Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ರಾಹುವಿನಿಂದಾಗಿ ಈ ರಾಶಿಯವರು ಎಲ್ಲಾ ರೀತಿಯಿಂದಲೂ ತುಂಬಾನೇ ಒಳ್ಳೆಯ ಪ್ರಯೋಜನ ಪಡೆಯಲಿದ್ದಾರೆ
ರಾಹುವನ್ನು ನೆರಳಿನ ಗ್ರಹವೆಂದು ಹೇಳಲಾಗುವುದು. ಅದು ಒಂದು ರಾಶಿಯಲ್ಲಿ 18 ಮಾಸವಿದ್ದು ನಂತರ ರಾಶಿ ಬದಲಾವಣೆ ಮಾಡುವುದು. ರಾಹು ಅಶುಭ ಗ್ರಹ, ನೆರಳಿ ಗ್ರಹವಾದರೂ ಅದು ಅಶುಭ ಫಲವನ್ನೇ ನೀಡುವುದು ಎಂದು ಹೇಳಲು ಸಾಧ್ಯವಿಲ್ಲ. ಅದು ನಮ್ಮ ರಾಶಿಯಲ್ಲಿ ಅದರ ಸ್ಥಾನಕ್ಕೆ ತಕ್ಕಂತೆ ಫಲ ನೀಡುವುದು.
ನಮ್ಮ ಕುಂಡಲಿಯಲ್ಲಿ ರಾಹು ಆರೋಗ್ಯಕರ ಸ್ಥಾನದಲ್ಲಿದ್ದರೆ ಉತ್ತಮ ಫಲ ನೀಡುವುದು. ಇದೀಗ ರಾಹು ಈ ರಾಶಿಗಳ ಮೇಲೆ ಅತ್ಯಂತ ಮಂಗಳಕರ ಪ್ರಭಾವ ಬೀರುತ್ತಿದ್ದಾನೆ, ಇದರಿಂದಾಗಿ ಈ ರಾಶಿಯವರು ಆರ್ಥಿಕ ಪ್ರಯೋಜನ ಪಡೆಯಲಿದ್ದಾರೆ:

ಸಿಂಹ ರಾಶಿ
ಸಿಂಹ ರಾಶಿಯಲ್ಲಿ ರಾಹು ದೇವನ ಸ್ಥಾನದಲ್ಲಿದ್ದಾಗ ಆ ರಾಶಿಯವರಿಗೆ ಉತ್ತಮ ಪ್ರಯೋಜನ ನೀಡಲಿದೆ. ರಾಹುವು ಈ ರಾಶಿಚಕ್ರದ ಜನರಿಗೆ ಹಠಾತ್ ಆರ್ಥಿಕ ಲಾಭವನ್ನು ನೀ ತಂದು ಕೊಡುತ್ತಾನೆ, ಅಲ್ಲದೆ ಜೀವನದಲ್ಲಿ ಅನೇಕ ಪ್ರಗತಿಪರ ಬದಲಾವಣೆಗೆ ಕಾರಣವಾಗುತ್ತಾನೆ. ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗುವುದು, ಆರ್ಥಿಕವಾಗಿ ತುಂಬಾ ಉತ್ತಮ ಪ್ರಯೋಜನ ಪಡೆಯಬಹುದು. ರಾಹುವಿನ ಈ ಅವಧಿಯಲ್ಲಿ ನಿಮ್ಮ ಬಹುದೊಡ್ಡ ಕನಸು ನೆರವೇರಲಿದೆ. ನೀವು ಖುಷಿಯಾಗಿರುತ್ತೀರಿ.
ವೃಶ್ಚಿಕ ರಾಶಿ
ರಾಹುವಿನಿಂದ ಅತ್ಯಂತ ಪ್ರಯೋಜನ ಪಡೆಯುವ ರಾಶಿಯೆಂದರೆ ಅದು ವೃಶ್ಚಿಕ ರಾಶಿ, ಅಲ್ಲದೆ ಈ ರಾಶಿ ಮೇಲೆ ರಾಹುವಿಗೆ ಅಧಿಕ ದಯೆ, ಹೀಗಾಗಿ ರಾಹುವಿನಿಂದ ಅತ್ಯಂತ ಮಂಗಳಕರ ಪ್ರಯೋಜನ ಪಡೆಯಲು ಸಾಧ್ಯವಾಗುವುದು. ರಾಹುವಿನ ಪ್ರಭಾವದಿಂದಾಗಿ ವೃತ್ತಿ ಬದುಕಿನಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ, ವ್ಯಾಪಾರಿಗಳು ಉತ್ತಮ ಪ್ರಯೋಜನ ಪಡೆಯುತ್ತೀರಿ. ಆರ್ಥಿಕವಾಗಿಯೂ ಉತ್ತಮವಾಗಿದೆ. ಹೀಗಾಗಿ ರಾಹು ನಿಮಗೆ ತುಂಬಾನೇ ಒಳ್ಳೆಯ ಪ್ರಯೋಜನ ನೀಡುತ್ತಿದ್ದಾನೆ. ಹೀಗಾಗಿ ಪ್ರತಿ ಹೆಜ್ಜೆಯಲ್ಲಿಯೂ ಯಶಸ್ಸು ಪಡೆಯುತ್ತೀರಿ.
ರಾಹು ಅನುಕೂಲಕರ ಸ್ಥಾನದಲ್ಲಿದ್ದರೆ ಅದು ತುಂಬಾನೇ ಒಳ್ಳೆಯ ಪರಿಣಾಮ ಬೀರುತ್ತದೆ. ಪ್ರತಿಯೊಂದು ಹೆಜ್ಜೆಯಲ್ಲಿಯೂ ಯಶಸ್ಸು ಸಿಗುವುದು. ರಾಹುವಿನ ಅನುಕೂಲಕರ ಸ್ಥಾನ ಯಾವೆಲ್ಲಾ ರೀತಿಯಲ್ಲಿ ಪ್ರಯೋಜನ ಬೀರಿದೆ ಎಂದು ನೋಡುವುದಾದರೆ.....
ಗುರಿ ಮುಟ್ಟಲು ಸಾಧ್ಯವಾಗುವುದು
ರಾಹು ಅನುಕೂಲಕರ ಸ್ಥಾನದಲ್ಲಿದ್ದಾಗ ಗುರಿ ಮುಟ್ಟಲು ಸಾಧ್ಯವಾಗುವುದು, ನಾವು ವೃತ್ತಿ ಬದುಕಿನಲ್ಲಿ ಯಶಸ್ಸು ಪಡೆಯುತ್ತೀವಿ. ವ್ಯಾಪಾರಿಗಳು ವ್ಯಾಪಾರದಲ್ಲಿ ಬೆಳವಣಿಗೆಯನ್ನು ಕಾಣಬಹುದು.
ನಮ್ಮ ಆಲೋಚನೆ ಮೇಲೆ ಕೂಡ ಪ್ರಭಾವ ಬೀರುವುದು
ರಾಹು ನಮ್ಮಲ್ಲಿ ಕ್ರಿಯೇಟಿವ್ ಆಲೋಚನೆಗಳನ್ನು ತುಂಬುತ್ತಾನೆ, ಕಲೆ, ವಿಜ್ಞಾನ, ಟೆಕ್ನಾಲಾಜಿ, ಕ್ರಿಯೇಟಿವ್ ಕ್ಷೇತ್ರದಲ್ಲಿ ಕೆಲಸ ಮಾಡುವವರು ತುಂಬಾನೇ ಒಳ್ಳೆಯ ಪ್ರಯೋಜನ ಪಡೆಯುತ್ತಾರೆ.
ಸೌಕರ್ಯಗಳು ಹೆಚ್ಚಾಗುವುದು
ರಾಹು ಅನುಕೂಲಕರ ಸ್ಥಾನದಲ್ಲಿದ್ದಾಗ ಆರ್ಥಿಕ ಪ್ರಗತಿ ಕಂಡು ಬರುವುದು. ನೀವು ಇಷ್ಟಪಟ್ಟ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುವುದು. ಮನೆ, ಗಾಡಿ ಈ ಕನಸುಗಳು ನೆರವೇರುವುದು, ಮನೆಯಲ್ಲಿ ಸೌಕರ್ಯಗಳು ಹೆಚ್ಚಾಗುವುದು.
ಕುಟುಂಬ ಜೀವನ ಚೆನ್ನಾಗಿರಲಿದೆ: ರಾಹು ಅನುಕೂಲಕರ ಸ್ಥಾನದಲ್ಲಿ ಇದ್ದಾಗ ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ಗಟ್ಟಿಯಾಗುವುದು.
ಆಧ್ಯಾತ್ಮಿಕದ ಕಡೆಗೆ ಒಲವು ಮೂಡುವುದು
ರಾಹು ನಿಮ್ಮ ರಾಶಿಯಲ್ಲಿ ಅನುಕೂಲಕರ ಸ್ಥಾನದಲ್ಲಿದ್ದರೆ ಆಧ್ಯಾತ್ಮಿಕದ ಕಡೆಗೆ ಗಮನಹರಿಸುತ್ತೀರಿ.
ಈ ರಾಹು ಮಂತ್ರ ಪಠಣೆ ಮಾಡುವುದರಿಂದ ರಾಹುವಿನಿಂದ ಮತ್ತಷ್ಟು ಉತ್ತಮ ಪ್ರಯೋಜನ ಪಡೆಯುತ್ತೀರಿ.
ರಾಹು ಬೀಜ ಮಂತ್ರ
ಓಂ ಭ್ರಂ ಭ್ರೂಂ ಸಃ ರಾಹವೇ ನಮಃ
ರಾಹು ಮಂತ್ರ
ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯ ವಿಮರ್ದನಂ ಸಿಂಘಿಕ ಗರ್ಭ ಸಂಭೂತಂ ತಂ ರಾಹುಂ ಪ್ರಣಮಾಮ್ಯಹಮ್ ।
ರಾಹು ಗಾಯತ್ರಿ ಮಂತ್ರ
ಓಂ ನಾಕಧ್ವಜಾಯ ವಿದ್ಮಹೇ ಪದ್ಮ ಹಸ್ತಾಯ ಧೀಮಹಿ ತನ್ನೋ ರಾಹು ಪ್ರಚೋದಯಾತ್"
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
