Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಹು-ಕೇತು ನಕ್ಷತ್ರ ಬದಲು: ಜುಲೈ 20ರಿಂದ ಯಾರಿಗೆಲ್ಲಾ ಲಾಭದಾಯಕ ನೋಡಿ!
ರಾಹು ಹಾಗೂ ಕೇತುವಿನ ಸಂಚಾರವನ್ನು ಜ್ಯೋತಿಷ್ಯದಲ್ಲಿ ಅತ್ಯಂತ ಪ್ರಮುಖ ವಿದ್ಯಮಾನವಾಗಿ ಪರಿಗಣಿಸಲಾಗಿದೆ. ರಾಹು ಕೇತುಗಳನ್ನು ನೆರಳಿನ ಗ್ರಹಗಳೆಂದು ಕರೆಯಲಾಗಿದೆ. ರಾಹು ಹಾಗೂ ಕೇತು ಯಾವ ರಾಶಿಯಲ್ಲಿ ಚಲಿಸಲಿದ್ದಾರೋ ಅಲ್ಲಿ ಶುಭ ಹಾಗೂ ಅಶುಭ ಕಾರಕಗಳ ನೋಡಬಹುದು. ಆದರೂ ಬಹುತೇಕರಲ್ಲಿ ರಾಹು ಕೇತು ಅಶುಭ ಕಾರಣಲಿಂದಲೇ ಗುರುತಿಸಲಾಗತ್ತದೆ.
ಜಾತಕದಲ್ಲಿ ಅವುಗಳ ಸ್ಥಾನವು ವ್ಯಕ್ತಿಯ ಕೆಲಸ, ವೃತ್ತಿ, ಉದ್ಯೋಗ ಮತ್ತು ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದ ಪ್ರಕಾರ ಕೇತು ಜುಲೈ 20, 2025 ರಂದು ತನ್ನ ನಕ್ಷತ್ರ ಬದಲಾಯಿಸಲಿದ್ದಾನೆ. ಕೇತು ಪೂರ್ವ ಪಾಲ್ಗುಣಿ ನಕ್ಷತ್ರದಲ್ಲಿ ಚಲಿಸಲಿದ್ದಾನೆ. ಹಾಗೆ ರಾಹು ಕೂಡ ಪೂರ್ವ ಭಾದ್ರಪದ ನಕ್ಷತ್ರಕ್ಕೆ ಚಲಿಸಲಿದ್ದಾನೆ.

ಜಾತಕದಲ್ಲಿ ರಾಹು ಹಾಗೂ ಕೇತುವಿನ ಸ್ಥಾನವು ವೃತ್ತಿ, ಉದ್ಯೋಗ, ಸಂಬಂಧ, ಆರ್ಥಿಕ ಸ್ಥಿತಿ ಹೀಗೆ ಹಲವು ವಿಚಾರಗಳ ಮೇಲೆ ಪ್ರಭಾವ ಉಂಟು ಮಾಡಲಿದೆ. ಹಾಗೆ ರಾಹು ಹಾಗೂ ಕೇತುವಿನ ಪರಿಣಾಮವು ಎಲ್ಲಾ ರಾಶಿಗಳ ಮೇಲೂ ಬೀರುವುದು ನೋಡಬಹುದು. ಹಾಗಾದ್ರೆ ಜುಲೈ 20ರಿಂದ ರಾಹು ಹಾಗೂ ಕೇತುವಿನ ಸಂಚಾರದಿಂದಾಗಿ ಯಾವೆಲ್ಲಾ ರಾಶಿಯವರಿಗೆ ಯಾರಿಗೆಲ್ಲಾ ಲಾಭ ಹಾಗೆ ಯಾರಿಗೆಲ್ಲಾ ನಷ್ಟದ ಭೀತಿ ಇದೆ ಎಂದು ನಾವಿಂದು ತಿಳಿದುಕೊಳ್ಳೋಣ.
ಕನ್ಯಾ ರಾಶಿ
ರಾಹು-ಕೇತು ತನ್ನ ನಕ್ಷತ್ರಗಳ ಬದಲಾಯಿಸುವುದರಿಂದ ಕನ್ಯಾ ರಾಶಿಯವರಲ್ಲಿ ಅತ್ಯಧಿಕ ಲಾಭ ನೋಡಬಹುದು. ಕನ್ಯಾ ರಾಶಿಯಲ್ಲಿ ಇದ್ದಂತಹ ಸಮಸ್ಯೆಗಳು ಪರಿಹಾರವಾಗಲಿವೆ. ಪ್ರೇಮ ಸಂಬಂಧಗಳು ಸುಧಾರಿಸಲಿವೆ. ಉದ್ಯೋಗ, ವ್ಯವಹಾರ ಸಂಬಂಧವಾಗಿ ನಿಮಗಿದ್ದ ಸಮಸ್ಯೆಗಳು ನಿವಾರಣೆಯಾಗಲಿದೆ. ವಿದ್ಯಾರ್ಥಿಗಳು ಈ ಸಮಯದಲ್ಲಿ ಉತ್ತಮ ದಿನಗಳ ನೋಡುವಿರಿ. ನಿಮ್ಮ ಸ್ವಾಭಿಮಾನ, ಆತ್ಮವಿಶ್ವಾಸ ಹೆಚ್ಚಾಗುವಂತಹ ಕೆಲಸಗಳ ಮಾಡುವಿರಿ. ಮನೆಯಲ್ಲಿ ಹಣಕಾಸು ವಿಚಾರವಾಗಿ ಇದ್ದಂತಹ ಸಮಸ್ಯೆ ನಿವಾರಣೆಯಾಗಲಿದೆ. ಆರೋಗ್ಯದಲ್ಲೂ ಸುಧಾರಣೆ ನೋಡಬಹುದು.
ತುಲಾ ರಾಶಿ
ರಾಹು ಕೇತುವಿನ ಸಂಚಾರವು ನಿಮ್ಮ ಖ್ಯಾತಿ ಮತ್ತು ಸಮಾಜದಲ್ಲಿ ನಿಮ್ಮ ಘನತೆ ಹೆಚ್ಚಿಸುವ ಕಾರ್ಯಕ್ಕೆ ಸಹಕಾರಿಯಾಗಲಿದೆ. ಸಂಬಂಧಗಳು ಮೊದಲಿಗಿಂತ ಉತ್ತಮವಾಗಿರುತ್ತವೆ, ಆದ್ದರಿಂದ ಮನಸ್ಸು ಸಂತೋಷವಾಗಿರುತ್ತದೆ. ವಿದೇಶಕ್ಕೆ ಸಂಬಂಧಿಸಿದ ಕೆಲಸಗಳು ಯಶಸ್ವಿಯಾಗುತ್ತವೆ ಮತ್ತು ಹೊಸ ವ್ಯಾಪಾರ ಅವಕಾಶಗಳು ಲಭ್ಯವಿರುತ್ತವೆ. ದಾಂಪತ್ಯ ಸಂಬಂಧಿ ಸಂತೋಷಕ್ಕೆ ನೀವು ಒಳಗಾಗುತ್ತೀರಿ. ಮಕ್ಕಳ ಕುರಿತಾದ ಚಿಂತೆಯೊಂದು ದೂರಗಲಿದೆ. ಹಣಕಾಸು ವಿಚಾರದಲ್ಲಿ ನೀವು ಅಂದುಕೊಂಡ ಹಲವು ಕೆಲಸಗಳು ಅಡ್ಡಿಯಿಲ್ಲದೆ ನಡೆಯಲಿದೆ. ವಿದೇಶ ಪ್ರವಾಸದ ಲಾಭವಿದೆ.
ಧನು ರಾಶಿ
ರಾಹು ಹಾಗೂ ಕೇತು ತಮ್ಮ ನಕ್ಷತ್ರ ಬದಲಾಯಿಸುವುದರಿಂದಾಗಿ ಧನು ರಾಶಿಯವರಿಗೆ ಶುಭಕರ ದಿನಗಳಿವೆ. ಮನೆ, ಆಸ್ತಿ, ಜಮೀನು ವಿಚಾರವಾಗಿ ಇದ್ದಂತಂಹ ಅಡೆತಡೆಗಳು ನಿವಾರಣೆಯಾಗಲಿದೆ. ಹಣಕಾಸು ವಿಚಾರವಾಗಿ ನಿಮಗೆ ಶುಭಕರವಾಗಬಹುದು, ಬಾಕಿ ಹಣ ನಿಮ್ಮ ಕೈ ಸೇರಬಹುದು, ನಿಮ್ಮ ಸಾಲ ಕೂಡ ಮರುಪಾವತಿ ಆಗಬಹುದು. ಬ್ಯಾಂಕ್ ವಿಚಾರಗಳಲ್ಲಿ ನಿಮಗೆ ಶುಭವಿದೆ. ಸರ್ಕಾರಿ ನೌಕರರು ಈ ಸಮಯದಲ್ಲಿ ಬಡ್ತಿ ಹಾಗೂ ವರ್ಗಾವಣೆ ಸಂಬಂಧವಾಗಿ ಎದುರಿಸಿದ್ದ ಕಷ್ಟಗಳು ನಿವಾರಣೆಯಾಗಬಹುದು. ಹಣಕಾಸು ವಿಚಾರವು ನಿಮ್ಮ ದಾಂಪತ್ಯದಲ್ಲಿ ಬಿರುಕಿಗೆ ಅಥವಾ ಮನಸ್ತಾಪಕ್ಕೆ ಕಾರಣವಾಗಿದ್ದರೆ ನಿವಾರಣೆಯಾಗಲಿದೆ. ಉದ್ಯೋಗ ಸಂಬಂಧವಾಗಿ ಇದ್ದ ಒತ್ತಡ ಕಡಿಮೆಯಾಗಲಿದೆ. ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮವಾಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications