Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಗಸ್ಟ್‌ನಲ್ಲಿದೆ 4 ಪ್ರಮುಖ ಗ್ರಹಗಳ ಸಂಚಾರ, ಈ ರಾಶಿಯವರಿಗೆ ಪ್ರಗತಿಯ ಸಮಯ
ಜುಲೈ ಕಳೆದು ಆಗಸ್ಟ್ ಬರುತ್ತಿದೆ ಎಂದರೆ ಏನೋ ಒಂದು ರೀತಿಯ ಸಂಭ್ರಮ, ಏಕೆಂದರೆ ಈ ಸಮಯದಲ್ಲಿ ಹಬ್ಬಗಳು, ಪೂಜೆಗಳು ಶುರುವಾಗುವುದು. ಅಲ್ಲದೆ ಜ್ಯೋತಿಷ್ಯ ದೃಷ್ಟಿಯಿಂದಲೂ ಈ ಮಾಸ ವಿಶೇಷವಾಗಿದೆ, ಏಕೆಂದರೆ ಈ ಮಾಸ 4 ಪ್ರಮುಖ ಗ್ರಹಗಳ ಸಂಚಾರವಿದೆ. ಈ ಗ್ರಹಗಳ ಸಂಚಾರ ಪ್ರತಿಯೊಂದು ರಾಶಿಯ ಮೇಲೂ ಪ್ರಭಾವ ಬೀರಲಿದೆ.
ಆಗಸ್ಟ್‌ನಲ್ಲಿ ಯಾವೆಲ್ಲಾ ಗ್ರಹಗಳ ಸಂಚಾರವಿದೆ. ಈ ಗ್ರಹಗಳ ಸಂಚಾರ ಯಾವ ರಾಶಿಗಳಿಗೆ ಹೆಚ್ಚು ಶುಭವಾಗಿದೆ ಎಂದು ನೋಡೋಣ ಬನ್ನಿ:

ಸಿಂಹ ಸಂಕ್ರಾಂತಿ
ಕರ್ಕದಿಂದ ಸಿಂಹ ರಾಶಿಗೆ ಆಗಸ್ಟ್ 16ಕ್ಕೆ ಸಂಚರಿಸಲಿದೆ, ಸಮಯ ಸಂಜೆ 7:44 ಈ ಸಂಚಾರ ನಡೆಯಲಿದೆ.
ಮಂಗಳ ಸಂಚಾರ
ಆಗಸ್ಟ್ 26ಕ್ಕೆ ಮಂಗಳವು ವೃಷಭದಿಂದ ಮಿಥುನ ರಾಶಿಗೆ ಸಂಚರಿಸಲಿದೆ, ಮಧ್ಯಾಹ್ನ 03:26ಕ್ಕೆ ಈ ಸಂಚಾರ ನಡೆಯಲಿದೆ. ಈ ಸಂಚಾರ ಬಳಿಕ ಈ ವರ್ಷ ಇನ್ನೊಂದು ಸಾರಿ ಮಾತ್ರ ಮಂಗಳ ಸಂಚಾರವಿದೆ, ಅದಾದ ಬಳಿಕ ಮುಂದಿನ ವರ್ಷವೇ.. ಅಕ್ಟೋಬರ್ 20ಕ್ಕೆ ಮಂಗಳ ಕರ್ಕ ರಾಶಿಗೆ ಸಂಚರಿಸಿದರೆ ಈ ವರ್ಷ ಪೂರ್ತಿ ಕರ್ಕದಲ್ಲಿಯೇ ಇರಲಿದೆ.
ಬುಧನ ಹಿಮ್ಮುಖ ಚಲನೆ
ಆಗಸ್ಟ್ 22ಕ್ಕೆ ಬುಧನು ಸಿಂಹ ರಾಶಿಯಿಂದ ಕರ್ಕ ರಾಶಿಗೆ ಹಿಮ್ಮುಖ ಚಲನೆ ಮಾಡಲಿದೆ. ಈ ಹಿಮ್ಮುಖ ಚಲನೆ ಒಳ್ಳೆಯದೆಂದು ಪರಿಗಣಿಸುವುದಿಲ್ಲ, ಆದರೆ ಎಲ್ಲಾ ರಾಶಿಗಳಿಗೆ ಅನುಕೂಲಕರವಲ್ಲ ಎಂದು ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ಇದರ ಸ್ಥಾನಕ್ಕ ಅನುಸಾರ ಕೆಲ ರಾಶಿಗಳಿಗೆ ಅನುಕೂಲಕರವಾಗಿದೆ.
ಕನ್ಯಾ ರಾಶಿಗೆ ಶುಕ್ರ ಸಂಚಾರ
ಆಗಸ್ಟ್ 25ಕ್ಕೆ ಶುಕ್ರವು ಸಿಂಹರಾಶಿಯಿಂದ ಕನ್ಯಾ ರಾಶಿಗೆ ಸಂಚರಿಸಲಿದೆ.
ಈ ಗ್ರಹಗಳ ಸಂಚಾರ ಆಗಸ್ಟ್ ಮಾಸದಲ್ಲಿ ಈ ರಾಶಿಯವರಿಗೆ ಹೆಚ್ಚು ಅನುಕೂಲಕರವಾಗಿದೆ:
ಮೇಷ ರಾಶಿ
ಗ್ರಹಗತಿಗಳ ಸ್ಥಾನವು ನಿಮಗೆ ಅನುಕೂಲಕರವಾಗಿದೆ, ಈ ಅವಧಿಯಲ್ಲಿ ಆರ್ಥಿಕವಾಗಿ ಉತ್ತಮವಾಗಿದೆ. ಇನ್ನು ನೀವು ಹಳೆಯ ಸಾಲ ಮಾಡಿದ್ದರೆ ಆ ಸಾಲ ತೀರಿಸಲು ಸಾಧ್ಯವಾಗುವುದು. ಇನ್ನು ಬಹುದಿನದ ಆಸೆ ಕೂಡ ಈಡೇರಲಿದೆ. ಆರೋಗ್ಯದ ವಿಷಯದಲ್ಲಿ ಅನಗ್ಯತ ಚಿಂತೆ ಬಿಡಿ, ಈ ಸಮಯದಲ್ಲಿ ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ. ವಾಹನ, ಆಸ್ತಿ ಖರೀದಿಸಲು ಬಯಸುತ್ತಿದ್ದರೆ ಈ ಅವಧಿಯಲ್ಲಿ ನಿಮ್ಮಾಸೆ ಈಡೇರಲಿದೆ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ಸಮಯ ತುಂಬಾ ಚೆನ್ನಾಗಿರಲಿದೆ. ಗ್ರಹಗತಿಗಳ ಸ್ಥಾನವು ನಿಮಗೆ ಅನುಕೂಲಕರ ಸ್ಥಾನದಲ್ಲಿ ಇರುವ ಕಾರಣ ಆರ್ಥಿಕ ಸಮಸ್ಯೆ ಬಗೆಹರಿಯಲಿದೆ.
ಅಲ್ಲದೆ ಹಣ ಉಳಿತಾಯ ಮಾಡಲು ಸಾಧ್ಯವಾಗುವುದು. ಕುಟುಂಬ ಜೀವನ ಚೆನ್ನಾಗಿರಲಿದೆ, ಅವಾಹಿತರಿಗೆ ಮದುವೆ ಪ್ರಸ್ತಾಪ ಬರಬಹುದು. ಈ ಸಮಯದಲ್ಲಿ ಆರೋಗ್ಯ ಚೆನ್ನಾಗಿರಲಿದೆ.
ತುಲಾ ರಾಶಿ
ಗ್ರಹಗತಿಗಳ ಸ್ಥಾನವು ತುಲಾ ರಾಶಿಯವರಿಗೆ ಅನುಕೂಲಕರವಾಗಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ, ಪ್ರೇಮಿಗಳು ಮದುವೆಯಾಗುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಆರ್ಥಿಕವಾಗಿ ಉತ್ತಮವಾಗಿದೆ, ಬೇರೆಯವರ ಮಾತು ಕೇಳಿ ಹೂಡಿಕೆ ಮಾಡಲು ಹೋಗಬೆಡಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ಮಾಸ ಉತ್ತಮವಾಗಿದೆ. ವ್ಯಾಪಾರಿಗಳು ಈ ಸಮಯದಲ್ಲಿ ಉತ್ತಮ ಲಾಭ ಗಳಿಸುತ್ತೀರಿ. ಕಠಿಣ ಶ್ರಮಕ್ಕೆ ಉತ್ತಮ ಫಲ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
