Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೀನ ರಾಶಿಯಲ್ಲಿ ಸಂಭವಿಸಲಿದೆ ರಾಹು-ಬುಧದ ಸಂಯೋಗ: ಈ 3 ರಾಶಿಯವರಿಗೆ ಧನ ಲಾಭ
ರಾಹು ಹಾಗೂ ಬುಧ ಎರಡೂ ಪ್ರಮುಖ ಗ್ರಹಗಳಾಗಿವೆ. ರಾಹುವನ್ನು ನೆರಳಿನ ಗ್ರಹವೆಂದು ಕರೆಯಲಾಗುವುದು. ರಾಹುವಿನ ಸ್ಥಾನ ಸರಿಯಿಲ್ಲದಿದ್ದರೆ ಆ ವ್ಯಕ್ತಿಯ ಜೀವನದಲ್ಲಿ ಗೊಂದಲದ ಸ್ಥಿತಿ ಉಂಟಾಗುತ್ತದೆ, ಅವರು ಸಾಕಷ್ಟು ಅಡೆತಡೆ ಎದುರಿಸುತ್ತಾರೆ ಎಂದು ಹೇಳಲಾಗುವುದು.
ಈ ರಾಹು ಗ್ರಹವು ಒಂದು ರಾಶಿಯಲ್ಲಿ 18 ತಿಂಗಳಿದ್ದು ನಂತರ ರಾಶಿ ಬದಲಾವಣೆ ಮಾಡುತ್ತದೆ. ಇದೀ ರಾಹು ಮೀನ ರಾಶಿಯಲ್ಲಿದೆ. ಏಪ್ರಿಲ್ 9ಕ್ಕೆ ಬುಧ ಮೀನ ರಾಶಿಗೆ ಸಂಚರಿಸಲಿದೆ. ಹೀಗಾಗಿ ಈ ಎರಡೂ ಗ್ರಹಗಳ ಸಂಯೋಗವಾಗಲಿದೆ.
ಈ ರಾಹು ನೆರಳಿನ ಗ್ರಹವಾದರೂನ ಇದರ ಸ್ಥಾನ ಚೆನ್ನಾಗಿದ್ದರೆ ಒಳ್ಳೆಯ ಫಲ ನೀಡುತ್ತದೆ. ರಾಹು ಬುಧದೊಂದಿಗೆ ಸಂಯೋಗವಾದಾಗ ಕೆಲವೊಂದು ರಾಶಿಗಳಿಗೆ ತುಂಬಾನೇ ಅನುಕೂಲಕರವಾಗಿದೆ. ಆ ಅದೃಷ್ಟದ ರಾಶಿಗಳಾವುವು ಎಂದು ನೋಡೋಣ ಬನ್ನಿ:

ಬುಧ-ರಾಹು ಸಂಯೋಗ ಈ ರಾಶಿಯವರಿಗೆ ಒಳ್ಳೆಯದು:
ಧನು ರಾಶಿ
ಧನು ರಾಶಿಯವರಿಗೆ ಈ ರಾಹು ಮತ್ತು ಬುಧ ಸಂಯೋಗ ಒಳ್ಳೆಯದಿದೆ. ಈ ಸಂಯೋಗ ನಿಮ್ಮ 4ನೇ ಮನೆಯಲ್ಲಿ ಆಗಲಿದೆ. ಇದರಿಂದಾಗಿನಿಮ್ಮ ಜೀವನದಲ್ಲಿ ಎಲ್ಲಾ ರೀತಿಯ ಭೌತಿಕ ಸಂತೋಷವನ್ನು ನೀವು ಪಡೆಯುತ್ತೀರಿ. ಐಷಾರಾಮಿ ವಸ್ತುಗಳನ್ನು ಖರೀದಿಸುತ್ತೀರಿ. ನಿಮ್ಮ ಶ್ರಮಕ್ಕೆ ನೀವು ಅಪೇಕ್ಷಿ ಮಾಡಿರುವುದಕ್ಕಿಂತಲೂ ಅಧಿಕ ಲಾಭ ಪಡೆಯುತ್ತೀರಿ. ಬಡ್ತಿ, ಸಂಬಳ ಹೆಚ್ಚಾಗುವುದು ಹೀಗೆ ನಿಮ್ಮ ಆದಾಯ ಹೆಚ್ಚಾಗಲಿದೆ. ಪೂರ್ವಜರ ಆಸ್ತಿಯನ್ನು ಲಾಭ ಪಡೆಯುವ ಸಾಧ್ಯತೆಯಿದೆ. ಕುಟುಂಬ ಜೀವನದಲ್ಲಿ ಸಂತೋಷ ಇರಲಿದೆ.
