Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕರ ರಾಶಿಯಲ್ಲಿ ಗ್ರಹಗಳ ಸಂಯೋಗ: ಮೂರು ರಾಶಿಯವರ ಆದಾಯ ದ್ವಿಗುಣ, ವಾಹನ ಲಾಭಕ್ಕೆ ದಾರಿ!
ಜನವರಿಯಲ್ಲಿ ಕೆಲವು ಗ್ರಹಗಳಲ್ಲಿನ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಉಂಟು ಮಾಡಬಹುದು. ಅದ್ರಲ್ಲೂ ಈ ದಿನದ ಅಮಾವಾಸ್ಯೆಯಲ್ಲಿ ಗ್ರಹಗತಿಗಳ ಬದಲಾವಣೆಯಿಂದ ಹಲವರಿಗೆ ಹಲವು ರೀತಿಯಲ್ಲಿ ಪರಿಣಾಮ ನೋಡಬಹುದು. ಅದ್ರಲ್ಲೂ ಮಾಘ ಅಮಾವಾಸ್ಯೆಯ ದಿನದಲ್ಲಿ ಬುಧಾದಿತ್ಯ ಹಾಗೂ ಶುಕ್ರಾದಿತ್ಯ ಯೋಗಗಳು ರೂಪುಗೊಳ್ಳುವುದು ಹಲವು ರೀತಿಯಲ್ಲಿ ಶುಭವಾಗುತ್ತಿರುವುದು ನೋಡಲಿದ್ದೇವೆ.
ಈ ಸಮಯದಲ್ಲಿ ಬುಧಾದಿತ್ಯ, ಶುಕ್ರಾದಿತ್ಯ ಮತ್ತು ಮಂಗಳಾದಿತ್ಯ ಸೇರಿದಂತೆ ಮಕರ ರಾಶಿಯಲ್ಲಿ ಐದು ಗ್ರಹಗಳ ಶುಭ ಸಂಯೋಗವು ರೂಪುಗೊಳ್ಳುತ್ತಿದೆ. ಮಂಗಳವು ತನ್ನ ಉತ್ತುಂಗದಲ್ಲಿ ಇರುವುದು, ವಿಶೇಷವಾಗಿ ಕೆಲವು ರಾಶಿ ಜನರಿಗೆ, ಸಕಾರಾತ್ಮಕ ಬದಲಾವಣೆಗಳು ಮತ್ತು ಲಾಭದ ಅವಕಾಶಗಳನ್ನು ತರಬಹುದು. ಈ ಸಮಯದಲ್ಲಿ ಮಾಡಿದ ಪ್ರಯತ್ನಗಳು ದೀರ್ಘಾವಧಿಯ ಫಲಿತಾಂಶಗಳನ್ನು ನೀಡಬಹುದು.

ಈ ಸಮಯದಲ್ಲಿ ನಿಮಗೆ ಧನಾತ್ಮಕ ಬದಲಾವಣೆಗಳು, ಆರ್ಥಿಕ ವಿಚಾರದಲ್ಲಿ ಲಾಭದಾಯಕ ದಿನಗಳು ಸೇರಿ ಕೌಟುಂಬಿಕ ವಿಚಾರಗಳು ಶುಭವಾಗುವುದು ನೋಡಬಹುದು. ಹಾಗಾದ್ರೆ ಯಾವ ರಾಶಿಯವರಿಗೆ ಈ ಸಮಯವು ಅನುಕೂಲಕರ ವಾತಾವರಣ ತರಲಿದೆ. ಇದು ಯಾವೆಲ್ಲಾ ರಾಶಿಯವರಿಗೆ ಶುಭ ಸಮಯವನ್ನು ತರುತ್ತಿದೆ ಎಂಬುದನ್ನು ತಿಳಿದುಕೊಳ್ಳೋಣ.
ಮೇಷ ರಾಶಿ
ಮಕರ ರಾಶಿಯಲ್ಲಿ ರೂಪುಗೊಳ್ಳುವ ಶುಭ ಸಂಯೋಗಗಳು ಮೇಷ ರಾಶಿ ಜನರಿಗೆ ಶುಭದಾಯಕವಾಗಲಿದೆ. ಈ ಸಮಯದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು, ವಿಶೇಷವಾಗಿ ವೃತ್ತಿ ಕ್ಷೇತ್ರದಲ್ಲಿ. ನೀವು ಪ್ರಗತಿಗೆ ಅವಕಾಶಗಳು ಹಾಗೆ ವೃತ್ತಿಪರರಿಗೆ ಈ ಸಮಯವು ಬಡ್ತಿ, ವೇತನ ಹೆಚ್ಚಳದಂತಹ ವಿಚಾರದಲ್ಲಿ ಲಾಭವಿದೆ. ಉದ್ಯೋಗ ಹುಡುಕುತ್ತಿದ್ದ ಮಂದಿಗೆ ಈ ಸಮಯವು ಅದೃಷ್ಟ ಒಲಿಯಲಿದೆ. ಕುಟುಂಬದೊಂದಿಗೆ ಇದ್ದಂತಹ ಮನಸ್ತಾಪಗಳು ದೂರಾಗಲಿದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಇದ್ದಂತಹ ಸಮಸ್ಯೆಯೊಂದರಿಂದ ನೀವು ಮುಕ್ತಿ ಪಡೆಯಲಿದ್ದೀರಿ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಶುಕ್ರಾದಿತ್ಯ ಯೋಗವು ಅದೃಷ್ಟ ತರಲಿದೆ. ನಿಮ್ಮ ವೃತ್ತಿ ಸಂಬಂಧಿತ ವಿಚಾರದಲ್ಲಿ ಈ ಸಮಯವು ಬಹಳ ಅನುಕೂಲಕರ ದಿನಗಳ ತರಬಹುದು. ದಾಂಪತ್ಯ ಸಂಬಂಧವು ಮಧುರವಾಗಲಿದೆ. ನೀವು ಪ್ರವಾಸ, ಪ್ರಯಾಣದಂತಹ ವಿಚಾರದಲ್ಲಿ ತೊಡಗುವುದು ನೋಡಬಹುದು. ನೀವು ಸ್ವಂತ ಉದ್ಯೋಗ ಸಂಬಂಧವಾಗಿ ಆಲೋಚಿಸಿದ್ದರೆ ಈ ಸಮಯದಲ್ಲಿ ಆ ಕುರಿತಾದ ದೊಡ್ಡ ವಿಚಾರವೊಂದು ಕೈಗೂಡಲಿದೆ. ಬಹು ಸಮಯದಿಂದ ಬಾಕಿ ಉಳಿಸಿಕೊಂಡಿದ್ದ ಕೆಲಸಗಳು ನೀವು ಬಯಸಿದ ಫಲಿತಾಂಶ ತರಬಹುದು. ಪುಣ್ಯಕ್ಷೇತ್ರಗಳ ಪ್ರವಾಸ ಮಾಡುವಿರಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಬುಧಾದಿತ್ಯ ಯೋಗವು ಶುಭ ಫಲಿತಾಂಶಗಳನ್ನು ತರುತ್ತದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಅದೃಷ್ಟವು ಜೀವನದಲ್ಲಿ ಪ್ರಗತಿಗೆ ಬಾಗಿಲು ತೆರೆಯುತ್ತದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣದಲ್ಲಿ ಅನುಕೂಲಕರ ಫಲಿತಾಂಶಗಳನ್ನು ನೋಡುತ್ತಾರೆ. ಆರ್ಥಿಕ ಬಲ ಬಲಗೊಳ್ಳುತ್ತದೆ ಮತ್ತು ಕೆಲವರು ಭೂಮಿ, ಕಟ್ಟಡಗಳು ಅಥವಾ ವಾಹನಗಳನ್ನು ಖರೀದಿಸಬಹುದು. ನ್ಯಾಯಾಲಯ ಪ್ರಕರಣಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆಯಿದೆ. ಆರೋಗ್ಯವು ಅನುಕೂಲಕರವಾಗಿರುತ್ತದೆ. ನಿಮ್ಮ ಕೌಟುಂಬಿಕ ವಿಚಾರದಲ್ಲಿ ಬೆಂಬಲಗಳು ಸಿಗುವುದು ನೋಡಬಹುದು. ನಿಮ್ಮ ಉದ್ಯೋಗ ಸಂಬಂಧಿತ ವಿಚಾರದಲ್ಲಿ ಶುಭವಿದೆ. ಆಪ್ತರೊಬ್ಬರಿಂದ ನಿಮಗೆ ಬರುವ ಹಣ ನಿಮ್ಮ ಕೈ ಸೇರಲಿದೆ. ಸಮಸ್ಯೆಗಳಿಂದ ದೂರಾಗುವ ಮಾರ್ಗ ಕಂಡುಕೊಳ್ಳುವಿರಿ. ವೃತ್ತಿ ಸಂಬಂಧಿತ ವಿಚಾರಗಳು ಶುಭವಾಗುತ್ತದೆ. ವಾಹನ ಖರೀದಿಯ ಆಲೋಚನೆಯಲ್ಲಿದ್ದರೆ ಈ ಸಮಯದಲ್ಲಿ ಅದಕ್ಕೆ ಬೇಕಾದ ಅಗತ್ಯ ತಯಾರಿಯಲ್ಲಿ ತೊಡಗುವಿರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ



Click it and Unblock the Notifications



