ರಾಹು ನಿಮ್ಮ ರಾಶಿಯ ಈ ಮನೆಯಲ್ಲಿದ್ದರೆ ಆ ರಾಶಿಯವರು ಯಶಸ್ವಿನ ಉತ್ತಂಗ ತಲುಪುತ್ತಾರೆ!

ಜ್ಯೋತಿಷ್ಯದಲ್ಲಿ ರಾಹುವನ್ನು ನೆರಲಿನ ಗ್ರಹವೆಂದು ಪರಿಗಣಿಸಲಾಗಿದೆ. ಆದರೆ ಈ ರಾಹು ಅನುಕೂಲಕರ ಸ್ಥಾನದಲ್ಲಿದ್ದರೆ ಇದು ಬೀರುವ ಪ್ರಭಾವ ತುಂಬಾನೇ ಅನುಕೂಲಕರವಾಗಿದೆ, ಅದರಲ್ಲಿಯೂ ರಾಹು ಈ ಮನೆಯಲ್ಲಿದ್ದರೆ ಆ ರಾಶಿಯವರು ಆರ್ಥಿಕವಾಗಿ ತುಂಬಾ ಉತ್ತಮ ಪ್ರಯೋಜನ ಪಡೆಯುತ್ತಾರೆ:

Rahu In this house lucky To The Person

3, 6, 10, 11ನೇ ಮನೆ

ಒಬ್ಬ ವ್ಯಕ್ತಿಯ ರಾಶಿಯಲ್ಲಿ ರಾಹು ಮೂರು ಅಥವಾ ಆರು ಅಥವಾ 11ನೇ ಮನೆಯಲ್ಲಿದ್ದರೆ ಅವರು ತುಂಬಾನೇ ಒಳ್ಳೆಯ ಪ್ರಯೋಜನ ಪಡೆಯುತ್ತಾರೆ. ರಾಹು ಜನ್ಮ ಕುಂಡಲಿಯಲ್ಲಿ 10 ಅಥವಾ 12ನೇಮನೆಯಲ್ಲಿದ್ದರೆ ಆ ವ್ಯಕ್ತಿ ತುಂಬಾನೇ ಪ್ರಸಿದ್ಧಿಯನ್ನು ಪಡೆಯುತ್ತಾರೆ ಎಂದು ಹೇಳಲಾಗುವುದು.

ಮೂರನೇ ಮನೆ
ಜನ್ಮ ಕುಂಡಲಿಯಲ್ಲಿ ರಾಹು ಮೂರನೇ ಮನೆಯಲ್ಲಿದ್ದರೆ ನಿಮ್ಮೆಲ್ಲಾ ಆಸೆ ಈಡೇರಲಿದೆ, ನೀವು ಗುರಿ ಮುಟ್ಟಲು ಸಾಧ್ಯವಾಗುವುದು. ಇವರ ಸಂಹವಹನ ಶೈಲಿ, ವೃತ್ತಿ ಕೌಶಲ್ಯ ಚೆನ್ನಾಗಿರಲಿದೆ.

6ನೇ ಮನೆ
ರಾಹು 6ನೇ ಮನೆಯಲ್ಲಿ ಇದ್ದಾಗ ಆ ವ್ಯಕ್ತಿ ತುಂಬಾನೇ ಕ್ರಿಯೇಟಿವ್ ಆಗಿರಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಇರುವವರು, ಸ್ಟಾಕ್ ಮಾರ್ಕೆಟ್‌ನಲ್ಲಿ ತೊಡಗಿಸಿಕೊಂಡವವರು ಉತ್ತಮ ಪ್ರಯೋಜನ ಪಡೆಯಲಿದ್ದಾರೆ.

10ನೇ ಮನೆಯಲ್ಲಿದ್ದರೆ
ರಾಹು 10ನೇ ಮನೆಯಲ್ಲಿದ್ದಾಗ ಖಂಡಿತ ಯಶಸ್ವಿ ಗಳಿಸುತ್ತೀರಿ, ನೀವು ನಿಮ್ಮದೇ ಛಾಪು ಮೂಡಿಸುವಲ್ಲಿ ಯಶಸ್ವಿಯಾಗುತ್ತೀರಿ, ಆದರೆ ವೃತ್ತಿ ಬದುಕಿನಲ್ಲಿ ಕೆಲವೊಂದು ಕಾಂಟ್ರವರ್ಸಿ ಇರಬಹುದು, ಸವಾಲುಗಳು ಇರಬಹುದು, ಆದರೆ ತಾವು ಬಯಸಿದ ಎತ್ತರ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.

11ನೇ ಮನೆಯಲ್ಲಿ ರಾಹುವಿದ್ದರೆ
ರಾಹು 11ನೇ ಮನೆಯಲ್ಲಿ ಇದ್ದಾಗ ಆ ವ್ಯಕ್ತಿಯಲ್ಲಿ ಆಸೆ-ಆಕಾಂಕ್ಷೆ ತುಂಬಾ ಅಧಿಕವಿರಲಿದೆ, ಆದರೆ ಅವರು ಬದುಕಿನಲ್ಲಿ ಅಪಾರ ಯಶಸ್ಸು ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ.

ರಾಹುವಿನಿಂದ ಹೆಚ್ಚಿನ ಪರಿಹಾರ ದೊರೆಯಲು

ರಾಹು ಶಾಂತಿ ಪೂಜೆ ಮಾಡುವುದರಿಂದ ರಾಹುವಿನ ಕೆಟ್ಟ ಪ್ರಭಾವ ಕಡಿಮೆಯಾಗುವುದು.
ರಾಹುವಿಗೆ ಶನಿವಾರ ಸಾಸಿವೆಯೆಣ್ಣೆ ಅರ್ಪಿಸಿದರೆ ಒಳ್ಳೆಯದು
ಶನಿವಾರ ಬಡವರಿಗೆ ದಾನ ಮಾಡುವುದರಿಂದ ಶನಿ ಮಾತ್ರವಲ್ಲ ರಾಹುವಿನ ಕೃಪೆ ಕೂಡ ಸಿಗಲಿದೆ.
ದುರ್ಗ ಚಾಲೀಸ ಪಠಣೆ ಮಾಡುವುದು ಒಳ್ಳೆಯದು
ಪ್ರತಿದಿನ ಗಾಯತ್ರಿ ಮಂತ್ರ ಪಠಣೆ ಮಾಡುವುದು ಒಳ್ಳೆಯದು
ಸ್ನಾನದ ನೀರಿಗೆ ಸ್ವಲ್ಪ ಕಾಫಿ ಪುಡಿ ಹಾಕಿ ಸ್ನಾನ ಮಾಡಿದರೆ ಒಳ್ಳೆಯದು.

ರಾಹು ಈಗ ಮೀನ ರಾಶಿಯಲ್ಲಿದೆ, ಈ ವರ್ಷ ಪೂರ್ತಿ ರಾಹು ಮೀನ ರಾಶಿಯಲ್ಲಿಯೇ ಇದ್ದು 2025ಕ್ಕೆ ಕುಂಭ ರಾಶಿಗೆ ಸಂಚರಿಸಲಿದೆ.

ರಾಹು ಮೀನ ರಾಶಿಯಲ್ಲಿ ಇರುವ ಈ ಅವಧಿ ಈ ರಾಆಶಿಗಳಿಗೆ ಅಷ್ಟೊಂದು ಅನುಕೂಲಕರವಲ್ಲ

ಸಿಂಹ ರಾಶಿ

ಖರ್ಚುಗಳು ಹೆಚ್ಚಿರಲಿದೆ, ನಿಮ್ಮ ಅಗ್ಯತತೆಗಳು ಹಾಗೂ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಸಾಲ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಈ ರಾಶಿಯವರು ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು.

ಕನ್ಯಾ ರಾಶಿ

ಈ ಅವಧಿಯಲ್ಲಿ ಬದುಕಿನಲ್ಲಿ ಹಲವು ಅಡೆತಡೆಗಳು ಎದುರಾಗಬಹುದು, ವೈವಾಹಿಕ ಬದುಕಿನಲ್ಲಿ ಹೊಂದಾಣಿಕೆಯ ಕೊರತೆ ಇರಲಿದೆ, ಕೌಟುಂಬಿಕ ಸಮಸ್ಯೆಗಳು ಮನಸ್ಸಿನ ನೆಮ್ಮದಿ ಕಿತ್ತುಕೊಳ್ಳುತ್ತದೆ.

ಧನು ರಾಶಿ

ಧನು ರಾಶಿಯವರು ಆರ್ಥಿಕ ತೊಂದರೆಗಳನ್ನು ಎದುರಿಸಬಹುದು. ಅಲ್ಲದೆ ಈ ಅವಧಿಯಲ್ಲಿ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು. ಕೌಟುಂಬಿಕ ಜೀವನದಲ್ಲಿಯೂ ಕೆಲ ಸಮಸ್ಯೆಗಳಿರಬಹುದು.

ಕುಂಭ ರಾಶಿ

ಕುಂಭ ರಾಶಿಯವರು ರಾಹುವಿನ ಕೆಟ್ಟ ದೃಷ್ಟಿಯಿಂದ ಕೆಲ ಸಮಸ್ಯೆಗಳನ್ನು ಎದುರಿಸಬಹುದು, ಆರೋಗ್ಯ ಸಮಸ್ಯೆ ಕೂಡ ಇರಲಿದೆ. ಕುಟುಂಬದಲ್ಲಿ ಕೆಲ ಸಮಸ್ಯೆಗಳಿರಬಹುದು, ಆರ್ಥಿಕವಾಗಿ ಕೂಡ ರಾಹು ತೊಂದರೆಯನ್ನು ಉಂಟು ಮಾಡುತ್ತದೆ.

ಮೀನ ರಾಶಿ

ಮೀನ ರಾಶಿಯವರು ರಾಹುವಿನಿಂದ ಪ್ರತಿಕೂಲ ಸಂದರ್ಭ ಎದುರಿಸಬೇಕು. ಆರೋಗ್ಯ ಸಂಬಂಧಿಸಿದ ಸಮಸ್ಯೆವಿರಬಹುದು, ಅಲ್ಲದೆ ಈ ಅವಧಿಯಲ್ಲಿ ಕಾನೂನು ಸಂಬಂಧಿತ ಸಮಸ್ಯೆಗಳಿರಬಹುದು.ರಾಹುವಿನಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿರಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Rahu In This House This House Will Make People Successful

Rahu In this house too lucky for the person, read on...
Story first published: Tuesday, June 11, 2024, 17:18 [IST]
X
Desktop Bottom Promotion