Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕುಂಭ ರಾಶಿಯಲ್ಲಿ 15 ವರ್ಷದ ಬಳಿಕ ರಾಹು-ಮಂಗಳ ಸಂಯೋಗ: ಮೂರು ರಾಶಿಯವರಲ್ಲಿ ಆರ್ಥಿಕ ಸಮಸ್ಯೆ ಒತ್ತಡ!
ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳ ಸಂಚಾರವು ಪ್ರಮುಖ ವಿದ್ಯಮಾನ ಎಂದು ಪರಿಗಣಿಸಲಾಗುತ್ತದೆ. ಎಲ್ಲಾ ಗ್ರಹಗಳು ಸಹ ನಿರ್ದಿಷ್ಟ ಸಮಯದಲ್ಲಿ ರಾಶಿಯನ್ನು ಬದಲಾಯಿಸುವುದು ನೋಡಬಹುದು. ಅದ್ರಲ್ಲೂ ಮಂಗಳನ ಸಂಚಾರವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ಸಹ ನಾವು ನೋಡಬಹುದು. ಮಂಗಳನ ಸಂಚಾರವು ಧನಾತ್ಮಕ ರೀತಿಯಲ್ಲಿರುವುದು ಈಗ ಎಲ್ಲಾ ರಾಶಿಗಳಿಗೂ ಶುಭವಾಗುವ ಸೂಚನೆ ಸಿಕ್ಕಿದೆ.
ಮಂಗಳ ಅಭಿಜಿತ್ ನಕ್ಷತ್ರದಲ್ಲಿ ಸಂಚರಿಸುವುದು ಎಲ್ಲಾ ರಾಶಿಗಳಿಗೆ ಅದೃಷ್ಟ ತರಲಿದೆ. ಹಾಗೆ ನಿಮ್ಮ ಜೀವನದಲ್ಲಿ ಬಹುದೊಡ್ಡ ಕೆಲಸಗಳು ನಡೆಯಲಿವೆ. ಮಂಗಳನು ಗೆಲುವು, ಸಂಪತ್ತು, ಪ್ರಗತಿ, ಆಸ್ತಿ ವೃದ್ಧಿಯ ಸಂಕೇತ ಎನ್ನಲಾಗುತ್ತದೆ. ಜನವರಿ 24, 2026 ರ ಶನಿವಾರ ಸಂಜೆ 6:17 ಕ್ಕೆ ಮಂಗಳ ಗ್ರಹವು ಅಭಿಜಿತ್ ನಕ್ಷತ್ರವನ್ನು ಪ್ರವೇಶಿಸಿದೆ.

ಈ ಪ್ರವೇಶದ ಬಳಿಕ ಈಗ ಮಂಗಳನು ಮಕರ ರಾಶಿಯಿಂದ ಕುಂಭ ರಾಶಿಗೆ ಚಲಿಸಲಿದ್ದಾನೆ. ಆದ್ರೆ ಕುಂಭ ರಾಶಿಯಲ್ಲಿ ರಾಹು ಸಂಚರಿಸುತ್ತಿದ್ದಾನೆ. ಹಾಗೆ ಫೆ.23ರಂದು ಮಂಗಳನು ತನ್ನ ರಾಶಿ ಬದಲಾಯಿಸಲಿದ್ದಾನೆ. ಇದು ಮಂಗಳ ಹಾಗೂ ರಾಹುವಿನ ಸಂಯೋಗ ನೋಡಬಹುದು. ಕುಂಭ ರಾಶಿಯಲ್ಲಿ ಮಂಗಳ ಮತ್ತು ರಾಹುವಿನ ಸಂಯೋಗವು ಶುಭವೆಂದು ಪರಿಗಣಿಸಲಾಗುವುದಿಲ್ಲ.
ರಾಹುವನ್ನು ನೆರಳಿನ ಗ್ರಹವಾಗಿ ಪರಿಗಣಿಸಲಾಗಿದ್ದು, ರಾಹು ಬಹುತೇಕ ಎಲ್ಲಾ ಗ್ರಹಗಳೊಂದಿಗೆ ಸೇರಿದಾಗ ಅನಾನುಕೂಲವನ್ನು ತರಲಿದೆ. ಹಾಗೆ ವಿಶೇಷವಾಗಿ ಕುಂಭ ರಾಶಿಯಲ್ಲಿ ರಾಹು ಮಂಗಳ ಸೇರಿ ಅಂಗಾರಕ ಯೋಗ ಸೃಷ್ಟಿಸಲಿದ್ದಾನೆ. 15 ವರ್ಷಗಳ ಬಳಿಕ ಕುಂಭ ರಾಶಿಯಲ್ಲಿ ಈ ರೀತಿಯ ಯೋಗ ಸೃಷ್ಟಿಯಾಗುತ್ತಿದೆ. ಈ ಯೋಗವು ಹಲವು ರಾಶಿಯವರ ಬದುಕಿನಲ್ಲಿ ಅಚ್ಚರಿಯ ಬದಲಾವಣೆಗಳ ತರುವುದು ನೋಡಬಹುದು. ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ರಾಹುವಿನ ನಕಾರಾತ್ಮಕ ವಿಚಾರವು ಎಲ್ಲಾ ರಾಶಿಗಳ ಮೇಲೆಯೂ ಬೀಳಲಿದೆ. ಹಾಗಾದ್ರೆ ಯಾರಿಗೆಲ್ಲಾ ಅನಾನುಕೂಲವಿದೆ? ಯಾರಿಗೆ ಅಡ್ಡಿಗಳು ಉಂಟಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ವೃಷಭ ರಾಶಿ
ಕುಂಭ ರಾಶಿಯಲ್ಲಿ ಈ ಎರಡು ಗ್ರಹಗಳ ಸಂಯೋಗವು ವೃಷಭ ರಾಶಿಯವರಿಗೆ ನಿಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ನೀವು ಜಾಗರೂಕರಾಗಿರಬೇಕು. ವ್ಯಾಪಾರ ಪಾಲುದಾರಿಕೆಯಲ್ಲಿರುವವರಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು, ಅದು ಬಿರುಕುಗೆ ಕಾರಣವಾಗಬಹುದು. ನಿಮ್ಮ ಆತ್ಮವಿಶ್ವಾಸ ಕಡಿಮೆಯಾಗಬಹುದು ಮತ್ತು ನೀವು ಹೆಚ್ಚಿನ ಕೆಲಸದ ಒತ್ತಡವನ್ನು ಅನುಭವಿಸುವಿರಿ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಮುಂದೂಡಬಹುದು. ನಿರುದ್ಯೋಗಿಗಳಿಗೆ ಈ ಸಮಯದಲ್ಲಿ ಅವಕಾಶಗಳು ಕೈತಪ್ಪಬಹುದು. ಯಾರಿಗಾದರು ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳ ಎದುರಿಸಿದ್ದರೆ ಈ ಸಮಯದಲ್ಲಿ ನಿಮಗೆ ಮತ್ತಷ್ಟು ಆತಂಕಗ ಎದುರಿಸಬಹುದು.
ಸಿಂಹ ರಾಶಿ
ಕುಂಭ ರಾಶಿಯಲ್ಲಿ ರಾಹು-ಮಂಗಳನ ಸಂಚಾರವು ಅನಾನುಕೂಲಗಳ ತರಬಹುದು. ವ್ಯವಹಾರದಲ್ಲಿ ನೀವು ಆರ್ಥಿಕ ದೌರ್ಬಲ್ಯವನ್ನು ಅನುಭವಿಸಬಹುದು. ನೀವು ಬಯಸಿದ ಫಲಿತಾಂಶಗಳನ್ನು ಸಾಧಿಸದಿರಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿ ನಿರೀಕ್ಷೆಯಂತೆ ಉಳಿಯುತ್ತದೆ, ಆದರೆ ಕೆಲವು ಅನಿರೀಕ್ಷಿತ ವೆಚ್ಚಗಳು ವಿಷಯಗಳನ್ನು ಅಡ್ಡಿಪಡಿಸಬಹುದು ಮತ್ತು ಒತ್ತಡವನ್ನು ಉಂಟುಮಾಡಬಹುದು. ನಿಮ್ಮ ಆರ್ಥಿಕ ವಿಚಾರಗಳು ನಷ್ಟದಿಂದ ಕೂಡಿರಲಿದೆ. ಆದ್ರೆ ಈ ಸಮಯ ಮುಗಿದ ಬಳಿಕ ಈ ಸಮಸ್ಯೆಗಳು ಪರಿಹಾರವಾಗಲಿವೆ.
ಕುಂಭ ರಾಶಿ
ಕುಂಭ ರಾಶಿಯಲ್ಲಿನ ಈ ಮಂಗಳ-ರಾಹುವಿನ ಸಂಯೋಗವು ಹಲವು ರೀತಿಯ ಅನಾನುಕೂಲಗಳ ತರಬಹುದು. ಉದ್ಯೋಗ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಬಹುದು. ನಿಮ್ಮ ಖರ್ಚುಗಳು ದಿಢೀರ್ ಏರಿಕೆಯಾಗಬಹುದು. ಅನೇಕರಲ್ಲಿ ಈ ಸಮಯವು ವ್ಯವಹಾರ, ವ್ಯಾಪಾರ, ಹೂಡಿಕೆ ಸಂಬಂಧಿ ಸಮಸ್ಯೆಗಳಿಂದ ತುಂಬಿರಲಿದೆ. ಮಕ್ಕಳ ಕುರಿತಾದ ವಿಚಾರವೊಂದು ನಿಮ್ಮಲ್ಲಿ ಚಿಂತೆ ತರಬಹುದು. ನಿಮಗೆ ಸೇರಬೇಕಿದ್ದ ವಸ್ತು ಮತ್ತಷ್ಟು ವಿಳಂಬವಾಗಬಹುದು. ಕೌಟುಂಬಿಕ ವಿಚಾರವಾಗಿ ಅಡ್ಡಿಗಳ್ನು ಎದುರಿಸುತ್ತೀರಿ.



Click it and Unblock the Notifications