Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಹು ಸಂಕ್ರಮಣ: ಜನವರಿವರೆಗೂ ಈ ರಾಶಿಯವರಿಗೆ ರಾಹುವಿನ ಕೃಪೆ
ರಾಹು ಗ್ರಹವನ್ನು ಅಶುಭ ತರುವಂತಹ ಗ್ರಹ ಎಂದು ಹೇಳಲಾಗುತ್ತದೆ. ಹಾಗೆ ಇದು ನೆರಳಿನ ಗ್ರಹವೆಂದು ಕರೆಯುತ್ತಾರೆ. ನಮ್ಮ ಕುಂಡಲಿಯಲ್ಲಿ ರಾಹು ಚಲನೆ ಇದ್ದರೆ ಅಶುಭ ಫಲ ನಾವು ಅನುಭವಿಸಬೇಕಾಗುತ್ತದೆ ಎಂಬುದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ನಿಮ್ಮ ಕುಂಡಲಿಯಲ್ಲಿ ರಾಹು ಆರೋಗ್ಯಕರ ಸ್ಥಾನದಲ್ಲಿದ್ದರೆ ಉತ್ತಮ ಫಲ ನೀಡುವುದು. ಆದ್ರೆ ರಾಹುವಿನ ಮನೆ ಬದಲಾವಣೆಯಿಂದ ಅಶುಭಗಳ ಕೇಳುವುದೇ ಹೆಚ್ಚು.
ಇದೇ ನವೆಂಬರ್ 10ರಿಂದ ರಾಹುವಿನ ಚಲನೆಯಲ್ಲಿ ಬದಲಾವನೆಯಾಗಿದೆ. ರಾಹು ಕೂಡ ಒಂದು ರಾಶಿಯಲ್ಲಿ ಸುಮಾರು 18 ತಿಂಗಳ ಕಾಲ ಇರಬಹುದು. ಇದು ಕೆಲವು ರಾಶಿಯವರಲ್ಲಿ ಶುಭ ಫಲಕ್ಕೆ ಕಾರಣವಾದರೆ ಮತ್ತೆ ಹಲವು ರಾಶಿಯವರಿಗೆ ಇದು ಅಶುಭ ಸಂಕೇತವಾಗಲಿದೆ. ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಈ ಚಲನೆಯು ಹಣದ ಸುರಿಮಳೆಯಾಗುತ್ತದೆ. ಹಣ ಮಾತ್ರವಲ್ಲದೆ ಆರೋಗ್ಯ, ಪ್ರೇಮ ವಿವಾಹ, ಕೆಲಸದಲ್ಲಿ ಬಡ್ತಿ, ವಿದೇಶ ಪ್ರವಾಸ, ಹಠಾತ್ ಆರ್ಥಿಕ ಲಾಭ, ಉತ್ತಮ ದಾಂಪತ್ಯ ಹಲವು ರೀತಿಯ ಲಾಭವೂ ಇದೆ.

ಉತ್ತರ ಭಾದ್ರಪದ ನಕ್ಷತ್ರದ ಮೂರನೇ ಪಾದದಿಂದ ಎರಡನೇ ಪಾದಕ್ಕೆ ರಾಹು ಪ್ರವೇಶಿಸುತ್ತಾನೆ. ರಾಹು ಈ ನಕ್ಷತ್ರದಲ್ಲಿ ಮುಂದಿನ ವರ್ಷ ಜನವರಿ 10ರ ವರೆಗೂ ಇರಲಿದ್ದಾನೆ. ನಂತರ ಉತ್ತರ ಭಾದ್ರಪದ ನಕ್ಷತ್ರದಿಂದ ರೇವತಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ರಾಹುವಿನ ಈ ದಿಕ್ಕಿನ ಬದಲಾವಣೆಯು ಕೆಲವು ರಾಶಿಯವರಿಗೆ ಮಂಗಳಕರ ಲಾಭ ತಂದರೆ ಮತ್ತೆ ಕೆಲವರಿಗೆ ಅಶುಭ ಕಾಲ ತರಬಹುದು. ಹಾಗಾದ್ರೆ ಯಾವ ರಾಶಿಯವರಿಗೆ ರಾಹುವಿನ ಕೃಪೆ ಇರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ರಾಹು ಸಂಕ್ರಮಣದ ಕಾರಣ ವೃಷಭ ರಾಶಿಯವರಿಗೆ ತುಂಬಾ ಮಂಗಳಕರ ದಿನಗಳು ಇರಲಿವೆ. ಜನವರಿ 10ರ ವರೆಗೂ ನಿಮಗೆ ಅತ್ಯಂತ ಲಾಭದಾಯಕ ದಿನವಾಗಿರಲಿದೆ. ಹೊಸ ಆದಾಯ ನಿಮ್ಮನ್ನು ಹುಡುಕಿ ಬರಲಿದೆ. ಇಷ್ಟು ವರ್ಷ ಕಷ್ಟಪಟ್ಟಿದ್ದ ನಿಮ್ಮ ಶ್ರಮಕ್ಕೆ ಫಲ ಸಿಗಲಿದೆ. ಶುಭ ಕಾರ್ಯಕ್ಕೆ ಒಂದಿಷ್ಟು ಹಣ ವ್ಯಯವಾಗಲಿದೆ. ವೈವಾಹಿಕ ಜೀವನದಲ್ಲಿ ಸುಖ, ಶಾಂತಿ ನೆಲೆಸಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ. ಬೆನ್ನು, ಕಾಲು ನೋವಿನ ಸಮಸ್ಯೆ ಇದ್ದವರು ಸುಧಾರಿಸಿಕೊಳ್ಳಲಿದ್ದಾರೆ.
ಕನ್ಯಾ ರಾಶಿ
ರಾಹುವಿನ ಪ್ರಭಾವವು ಕನ್ಯಾ ರಾಶಿಯವರಿಗೆ ಉತ್ತಮವಾಗಿರಲಿದೆ. ಈ ಸಮಯದಲ್ಲಿ ವ್ಯಾಪಾರಸ್ಥರಿಗೆ ಲಾಭದಾಯಕ ಆಗಿರಲಿದೆ. ಹಣಕಾಸಿನ ಪರಿಸ್ಥಿತಿಯು ಮೊದಲಿಗಿಂತ ಉತ್ತಮವಾಗಲಿದೆ. ಸಂಬಂಧಿಕರಿಂದ ನೀವು ಶುಭ ಸುದ್ದಿ ಕೇಳುವಿರಿ. ಕೃಷಿಕರು, ಕಬ್ಭಿಣ ವ್ಯಾಪಾರಿಗಳು, ಇಲ್ಲರೆ ವ್ಯಾಪಾರಿಗಳಿಗೆ ಶುಭ ಕಾಲ. ನಿಮ್ಮ ಬಹುವರ್ಷಗಳ ಕನಸುಗಳ ಸಾಕಾರ ಮಾಡುವ ನಿಮ್ಮ ಕಾರ್ಯಗಳಿಗೆ ಈ ಕಾಲದಲ್ಲಿ ಆರಂಭ ಸಿಗುವ ನಿರೀಕ್ಷೆ ಇದೆ.
ತುಲಾ ರಾಶಿ
ರಾಹುವಿನ ಸಂಚಾರವು ಈ ತುಲಾ ರಾಶಿಯವರಿಗೆ ಮುಂದಿನ ಜನವರಿ ವರೆಗೂ ಒಳ್ಳೆಯ ಕಾಲವಾಗಲಿದೆ. ನೀವು ಉದ್ಯೋಗ ಬದಲಿಸುವ ಆಲೋಚನೆಯಲ್ಲಿದ್ದರೆ ಉತ್ತಮ ಸಮಯ. ನಿಮ್ಮ ಹಣಕಾಸು ಪರಿಸ್ಥಿತಿಗಳು ಸುಧಾರಿಸಲಿದೆ. ಆಸ್ತಿ ಸಂಬಂಧಿತ ಸಮಸ್ಯೆಗಳು ಬಗೆಹರಿಯಲಿವೆ. ಆರೋಗ್ಯದ ದೃಷ್ಟಿಯಿಂದ ನಿಮ್ಮಲ್ಲಿ ಸುಧಾರಣೆಯಾಗಲಿದೆ. ಪ್ರಸಿದ್ಧ ದೇವಾಲಯಗಳ ಭೇಟಿಗೆ ನೀವು ಮುಂದಾಗಬಹುದು.
ಧನು ರಾಶಿ
ರಾಹು ಗ್ರಹದ ಸಂಕ್ರಮಣವು ಧನು ರಾಶಿಯವರಿಗೆ ಶುಭ ತರುವುದು ಖಚಿತ. ನೀವು ವ್ಯಾಪಾರದಲ್ಲಿ ಪ್ರಗತಿ, ಹೊಸ ವಸ್ತು ಖರೀದಿಯ ಅತ್ಯುತ್ತಮ ಸಮಯವಿದು. ಹೊಸ ವರ್ಷದ ಆರಂಭದಲ್ಲಿ ಶುಭ ಸುದ್ದಿಗೆ ಕಾರಣವಾಗಲಿದೆ. ನಿಮ್ಮಿಂದ ಹೆಚ್ಚು ಹಣ ಖರ್ಚು ಆಗಲಿದೆ. ಆದ್ರೆ ಇದರಿಂದ ನಿಮಗೂ ಲಾಭವಿದೆ. ಅನಿರೀಕ್ಷಿತ ಬೆಳವಣಿಗೆ ನಿಮಗೆ ಆರ್ಥಿಕ ಲಾಭ ತರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications