Latest Updates
-
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ!
ಮೀನ ರಾಶಿಯಲ್ಲಿ ರಾಹು-ಬುಧ ಸಂಯೋಗ: ಈ ಮೂರು ರಾಶಿಯವರಿಗೆ ಇನ್ನಿಲ್ಲದ ಲಾಭ..!!
ಜ್ಯೋತಿಷ್ಯಶಾಸ್ತ್ರದಲ್ಲಿ ರಾಹುವನ್ನು ನೆರಳಿನ ಗ್ರಹ ಎಂದು ಕರೆಯಲಾಗಿದೆ. ರಾಹುವಿನ ಸಂಚಾರವು ಯಾವ ರಾಶಿಯಲ್ಲಿರುತ್ತೋ ಅವರಿಗೆ ಕೆಲವು ಅಶುಭ ದಿನಗಳ ನೋಡಬೇಕಾಗುತ್ತದೆ. ರಾಹು 18 ತಿಂಗಳ ಕಾಲ ಒಂದೇ ರಾಶಿಯಲ್ಲಿ ಸಂಚರಿಸುತ್ತಾರೆ. ಸದ್ಯ ರಾಹು ಮೀನರಾಶಿಯಲ್ಲಿ ಚಲಿಸುತ್ತಿದ್ದಾನೆ. ಆದ್ರೆ ಇದೇ ಫೆಬ್ರವರಿ 27ರಂದು ಬುಧನು ಮೀನ ರಾಶಿಗೆ ಪ್ರವೇಶಿಸುತ್ತಿದೆ.
ಇದು ರಾಹು ಹಾಗೂ ಬುಧನ ಸಂಯೋಗಕ್ಕೆ ಕಾರಣವಾಗುತ್ತಿದೆ. ಮೀನ ರಾಶಿಯಲ್ಲಿ ಬುಧ ಹಾಗೂ ರಾಹುವಿನ ಸಂಯೋಗವು ಹಲವು ರೀತಿಯ ಲಾಭ ಹಾಗೂ ನಷ್ಟಕ್ಕೂ ಕಾರಣಗಾಗುತ್ತಿದೆ. ರಾಹು ನೆರಳಿನ ಗ್ರಹ ಆಗಿರುವುದರಿಂದ ರಾಹುವಿನ ವಕ್ರ ದೃಷ್ಟಿಯಿಂದ ಹಾನಿಯೇ ಜಾಸ್ತಿ ಎನ್ನಬಹುದು. ಆದ್ರೆ ಕೆಲವು ರಾಶಿಯವರಿಗೆ ಇದು ಲಾಭದಾಯಕ. ಹಾಗಾದ್ರೆ ನಾವಿಂದು ಮೀನರಾಶಿಯಲ್ಲಿ ಬುಧನ ಹಾಗೂ ರಾಹುವಿನ ಸಂಯೋಗ ಯಾವ ರಾಶಿಯವರಿಗೆ ಶುಭವಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳೋಣ.

ಕುಂಭ ರಾಶಿ
ಕುಂಭ ರಾಶಿಯ ಎರಡನೇ ಮನೆಯಲ್ಲಿ ರಾಹು ಮತ್ತು ಬುಧನ ಸಂಯೋಗವಾಗುತ್ತಿದೆ. ಹೀಗಾಗಿ ಕುಂಭ ರಾಶಿಯವರಲ್ಲಿ ಅತ್ಯಧಿಕ ಲಾಬದ ದಿನಗಳನ್ನು ನೋಡಬಹುದು. ನೀವು ಅಂದುಕೊಂಡಿದ್ದ ಕಾರ್ಯಗಳಲ್ಲಿ ಯಶಸ್ಸು ಒಲಿದು ಬರಲಿದೆ. ಹಣಕಾಸು ವಿಚಾರದಲ್ಲಿಯೂ ಜಾಗೃತರಾಗುತ್ತೀರಿ. ಹೀಗಾಗಿ ಹಿಂದೊಮ್ಮೆ ಮಾಡಿದ್ದ ತಪ್ಪನ್ನು ತಿಂದಿಕೊಳ್ಳುವ ಮೂಲಕ ಲಾಭದಾಯಕ ದಿನಗಳತ್ತ ಹೆಜ್ಜೆ ಹಾಕುತ್ತೀರಿ. ವ್ಯಾಪಾರ ವ್ಯವಹಾರಗಳು ಸಲೀಸಾಗಿ ನಡೆಯಲಿದೆ. ಶುಭ ಕಾರ್ಯಕ್ಕೆ ಇದ್ದ ದೊಡ್ಡ ತೊಡಕು ನಿವಾರಣೆಯಾಗುವ ಸಾಧ್ಯತೆ ಇದೆ. ವಾಹನ ಲಾಭದಂತಹ ಸಮಯ ಇದಾಗಬಹುದು. ಹೂಡಿಕೆ, ಉಳಿತಾಯದಲ್ಲಿ ನೀವು ಹಣ ವ್ಯಯಿಸಲು ಮುಂದಾಗುವುದುಂಟು. ಆರೋಗ್ಯದ ವಿಚಾರದಲ್ಲಿಯೂ ನೀವು ಬಹಳ ಅದೃಷ್ಟವಂತರಾಗುತ್ತೀರಿ. ಏಕಾಏಕಿ ಹಲವು ಸಮಸ್ಯೆಗಳಿಂದ ದೂರಾಗುತ್ತೀರಿ. ಇದು ನಿಮ್ಮ ಮನಸ್ಸಿಗೆ ನೆಮ್ಮದಿಯ ಭಾವನೆ ಉಂಟು ಮಾಡುತ್ತದೆ.
ವೃಷಭ ರಾಶಿ
ವೃಷಭ ರಾಶಿಯ 11 ನೇ ಮನೆಯಲ್ಲಿ ರಾಹು ಮತ್ತು ಬುಧ ಸಂಯೋಗ ನೋಡಬಹುದು. ಇದರಿಂದ ಈ ರಾಶಿಯವರಲ್ಲಿ ಲಾಭಗಳನ್ನು ನೋಡಬಹುದು. ಹಾಗೆ ಈ ರಾಶಿಯವರಲ್ಲಿ ದಿಢೀರ್ ಧನಲಾಭ ನೋಡಬಹುದು. ಈಗಾಗಲೆ ನೀವು ಮಾಡಿರುವ ಕೆಲಸಗಳಲ್ಲಿ ಲಾಭ ನೋಡಬಹುದು. ಅದರಿಂದ ಪ್ರತಿಫಲ ಸಿಗುವ ಸಮಯವಿದು. ನೀವು ಹೊಸ ಹೂಡಿಕೆ ಮಾಡುವ ಪ್ರಯತ್ನದಲ್ಲಿದ್ದರೆ ಇದು ಉತ್ತಮ ಸಮಯ. ಪಾಲುದಾರಿಕೆ ವ್ಯವಹಾರದಲ್ಲಿದ್ದರೂ ನಿಮಗೆ ಲಾಭ ಬರಲಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಲಾಭಾಂಶ ಹೆಚ್ಚಳವಾಗಲಿದೆ. ಸಣ್ಣ ವ್ಯಾಪಾರಸ್ಥರು, ಉದ್ಯಮಿಗಳಿಗೂ ಇದು ಉತ್ತಮ ಕಾಲವಾಗಲಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಘಟನೆಗಳ ಎದುರಿಸುತ್ತೀರಿ, ಇದು ನಿಮ್ಮ ಭವಿಷ್ಯದ ದೃಷ್ಟಿಯಲ್ಲಿ ಪ್ರಮುಖವಾಗುತ್ತವೆ.
ಮಿಥುನ ರಾಶಿ
ಬುಧ ಮತ್ತು ರಾಹು ಮಿಥುನ ರಾಶಿಯ 10 ನೇ ಮನೆಯಲ್ಲಿ ಸಂಯೋಗವಾಗಲಿದೆ. ಹೀಗಾಗಿ ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಕಾಣುತ್ತೀರಿ. ಹಾಗೆ ನಿಮ್ಮ ಹಳೆಯ ಸಮಸ್ಯೆಗಳಿಗೆ ಈ ಸಮಯದಲ್ಲಿ ಸೂಕ್ತ ಪರಿಹಾರ ಪಡೆಯುತ್ತೀರಿ. ಕುಟುಂಬಸ್ಥರಲ್ಲಿ ನಿಮ್ಮ ಸಂಬಂಧ ಬಲವಾಗುತ್ತದೆ. ಅವಿವಾಹಿತರಿಗೆ ಶುಭ ಸುದ್ದಿಗಳು ಬರಲಿವೆ. ಈ ವರ್ಷ ನೀವುಂದುಕೊಂಡಿದ್ದ ಕೆಲಸ ಮುಗಿಯಲಿದೆ. ಹೊಸ ಆರಂಭಗಳಿಗೆ ಅಡಿಪಾಯ ಹಾಕಲಿದ್ದೀರಿ. ವಿದೇಶಿ ಪ್ರಯಾಣ, ದೇವಾಲಯ ಭೇಟಿಯಂತಹ ಕೆಲಸಕ್ಕೆ ನೀವು ಮುಂದಾಗುತ್ತೀರಿ. ನಿಮ್ಮ ದಾಂಪತ್ಯ ಜೀವನದಲ್ಲಿ ಸುಖ ಇರಲಿದೆ. ನಿಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉತ್ತಮ ನಿರ್ಧಾರಕ್ಕೆ ನೀವು ಮುಂದಾಗಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಪರಿಶೀಲಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications