Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಸೆಪ್ಟೆಂಬರ್‌ನಿಂದ ಖುಲಾಯಿಸಲಿದೆ ಅದೃಷ್ಟ: ರಾಹು ದೋಷಗಳಿಂದ ಇದೆ ಮುಕ್ತಿ!
ಜ್ಯೋತಿಷ್ಯ ಶಾಸ್ತ್ರದಲ್ಲಿ ಎಲ್ಲಾ ಗ್ರಹಗಳ ಚಲನೆಗೂ ಪ್ರಾಮುಖ್ಯತೆ ನೀಡಲಾಗುತ್ತದೆ. ಹಾಗೆ ರಾಹುವನ್ನು ಶಾಸ್ತ್ರದಲ್ಲಿ ನೆರಳಿನ ಗ್ರಹ ಎಂದು ಪರಿಗಣಿಸಲಾಗಿದೆ. ರಾಹು 18 ತಿಂಗಳ ಕಾಲ ಒಂದೇ ಗ್ರಹದಲ್ಲಿ ಚಲಿಸಲಿದ್ದಾನೆ. ಪ್ರಸ್ತುತ ರಾಹು ಶನಿಯ ಅಧಿಪತ್ಯದ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಈ ರಾಶಿಯಲ್ಲಿ ರಾಹುವಿನಿಂದ ಹಲವು ರೀತಿಯ ಪ್ರಭಾವ ನೋಡಬಹುದು.
ಮೇ 18 ರಂದು ರಾಹು ಈ ಕುಂಭ ರಾಶಿಗೆ ಪ್ರವೇಶಿಸಿದ್ದಾನೆ. ಈ ರಾಹು ಸಂಚಾರದಿಂದಾಗಿ ಕಳೆದ 4 ತಿಂಗಳುಗಳಿಂದ ತೊಂದರೆಗಳನ್ನು ಎದುರಿಸುತ್ತಿರುವ ರಾಶಿ ಜನರಿಗೆ ಸೆಪ್ಟೆಂಬರ್ 10 ರಿಂದ ಉತ್ತಮ ಲಾಭಗಳ ನೋಡಬಹುದು. ದುರ್ಬಲ ಸ್ಥಿತಿಯಲ್ಲಿದ್ದ ರಾಹು ಸೆಪ್ಟೆಂಬರ್ 10ರಿಂದ ಪ್ರಭಾವ ಶಾಲಿಯಾಗುತ್ತಾನೆ. ಇದು ಹಲವರಿಗೆ ಶುಭದಾಯಕವಾಗಲಿದೆ.

ಹೀಗಾಗಿ ಯಾವ ರಾಶಿಯವರಿಗೆ ಈ ಸಮಯದಲ್ಲಿ ಶುಭಕರ ಲಾಭವಿದೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಯಾರು ಈ ಸಮಯದಲ್ಲಿ ಜೀವನದಲ್ಲಿನ ಕಷ್ಟಗಳ ದೂರ ಮಾಡಲಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.
ಮಕರ ರಾಶಿ
ಮಕರ ರಾಶಿಯವರಿಗೆ ರಾಹುವಿನಿಂದ ಹಠಾತ್ ಆರ್ಥಿಕ ಲಾಭಗಳು ಸಿಗುತ್ತವೆ. ದೀರ್ಘಕಾಲದ ಆಸೆಗಳು ಈಡೇರುತ್ತವೆ. ನಿಮ್ಮ ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ರಾಹುವಿನ ದೃಷ್ಟಿಯಿಂದಾಗಿ ನಿಮ್ಮ ಸಂಪತ್ತು ಸಂಗ್ರಹದಲ್ಲಿ ಹೆಚ್ಚಳವಾಗಲಿದೆ. ಹಣಕಾಸಿನ ವಿಚಾರದಲ್ಲಿ ನೀವು ಜಾಗೃತೆ ವಹಿಸುವುದರಿಂದ ಭವಿಷ್ಯದ ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸುತ್ತೀರಿ. ದೊಡ್ಡ ಮಟ್ಟದ ವ್ಯವಹಾರಗಳಲ್ಲಿ ನಿಮಗೆ ಶುಭವಾಗುತ್ತಿದೆ. ಜಾತಕದಲ್ಲಿ ದೋಷವೊಂದು ನಿವಾರಣೆಯಾಗಲಿದೆ. ಕುಟುಂಬದಲ್ಲಿನ ಆರ್ಥಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಇದು ಉತ್ತಮ ಸಮಯ. ನೀವು ನಿರುದ್ಯೋಗಿಗಳಾಗಿದ್ದರೆ ಈ ಸಮಯದಲ್ಲಿ ಉತ್ತಮ ಅವಕಾಶಗಳ ಪಡೆಯಬಹುದು. ಹಾಗೆ ಇದರಿಂದ ನಿಮ್ಮಲ್ಲಿ ನೆಮ್ಮದಿ ಇರಲಿದೆ. ಆಪ್ತರೊಬ್ಬರಿಗೆ ಸಹಾಯವಾಗಿ ನೀಡಿದ್ದ ಹಣ ಮರಳಿ ಪಡೆಯಬಹುದು.
ಧನು ರಾಶಿ
ರಾಹುವಿನ ದೃಷ್ಟಿಯು ಇಂದಿನಿಂದ ಧನು ರಾಶಿಯವರಿಗೆ ಜೀವನದಲ್ಲಿ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಏಕೆಂದರೆ ರಾಹುವಿನ ದೃಷ್ಟಿಯು 11 ನೇ ಮನೆಯ ಮೇಲೆ ಬೀಳಲಿದೆ. ನಿಮ್ಮ ದೀರ್ಘಕಾಲದ ಆಸೆಗಳು ಈಡೇರುತ್ತವೆ. ಬ್ಯಾಂಕಿಂಗ್, ಹಣಕಾಸು ವಿಚಾರವಾಗಿ ನಿಮ್ಮಲ್ಲಿ ಹಲವು ರೀತಿಯ ಶುಭಕರ ದಿನವಿದೆ. ನೀವು ದೊಡ್ಡ ಪ್ರಮಾಣದ ಸಾಲ ಪಡೆದಿದದ್ದರೆ ಒಂದಿಷ್ಟು ಮೊತ್ತ ಮರುಪಾವತಿ ಮಾಡಲಿದ್ದೀರಿ. ನಿಮ್ಮ ವ್ಯಾಪಾರ ಹಾಗೂ ವ್ಯವಹಾರ ಸಂಬಂಧವಾಗಿ ದೊಡ್ಡ ಮಟ್ಟದ ಲಾಭವಿದೆ. ಶನಿಯ ಸ್ಥಾನದಿಂದಾಗಿ ಸಂವಹನ ಕೌಶಲ್ಯಗಳು ಸುಧಾರಿಸುತ್ತವೆ. ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನೀವು ಸ್ವಲ್ಪ ಜಾಗರೂಕರಾಗಿದ್ದರೆ, ನಿಮಗೆ ಸಾಕಷ್ಟು ಪ್ರಯೋಜನಗಳು ಸಿಗಬಹುದು. ಕೌಟುಂಬಿಕ ಸಮಸ್ಯೆಗಳು ಬಗೆಹರಿಯಲಿದೆ.
ಕುಂಭ ರಾಶಿ
ರಾಹು ಕುಂಭ ರಾಶಿಯ ಮೊದಲ ಮನೆಯಲ್ಲಿದ್ದು ಎರಡು ಪಟ್ಟು ಬಲಶಾಲಿಯಾಗುವುದರಿಂದ, ಈ ರಾಶಿ ಜನರ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ನೋಡುತ್ತವೆ. ನಿಮ್ಮಲ್ಲಿ ರಾಹು ಉತ್ತಮ ಸ್ಥಾನದಲ್ಲಿದ್ದು, ಕೆಲಸ ಸಂಬಂಧವಾಗಿದ್ದ ಅಡ್ಡಿಗಳು ನಿವಾರಣೆಯಾಗಲಿದೆ. ಹಾಗೆ ಹಲವರಲ್ಲಿ ಅನಾರೋಗ್ಯ ಸಮಸ್ಯೆಗಳು ಕಡಿಮೆಯಾಗುವ ಜೊತೆಗೆ ಆತ್ಮವಿಶ್ವಾಸ ಹೆಚ್ಛಾಗಲಿದೆ. ವ್ಯಾಪಾರಿ ವಲಯಕ್ಕೆ ಬಹಳ ಉತ್ತಮ ಪ್ರಗತಿ ಕಾಣಬಹುದು. ನಿಮ್ಮ ಹಳೆಯ ಸಾಲಗಳು ಮರುಪಾವತಿಯಾಗುವ ಜೊತೆಗೆ ಸಿಲುಕಿದ್ದ ಹಣ ನಿಮ್ಮ ಕೈ ಸೇರಲಿದೆ. ಉದ್ಯಮಿಗಳಿಗೆ ಉತ್ತಮ ಲಾಭ ಸಿಗುತ್ತದೆ. ಆದಾಗ್ಯೂ ನೀವು ಸ್ವಲ್ಪ ಜಾಗರೂಕರಾಗಿರಬೇಕು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications