Latest Updates
-
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್!
2026ರಲ್ಲಿ 2 ಬಾರಿ ರಾಹು ನಕ್ಷತ್ರ ಬದಲಾವಣೆ; ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ!
ಜ್ಯೋತಿಷ್ಯದ ಪ್ರಕಾರ ರಾಹುವನ್ನು 9 ಗ್ರಹಗಳಲ್ಲಿ ನೆರಳು ಗ್ರಹವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ನೀವು ಈ ಗ್ರಹವನ್ನು ಗುತಿಸಲಾಗುವುದಿಲ್ಲ. ರಾಹು ಒಂದು ರಾಶಿಯಲ್ಲಿ 18 ತಿಂಗಳ ಕಾಲ ನೆಲೆಸಲಿದ್ದಾನೆ. ರಾಹು ತನ್ನ ರಾಶಿ ಬದಲಾಯಿಸುವ ಜೊತೆಗೆ ನಕ್ಷತ್ರ ಕೂಡ ಬದಲಾಯಿಸುತ್ತಾನೆ. ರಾಹುವಿನ ಸ್ಥಾನದಲ್ಲಿನ ಅಂತಹ ಬದಲಾವಣೆಗಳ ಪ್ರಭಾವವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಕಂಡುಬರುತ್ತದೆ.
ಹಾಗೆ ರಾಹುವಿನ ಸ್ಥಾನಪಲ್ಲಟವು ಪ್ರತಿ ಸಮಯದಲ್ಲು ಬದಲಾವಣೆಗಳ ತರಲಿದೆ. ಇನ್ನು 2026ರಲ್ಲೂ ರಾಹುವಿನ ಸ್ಥಾನ ಪಲ್ಲಟ ನೋಡಬಹುದು. ಈ 2026ರ ವರ್ಷದಲ್ಲಿ ರಾಹು 2 ಬಾರಿ ತನ್ನ ಸ್ಥಾನ ಬದಲಾಯಿಸಲಿದ್ದಾನೆ. ಆಗಸ್ಟ್ 02, 2026 ರಂದು ಮೊದಲ ಬಾರಿಗೆ ಹಾಗೆ ಡಿಸೆಂಬರ್ 5ರಂದು ಎರಡನೇ ಬಾರಿಗೆ ತನ್ನ ನಕ್ಷತ್ರ ಬದಲಾಯಿಸಲಿದ್ದಾನೆ.

ರಾಹು ಕುಂಭ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಲಿದ್ದಾನೆ ಪ್ರವೇಶಿಸುತ್ತಾನೆ. ಈ ರೀತಿಯಾಗಿ 2 ಬಾರಿ ರಾಹು ತನ್ನ ಸ್ಥಾನ ಬದಲಾಯಿಸುವುದರಿಂದ ಹಲವು ರಾಶಿ ಜನರಿಗೆ ಇದು ಬದಲಾವಣೆಗಳ ತರುವ ಸಮಯ ಆಗಿರಲಿದೆ. ಹಲವು ರಾಶಿಗಳೀಗೆ ಶುಭ ಹಾಗೆ ಮತ್ತೆ ಕೆಲವು ರಾಶಿಗಳಿಗ ಅಶುಭವೂ ಆಗಬಹುದು. ಆದ್ರೆ ನಾವಿಂದು ರಾಹುವಿನ ಈ ಚಲನೆಗಳಿಂದ ಯಾವೆಲ್ಲಾ ರಾಶಿಗಳಿಗೆ ಅದೃಷ್ಟಕರ ಎಂಬುದನ್ನು ತಿಳಿದುಕೊಳ್ಳೋಣ.
ಕುಂಭ ರಾಶಿ
2026 ರಲ್ಲಿ ಎರಡು ಬಾರಿ ರಾಹು ತನ್ನ ಸ್ಥಾನ ಬದಲಾಯಿಸುವುದು ಕುಂಭ ರಾಶಿಯವರಿಗೆ ಅನುಕೂಲಕರ. ಈ ವರ್ಷದಲ್ಲಿ ನೀವು ರಾಹುವಿನ ಅದೃಷ್ಟಕರ ಕಾರಣದಿಂದಾಗಿ ಹಣ ಉಳಿಸಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಉದ್ಯಮದಲ್ಲಿ ಹೊಸ ಯೋಜನೆಗಳಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲಸ ಮಾಡುವವರಿಗೆ ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಅವಕಾಶಗಳು ಸಿಗುತ್ತವೆ. ಬಡ್ತಿಗಳನ್ನು ಪಡೆಯುವ ಅವಕಾಶಗಳೂ ಇವೆ. ನಿಮ್ಮ ಹೂಡಿಕೆಗಳು ಲಾಭದಾಯಕವಾಗಲಿವೆ.
ಮಿಥುನ ರಾಶಿ
2026 ರಲ್ಲಿ ಎರಡು ಬಾರಿ ರಾಹುವಿನ ಸ್ಥಾನ ಪಲ್ಲಟವು ಮಿಥುನ ರಾಶಿ ಮಂದಿಗೆ ಶುಭಕರವಾಗುತ್ತಿದೆ. ಉದ್ಯೋಗ ಹುಡುಕುತ್ತಿದ್ದ ಮಂದಿಗೆ ಅತ್ಯುತ್ತಮ ಉದ್ಯೋಗ ಸಿಗುವ ಸಂಭವವಿದೆ. ಉದ್ಯಮಿಗಳು, ಸ್ವಂತ ವ್ಯವಹಾರ ಮಾಡುವ ಮಂದಿ ಅಧಿಕ ಲಾಭ ನೋಡಲಿದ್ದಾರೆ. ರಾಹುವಿನ ಕೃಪೆಯಿಂದ ನಿಮ್ಮ ಐಷಾರಾಮಿ ವಸ್ತುಗಳ ಖರೀದಿಯ ಸಂಭವ ಹೆಚ್ಚಾಗಲಿದೆ. ಶತ್ರುಗಳ ವಿಚಾರಗಳಿಂದ ನಿಮಗೆ ಶುಭವಿದೆ. ಅದ್ರಲ್ಲೂ ನಿಮ್ಮ ದೊಡ್ಡ ಹಣಕಾಸಿನ ವ್ಯವಹಾರಗಳಲ್ಲಿ ಲಾಭವಿದೆ. ನಿಮ್ಮ ದಾಂಪತ್ಯ ಸುಖವು ಸಹ ಅತ್ಯುತ್ತಮ ಹಂತ ತಲುಪಲಿದೆ. ಬ್ಯಾಂಕ್, ಆಸ್ತಿ ಕುರಿತಾದ ವಿಚಾರವಾಗಿ ನಿಮಗೆ ಶುಭವಿದೆ.
ತುಲಾ ರಾಶಿ
2026 ರಲ್ಲಿ ಎರಡು ಬಾರಿ ಸಂಭವಿಸುವ ರಾಹು ಸಂಚಾರವು ತುಲಾ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಈ ವರ್ಷ ನಿಮಗೆ ಅನಿರೀಕ್ಷಿತ ಲಾಭಗಳ ನೋಡಬಹುದು. ಹೊಸ ಮನೆ ಮತ್ತು ವಾಹನವನ್ನು ಖರೀದಿಸುವ ಅವಕಾಶಗಳಿವೆ. ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಬೆಳವಣಿಗೆಯನ್ನು ನೀವು ನೋಡುತ್ತೀರಿ. ನಿಮ್ಮ ಗೌರವ ಹೆಚ್ಚಾಗುತ್ತದೆ. ಪಿತ್ರಾರ್ಜಿತ ಆಸ್ತಿ ಸಂಬಂಧಿತ ವಿಚಾರದಲ್ಲಿ ನಿಮಗೆ ಶುಭವಿದೆ. ಸಹೋದರರೊಂದಿಗಿನ ದೊಡ್ಡ ಮನಸ್ತಾಪಗಳು ನಿವಾರಣೆಯಾಗಲಿದೆ. ನಿಮ್ಮ ಮಕ್ಕಳ ಕುರಿತಾದ ಚಿಂತೆಗಳು ದೂರಾಗುವ ಸಮಯ. ವಿವಾಹ ಸಂಬಂಧಿತ ಅಡ್ಡಿಗಳಿಂದ ಹೊರಬರುತ್ತೀರಿ. ನಿಮ್ಮ ಮನೆ ನಿರ್ಮಾಣ ಕಾರ್ಯದಲ್ಲಿ ವಿಶೇಷ ಲಾಭಗಳಿವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications