Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
12 ವರ್ಷಗಳ ಬಳಿಕ ನಡೆಯಲಿದೆ ಕುಂಭಮೇಳ: ಲಕ್ಷಾಂತರ ಹಿಂದೂಗಳು ಕಾಯುತ್ತಿರುವ ಈ ಕುಂಭಮೇಳದ ವಿಶೇಷತೆಯೇನು?
ಹಿಂದೂ 12 ವರ್ಷಗಳಿಂದ ಕಾಯುತ್ತಿದ್ದ ಪೂರ್ಣ ಕುಂಭಮೇಳಕ್ಕೆ ದಿನಗಳು ಹತ್ತಿರವಾಗುತ್ತಿದೆ. ಮಹಾಕುಂಭಮೇಳದಲ್ಲಿ ಭಾಗಿಯಾಗಬೇಕೆಂಬುವುದು ಪ್ರತಿ ಹಿಂದೂವಿನ ಆಸೆಯಾಗಿರುತ್ತದೆ. ಮಹಾಕುಂಭ ಮೇಳ ಮಕರ ಸಂಕ್ರಾಂತಿಯಿಂದ ಪ್ರಾರಂಭವಾಗಲಿದ್ದು ಅದಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಮಹಾಕುಂಭಮೇಳ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದ್ದು ಈ ಮಹಾಕುಂಭಮೇಳದಲ್ಲಿ ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆಯಿದೆ.
ಮಹಾ ಕುಂಭಮೇಳದಲ್ಲಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಎಲ್ಲಾ ಪಾಪಗಳು ದೂರಾಗುವುದು ಎಂಬ ನಂಬಿಕೆಯಿದೆ. ಹಾಗಾಗಿ ಕುಂಭ ಸ್ಥಾನಕ್ಕೆ ತುಂಬಾನೇ ಮಹತ್ವವಿದೆ.

ಕುಂಭ ಸ್ನಾನದ ಬಗ್ಗೆ ಮಾಹಿತಿ
ಜನರವಿ 13ರಂದು ಪೌಶ್ ಪೂರ್ಣಿಮಾ ಸ್ನಾನದೊಂದಿಗೆ ಕುಂಭಮೇಳದ ಸಡಗರ ಶುರುವಾಗುವುದು. ಮಹಾ ಶಿವರಾತ್ರಿಯ ಸ್ನಾನದೊಂದಿಗೆ ಕುಂಭ ಮೇಳ ಮುಕ್ತಾಯವಾಗಲಿದೆ.
ಕುಂಭ ಸ್ನಾನಕ್ಕೆ ಪ್ರಮುಖ ದಿನಾಂಕಗಳು
- ಜನವರಿ 14, 2025: ಮಕರ ಸಂಕ್ರಾಂತಿ
- ಜನವರಿ 26, 2025: ಮೌನಿ ಅಮವಾಸ್ಯೆ
- ಫೆಬ್ರವರಿ 3, 2025: ವಸಂತ ಪಂಚಮಿ ಫೆಬ್ರವರಿ 12, 2025: ಮಾಘ ಪೂರ್ಣಿಮಾ
- ಫೆಬ್ರವರಿ 26, 2025: ಮಹಾಶಿವರಾತ್ರಿ
12 ವರ್ಷಕ್ಕೊಮ್ಮೆನಡೆಯಲಿದೆ ಪೂರ್ಣಕುಂಭಮೇಳ
12 ವರ್ಷಕ್ಕೊಮ್ಮೆ ಮಹಾಕುಂಭ ಮೇಳ ನಡೆಯಲಿದೆ. ಗುರು ಗ್ರಹ ವೃಷಭ ರಾಶಿಯಲ್ಲಿದ್ದಾಗ ಸೂರ್ಯನು ಮಕರ ರಾಶಿಗೆ ಸಂಚರಿಸಿದಾಗ ಈ ಮಹಾ ಕುಂಭಮೇಳ ನಡೆಯಲಿದೆ. ಈ ಸಮಯದಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿದೆ.
ಗುರು ಕುಂಭರಾಶಿಯಲ್ಲಿದ್ದು ಸೂರ್ಯ ಮೇಷ ರಾಶಿಗೆ ಸಂಚರಿಸಿದಾಗ ಹರಿಧ್ವಾರದಲ್ಲಿ ಕುಂಭಮೇಳವನ್ನು ಆಚರಿಸಲಾಗುವುದು.
ಸೂರ್ಯ ಮತ್ತು ಗುರು ಸಿಂಹ ರಾಶಿಯಲ್ಲಿದ್ದಾಗ ನಾಸಿಕ್‌ನಲ್ಲಿ ಕುಂಭ ಮೇಳ ನಡೆಯುತ್ತದೆ.
ಗುರು ಸಿಂಹರಾಶಿಯಲ್ಲಿದ್ದು ಸೂರ್ಯ ಮೇಷ ರಾಶಿಗೆ ಸಂಚರಿಸಿದಾಗ ಉಜ್ಜಯಿನಿಯಲ್ಲಿ ಕುಂಭ ಮೇಳ ನಡೆಯುತ್ತದೆ.
ಒಂದೊಂದು ಕುಂಭ ಮೇಳಕ್ಕೆ ಒಂದೊಂದು ವಿಶೇಷವಿದೆ:
ಹರಿದ್ವಾರ, ಉಜ್ಜಯಿನಿ, ಪ್ರಯಾಗ್‌ರಾಜ್, ನಾಸಿಕ್‌ನಲ್ಲಿ ಪ್ರತಿ 3 ವರ್ಷಕ್ಕೊಮ್ಮೆ ನಡೆಯುವುದನ್ನು ಕುಂಭಮೇಳ ಎಂದು ಕರೆಯಲಾಗುವುದು. ಹರಿದ್ವಾರ ಹಾಗೂ ಪ್ರಯಾಗ್‌ರಾಜ್‌ನಲ್ಲಿ 6 ವರ್ಷಕ್ಕೊಮ್ಮೆ ಕುಂಭಮೇಳ ಆಚರಿಸಲಾಗುವುದು, ಇದನ್ನು ಅರ್ಧ ಕುಂಭಮೇಳ ಎಂದು ಕರೆಯಲಾಗುವುದು. ಪ್ರಯಾಗ್‌ರಾಜ್‌ನಲ್ಲಿ 12 ವರ್ಷಕ್ಕೊಮ್ಮೆ ಕುಂಭಮೇಳ ನಡೆಯುತ್ತದೆ ಇದನ್ನು ಪೂರ್ಣಕುಂಭಮೇಳ ಎಂದು ಕರೆಯಲಾಗುವುದು , ಪ್ರಯಾಗ್‌ರಾಜ್‌ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳವನ್ನು ಮಹಾಕುಂಭಮೇಳ ಎಂದು ಕರೆಯಲಾಗುವುದು.
2013ರಲ್ಲಿ ಮಹಾಕುಂಭಮೇಳ ಆಚರಿಸಲಾಯ್ತು, ಈ ಭಾಗ್ಯ ಕಣ್ತುಂಬಿಕೊಳ್ಳುವುದು ನಮ್ಮ ಮುಂದಿನ ಪೀಳಿಗೆಯವರಿಗಷ್ಟೇ ಸಾಧ್ಯವಾಗುವುದು, ಇದೀಗ 12 ವರ್ಷಗಳಿಗೊಮ್ಮೆ ನಡೆಯುವ ಪೂರ್ಣ ಕುಂಭಮೇಳ 2025ರಲ್ಲಿ ನಡೆಯಲಿದೆ.
ಕುಂಭಮೇಳದ ಮಹತ್ವ
ಪ್ರತಿಬಾರಿ ಕುಂಭಮೇಳ ನಡೆದಾಗ ಲಕ್ಷಾಂತರ ಹಿಂದೂಗಳು ಸೇರುತ್ತಾರೆ. 2019ರಲ್ಲಿ ನಡೆದ ಕುಂಭಮೇಳದಲ್ಲಿ 110 ಮಿಲಿಯನ್‌ಗೂ ಅಧಿಕ ಭಕ್ತರು ಬಂದಿದ್ದರು, ಈ ಬಾರಿ ಕುಂಭಮೇಳದಲ್ಲಿ ಇನ್ನೂ ಹೆಚ್ಚಿನ ಜನ ಸೇರುವ ನಿರೀಕ್ಷೆಯಿದೆ. ಈ ಕುಂಭಮೇಳದಲ್ಲಿ ಸಾಕಷ್ಟು ಧಾರ್ಮಿಕ ಗುರುಗಳು ಭಾಗವಹಿಸುತ್ತಾರೆ. ಸಂನ್ಯಾಸಿಗಳು, ನಾಗಸಾಧುಗಳು ಈ ಕುಂಭಮೇಳದಲ್ಲಿ ಭಾಗವಹಿಸುತ್ತಾರೆ.
ಈ ಸಮಯದಲ್ಲಿ ಯೋಗ, ಜ್ಯೋತಿಷ್ಯ ಅಂತ ಅಭ್ಯಾಸ ಮಾಡುತ್ತಾರೆ. ಈ ಕುಂಭಮೇಳದಲ್ಲಿ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗುವುದು. ಬ್ಯಾಂಕ್, ಆಸ್ಪತ್ರೆ, ಮಾರ್ಕೆಟ್, ಆಹಾರದ ಸ್ಟಾಲ್‌ಗಳು, ಅನೇಕ ಶಾಪ್‌ಗಳು ಸೇರಿ ಪ್ರತಿಯೊಂದು ವ್ಯವಸ್ಥೆಯೂ ಇರುವುದರಿಂದ ಈ ಕುಂಭಮೇಳಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುವುದು.
ಜನವರಿ 14ರಿಂದ ಕುಂಭಮೇಳ ನಡೆಯುವುದರಿಂದ ಈಗಾಗಲೇ ಅಲ್ಲಿಗೆ ಹೋಗ ಬಯಸುವವರು ಟಿಕೆಟ್ ಬುಕ್ ಮಾಡುವುದು, ಅಲ್ಲಿಗೆ ಹೋಗಲು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕುಂಭಮೇಳದಲ್ಲಿ ಸ್ನಾನ ಮಾಡಿದರೆ ನಮಗೆ ಮೋಕ್ಷ ಸಿಗುವುದು, ರೋಗ ರುಜಿನಗಳು ದೂರಾಗುವುದು ಎಂಬ ನಂಬಿಕೆ, ಆ ಸಮಯದಲ್ಲಿ ಆ ನೀರಿಗೆ ಅಂಥ ಶಕ್ತಿ ಇರುತ್ತದೆ. ಹೀಗಾಗಿ ಕುಂಭ ಮೇಳಕ್ಕೆ ಲಕ್ಷಾಂತರ ಭಾಗರು ಆಗಮಿಸುತ್ತಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
