ಮೀನ ರಾಶಿಯಲ್ಲಿ ಗ್ರಹಗಳ ಸಂಯೋಗ: ತ್ರಿಗ್ರಹ ರಾಜಯೋಗದಿಂದ ಯಾರಿಗೆಲ್ಲಾ ಅದೃಷ್ಟ..!

ವೈದಿಕ ಜ್ಯೋತಿಷ್ಯದ ಪ್ರಕಾರ ಮಾರ್ಚ್ ತಿಂಗಳು ತುಂಬಾ ಮಂಗಳಕರವಾಗಿದೆ. ಏಕೆಂದರೆ ಈ ತಿಂಗಳಲ್ಲಿ ಹಲವು ಗ್ರಹಗಳು ತಮ್ಮ ರಾಶಿಗಳನ್ನು ಬದಲಿಸುತ್ತವೆ. ಹಾಗೆ ಈ ರೀತಿಯ ಚಲನೆಯು ವಿವಿಧ ಯೋಗಗಳಿಗೆ ಕಾರಣವಾಗುತ್ತಿದೆ. ಈ ಸಮಯದಲ್ಲಿ ಕೆಲವು ಅಪರೂಪದ ಹಾಗೆ ಜೀವನ ಬದಲಿಸುವಂತಹ ಯೋಗಗಳಿಗೆ ಕಾರಣವಾಗುತ್ತಿದೆ. ಇದು ಹಲವರ ಜೀವನದ ಮೇಲೆ ಪರಿಣಾಮ ಬೀರಲಿದೆ.

ಹಾಗೆ ಮಾರ್ಚ್ ಅಂತ್ಯದಲ್ಲಿ ಅಂದರೆ ಯುಗಾದಿಯ ಸಮಯದಲ್ಲಿ ಮಾರ್ಚ್ 29ರಂದು ಶನಿ ಗ್ರಹವು ತನ್ನ ರಾಶಿ ಬದಲಿಸುತ್ತಿದೆ. ಮೀನ ರಾಶಿಗೆ ಚಲಿಸುವುದರಿಂದ ಅಲ್ಲಿ ಯೋಗಗಳು ರೂಪುಗೊಳ್ಳುತ್ತಿವೆ. ಆದ್ರೆ ಈಗಾಗಲೇ ಮೀನ ರಾಶಿಯಲ್ಲಿ ಸೂರ್ಯ, ಬುಧ, ರಾಹು ಹಾಗೂ ಶುಕ್ರನ ಸಂಚಾರವಿದೆ. ಹೀಗಾಗಿ ಒಂದೇ ರಾಶಿಯಲ್ಲಿ ಗ್ರಹಗಳು ಸಂಯೋಗ ಆಗುತ್ತಿರುವುದು ಹಲವು ಅಪರೂಪದ ರಾಜಯೋಗಕ್ಕೆ ಕಾರಣವಾಗುತ್ತಿದೆ.

Planetary Conjunction In Pisces Will Leads Good Luck For Many Zodiac Signs

ಅದರಲ್ಲೂ ಇಷ್ಟೊಂದು ಗ್ರಹಗಳ ಚಲನೆಯು ಮೀನ ರಾಶಿಯಲ್ಲಿ ಸಂಯೋಗವಾಗುವುದು ತ್ರಿಗ್ರಹ ರಾಜಯೋಗಕ್ಕೆ ಕಾರಣಾಗುತ್ತಿದೆ. ಮಾರ್ಚ್ 29ರಂದು ಈ ಮೂರು ಗ್ರಹಗಳ ಸಂಯೋಗವು ತ್ರಿಗ್ರಹ ಯೋಗಕ್ಕೆ ಕಾರಣವಾಗುತ್ತಿದೆ. ಈ ರಾಶಿಯಲ್ಲಿ ಶುಕ್ರ, ರಾಹು ಹಾಗೂ ಶನಿಯ ಸಂಯೋಗವನ್ನು ಮುಖ್ಯವೆಂದು ಪರಿಗಣಿಸಲಾಗಿದೆ. ಇದು ತ್ರಿಗ್ರಹ ಯೋಗಗಕ್ಕೆ ಕಾರಣವಾಗುತ್ತದೆ.

ಈ ಅಪರೂಪದ ಗ್ರಹಗಳ ಚಲನೆಯು ಯಾವೆಲ್ಲಾ ರಾಶಿಯ ಜನರಿಗೆ ಲಾಭದಾಯಕವಾಗುತ್ತಿದೆ? ಯಾರಿಗೆ ಲಾಭ ತಂದು ಕೊಡಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ವೃಷಭ ರಾಶಿ

ವೃಷಭ ರಾಶಿಯ 11 ನೇ ಮನೆಯಲ್ಲಿ ತ್ರಿಗ್ರಹ ಯೋಗವು ರೂಪುಗೊಳ್ಳುತ್ತಿದೆ. ಇದು ಈ ರಾಶಿ ಜನರಲ್ಲಿ ಬಹಳಷ್ಟು ಅನುಕೂಲಕರ ಲಾಭಗಳನ್ನು ತರಲಿದೆ. ನಿಮ್ಮ ಕೆಲಸದ ಸ್ಥಳದಲ್ಲಿದ್ದ ಸಮಸ್ಯೆಯೊಂದು ನಿವಾರಣೆಯಾಗುತ್ತಿದೆ. ನಿಮ್ಮ ಸಾಲ ಮರುಪಾವತಿಯಾಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ನಿಮ್ಮ ಕುಟುಂಬಸ್ಥರಿಂದ ಎಲ್ಲಾ ವಿಚಾರಗಳಿಗೂ ಬೆಂಬಲ ಪಡೆಯಲಿದ್ದೀರಿ. ವ್ಯಾಪಾರಿಗಳು ಈ ದಿನಗಳಲ್ಲಿ ಉತ್ತಮ ಲಾಭ ಮಾಡಿಕೊಳ್ಳುತ್ತಾರೆ. ಹಾಗೆ ಹೊಸ ಹೊಸ ಆದಾಯದ ಮೂಲದ ಕಡೆಗೆ ಒಲುವು ಹೊಂದುತ್ತಾರೆ. ವಿದ್ಯಾರ್ಥಿಗಳಿಗೆ ಇದು ಶುಭ ಕಾಲವಾಗಲಿದೆ. ಅವಿವಾಹಿತರು ತಮ್ಮ ಬಯಕೆಯಂತೆ ತಮ್ಮಿಷ್ಟದ ವಸ್ತುವೊಂದನ್ನು ಖರೀದಿಬಹುದು. ದಾಂಪತ್ಯ ಜೀವನದಲ್ಲಿ ಸುಖ ಇರಲಿದೆ. ನಿಮ್ಮ ಕುಟುಂಬಕ್ಕಾಗಿ ಹಣ ಖರ್ಚು ಮಾಡುತ್ತೀರಿ. ಇದು ಶಾಂತಿ, ಸಂತೋಷಕ್ಕೆ ಕಾರಣವಾಗಲಿದೆ. ನಿಮ್ ಜಾಗತಕದಲ್ಲಿನ ದೋಷವೊಂದು ನಿವಾರಣೆಯಾಗಬಹುದು. ಆರೋಗ್ಯದಲ್ಲೂ ಸುಧಾರಣೆ ನೋಡಲಿದ್ದೀರಿ.

ಕುಂಭ ರಾಶಿ

ಕುಂಭ ರಾಶಿಯ ಎರಡನೇ ಮನೆಯಲ್ಲಿ ತ್ರಿಗ್ರಹ ಯೋಗವು ರೂಪುಗೊಳ್ಳುತ್ತಿದೆ. ಇದು ಕುಂಭ ರಾಶಿಯವರಲ್ಲಿ ಅನೇಕ ರೀತಿಯ ಲಾಭಕ್ಕೆ ಕಾರಣವಾಗುತ್ತಿದೆ. ಅದರಲ್ಲೂ ವಿಶೇಷವಾಗಿ ನಿಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯುವ ಕಾಲವಿದು. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ನೀವು ಎದುರಿಸುತ್ತಿದ್ದ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯುವ ಸಾಧ್ಯತೆ ಇದೆ. ನಿಮ್ಮ ಮನದಲ್ಲಿದ್ದ ಗೊಂದಲಗಳು ನಿವಾರಣೆಯಾಗಲಿವೆ. ನಿಮ್ಮ ಗುರಿ ತಲುಪಲು ಈ ಸಮಯದಲ್ಲಿ ಹೊಸ ದಾರಿಗಳ ಕಂಡುಕೊಳ್ಳಲಿದ್ದೀರಿ. ನಿಮ್ಮ ನಾಯಕತ್ವದ ಗುಣವನ್ನು ಈ ಸಮಯದಲ್ಲಿ ಬಳಸಿಕೊಳ್ಳಬಹುದು. ದಾಂಪತ್ಯ ಜೀವನದಲ್ಲಿ ಸುಖ ಕಾಣುತ್ತೀರಿ.

ಮಿಥುನ ರಾಶಿ

ಮಿಥುನ ರಾಶಿಯ 10ನೇ ಮನೆಯಲ್ಲಿ ತ್ರಿಗ್ರಹ ಯೋಗವು ರೂಪುಗೊಳ್ಳುತ್ತಿದೆ. ಹೀಗಾಗಿ ಈ ರಾಶಿಚಕ್ರದ ಜನರು ಜೀವನದಲ್ಲಿ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. ನಿಮ್ಮ ಪ್ರತಿಯೊಂದು ಕೆಲಸವು ನೀವು ಅಂದುಕೊಂಡತೆ ಯಾವುದೇ ಅಡೆತಡೆಯಿಲ್ಲದೆ ನೆರವೇರಲಿದೆ. ನಿಮ್ಮ ಉದ್ಯೋಗ ಜೀವನದಲ್ಲಿ ಈ ಸಮಯ ಉತ್ತಮವಾಗಿರಲಿದೆ. ಹಲವು ಸಮಯದಿಂದ ನೀವು ಉದ್ಯೋಗ ಬದಲಿಸುವ ಅಥವಾ ಹೊಸ ಉದ್ಯೋಗ ಹುಡುಕುತ್ತಿದ್ದರೆ ಈ ಸಮಯದಲ್ಲಿ ಅತ್ಯುತ್ತಮ ಲಾಭ ನೋಡುವಿರಿ. ವ್ಯವಹಾರದಲ್ಲಿ ಏರಿಳಿತವಿದ್ದರೂ ಲಾಭದಾಯಕ ದಿನಗಳನ್ನೂ ಕೂಡ ನೋಡಬಹುದು.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Planetary Conjunction In Pisces Will Leads Good Luck For Many Zodiac Signs

At the end of March, i.e. during Ugadi, on March 29, Saturn is changing its sign. As it moves into Pisces, yogas are forming there.
Story first published: Sunday, March 23, 2025, 17:15 [IST]
X
Desktop Bottom Promotion