Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2026ರಲ್ಲಿ ರಾಹು ಕೇತು ಸಂಚಾರ: ಈ ರಾಶಿಗಳ ಬದುಕು ಬದಲು! ಹೊಡೆಯಲಿದೆ ಜಾಕ್‌ಪಾಟ್
ವೈದಿಕ ಜ್ಯೋತಿಷ್ಯದ ಪ್ರಕಾರ ಒಂಬತ್ತು ಗ್ರಹಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ರಾಶಿಗಳ ಬದಲಾಯಿಸುವುದು ನೋಡಬಹುದು. ಇದು ಮಾನವ ಜೀವನದ ಮೇಲೆ ಪರಿಣಾಮ ಬೀರಲಿದೆ. ಅದ್ರಲ್ಲೂ ರಾಹು ಮತ್ತು ಕೇತುವನ್ನು ಪ್ರಮುಖ ಗ್ರಹಗಳೆಂದು ಪರಿಗಣಿಸಲಾಗಿದೆ. ಹಾಗೆ ನವೆಂಬರ್‌ನಲ್ಲಿ ರಾಹು ಹಾಗೂ ಕೇತುವಿನ ಸಂಚಾರವು ಹಲವು ರೀತಿಯಾಗಿ ಶುಭ ಹಾಗೂ ಅಶುಭ ಉಂಟು ಮಾಡಲಿವೆ.
ಹಾಗೆ 2026ರಲ್ಲಿ ನೆರಳು ಗ್ರಹಗಳೆಂದು ಪರಿಗಣಿಸಲಾದ ರಾಹು ಮತ್ತು ಕೇತು ಗ್ರಹಗಳ ಸ್ಥಾನಗಳಲ್ಲಿ ಬದಲಾವಣೆಗಳು ಕಂಡುಬರುತ್ತವೆ. ಡಿಸೆಂಬರ್ 05, 2026 ರಂದು ರಾಹು-ಕೇತು ಸಂಚಾರ ನಡೆಯಲಿದೆ. ಈ ಸಮಯದಲ್ಲಿ ರಾಹು ಶನಿಯ ಮಕರ ರಾಶಿಗೆ ಮತ್ತು ಕೇತು ಚಂದ್ರನ ಕರ್ಕ ರಾಶಿಗೆ ಸ್ಥಳಾಂತರಗೊಳ್ಳುತ್ತಾರೆ. ಈ ರಾಹು-ಕೇತು ಸಂಚಾರದ ಪ್ರಭಾವವು ಎಲ್ಲಾ ರಾಶಿ ಜನರ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಬಹುದು.

ರಾಹು ಕೇತುವಿನ ಈ ಪರಿಣಾಮವು ಹಲವು ರಾಶಿಗಳ ಮೇಲೆ ಉಂಟಾಗುತ್ತದೆ. ಮುಖ್ಯವಾಗಿ ಕೆಲವು ರಾಶಿಗೆ ಈ ಸಂಚಾರದಿಂದಾಗಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತವೆ. ಹಾಗೆ ಇನ್ನು ಕೆಲವು ರಾಶಿಗಳು ಈ ಚಲನೆಯಿಂದ ಸಮಸ್ಯೆ ಕೂಡ ಎದುರಿಸಬಹುದು. ಹಾಗಾದ್ರೆ 2026ರಲ್ಲಿ ರಾಹು ಹಾಗೂ ಕೇತುವಿನ ಚಲನೆಯಿಂದಾಗಿ ಯಾರಿಗೆಲ್ಲಾ ಶುಭದಾಯಕ ಯಾರಿಗೆ ಅನುಕೂಲಗಳಿವೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ತುಲಾ ರಾಶಿ
2026 ರಲ್ಲಿ ರಾಹು-ಕೇತು ಸಂಚಾರವು ತುಲಾ ರಾಶಿಯವರಿಗೆ ತುಂಬಾ ಒಳ್ಳೆಯದಾಗಿರುತ್ತದೆ. ಈ ಸಂಚಾರದ ಸಮಯದಲ್ಲಿ, ರಾಹು 4ನೇ ಮನೆಗೆ ಮತ್ತು ಕೇತು 10ನೇ ಮನೆಗೆ ಸ್ಥಳಾಂತರಗೊಳ್ಳುತ್ತಾರೆ. ಇದರಿಂದಾಗಿ ಈ ಜನರಿಗೆ ಹೊಸ ಮನೆ ಮತ್ತು ವಾಹನವನ್ನು ಖರೀದಿಸಲು ಅವಕಾಶಗಳು ಸಿಗುತ್ತವೆ. ವೃತ್ತಿಜೀವನದಲ್ಲಿ ಉತ್ತಮ ಪ್ರಗತಿ ಇರುತ್ತದೆ. ನೀವು ಹೊಸದಾಗಿ ಉದ್ಯೋಗ ಆರಂಭಿಸುವ ಆಲೋಚನೆಯಲ್ಲಿದ್ದರೆ ಹಾಗೆ ಉದ್ಯೋಗ ಬದಲಿಸುವ ನಿಮ್ಮ ಬಯಕೆಯನ್ನು ಈಡೇರಿಸಿಕೊಳ್ಳಬಹುದು. ಆರ್ಥಿಕ ಸ್ಥಿತಿ ಸುಧಾರಣೆ ನೋಡಬಹುದು. ಆರ್ಥಿಕ ಲಾಭದತ್ತ ನಿಮ್ಮ ಜೀವನ ರೂಪುಗೊಳ್ಳಲಿದೆ. ಅವಿವಾಹಿತರಲ್ಲಿ ಇದ್ದಂತಹ ವಿವಾಹ ಸಂಬಂಧಿ ಅಡೆತಡೆಗಳು ನಿವಾರಣೆಯಾಗಲಿದೆ.
ಧನು ರಾಶಿ
2026 ರಲ್ಲಿ ರಾಹು-ಕೇತು ಸಂಚಾರವು ಧನು ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ರಾಹು 2 ನೇ ಮನೆಗೆ ಮತ್ತು ಕೇತು 8ನೇ ಮನೆಗೆ ಸ್ಥಳಾಂತರಗೊಳ್ಳುತ್ತಾರೆ. ಇದರಿಂದಾಗಿ ಧನು ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ನಿಮ್ಮ ಸಾಲದ ಪ್ರಮಾಣ ಕಡಿಮೆಯಾಗಲಿದೆ. ಆಪ್ತರಿಂದ ಬರಬೇಕಿದ್ದ ಹಣ ನಿಮ್ಮ ಕೈ ಸೇರಲಿದೆ. ಹೂಡಿಕೆ, ಉಳಿತಾಯದ ವಿಚಾರದಲ್ಲಿ ನಿಮಗೆ ಧನಾತ್ಮಕ ವಿಚಾರಗಳಿವೆ. ವಿದ್ಯಾರ್ಥಿಗಳಿಗೆ ಈ ಸಮಯ ಬಹಳ ಉತ್ತಮವಾಗಿರಲಿದೆ. ಈ ವರ್ಷ ನಿಮ್ಮ ದೊಡ್ಡ ಕನಸೊಂದನ್ನು ಈಡೇರಿಸಿಕೊಳ್ಳುತ್ತೀರಿ.
ವೃಷಭ ರಾಶಿ
2026 ರಲ್ಲಿ ರಾಹು-ಕೇತು ಸಂಚಾರವು ವೃಷಭ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಈ ಸಂಚಾರದ ಸಮಯದಲ್ಲಿ, ರಾಹು 9ನೇ ಮನೆಗೆ ಮತ್ತು ಕೇತು 3ನೇ ಮನೆಗೆ ಸ್ಥಳಾಂತರಗೊಳ್ಳುತ್ತಾರೆ. ನಿಮ್ಮ ಹಲವು ಕೌಟುಂಬಿಕ ಸಮಸ್ಯೆಗಳು ನಿವರಣೆಯಾಗಲಿದೆ. ಈ ವರ್ಷ ನೀವು ಬಯಸಿದಂತೆ ದೊಡ್ಡ ವಸ್ತುವೊಂದನ್ನು ಖರೀದಿಸಬಹುದು. ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ಬಾಕಿ ಇರುವ ಎಲ್ಲಾ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಕೆಲಸ ಮಾಡುತ್ತಿರುವವರಿಗೆ ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಅವಕಾಶಗಳು ಸಿಗುತ್ತವೆ. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ, ಈ ಅವಧಿಯಲ್ಲಿ ನೀವು ಅದನ್ನು ಪ್ರಾರಂಭಿಸಿದರೆ ನಿಮಗೆ ಉತ್ತಮ ಲಾಭ ಸಿಗಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದು)



Click it and Unblock the Notifications