Latest Updates
-
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು
ಅಕ್ಟೋಬರ್ 30ರಿಂದ ಈ 3 ರಾಶಿಯವರಿಗಿದ್ದ ಅಡೆತಡೆ ದೂರಾಗಲಿದೆ
ವೈದಿಕ ಶಾಸ್ತ್ರದ ಪ್ರಕಾರ ರಾಹುವನ್ನು ಶಾಪಗ್ರಸ್ಥ ಗ್ರಹವೆಂದು ಹೇಳಲಾಗಿದೆ. ರಾಹು ಹಿಮ್ಮುಖ ಚಲನೆ ಮಾಡುವ ಗ್ರಹವಾಗಿದ್ದು ಇದೀಗ ಮೇಷ ರಾಶಿಯಲ್ಲಿದೆ. ರಾಹು ಮೇಷ ರಾಶಿಯಿಂದ ಮಿಥುನ ರಾಶಿಗೆ ಅಕ್ಟೋಬರ್ 30ಕ್ಕೆ ಸಂಚರಿಸಲಿದೆ. 2025ಕ್ಕೆ ರಾಹು ಕುಂಭ ರಾಶಿಗೆ ಪ್ರವೇಶಿಸಲಿದೆ. ಒಂದೂವರೆ ವರ್ಷದ ಕಾಲ ರಾಹು ಒಂದು ರಾಶಿಯಲ್ಲಿ ಇರಲಿದೆ. ಆದ್ದರಿಂದ ರಾಹುವಿನ ಪ್ರಭಾವವು ದೀರ್ಘಸಮಯವಿರುತ್ತದೆ. ಆದ್ದರಿಂದ ಈ ಅಕ್ಟೋಬರ್‌ನಲ್ಲಿ ಮೀನ ರಾಶಿಗೆ ರಾಹು ಸಂಚಾರ ಮಾಡಿದರೆ 2024ರ ವರ್ಷ ಪೂರ್ತಿ ರಾಹುವಿನ ಪ್ರಭಾವವಿರಲಿದೆ.

ರಾಹು ಮೇಷ ರಾಶಿಯಲ್ಲಿದ್ದ ಕೆಲ ರಾಶಿಯವರು ರಾಹುವಿನ ಕೆಟ್ಟ ಪ್ರಭಾವ ಅನುಭವಿಸಿದ್ದರು. ಇದೀಗ ರಾಹು ಮೀನ ರಾಶಿಗೆ ಸಂಚಾರಿಸಿದಾಗ ಅವರು ಅನುಭವಿಸುತ್ತಿರುವ ಎಲ್ಲಾ ಸಮಸ್ಯೆಗಳಿಂದ ಪರಿಹಾರ ಸಿಗಲಿದೆ. ರಾಹು ಮೀನ ರಾಶಿಯರನ್ನು ಪ್ರವೇಶಿಸಿದಾಗ ಈ ಮೂರು ರಾಶಿಯವರಿಗೆ ಒಳ್ಳೆಯ ಸಮಯ ಶುರುವಾಗಲಿದೆ.
ವೃಷಭ ರಾಶಿ
2024ರಲ್ಲಿ ರಾಹು ನಿಮ್ಮ 11ನೇ ಮನೆಯಲ್ಲಿ ಇರಲಿದೆ. ಆರ್ಥಿಕವಾಗಿ ಈ ಅವಧಿ ಮಿಶ್ರಫಲ, ಆದರೆ 2024 ಮೇ ತಿಂಗಳಿನಿಂದ ನೀವು ಆರ್ಥಿಕ ಪ್ರಗತಿ ಕಾಣುವಿರಿ. ರಾಹು 1ನೇ ಮನೆಯಲ್ಲಿ ಇದ್ದಾಗ ತಲೆನೋವು, ಮಾನಸಿಕ ಒತ್ತಡ, ಅನಗ್ಯತ ಚಿಂತೆ, ಆತ್ಮವಿಶ್ವಾಸ ಕುಗ್ಗುವುದು ಈ ಬಗೆಯ ಸಮಸ್ಯೆ ಎದುರಿಸಿರಬಹುದು, ಆದರೆ ರಾಹು ಮೀನ ರಾಶಿಗೆ ಬಂದಾಗ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ರಾಹುವಿನ ಸ್ಥಾನವು ನಿಮಗೆ ವಿದೇಶ ಪ್ರಯಾಣದ ಯೋಗವನ್ನು ತಂದಿದೆ. ಆದ್ದರಿಂದ ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿರುವವರಿಗೆ ಈ ಅವಧಿ ತುಂಬಾನೇ ಒಳ್ಳೆಯದಿದೆ. ಈ ಅವಧಿಯಲ್ಲಿ ನೀವು ಪ್ರಯತ್ನ ಮಾಡಿದರೆ ವಿದೇಶಕ್ಕೆ ಹೋಗಲು ಸಾಧ್ಯವಾಗುವುದು. ಅಲ್ಲದೆ ಶನಿಯು ಕೂಡ ಕುಂಭ ರಾಶಿಯಲ್ಲಿರುವುದರಿಂದ ನಿಮಗೆ ತುಂಬಾನೇ ಅನುಕೂಲಕರವಾಗಿದೆ. ಈ ಗ್ರಹಗಳ ಸ್ಥಾನದಿಂದಾಗಿ ನೀವು ಅತ್ಯಧಿಕ ಪ್ರಯೋಜನಗಳನ್ನು ಪಡೆಯುತ್ತೀರಿ. ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಲಿದೆ. ನಿಮ್ಮ ನಡುವೆ ಉತ್ತಮ ಹೊಂದಾಣಿಕೆ ಇರಲಿದೆ. ಕೆಲಸದಲ್ಲಿ ಬಡ್ತಿ ಸಿಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯಲ್ಲಿ ರಾಹು 7ನೇ ಸ್ಥಾನದಲ್ಲಿ ಇರಲಿದೆ. 7ನೇ ಮನೆಯೆಂಬುವುದು ಪಾಲುದಾರಿಕೆ, ಸ್ನೇಹಿತರು, ಒಪ್ಪಂದದ ಮನೆಯಾಗಿದೆ. ಈ ಅವಧಿಯಲ್ಲಿ ನೀವು ಆರ್ಥಿಕ ಪ್ರಯೋಜನವನ್ನು ಪಡೆಯುತ್ತೀರಿ. ನಿಮ್ಮ ವೈವಾಹಿಕ ಜೀವನ ತುಂಬಾನೇ ಚೆನ್ನಾಗಿರಲಿದೆ. ನಿಮ್ಮ ವೃತ್ತಿ ಜೀವನದಲ್ಲಿದ್ದ ಎಲ್ಲಾ ಅಡೆತಡೆಗಳು ದೂರಾಗಿ ಕೆಲಸವು ಸುಗಮವಾಗಿ ನಡೆಯುವುದರಿಂದ ಪ್ರಗತಿ ಹೊಂದುವಿರಿ. ನಿಮಗೆ ಈ ಅವಧಿಯಲ್ಲಿ ಉತ್ತಮ ಅವಕಾಶಗಳು ದೊರೆಯಲಿದೆ.
ಮಕರ ರಾಶಿ
ಮಕರ ರಾಶಿಯಲ್ಲಿ ರಾಹು 3ನೇ ಸ್ಥಾನದಲ್ಲಿದೆ. ಈ ಸ್ಥಾನದಿಂದಾಗಿ ನೀವು ವಿದೇಶಕ್ಕೆ ಹೋಗಲು ಪ್ರಯತ್ನ ಮಾಡುತ್ತಿದ್ದರೆ ನಿಮ್ಮ ಪ್ರಯತ್ನ ಫಲ ನೀಡಲಿದೆ. ವೃತ್ತಿ ಜೀವನದಲ್ಲಿ ಬಡ್ತಿ ಸಿಗುವುದರಿಂದ ಆರ್ಥಿಕವಾಗಿ ಈ ಅವಧಿ ಉತ್ತಮವಾಗಿರಲಿದೆ. ಕೆಲಸದ ಭದ್ರತೆ ಇರಲಿದೆ. ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಸಂಬಂಧದಲ್ಲಿ ಬಾಂಧವ್ಯ ಗಟ್ಟಿಯಾಗುವುದು. ಒಟ್ಟಿನಲ್ಲಿ ಈ ರಾಹು ಸಂಚಾರ ನಿಮ್ಮ ಬದುಕಿನಲ್ಲಿ ಉತ್ತಮ ಬದಲಾವನೆ ತರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications