ಕುಂಭ ರಾಶಿಗೆ ರಾಹು ಸಂಚಾರ: ಈ ಮೂರು ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು..!!

ಜ್ಯೋತಿಷ್ಯದಲ್ಲಿ ರಾಹುವನ್ನು ನೆರಳಿನ ಗ್ರಹ ಎಂದು ಪರಿಗಣಿಸಲಾಗುತ್ತದೆ. ರಾಹುವಿನ ಸಂಚಾರವು ಎಲ್ಲಾ 12 ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಅದರಲ್ಲೂ ರಾಹು ಮತ್ತೊಂದು ಗ್ರಹದೊಂದಿಗೆ ಸಂಯೋಗ ಹೊಂದುವುದು ಅತ್ಯಂತ ಪ್ರಮುಖ ವಿದ್ಯಮಾನ ಎಂದು ಪರಿಗಣಿಸಲಾಗುತ್ತದೆ. ರಾಹುವಿಗೆ ನಿರ್ಧಿಷ್ಟ ರಾಶಿ ಇಲ್ಲದಿದ್ದರೂ ಅದರ ಚಲನೆಯು ಪ್ರತಿಯೊಂದು ರಾಶಿಯ ಮೇಲೂ ಪರಿಣಾಮ ಉಂಟು ಮಾಡುತ್ತದೆ. ರಾಹು ಒಂದು ರಾಶಿಯಲ್ಲಿ 18 ತಿಂಗಳ ಕಾಲ ಚಲಿಸಲಿದೆ.

ಈಗ ಈ ರಾಹು ಮೀನ ರಾಶಿಯಲ್ಲಿ ಸಂಚರಿಸುತ್ತಿದೆ. ಆದ್ರೆ ಮೇ ತಿಂಗಳಲ್ಲಿ ತನ್ನ ರಾಶಿ ಬದಲಾಯಿಸುತ್ತಿದ್ದು ಮೀನ ರಾಶಿಯಿಂದ ಕುಂಭ ರಾಶಿಗೆ ರಾಹು ಚಲಿಸಲಿದ್ದಾನೆ. ಇದು ಎಲ್ಲ ರಾಶಿಗಳ ಮೇಲೆಯೂ ಧನಾತ್ಮಕ ಹಾಗೂ ನಕಾರಾತ್ಮಕ ಪರಿಣಾಮ ಉಂಟು ಮಾಡಲು ಕಾರಣವಾಗುತ್ತಿದೆ. ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟಶಾಲಿಯಾಗಿದ್ದರೆ, ಇನ್ನು ಕೆಲವರು ಜಾಗರೂಕರಾಗಿರಬೇಕು. ರಾಹು ಡಿಸೆಂಬರ್ 5, 2026 ರವರೆಗೆ ಈ ಕುಂಭ ರಾಶಿಯಲ್ಲಿ ಇರಲಿದೆ.

Rahu Transit To Aquarius Will Leads Good Luck For 3 Zodiac Sign

ರಾಹು ಕುಂಭ ರಾಶಿಗೆ ಚಲಿಸುವಾಗ ಯಾವ ರಾಶಿಯವರಿಗೆ ಧನಾತ್ಮಕ ಬದಲಾವಣೆಗಳ ಎದುರಿಸುತ್ತಾರೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ

ರಾಹು ಕುಂಭ ರಾಶಿಗೆ ಚಲಿಸುವುದರಿಂದ ರಾಹು ಮೇಷ ರಾಶಿಯ 11 ನೇ ಮನೆಗೆ ಸ್ಥಳಾಂತರಗೊಳ್ಳುತ್ತಾನೆ. ಇದು ಮೇಷ ರಾಶಿಯವರ ಬಹುದಿನಗಳ ಆಸೆಗಳ ಈಡೇರಿಸುತ್ತದೆ. ಬಹಳ ಕಾಲದಿಂದ ಅಡೆತಡೆಯಾಗಿ ನಿಂತಿದ್ದ ಕೆಲಸಗಳು ಈ ಸಮಯದಲ್ಲಿ ಪೂರ್ಣ ಮಾಡುವ ಸಂಭವ ಹೆಚ್ಛಾಗಲಿದೆ. ನೀವು ಹೊಸ ಕೆಲಸ ಮಾಡುವುದು ಅಥವಾ ಸ್ವಂತ ಉದ್ದೋಗಕ್ಕೆ ಮುಂದಾದರೆ ಈ ಸಮಯದಲ್ಲಿ ಅದರಿಂದ ಶುಭವಾಗಲಿದೆ. ಅನಿರೀಕ್ಷಿತ ಸಂತೋಷಗಳು ನಿಮ್ಮದಾಗಲಿದೆ. ವೃತ್ತಿಪರರು ಈ ಸಮಯದಲ್ಲಿ ಶುಭ ದಿನಗಳ ನೋಡಬಹುದು.

ಕನ್ಯಾ ರಾಶಿ

ರಾಹು ತನ್ನ ರಾಶಿ ಬದಲಾಯಿಸುವುದರಿಂದ ಕನ್ಯಾ ರಾಶಿಯ 7ನೇ ಮನೆಯಲ್ಲಿ ಚಲನೆ ಮಾಡಬಹುದು. ಇದು ಈ ರಾಶಿ ಜನರ ಜೀವನದಲ್ಲಿನ ಅನೇಕ ಸಮಸ್ಯೆಗಳ ನಿವಾರಣೆ ಮಾಡಲಿದೆ. ಉದ್ಯೋಗ ಹುಡುಕುತ್ತಿದ್ದವರಿಗೆ ಅಡ್ಡಿಯಾಗಿದ್ದ ವಿಚಾರವೊಂದು ನಿವಾರಣೆಯಾಗುತ್ತದೆ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಒತ್ತಡ ಕಡಿಮೆ ಆಗಬಹುದು. ಈಗಾಗಲೇ ಮಾಡಿರುವ ಹೂಡಿಕೆ, ಉಳಿತಾಯಗಳಿಂದ ಹಣ ಲಾಭ ನೋಡಬಹುದು. ಆರೋಗ್ಯದಲ್ಲಿ ಸುಧಾರಣೆ ನೋಡಬಹುದು. ವ್ಯಾಪಾರಿಗಳು ಈ ಸಮಯದಲ್ಲಿ ಅಧಿಕ ಲಾಭ ನೋಡಬಹುದು. ಆದರೆ ದೊಡ್ಡ ನಿರ್ಧಾರಗಳ ಮೂಲಕ ನಿಮ್ಮ ಹಣಕಾಸು ವಿಚಾರಗಳು ಏರಿಳಿತವಾಗಬಹುದು. ನಿಮ್ಮ ಬ್ಯಾಂಕಿಂಗ್, ಸಾಲ, ಆಸ್ತಿ ಸಂಬಂಧಿಸಿದ ವಿಚಾರಗಳಲ್ಲಿ ನಿಮಗೆ ಶುಭವಾಗಲಿದೆ. ಹಾಗೆ ವಿದೇಶ ಪ್ರವಾಸ, ಕುಟುಂಬದ ಜೊತೆಗೆ ಪ್ರವಾಸ ಮಾಡುವ ಕುರಿತು ಆಲೋಚಿಸಿದ್ದರೆ ಈ ಸಮಯದಲ್ಲಿ ನೆರವೇರಬಹುದು.

ಧನು ರಾಶಿ

ರಾಹುವಿನ ಸಂಚಾರದಿಂದ ಧನು ರಾಶಿಯ 3ನೇ ಮನೆಗೆ ಸ್ಥಳಾಂತರಗೊಳ್ಳುತ್ತಾನೆ. ಇದು ಈ ರಾಶಿ ಜನರಿಗೆ ಯಶಸ್ಸಿನ ಬಾಗಿಲು ತೆರೆಯುತ್ತದೆ. ನೀವು ಯಾವುದೇ ಕೆಲಸ ಮಾಡಿದರೂ, ಅದರಲ್ಲಿ ಉತ್ತಮ ಯಶಸ್ಸನ್ನು ಸಾಧಿಸುವಿರಿ. ಕೌಟುಂಬಿಕ ಸಮಸ್ಯೆಗಳಿಂದ ನೀವು ದೂರಾಗಬಹುದು. ಹಣಕಾಸು ವಿಚಾರದಲ್ಲಿ ನೀವು ಸ್ನೇಹಿತರಿಂದ ಬೆಂಬಲ ಪಡೆಯುತ್ತೀರಿ. ಕೆಲಸದಲ್ಲಿ ನಿಮ್ಮ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಚೆನ್ನಾಗಿ ಪ್ರಶಂಸಿಸಲಾಗುತ್ತದೆ. ಆದಾಗ್ಯೂ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಆರೋಗ್ಯದಲ್ಲಿ ನಿರೀಕ್ಷತವಾಗಿ ಸುಧಾರಣೆ ನೋಡಲಿದ್ದೀರಿ. ನಿಮ್ಮ ಮಾನಸಿಕ ಸ್ಥಿತಿಯಲ್ಲಿ ಶಾಂತತೆ ಇರಲಿದೆ. ಹಾಗೆ ಮನೆಗಾಗಿ ದೊಡ್ಡ ವಸ್ತುಗಳು ಅಥವಾ ದುಬಾರಿ ವಸ್ತು ಖರೀದಿಗೆ ಇದು ಸೂಕ್ತ ಸಮಯ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Rahu Transit To Aquarius Will Leads Good Luck For 3 Zodiac Sign

Rahu is transiting in Pisces. However, in May, it will change its sign and will move from Pisces to Aquarius. This is causing both positive and negative effects on all the signs.
Story first published: Thursday, April 3, 2025, 13:38 [IST]
X
Desktop Bottom Promotion