚಾರ ನೋಡಬಹುದು. ರಾಹುವನ್ನು ನೆರಳಿನ ಗ್ರಹವೆಂದು ಪರಿಗಣಿಸಲಾಗುತ್ತದೆ. ಹಾಗೆ ರಾಹುವಿನಿಂದ ಹಲವು ಲಾಭಗಳನ್ನು ನಾವು ನೋಡಬಹುದು.
ರಾಹು ರಾಶಿ ಬದಲಾಯಿಸಿದಂತೆ ನಕ್ಷತ್ರ ಕೂಡ ಬದಲಾಯಿಸುವುದು ನೋಡಬಹುದು. ಅದ್ರಲ್ಲೂ ರಾಹುವಿನ ನಕ್ಷತ್ರ ಬದಲಾವಣೆಯು ಹಲವು ರೀತಿಯ ಶುಭ ಹಾಗೂ ಅಶುಭ ಲಾಭಗಳ ತರುವುದು ಸಾಮಾನ್ಯ. ನಾವಿಂದು ರಾಹುವಿನ ನಕ್ಷತ್ರ ಬದಲಾವಣೆಯ ಕುರಿತಾಗಿ ತಿಳಿದುಕೊಳ್ಳೋಣ. ರಾಹು ಡಿಸೆಂಬರ್ 2ರಂದು ತನ್ನ ನಕ್ಷತ್ರ ಬದಲಾಯಿಸುತ್ತಿದ್ದಾನೆ.

ಡಿಸೆಂಬರ್ 2ರಂದು ರಾಹು ಶತಾಭಿಷ ನಕ್ಷತ್ರಕ್ಕೆ ಚಲಿಸಲಿದ್ದಾನೆ. ಇದೇ ನಕ್ಷತ್ರದಲ್ಲಿ ಆಗಸ್ಟ್ 2 2026ರ ವರೆಗೂ ಇರಲಿದ್ದಾನೆ. ರಾಹು ಆಡಳಿತದ ನಕ್ಷತ್ರ ಕೂಡ ಇದೇ ಆಗಿದೆ. ಹೀಗಾಗಿ ರಾಹು ತನ್ನ ಸ್ವಂತ ರಾಶಿಗೆ ಚಲಿಸುವುದು ಅನೇಕ ವಿದ್ಯಮಾನಗಳಿಗೆ ಕಾರಣವಾಗಲಿದೆ. ಜ್ಯೋತಿಷ್ಯದ ಪ್ರಕಾರ ಯಾವುದೇ ಗ್ರಹ ತನ್ನದೇ ಸ್ವಂತ ನಕ್ಷತ್ರ ಅಥವಾ ರಾಶಿಗೆ ಪ್ರವೇಶಿಸಿದಾಗ ಹಲವು ಬದಲಾವಣೆಗಳಿಗೆ ಕಾರಣವಾಗುವುದು ನೋಡಬಹುದು.
ರಾಹುವನ್ನು ನೆರಳಿನ ಗ್ರಹವಾಗಿ ಹಾಗೆ ಕೇಡು ತರುವ ಗ್ರಹವೆಂದೇ ಪರಿಗಣಿಸಲಾಗುತ್ತದೆ. ಆದ್ರೆ ತನ್ನ ಸ್ವಂತ ನಕ್ಷತ್ರಕ್ಕೆ ಅದರ ಚಲನೆಯು ಹಲವು ರೀತಿಯಲ್ಲಿ ಲಾಭಕರ ಅಂಶವಾಗಿ ಬದಲಾಗುತ್ತದೆ. ಅದರ ಪರಿಣಾಮಗಳು ಧನಾತತ್ಮಕವಾಗಿ ಬದಲಾಗುತ್ತದೆ. ಹಾಗಾದ್ರೆ ರಾಹುವಿನ ಈ ಚಲನೆಯಿಂದ ಯಾರಿಗೆಲ್ಲಾ ಶುಭಕರ ಯಾರಿಗೆ ಲಾಭದಾಯಕ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ರಾಹುವಿನ ನಕ್ಷತ್ರ ಬದಲಾವಣೆಯು ಮೇಷ ರಾಶಿಯವರಿಗೆ ಲಾಭಕರ. ವ್ಯವಹಾರ ಸಂಬಂಧಿತ ವಿಚಾರವಾಗಿ ಅದ್ರಲ್ಲೂ ಹಣಕಾಸು ವಿಚಾರವಾಗಿ ನಿಮ್ಮಲ್ಲಿದ್ದ ಅಡ್ಡಿಗಳು ದೂರಾಗಲಿದೆ. ವಿದ್ಯಾರ್ಥಿ ಜೀವನದಲ್ಲಿ ಸಂತಸ, ಯಶಸ್ಸು ನೋಡಬಹುದು. ನೀವು ಮಾಡುವ ಕೆಲಸಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ನಿಮ್ಮ ಕಠಿಣ ಪರಿಶ್ರಮದ ಮೂಲಕ ನೀವು ನಿಮ್ಮ ಗುರಿಗಳನ್ನು ಸುಲಭವಾಗಿ ಸಾಧಿಸಲು ಸಾಧ್ಯವಾಗುತ್ತದೆ. ಭವಿಷ್ಯಕ್ಕಾಗಿ ಯೋಜನೆ ರೂಪಿಸಲು ಇದು ಅನುಕೂಲಕರ ಸಮಯವಾಗಿರುತ್ತದೆ. ಹೊಸ ಉದ್ಯೋಗಾವಕಾಶಗಳು ಉದ್ಭವಿಸುತ್ತವೆ. ಕೆಲಸದಲ್ಲಿರುವ ಜನರು ನಿಮ್ಮ ವ್ಯಕ್ತಿತ್ವ ಮತ್ತು ಆಲೋಚನೆಗಳಿಂದ ಪ್ರಭಾವಿತರಾಗುತ್ತಾರೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ರಾಹುವಿನ ಚಲನೆಯು ಬಹಳ ಪ್ರಯೋಜನಕಾರಿಯಾಗಲಿದೆ. ನಿಮ್ಮ ಕೆಲಸ ಸಂಬಂಧವಾಗಿ ಉತ್ತಮ ದಿನಗಳಿವೆ. ಹೊಸ ಉದ್ಯೋಗ ಪಡೆಯಲು ನೀವು ಸುವರ್ಣ ಅವಕಾಶ ಪಡೆಯಲಿದ್ದೀರಿ. ವೃಷಭ ರಾಶಿ ಜನರಲ್ಲಿ ಗಣನೀಯ ಲಾಭ ನೋಡಬಹುದು. ವ್ಯಾಪಾರಗಳಲ್ಲಿ ಅಧಿಕ ಲಾಭವಿದೆ. ಹೊಸ ವ್ಯವಹಾರಕ್ಕೆ ಹೇಳಿ ಮಾಡಿಸಿದ ಸಮಯವಿದು. ಜೀವನದಲ್ಲಿ ಸಮೃದ್ಧಿ ಇರಲಿದೆ. ದೀರ್ಘಕಾಲದ ಅನಾರೋಗ್ಯ ಸಮಸ್ಯೆಯೊಂದು ಪರಿಹಾರವಾಗಲಿದೆ. ಮದುವೆ ವಿಚಾರದಲ್ಲಿ ನಿಮಗೆ ಶುಭ ಸುದ್ದಿಗಳು ಬರಲಿದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಅದರಲ್ಲೂ ಅವಿವಾಹಿತ ಮಂದಿಗೆ ಈ ರಾಹುವಿನಿಂದ ಲಾಭವಿದೆ. ನಿಮ್ಮ ಜೀವನದಲ್ಲಿ ವಿಶೇಷವಾದ ಯಾರಾದರೂ ಬರಬಹುದು. ಸೃಜನಶೀಲ ಅಥವಾ ಇತರ ನವೀನ ಚಟುವಟಿಕೆಗಳಲ್ಲಿ ತೊಡಗಿರುವವರು ಈ ಸಮಯದಲ್ಲಿ ಪ್ರಯೋಜನ ಪಡೆಯುತ್ತಾರೆ. ನೀವು ನಿಮ್ಮ ಕುಟುಂಬದೊಂದಿಗೆ ಧಾರ್ಮಿಕ ತೀರ್ಥಯಾತ್ರೆಗೆ ತೆರಳಬಹುದು. ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವ ಸಮಯವಿದು. ಅನೇಕರು ಈ ಸಮಯದಲ್ಲಿ ದೊಡ್ಡ ಲಾಭದ ನಿರೀಕ್ಷೆ ಇದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications