Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಹು ಕೇತು ಸಂಚಾರದಿಂದಾಗಿ 2025ರಲ್ಲಿಈ 5 ರಾಶಿಗಳಿಗೆ ಆರ್ಥಿಕ ಸಮಸ್ಯೆಯೇ ಇರಲ್ಲ
ಜ್ಯೋತಿಷ್ಯದಲ್ಲಿ ರಾಹು ಮತ್ತು ಕೇತುವನ್ನು ನೆರಳಿನ ಗ್ರಹವೆಂದು ಪರಿಗಣಿಸಲಾಗುವುದು. ರಾಹು ಮತ್ತು ಕೇತು 18 ತಿಂಗಳಿಗೊಮ್ಮೆ ರಾಶಿ ಬದಲಾವಣೆ ಮಾಡುತ್ತದೆ. 2025ರಲ್ಲಿಯೂ ಈ ಗ್ರಹಗಳು ರಾಶಿ ಬದಲಾವಣೆ ಮಾಡಲಿದೆ. ರಾಹು ಮೀನ ರಾಶಿಗೆ ಕೇತು ಕನ್ಯಾ ರಾಶಿಗೆ ಸಂಚಾರ ಮಾಡಲಿದೆ, ಹೊಸ ವರ್ಷದ ಮೇ ತಿಂಗಳಿನಲ್ಲಿ ರಾಶಿ ಬದಲಾವಣೆ ಮಾಡಲಿದೆ, ಈ ರೀತಿ ರಾಶಿ ಬದಲಾವಣೆಯಾದಾಗ 5 ರಾಶಿಯವರಿಗೆ ಇವುಗಳ ಪ್ರಭಾವ ಅದ್ಭುತವಾಗಿರಲಿದೆ:
ಯಾವೆಲ್ಲಾ ರಾಶಿಗಳಿಗೆ ಈ ಸಂಚಾರ ಧನಾತ್ಮಕವಾಗಿರಲಿದೆ:
ಮೇಷ ರಾಶಿ
ಮೇಷ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಅನೇಕ ಹೊಸ ಅವಕಾಶಗಳು ದೊರೆಯಲಿದೆ, ಹಣಕಾಸಿನಲ್ಲಿ ಅಭಿವೃದ್ಧಿ ಕಂಡು ಬರಲಿದೆ, ರಾಹು ಸಂಚಾರ ನಿಮಗೆ ಅನಿರೀಕ್ಷತ ಲಾಭ ತಂದು ಕೊಡಬಹುದು, ವೃತ್ತಿ ಬದುಕಿನಲ್ಲಿ ಅದ್ಭುತ ಪ್ರಯೋಜನ ಪಡೆಯುತ್ತೀರಿ. ನೀವು ನಿಮ್ಮ ಗುರಿ ಮುಟ್ಟುವಲ್ಲಿ ಯಶಸ್ಸು ಪಡೆಯುತ್ತೀರಿ.

ವೃತ್ತಿ ಬದುಕಿನಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುವುದು: ವೃತ್ತಿ ಜೀವನದಲ್ಲಿ ಬಡ್ತಿ ದೊರೆಯಲಿದೆ. ಬೇರೆ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ ನೀವು ಬಯಸಿದ ಕೆಲಸ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ. ಹಣಕಾಸಿನ ವಿಚಾರದಲ್ಲಿಯೂ 2025ರ ವರ್ಷ ನಿಮಗೆ ತುಂಬಾನೇ ಅನುಕೂಲಕರವಾಗಿರಲಿದೆ.
ಮಿಥುನ ರಾಶಿ
ಈ ಗ್ರಹಗಳ ಸಂಚಾರ ಮಿಥುನ ರಾಶಿಯವರಿಗೆ ತುಂಬಾ ಪ್ರಯೋಜನ ನೀಡಲಿದೆ, ವೃತ್ತಿ ಬದುಕಿನಲ್ಲಿ ಬೆಳವಣಿಗೆ ಕಾಣಬಹದು, ವ್ಯಾಪಾರಸ್ಥರು ಕೂಡ ಒಳ್ಳೆಯ ಲಾಭ ಪಡೆಯುತ್ತಾರೆ, ಗ್ರಹಗಳ ಪ್ರಭಾವದಿಂದ ನಿಮ್ಮ ಆರ್ಥಿಕಸ್ಥಿತಿ ತುಂಬಾ ಚೆನ್ನಾಗಿರಲಿದೆ. ಅಪೂರ್ಣವಾಗಿರುವ ಕೆಲಸಗಳು ಪೂರ್ಣಗೊಳ್ಳಲಿದೆ. ಗಾಡಿ ಖರೀದಿ ಮಾಡಬೇಕು ಅಥವಾ ಆಸ್ತಿ ಖರೀದಿಸಬೇಕೆಂದಿದ್ದರೆ 2025ರಲ್ಲಿ ಹಣಕಾಸಿನ ಪರಿಸ್ಥಿತಿ ತುಂಬಾ ಚೆನ್ನಾಗಿರುವುದರಿಂದ ನಿಮ್ಮಾಸೆ ಈಡೇರಲಿದೆ.
ಇನ್ನು ಸರಿಯಾಗಿ ಪ್ಲ್ಯಾನ್ ಮಾಡಿ ಹೂಡಿಕೆ ಮಾಡಿದರೆ ಉತ್ತಮ ಪ್ರಯೋಜನ ಪಡೆಯುತ್ತೀರಿ.
ವೃಶ್ಚಿಕ ರಾಶಿ
ರಾಹು ಮತ್ತು ಕೇತು ಸಂಚಾರ ವೃಶ್ಚಿಕ ರಾಶಿಯಲ್ಲಿ ಧನಾತ್ಮಕ ಬದಲಾವಣೆ ತರಲಿದೆ. ಆರ್ಥಿಕವಾಗಿ ತುಂಬಾ ಒಳ್ಳೆಯದಿದರಲಿದೆ. ಹಣಕಾಸಿನಲ್ಲಿ ಸ್ಥಿರತೆ ಕಾಣಬಹುದು, ಹಾಗಾಗಿ ಏನಾದರು ಖರೀದಿ ಮಾಡಲು ಅಥವಾ ಹೂಡಿಕೆ ಮಾಡಲು ಧೈರ್ಯ ಬರುವುದು. ಉದ್ಯೋಗದಲ್ಲಿ ಬದಲಾವಣೆಗೆ ಪ್ರಯತ್ನಿಸಿದರೆ ಇನ್ನಷ್ಟು ಒಳ್ಳೆಯ ಸಂಬಂಧದ ಕೆಲಸ ಸಿಗುವ ಸಾಧ್ಯತೆ ಇದೆ. ವಿದೇಶದಲ್ಲಿ ಕೆಲಸಕ್ಕೆ ಪ್ರಯತ್ನಿಸುತ್ತಿರುವವರೆಗೆ ಈ ಅವಧಿ ಅನುಕೂಲಕರವಾಗಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಕೇತು ಮತ್ತು ರಾಹುವಿನ ಪ್ರಭಾವ ಅನುಕೂಲಕರವಾಗಿರಲಿದೆ. ಹಣಕಾಸಿನ ಸ್ಥಿತಿ ಚೆನ್ನಾಗಿರಲದೆ, ಹೂಡಿಕೆಗೆ ತುಂಬಾ ಒರ್ಳಳೆಯದು. ಆಸ್ತಿ ವ್ಯವಹಾರ ಮಾಡುವವರು ಅತ್ಯುತ್ತಮ ಲಾಭ ಪಡೆಯಲು ಸಾಧ್ಯವಾಗುವುದು, ವೃತ್ತಿ ಜೀವನ ತುಂಬಾ ಚೆನ್ನಾಗಿರಲಿದೆ. ಹಣಕಾಸಿನ ಬಗ್ಗೆ ನಿಮ್ಮಲ್ಲಿ ಸರಿಯಾದ ಪ್ಲ್ಯಾನ್ ಇದ್ದರೆ ನೀವು ಸಂಪತ್ತು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು. ಹೂಡಿಕೆ ಬಗ್ಗೆ ಈ ಅವಧಿ ಅನುಕೂಲಕರವಾಗಿರಲಿದೆ.
ಮೀನ ರಾಶಿ
ರಾಹು ಮೀನ ರಾಶಿಗೆ ಸಂಚರಿಸಿದಾಗ ರಾಹು ನಿಮ್ಮ ಲಗ್ನ ಮನೆಯಲ್ಲಿದ್ದು ಅನುಕೂಲಕರ ಪ್ರಯೋಜನ ಪಡೆಯುವಿರಿ. ವೃತ್ತಿ ಬದುಕಿನಲ್ಲಿ ಅತ್ಯುತ್ತಮ ಅವಕಾಶ ಸಿಗಲಿದೆ, ಆರ್ಥಿಕವಾಗಿ ಬೆಳವಣಿಗೆ ಕಂಡುಬರಲಿದೆ, ರಾಹುವಿನ ಪ್ರಭಾವದಂದ ವ್ಯಾಪಾರಿಗಳು ಅತ್ಯುತ್ತಮ ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ವಾಹನ ಖರೀದಿ ಮಾಡಬೇಕು, ಹೊಸ ಮನೆ ಖರೀದಿ ಮಾಡಬೇಕು ಎಂದು ಇರುವವರಿಗೆ ಈ ಗ್ರಹಗಳ ಸಂಚಾರ ಅನುಕೂಲಕರವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications