ಕುಂಭ ರಾಶಿಗೆ ರಾಹು ಸಂಚಾರ: ಈ ರಾಶಿಯವರಿಗೆ ಕಾಡಲಿಗೆ ಸಮಸ್ಯೆಗಳು

ಜ್ಯೋತಿಷ್ಯದಲ್ಲಿ ರಾಹುವನ್ನು ನೆರಳಿನ ಗ್ರಹವೆಂದು ಪರಿಗಣಿಸಲಾಗಿದೆ. ರಾಹುವಿಗೆ ಇತರ ಗ್ರಹಗಳಂತೆ ತನ್ನದೇ ಆದ ರಾಶಿ ಇಲ್ಲ. ರಾಹು ಯಾವಾಗಲೂ ವಕ್ ಸ್ಥಾನದಲ್ಲಿ ಚಲಿಸಲಿದೆ. ರಾಹು ಪ್ರಸ್ತುತ ಮೀನ ರಾಶಿಯಲ್ಲಿ ಸಾಗುತ್ತಿದ್ದಾನೆ. ಆದ್ರೆ ಇದೇ ಮೇ 18ರಂದು ರಾಹು ಈಗ ಬೇರೊಂದು ರಾಶಿಗೆ ಚಲಿಸಲಿದ್ದಾನೆ. ಮೇ 18ರಂದು ರಾಹು ಕುಂಭ ರಾಶಿಗೆ ಚಲಿಸಲಿದ್ದಾನೆ.

ರಾಹು ಈ ಕುಂಭ ರಾಶಿಯಲ್ಲಿ ಸುಮಾರು 18 ತಿಂಗಳುಗಳ ಕಾಲ ನೆಲೆಸುತ್ತಾನೆ. ಈ ಸಂಚಾರದ ಸಮಯದಲ್ಲಿ, ರಾಹು ಶನಿಯ ರಾಶಿಯನ್ನು ಪ್ರವೇಶಿಸುತ್ತಾನೆ. ರಾಹು ಶನಿಯ ರಾಶಿಗೆ ಚಲಿಸುವುದು ಎಲ್ಲಾ 12 ರಾಶಿಗಳ ಮೇಲೆಯೂ ಪರಿಣಾಮ ಬೀರುತ್ತದೆ. ಮೊದಲೇ ರಾಹು ಕೆಡುಕು ತರುವ ಗ್ರಹ ಎಂದು ಕರೆಯಲಾಗಿದೆ. ಹಾಗೆ ಶನಿಕೂಡ ಇದರಿಂದ ಹೊರತಾಗಿಲ್ಲ.

Rahu Transit To Aquarius Will Lead Problematic For Few Zodiac Sign

ಹಾಗಾದ್ರೆ ಕುಂಭ ರಾಶಿಗೆ ರಾಹು ಚಲಿಸುವುದು ಯಾವೆಲ್ಲಾ ರಾಶಿಯವರಿಗೆ ದೊಡ್ಡ ಸವಾಲುಗಳ ತರಲಿದೆ. ಯಾರಿಗೆಲ್ಲಾ ಅಶುಭವಾಗುತ್ತಿದೆ. ಯಾರು ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ವೃಷಭ ರಾಶಿ

ರಾಹು ವೃಷಭ ರಾಶಿಯ 10ನೇ ಮನೆಗೆ ಚಲಿಸುತ್ತಿದ್ದಾನೆ. ಈ ಮನೆ ಉದ್ಯೋಗ ಮತ್ತು ವೃತ್ತಿಗೆ ಸಂಬಂಧಿಸಿದ್ದು, ವೃಷಭ ರಾಶಿಯವರಲ್ಲಿ ಹಲವು ಔದ್ಯೋಗಿಕ ಸಮಸ್ಯೆ ಹಾಗೂ ಕೆಲಸದಲ್ಲಿ ಏರುಪೇರು ಉಂಟಾಗುವ ನಿರೀಕ್ಷೆ ಇದೆ. ನೀವು ಪ್ರಗತಿ ಹೊಂದುವ ಸಮಯದಲ್ಲಿ ಕೆಲವು ಅಡೆತಡೆಗಳ ಎದುರಿಸಬೇಕಾಗಬಹುದು. ನಿಮಗೆ ನಿಯೋಜಿಸಲಾದ ಕೆಲಸದಲ್ಲಿ ನೀವು ಯಶಸ್ಸು ಕಾಣದೆ ಇರಬಹುದು. ಹಾಗೆ ನಿಮ್ಮಲ್ಲಿ ದೊಡ್ಡ ಮಟ್ಟದ ಆರ್ಥಿಕ ಲಾಭ ತರುವ ಕೆಲಸಗಳು ನಡೆಯದೆ ಇರಬಹುದು. ಇನ್ನು ಕುಟುಂಬದಲ್ಲಿ ಕೆಲಸದ ಸಂಬಂಧ ಒತ್ತಡ ಇರಬಹುದು. ನೀವು ಕಂಪನಿ ಅಥವಾ ಕೆಲಸ ಬದಲಿಸುವ ಆಲೋಚನೆಯಲ್ಲಿದ್ದರೆ ಈ ಸಮಯದಲ್ಲಿ ಮುಂದೂಡುವುದು ಒಳಿತು. ಪೋಷಕರ ಆರೋಗ್ಯದಲ್ಲಿ ಈ ಸಮಯದಲ್ಲಿ ಏರುಪೇರು ನೋಡಬಹುದು.

ಕರ್ಕ ರಾಶಿ

ರಾಹು ಕರ್ಕಾ ರಾಶಿಯ 8ನೇ ಮನೆಗೆ ಸ್ಥಳಾಂತರಗೊಳ್ಳುತ್ತಾನೆ. ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ದೊಡ್ಡ ಸವಾಲುಗಳ ಎದುರಿಸುವಂತೆ ಮಾಡಲಿದೆ. ನಿಮಗೆ ಹಠಾತ್ ಅನಾರೋಗ್ಯ, ಹಾಗೆ ಅದರಿಂದ ನಿಮಲ್ಲಿ ಖರ್ಚು ಹೆಚ್ಚಾಗುವುದು ಸಹ ನೋಡಬಹುದು. ಕುಟುಂಬ ಸದಸ್ಯರು ಬಹಳ ಕಾಲದಿಂದ ಯಾವುದಾದರು ಅನಾರೋಗ್ಯಕ್ಕೆ ತುತ್ತಾಗಿದ್ದರೆ ಸೂಕ್ತ ಚಿಕಿತ್ಸೆ ಕೊಡಿಸುವುದು ಒಳಿತು.

ಸಿಂಹ ರಾಶಿ

ರಾಹು ಸಿಂಹ ರಾಶಿಯ 7ನೇ ಮನೆಯಲ್ಲಿ ಚಲಿಸಲಿದ್ದಾನೆ. ಇದು ವಿವಾಹಿತರಲ್ಲಿ ದೊಡ್ಡ ಸವಾಲುಗಳ ಎದುರಿಸುವಂತೆ ಮಾಡಬಹುದು. ನಿಮ್ಮ ಸಂಬಂಧಗಳಲ್ಲಿ ಕೆಲವು ಮನಸ್ತಾಪಗಳಿದ್ದರೆ ಈ ಸಮಯದಲ್ಲಿ ಮತ್ತಷ್ಟು ಬಿಗಡಾಯಿಸಬಹುದು. ನಿಮ್ಮ ಪ್ರಾಮಾಣಿಕ ಕೆಲಸವನ್ನು ಯಾರೊಬ್ಬರು ಗುರುತಿಸುವುದಿಲ್ಲ. ಹಾಗೆ ನಿಮ್ಮ ಕೆಲಸದ ಸ್ಥಳದಲ್ಲಿ ನಿಮಗಿದ್ದ ಪ್ರಶಂಸೆಗಳು ಕಳೆದುಕೊಳ್ಳುತ್ತೀರಿ. ಅನಗತ್ಯ ವಸ್ತುಗಳ ಸಂಬಂಧ ಖರ್ಚು ಹೆಚ್ಚು ಮಾಡುತ್ತೀರಿ. ನಿಮ್ಮ ಆಪ್ತರಿಂದ ನಿಮಗೆ ಸಮಸ್ಯೆಗಳು ಬರಬಹುದು.

ವೃಶ್ಚಿಕ ರಾಶಿ

ರಾಹು ವೃಶ್ಚಿಕ ರಾಶಿಯ 4ನೇ ಮನೆಗೆ ಸ್ಥಳಾಂತರಗೊಳ್ಳುತ್ತಾನೆ. ಇದು ಕುಟುಂಬ, ತಾಯಿ ಮತ್ತು ಮನೆಯಲ್ಲಿದ್ದ ಆರ್ಥಿಕ ಸಮಸ್ಯೆ ಹಾಗೂ ಅನ್ಯೋನ್ಯತೆಯ ಸಮಸ್ಯೆಗಳ ತರಬಹುದು. ನಿಮ್ಮಲ್ಲಿ ಪರಸ್ಪರ ನಂಬಿಕೆಗಳು ದೂರಾಗುವಂತಹ ಘಟನೆಗಳು ನಡೆಯಬಹುದು. ಹೃದಯ ಸಂಬಂಧಿ ಸಮಸ್ಯೆಗಳಿದ್ದರೆ ಈ ಸಮಯದಲ್ಲಿ ಎಚ್ಚರಿಕೆ ವಹಿಸಬೇಕಿದೆ.

ಮೀನ ರಾಶಿ

ರಾಹು ಮೀನ ರಾಶಿಯ 12ನೇ ಮನೆಗೆ ಚಲಿಸುತ್ತಿದ್ದಾನೆ. ಇದರಿಂದಾಗಿ ಮೀನ ರಾಶಿಯ ಅನೇಕರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳ ಎದುರು ನೋಡುತ್ತೀರಿ. ನಿಮ್ಮ ಉದ್ಯೋಗದ ಸ್ಥಳದಲ್ಲಿ ತಕ್ಕ ಮಟ್ಟಿನ ಯಶಸ್ಸು ಇದ್ದರೂ ಒತ್ತಡಗಳ ಹೆಚ್ಚಳವು ಮಾನಸಿಕವಾಗಿ ನಿಮಗೆ ಸಮಸ್ಯೆಗಳ ತರಬಹುದು. ನಿಮ್ಮ ಪ್ರಯಾಣಗಳು ಫಲಪ್ರದವಾಗಿರುವುದಿಲ್ಲ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Rahu Transit To Aquarius Will Lead Problematic For Few Zodiac Sign

Rahu's transit to Aquarius will bring big challenges to all zodiac signs. It will be inauspicious for everyone. Who needs to be careful?
Story first published: Friday, May 16, 2025, 18:30 [IST]
X
Desktop Bottom Promotion