ಕುಂಭ ರಾಶಿ
ಕುಂಭ ರಾಶಿಯಲ್ಲಿ ಶನಿ ಇದೆ, ಇದೀಗ ರಾಹು ಮತ್ತು ಬುಧದ ಸಂಯೋಗವು ಸಂಭವಿಸಲಿದೆ, ಆದ್ದರಿಂದ ಈ ಸಂಯೋಗವು ನಿಮಗೆ ತುಂಬಾ ಮಂಗಳಕರವಾಗಿರುತ್ತದೆ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಉದ್ಯಮಿಗಳು ಒಳ್ಳೆಯ ಲಾಭ ಪಡೆಯುತ್ತಾರೆ. ನಿಮ್ಮ ವೃತ್ತಿಪರ ಕ್ಷೇತ್ರದಲ್ಲಿ ಸಾಕಷ್ಟು ಹಣವನ್ನು ಗಳಿಸಲು ಸಾಧ್ಯವಾಗುವುದು. ಹೊಸ ವಾಹನ ಅಥವಾ ಹೊಸ ಆಸ್ತಿಯನ್ನು ಖರೀದಿಸುವ ಬಗ್ಗೆಯೂ ನೀವು ಯೋಚಿಸಬಹುದು. ನಿಮ್ಮ ವ್ಯಕ್ತಿತ್ವ ಜನರನ್ನು ಆಕರ್ಷಿಸುತ್ತದೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗುವುದು.
ಕರ್ಕ ರಾಶಿ
ಬುಧ ಮತ್ತು ರಾಹುವಿನ ಸಂಯೋಜನೆಯಿಂದ ಕರ್ಕ ರಾಶಿಯವರು ಹೆಚ್ಚಿನ ಲಾಭ ಪಡೆಯಲಿದ್ದಾರೆ. ಈ ಸಂಯೋಜನೆಯು ಕರ್ಕ ರಾಶಿಯಿಂದ ಒಂಬತ್ತನೇ ಮನೆಯಲ್ಲಿ ನಡೆಯಲಿದೆ. ನಿಮ್ಮ ಎಲ್ಲಾ ಕೆಲಸಗಳಲ್ಲಿ ಅದೃಷ್ಟದ ಬಲದಿಂದ ಯಶಸ್ಸು ಗಳಿಸಲು ಸಾಧ್ಯವಾಗುವುದು. . ನೀವು ವಿದೇಶ ಪ್ರವಾಸ ಮಾಡುವ ಸಾಧ್ಯತೆಗಳೂ ಇವೆ. ಇದಲ್ಲದೆ, ಈ ಅವಧಿಯಲ್ಲಿ ನೀವು ಪ್ರಯಾಣಿಸಲು ಹೆಚ್ಚಿನ ಅವಕಾಶಗಳನ್ನು ಪಡೆಯುತ್ತೀರಿ. ನೀವು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಆಲೋಚನೆಯಲ್ಲಿದ್ದರೆ ಈ ಅವಧಿ ನಿಮಗೆ ತುಂಬಾನೇ ಉತ್ತಮವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications