Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ವರ್ಷದ 4 ತಿಂಗಳು ರಾಹು ಸಂಚಾರ: ಈ ರಾಶಿಗಳಿಗೆ ಗುರು-ರಾಹುವಿನಿಂದ ಅದೃಷ್ಟ!
2026ರ ಆರಂಭದಲ್ಲಿ ರಾಹು ಕೇತುವಿನ ಸಂಚಾರವನ್ನು ನೋಡಬಹುದು. ರಾಹುವನ್ನು ನೆರಳಿನ ಗ್ರಹವೆಂದು ಪರಿಗಣಿಸಲಾಗಿದ್ದರೂ ರಾಹುವಿನಿಂದ ಶುಭ ಹಾಗೂ ಅಶುಭ ಕಾರಕಗಳು ಉಂಟಾಗುವುದು ನೋಡಬಹುದು. ಬೇರೆ ಗ್ರಹಗಳೊಂದಿಗೆ ಸಂಯೋಗವಾಗುವ ರಾಹು ತನ್ನ ಪ್ರಭಾವವನ್ನು ಎಲ್ಲಾ 12 ರಾಶಿಗಳ ಮೇಲೆಯೂ ಉಂಟು ಮಾಡಬಹುದು.
ಇದು ಭೌತಿಕ ಸೌಕರ್ಯಗಳು, ಸಂಪತ್ತು, ಸಮೃದ್ಧಿ, ಶಕ್ತಿ, ಬುದ್ಧಿವಂತಿಕೆ ಮತ್ತು ಆಧುನಿಕ ಚಿಂತನೆಯನ್ನು ಪ್ರತಿನಿಧಿಸುತ್ತದೆ. ನೆರಳು ಗ್ರಹವಾಗಿದ್ದರೂ, ರಾಹು ಎಷ್ಟು ಶಕ್ತಿಶಾಲಿಯೆಂದರೆ ಅದು ವ್ಯಕ್ತಿಯ ಜೀವನದ ಹಾದಿಯನ್ನು ಇದ್ದಕ್ಕಿದ್ದಂತೆ ಬದಲಾಯಿಸಬಹುದು. ಪ್ರಸ್ತುತ ರಾಹು ಮೀನ ರಾಶಿಯಲ್ಲಿ ಸಾಗುತ್ತಿದ್ದು 2026 ರ ಆರಂಭದಲ್ಲಿ ತನ್ನ ಉತ್ತುಂಗ ಸ್ಥಿತಿಯಲ್ಲಿ ಚಲಿಸಲಿದೆ.

ರಾಹು ಈ ಸಮಯದಲ್ಲಿ 12 ರಿಂದ 18 ಡಿಗ್ರಿಗಳ ನಡುವೆ ಚಲಿಸಲಿದೆ. ಡಿಸೆಂಬರ್‌ನಿಂದ 2026ರ ಏಪ್ರಿಲ್ ವರೆಗೆ ಹಿಮ್ಮುಖವಾಗಿ 12 ಡಿಗ್ರಿಗೆ ಚಲನೆ ನೋಡಬಹುದು ರಾಹುವಿನ ಈ ಚಲನೆಯಿಂದ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಲಿದ್ದಾನೆ. ಕೆಲವೊಂದು ರಾಶಿಗಳಿಗೆ ಇದು ಧನಾತ್ಮಕವಾಗಿ ಹಾಗೆ ಮತ್ತೆ ಕೆಲವು ರಾಶಿಗಳಿಗೆ ರಾಹು ಋಣಾತ್ಮಕವಾಗಿ ಕಾಡಲಿದ್ದಾನೆ. ಅದ್ರಲ್ಲೂ ವರ್ಷದ ಆರಂಭದ ಮೂರರಿಂದ ನಾಲ್ಕು ತಿಂಗಳ ಕಾಲ ರಾಹುವಿನಿಂದ ಶುಭ ಅಂಶಗಳನ್ನು ಪಡೆಯಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ರಾಹು ಹನ್ನೆರಡನೇ ಮನೆಯಲ್ಲಿ ಸಾಗುತ್ತಿದ್ದಾನೆ. ಅಲ್ಲದೆ ಶನಿಯ ಸಾಡೇ ಸಾತಿಯ ಎರಡನೇ ಹಂತವು ನಡೆಯುತ್ತಿದೆ ಮತ್ತು ಶನಿಯು ಲಗ್ನ ಮನೆಯಲ್ಲಿ ಚಲಿಸಲಿದ್ದಾನೆ. ಇದರ ಪರಿಣಾಮವಾಗಿ ಮೀನ ರಾಶಿ ಜನರಲ್ಲಿ ಶುಭ ಸಮಯ ನೋಡಬಹುದು. ಅದ್ರಲ್ಲೂ ವರ್ಷದ ಆರಂಭದ 4 ತಿಂಗಳು ನಿಮಗೆ ರಾಹುವಿನಿ ಆಶೀರ್ವಾದ ನೋಡಬಹುದು. ಅನಗತ್ಯ ವೆಚ್ಚಗಳು ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳು ಕ್ರಮೇಣ ಕಡಿಮೆಯಾಗಬಹುದು. ರಾಹುವಿನ ಪ್ರಭಾವದಿಂದಾಗಿ ವಿದೇಶಿ ಸಂಪರ್ಕಗಳಿಂದ ಪ್ರಯೋಜನಗಳ ಸಾಧ್ಯತೆಗಳಿವೆ. ಹೂಡಿಕೆಗಳಿಂದ ಉತ್ತಮ ಆರ್ಥಿಕ ಲಾಭದ ಸಾಧ್ಯತೆಯಿದೆ ಮತ್ತು ಹೊಸ ಆದಾಯದ ಮೂಲಗಳು ತೆರೆದುಕೊಳ್ಳಬಹುದು. ಎಂಟನೇ ಮನೆಯ ಮೇಲೆ ರಾಹುವಿನ ದೃಷ್ಟಿ ಇರುವುದರಿಂದ ಹಠಾತ್ ಆರ್ಥಿಕ ಲಾಭ ಪಡೆಯುವ ಸಾಧ್ಯತೆಯೂ ಇದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ರಾಹುವಿನ ಸಂಚಾರದಿಂದ ಶುಭವಿದೆ. ನಿಮ್ಮ ಲಗ್ನ ಮನೆಯಲ್ಲಿದ್ದರೆ ರಾಹು ಹಾಗೆ ಶನಿ ಎರಡನೇ ಮನೆಯಲ್ಲಿ ಚಲಿಸಲಿದ್ದಾರೆ. ಗುರು ಐದನೇ ಮನೆಯಲ್ಲಿ ಇರಿಸಲ್ಪಟ್ಟಿದ್ದಾನೆ. ಪರಿಣಾಮವಾಗಿ ಈ ರಾಶಿ ಜನರಿಗೆ ರಾಹುವಿನ ಪ್ರಭಾವವು ಸಾಕಷ್ಟು ಸಕಾರಾತ್ಮಕವಾಗಿರುತ್ತದೆ. ಉದ್ಯೋಗದಲ್ಲಿರುವ ಮಂದಿಗೆ ತಮ್ಮ ಕೆಲಸಕ್ಕೆ ಮೆಚ್ಚುಗೆಯನ್ನು ಪಡೆಯುತ್ತಾರೆ ಮತ್ತು ಹೊಸ ಉದ್ಯೋಗ ಅಥವಾ ಬಡ್ತಿಯ ಸಾಧ್ಯತೆಗಳು ಇರಬಹುದು. ವ್ಯಾಪಾರ ಪಾಲುದಾರಿಕೆಗಳು ಪ್ರಯೋಜನಕಾರಿಯಾಗುತ್ತವೆ. ಆರೋಗ್ಯದಲ್ಲಿನ ಸುಧಾರಣೆಯು ನಿಮ್ಮ ಎಲ್ಲಾ ಕೆಲಸಗಳಲ್ಲಿ ಸಕಾರಾತ್ಮಕ ಅನುಕೂಲ ತರಲು ಕಾರಣವಾಗಲಿದೆ.
ಧನು ರಾಶಿ
ಧನು ರಾಶಿಯ ಮೂರನೇ ಮನೆಯಲ್ಲಿ ಸಾಗುತ್ತಿದ್ದು, ಏಳನೇ ಒಂಬತ್ತನೇ ಮತ್ತು ಹನ್ನೊಂದನೇ ಮನೆಗಳ ಆಳುತ್ತಿದ್ದಾನೆ. ಈ ಕಾರಣದಿಂದಾಗಿ ರಾಹುವಿನಿಂದ ಹಲವು ರೀತಿ ಲಾಭ ಪಡೆಯಬಹುದು. ನಿಮಗೆ ಈ 4 ತಿಂಗಳಲ್ಲಿ ಆದಾಯ ಹೆಚ್ಚಳ ನೋಡಬಹುದು. ಬಾಕಿ ಇರುವ ಆಸೆಗಳು ಈಡೇರಬಹುದು. ಹನ್ನೊಂದನೇ ಮನೆಯ ಮೇಲೆ ರಾಹುವಿನ ದೃಷ್ಟಿಯು ಹೆಚ್ಚುವರಿ ಆದಾಯದ ಮೂಲಗಳನ್ನು ಸೃಷ್ಟಿಸುತ್ತದೆ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ದೊಡ್ಡ ಮೊತ್ತವನ್ನು ಈ ಸಮಯದಲ್ಲಿ ಪಡೆಯಲಿದ್ದೀರಿ. ಕೌಟುಂಬಿಕ ವಿಚಾರದಲ್ಲಿ ಇದ್ದಂತಹ ಮನಸ್ತಾಪಗಳು ನಿವಾರಣೆಯಾಗುವುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications