Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಹು-ಚಂದ್ರರಿಂದ ಗ್ರಹಣ ಯೋಗ: ಯಾವ ರಾಶಿಯವರಿಗೆ ಸಮಸ್ಯೆಗಳ ಸರಮಾಲೆ ನೋಡಿ!
ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಸ್ಥಾನ ಪಲ್ಲಟವನ್ನು ಬಹುಮುಖ್ಯ ಪ್ರಕ್ರಿಯೆ ಎಂದು ಪರಿಗಣಿಸಲಾಗುತ್ತದೆ. ಗ್ರಹಗಳ ಚಲನೆಯಿಂದ ಮೇಷ ರಾಶಿಯಿಂದ ಮೀನ ರಾಶಿಯವರೆಗೂ ಅದರ ಪ್ರಭಾವ ಉಂಟಾಗುವುದು ನೋಡಬಹುದು. ಹಾಗೆ ಈ ರಾಶಿಗಳಲ್ಲಿ ಚಲಿಸುವ ಗ್ರಹಗಳ ಹಲವು ರೀತಿ ಬದಲಾವಣೆಗಳಿಗೆ ಕಾರಣವಾಗುವುದು ನೋಡಬಹುದು.
ಇನ್ನು ಈ ಒಬ್ಬತ್ತು ಗ್ರಹಗಳಲ್ಲಿ ಪ್ರತಿಯೊಂದೂ ನಿರ್ದಿಷ್ಟ ಅವಧಿಯಲ್ಲಿ ರಾಶಿಗಳ ಬದಲಾಯಿಸುವುದು ನೋಡಬಹುದು. ಹಾಗೆ ಕೆಲವು ಗ್ರಹಗಳು ಒಂದೇ ರಾಶಿಯಲ್ಲಿ ಮತ್ತೊಂದು ಗ್ರಹದೊಂದಿಗೆ ಸಂಯೋಗವಾಗುವುದು ನೋಡಬಹುದು. ಈ ಸಂಯೋಗವು ಹಲವು ರೀತಿಯ ಲಾಭಗಳಿಗೆ ಹಾಗೆ ನಷ್ಟಗಳಿಗೂ ಕೂಡ ಕಾರಣವಾಗಲಿದೆ.

ಸದ್ಯ ಈಗ ನಾವು ರಾಹು ಹಾಗೂ ಚಂದ್ರನ ಸಂಯೋಗ ಕುರಿತು ತಿಳಿದುಕೊಳ್ಳೋಣ. ನೆರಳಿನ ಗ್ರಹವಾಗಿರುವ ರಾಹು ಕುಂಭ ರಾಶಿಯಲ್ಲಿ ಚಲಿಸುತ್ತಿದೆ ಆದ್ರೆ ಇದೇ ಸಮಯದಲ್ಲಿ ಚಂದ್ರ ಕೂಡ ಕುಂಭ ರಾಶಿಗೆ ಪ್ರವೇಶಿಸುವುದು ನೋಡಬಹುದು. ಈ ಆಗಸ್ಟ್ 10ರಂದು ಕುಂಭ ರಾಶಿಯಲ್ಲಿ ರಾಹು ಹಾಗೂ ಚಂದ್ರನ ಸಂಯೋಗವಾಗುವುದು ಗ್ರಹಣ ಯೋಗ ರೂಪುಗೊಳ್ಳಲು ಕಾರಣವಾಗುತ್ತದೆ. ಇದು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುವುದು ನೋಡಬಹುದು.
ಕೆಲವು ರಾಶಿಗಳಿಗೆ ಈ ಗ್ರಹಣ ಯೋಗ ಶುಭಕರವಾದರೆ ಮತ್ತೆ ಕೆಲವು ರಾಶಿಗಳಿಗೆ ಇದು ಅಶುಭಕಾರಕವಾಗಬಹುದು. ಅದರಲ್ಲೂ ರಾಹುವನ್ನು ಅಶುಭ ಕಾರಕ ಎಂದು ಪರಿಗಣಿಸಿರುವುದರಿಂದ ಈ ಆಗಸ್ಟ್ 10ರಿಂದ ಯಾವ ರಾಶಿಯವರು ಬಹಳ ಜಾಗರೂಕರಾಗಿರಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಿಂಹ ರಾಶಿ
ಸಿಂಹ ರಾಶಿಯ 8 ನೇ ಮನೆಯಲ್ಲಿ ರಾಹು ಮತ್ತು ಚಂದ್ರನ ಸಂಯೋಗವು ಗ್ರಹಣ ಯೋಗವನ್ನು ಸೃಷ್ಟಿಸುತ್ತದೆ. ಈ ಕಾರಣದಿಂದಾಗಿ ಈ ಅವಧಿಯಲ್ಲಿ ನೀವು ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗಬಹುದು. ಅದ್ರಲ್ಲೂ ಕಾಲೋಚಿತ ಸಮಸ್ಯೆಗಳು, ಶೀತ, ಜ್ವರದಂತಹ ಸಮಸ್ಯೆಗಳಿಗೆ ತುತ್ತಾಗಬಹುದು. ಕೆಲಸದಲ್ಲಿ ಜಾಗರೂಕರಗಿರಬೇಕು. ಔದ್ಯೋಗಿಕ ಸಂಬಂಧಿ ಸಮಸ್ಯೆಗಳಿಗೆ ನೀವು ತುತ್ತಾಗಬಹುದು. ಕೆಲಸದ ಒತ್ತಡಗಳು ಹೆಚ್ಚಾಗುವ ಕಾರಣ ಅಶಾಂತಿ ಇರಬಹುದು. ಯಾರಿಗೂ ಈ ಸಮಯದಲ್ಲಿ ಹಣ ನೀಡುವುದು, ಸಾಲ ನೀಡುವುದು ಮಾಡಬೇಡಿ. ಉಳಿತಾಯಗಳಲ್ಲಿ ಏರುಪೇರು ನೋಡುವಿರಿ.
ತುಲಾ ರಾಶಿ
ತುಲಾ ರಾಶಿಯ 6 ನೇ ಮನೆಯಲ್ಲಿ ರಾಹು ಮತ್ತು ಚಂದ್ರನ ಸಂಯೋಗವು ಗ್ರಹಣ ಯೋಗವನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಈ ರಾಶಿ ಜನರ ಗುಪ್ತ ಶತ್ರುಗಳಿಂದ ತೊಂದರೆ ನೀಡಬಹುದು. ನಿಮ್ಮ ವ್ಯಾಪಾರ ಸಂಬಂಧಿ ಸಮಸ್ಯೆ ಹೆಚ್ಚಾಗಬಹುದು. ಅನಗತ್ಯ ವಾದಗಳು ನಿಮಗೆ ಸಮಸ್ಯೆ ತರಬಹುದು. ನಿಮ್ಮ ಪ್ರಯಾಣ ಆಲೋಚನೆಗಳಿಗೆ ಅಡ್ಡಿ ಎದುರಾಗಹುದು. ವಿವಾಹಿತರಲ್ಲಿ ಅನಗತ್ಯ ವಿಚಾರದಲ್ಲಿ ಖರ್ಚು ಹೆಚ್ಚಾಗಬಹುದು. ಸಂಗಾತಿಯೊಂದಿಗಿನ ಸಮಸ್ಯೆ ದೊಡ್ಡದಾಗಬಹುದು.
ಮೀನ ರಾಶಿ
ರಾಹು ಮತ್ತು ಚಂದ್ರನ ಸಂಯೋಜನೆಯಿಂದಾಗಿ ಮೀನ ರಾಶಿಯ 12 ನೇ ಮನೆಯಲ್ಲಿ ಗ್ರಹಣ ಯೋಗ ರೂಪುಗೊಳ್ಳುತ್ತದೆ. ಇದರಿಂದ ನಿಮ್ಮ ಖರ್ಚು ವೆಚ್ಚಗಳು ಹೆಚ್ಚಾಗುತ್ತವೆ. ಒತ್ತಡ ನಿವಾರಣೆಯಲ್ಲಿ ನೀವು ಮತ್ತಷ್ಟು ಶ್ರಮ ಹಾಕಬೇಕಾಗುತ್ತದೆ. ಕೆಲಸ ಸಂಬಂಧವಾಗಿ ನೀವು ತೆಗೆದುಕೊಳ್ಳುವ ನಿರ್ಧಾರವು ನಿಮಗೆ ಸಮಸ್ಯೆಗಳ ತರಬಹುದು. ಪಾಲುದಾರಿಕೆಯ ವ್ಯವಹಾರದಲ್ಲಿ ನಷ್ಟ ಸಂಭವಿಸಬಹುದು. ಪ್ರಯಾಣಗಳಲ್ಲಿ ನೀವು ಅಂದುಕೊಂಡಿರುವ ಫಲಿತಾಂಶ ಪಡೆಯದೆ ಇರಬಹುದು. ಕೌಟುಂಬಿಕ ಸಮಸ್ಯೆ ಹೆಚ್ಚಾಗಬಹುದು, ಮುಖ್ಯವಾಗಿ ಹಣಕಾಸಿನ ವಿಚಾರವಾಗಿ ಮನಸ್ತಾಪ ಬರಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ.)



Click it and Unblock the Notifications