Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಾಳೆ ರಾಹು-ಕೇತು ನಕ್ಷತ್ರ ಬದಲಾವಣೆ: ಈ ರಾಶಿಯವರಲ್ಲಿ ಶುಭಗಳಿಗೆ ಆರಂಭ, ಧನಾತ್ಮಕ ದಿನಗಳ ಆಗಮನ!
ಜ್ಯೋತಿಷ್ಯದಲ್ಲಿ ರಾಹು ಹಾಗೂ ಕೇತುವನ್ನು ನೆರಳಿನ ಗ್ರಹಗಳೆಂದು ಪರಿಗಣಿಸಲಾಗಿದೆ. ಏಕೆಂದರೆ ನೀವು ಈ ಗ್ರಹಗಳನ್ನು ನೋಡಲಾಗುವುದಿಲ್ಲ. ಅದ್ರೆ ಈ ಎರಡೂ ಗ್ರಹಗಳು ಎಲ್ಲಾ ರಾಶಿಗಳಲ್ಲಿಯೂ ಚಲಿಸಲಿವೆ. ಹಾಗೆ ಎಲ್ಲಾ ರಾಶಿಗಳ ಮೇಲೆಯೂ ಇದು ಪರಿಣಾಮ ಬೀರಲಿದೆ. ರಾಹುವನ್ನು ಭ್ರಮೆ, ಆಸೆ, ದೋಷಗಳ ಗ್ರಹವೆಂದು ಪರಿಗಣಿಸಲಾಗುತ್ತದೆ.
ಕೇತುವನ್ನು ಆಧ್ಯಾತ್ನಿಕವಾಗಿ ಮುಖ್ಯ ಎಂದು ಹೇಳಲಾಗಿದೆ. ವಿಮೋಚನೆ, ತ್ಯಾಗ, ನಿರ್ಲಿಪ್ತತೆ, ಹಾಗೆ ಆಸೆಗಳ ಕಾರಣದಿಂದ ಮುಖ್ಯ ಎಂದು ಹೇಳಲಾಗಿದೆ. ಈ ಎರಡೂ ಗ್ರಹಗಳು ಕಳೆದ 18 ತಿಂಗಳ ಕಾಳ ಒಂದೇ ಗ್ರಹದಲ್ಲಿ ಚಲಿಸಲಿವೆ. ಈ ಎರಡು ಗ್ರಹಗಳು ರಾಶಿ ಬದಲಾಯಿಸುವ ಜೊತೆಗೆ ನಕ್ಷತ್ರ ಕೂಡ ಬದಲಾಯಿಸುವುದು ನೋಡಬಹುದು.

ಹೀಗೆ ರಾಹು ಹಾಗೂ ಕೇತು ತಮ್ಮ ರಾಶಿ ಹಾಗೂ ನಕ್ಷತ್ರ ಬದಲಾಯಿಸಿದಾಗಲೆಲ್ಲಾ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಬಹುದು. ಸದ್ಯ ಈಗ ನವೆಂಬರ್ 23ರ ಅಂದರೆ ನಾಳೆ ರಾಹು ಮತ್ತು ಕೇತು ತಮ್ಮ ನಕ್ಷತ್ರ ಬದಲಾಯಿಸುತ್ತಿವೆ. ರಾಹು ತನ್ನದೇ ಆದ ನಕ್ಷತ್ರವಾದ ಶತಭಿಷ ನಕ್ಷತ್ರಕ್ಕೆ ಮತ್ತು ಕೇತು ಪೂರ್ವ ಫಲ್ಗುಣಿ ನಕ್ಷತ್ರದ ಎರಡನೇ ಪಾದಕ್ಕೆ ಚಲಿಸುತ್ತಾನೆ.
ರಾಹು ಮತ್ತು ಕೇತುವಿನ ಈ ನಕ್ಷತ್ರ ಬದಲಾವಣೆಯು ಯಾವೆಲ್ಲಾ ರಾಶಿಗಳ ಮೇಲೆ ಪರಿಣಾಮ ಉಂಟು ಮಾಡಲಿದೆ ಯಾರಿಗೆ ಶುಭ ತರಲಿದೆ ಅನ್ನೋದನ್ನು ತಿಳಿದುಕೊಳ್ಳೋಣ.
ಕರ್ಕಾಟಕ ರಾಶಿ
ರಾಹು ಮತ್ತು ಕೇತುವಿನ ಸಂಚಾರದಿಂದಾಗಿ ಕರ್ಕಾಟಕ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಗಮನಾರ್ಹ ಬದಲಾವಣೆಗಳ ನೋಡುತ್ತಾರೆ. ಬಡ್ತಿ ಪಡೆಯುವ ಸಾಧ್ಯತೆಗಳೂ ಇವೆ. ಕೇತುವಿನ ಕೃಪೆಯಿಂದ ನೀವು ಉತ್ತಮ ಆರ್ಥಿಕ ಲಾಭಗಳ ಪಡೆಯುತ್ತೀರಿ. ಕುಟುಂಬದೊಂದಿಗೆ ಸಂಬಂಧಗಳು ಸುಧಾರಿಸುತ್ತವೆ. ಹೊಸ ವ್ಯಾಪಾರ ವ್ಯವಹಾರ ಸಂಬಂಧವಾಗಿ ಇದ್ದಂತಹ ಅಡ್ಡಿಗಳು ನಿವಾರಣೆ ಆಗಲಿದೆ. ನಿಮ್ಮಿಂದಾಗಿ ಹಣಕಾಸಿನ ಸಮಸ್ಯೆಗಳು ದೂರಾಗಲಿದೆ, ಇದು ಕುಟುಂಬದಲ್ಲಿ ನೆಮ್ಮದಿ ತರಲಿದೆ. ನೀವು ಬಹುಸಮಯದಿಂದ ಮಾಡಬೇಕೆಂದು ವಯಸಿದ್ದ ಕೆಲಸವನ್ನು ಪೂರ್ಣ ಮಾಡುವಿರಿ.
ಮಿಥುನ ರಾಶಿ
ರಾಹು ಮತ್ತು ಕೇತುವಿನ ಸಂಚಾರದಿಂದಾಗಿ ಮಿಥುನ ರಾಶಿಯವರಿಗೆ ಧೈರ್ಯ ನೀಡುವ ಕೆಲಸ ಮಾಡಲಿದೆ. ನಿಮ್ಮ ದೊಡ್ಡ ಕೆಲಸಗಳಲ್ಲಿ ಯಶಸ್ಸು ಪಡೆಯಲಿದ್ದೀರಿ. ದೀರ್ಘಕಾಲದಿಂದ ಮಾತುಕತೆಯ ವೈಫಲ್ಯದಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣ ಮಾಡುವಿರಿ. ಕೌಟುಂಬಿಕ ಸಂಬಂಧಗಳಲ್ಲಿ ಇದ್ದಂತಹ ಮನಸ್ತಾಪ ಹಾಗೂ ಮುನಿಸುಗಳು ನಿವಾರಣೆಯಾಗಲಿದೆ. ವೃತ್ತಿ ಜೀವನದಲ್ಲಿ ಸಂಪೂರ್ಣ ಯಶಸ್ಸು ನೋಡಬಹುದು. ಸರ್ಕಾರಿ ಕೆಲಸದಂತಹ ಲಾಭವಿದೆ. ಸಮಾಜದಲ್ಲಿ ನಿಮ್ಮ ಗೌರವ ಘನತೆ ಹೆಚ್ಚಾಗುವ ಸಮಯವೂ ಹೌದು. ನಿಮಗಾಗಿ ಐಷಾರಾಮಿ ವಸ್ತುವೊಂದನ್ನು ಖರೀದಿಸಲು ಇದು ಸೂಕ್ತ ಸಮಯ ಆಗಿರಲಿದೆ.
ಕುಂಭ ರಾಶಿ
ರಾಹು ಮತ್ತು ಕೇತುವಿನ ಸಂಚಾರದಿಂದಾಗಿ ಕುಂಭ ರಾಶಿಯವರಿಗೆ ಉತ್ತಮ ಯಶಸ್ಸು ಮತ್ತು ಆರ್ಥಿಕ ಲಾಭವಾಗುತ್ತದೆ. ಮನೆಯ ವಾತಾವರಣ ಸಂತೋಷಕರವಾಗಿರುತ್ತದೆ. ವಿದ್ಯಾರ್ಥಿಗಳ ಸೃಜನಶೀಲತೆ ಹೆಚ್ಚಾಗುತ್ತದೆ. ಆದಾಯದಲ್ಲಿ ಉತ್ತಮ ಹೆಚ್ಚಳವನ್ನು ನೀವು ನೋಡಬಹುದು. ಕೆಲಸದಲ್ಲಿರುವ ಉನ್ನತ ಅಧಿಕಾರಿಗಳು ನಿಮ್ಮ ಕೆಲಸದಿಂದ ತೃಪ್ತರಾಗುತ್ತಾರೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಚೆನ್ನಾಗಿ ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಮೌಲ್ಯ ಮತ್ತು ಗೌರವ ಹೆಚ್ಚಾಗುತ್ತದೆ. ಸಂಬಂಧಗಳು ಸಿಹಿಯಾಗುತ್ತವೆ. ನೀವು ನಿರ್ಧಾರಗಳೊಂದಿಗೆ ಜಾಗರೂಕರಾಗಿರಬೇಕು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











