Latest Updates
-
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ!
ಸೆಪ್ಟೆಂಬರ್‌ನಲ್ಲಿ 4ಕ್ಕೂ ಹೆಚ್ಚು ಗ್ರಹಗಳ ಪಥ ಬದಲಾವಣೆ: ಯಾರಿಗಿದು ಅದ್ಭುತ ಲಾಭ ತರಲಿದೆ?
ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವುದು ಬಹಳ ಮುಖ್ಯ ವಿದ್ಯಮಾನ ಎಂದು ಪರಿಗಣಿಸಲಾಗುತ್ತದೆ. ನಿರ್ಧಿಷ್ಟ ಸಮಯದಲ್ಲಿ ಎಲ್ಲಾ ಗ್ರಹಗಳು ನಿರ್ದಿಷ್ಟ ರಾಶಿಗೆ ಚಲಿಸುವುದು ನೋಡಬಹುದು. ಈ ವಿದ್ಯಮಾನ ನಡೆಯುವುದು ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಮುಖ್ಯವಾಗುತ್ತದೆ. ಇದರಿಂದ ಕುಂಡಲಿಯಲ್ಲಿ ಉಂಟಾಗುವ ಬದಲಾವಣೆ ಹಲವರಲ್ಲಿ ಶುಭ ಹಾಗೂ ಅಶುಭಕಾರಕವಾಗಿ ಪರಿಣಮಿಸಲಿದೆ.
ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಕಾಲಕಾಲಕ್ಕೆ ಚಲಿಸುತ್ತವೆ. ಅಂತಹ ಸಂದರ್ಭದಲ್ಲಿ ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳುವುದು ನೋಡಬಹುದು. ಈ ಗ್ರಹಗಳ ಚಲನೆಯಲ್ಲಿನ ಬದಲಾವಣೆಯು ಹನ್ನೆರಡು ರಾಶಿಯ ಜನರ ಮೇಲೂ ಪರಿಣಾಮ ಬೀರುವುದು ನೋಡಬಹುದು. ಹಾಗೆ ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುವುದರಿಂದ ಇದು ಎಲ್ಲರ ಜೀವನದಲ್ಲಿ ಪ್ರಮುಖ ಬದಲಾವಣೆಗಳಿಗೆ ಕಾರಣವಾಗಲಿದೆ.

ಇನ್ನು ಈ ಸೆಪ್ಟೆಂಬರ್ ತಿಂಗಳಲ್ಲಿ ಹಲವು ಗ್ರಹಗಳ ಚಲನೆಯಲ್ಲಿ ಬದಲಾವಣೆಯಾಗುವುದು ನೋಡಬಹುದು. ಅದ್ರಲ್ಲೂ ಈ ಸೂರ್ಯಗ್ರಹಣದ ಸಮಯದಲ್ಲಿ ಗ್ರಹಗಳು ತಮ್ಮ ಪಥ ಬದಲಿಸಲಿವೆ. ಹಾಗೆ ಹಲವು ರಾಶಿಗಳಲ್ಲಿ ಚಲನೆಯನ್ನು ಬದಲಾಯಿಸುವುದು ನೋಡಬಹುದು. ಅದ್ರಲ್ಲೂ
ಸೆಪ್ಟೆಂಬರ್ 13 ರ ಶನಿವಾರ ಮಂಗಳ ತುಲಾ ರಾಶಿಯನ್ನು ಪ್ರವೇಶಿಸಿದೆ. ಹಾಗೆ ಬುಧನು ಸೆಪ್ಟೆಂಬರ್ 15 ರಂದು ಕನ್ಯಾ ರಾಶಿಯನ್ನು ಪ್ರವೇಶಿಸಿದ್ದಾನೆ. ಅದೇ ದಿನ, ಶುಕ್ರ ಸಿಂಹ ರಾಶಿಯ ಪ್ರವೇಶಿಸಿದ್ದಾನೆ. ಸೆಪ್ಟೆಂಬರ್ 17 ರಂದು ಸೂರ್ಯ ಕನ್ಯಾ ರಾಶಿಯ ಪ್ರವೇಶಿಸಲಿದ್ದಾನೆ. ಸೆಪ್ಟೆಂಬರ್ 21ರಂದು ಸುರ್ಯಗ್ರಹಣವಿದ್ದು ಅದರ ಮೊದಲು ಈ ಎಲ್ಲಾ ಗ್ರಹಗಳ ಸಂಚಾರ ನೋಡಬಹುದು.
ಈ ಎಲ್ಲಾ ಗ್ರಹಗಳ ಸಂಚಾರದಲ್ಲಿನ ಬದಲಾವನೆಯು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಉಂಟು ಮಾಡಲಿದೆ. ಮೇಷ ರಾಶಿಯಿಂದ ಮೀನ ರಾಶಿಯವರೆಗೂ ಲಾಭದಾಯಕ ಪರಿಣಾಮ ನೋಡಬಹುದು. ಆದ್ರೆ ಯಾವ ರಾಶಿಯವರು ಅತ್ಯಧಿಕ ಲಾಭ ನೋಡಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ಗ್ರಹಗಳ ಚಲನೆಯು ಸೂರ್ಯಗ್ರಹಣದೊಂದಿಗೆ ಬಂದಿರುವುದರಿಂದ ಹಲವು ರೀತಿಯ ಲಾಭಗಳ ನೋಡಬಹುದು. ನಿಮ್ಮ ನಿತ್ಯದ ಸಂಕಷ್ಟವೊಂದು ನಿವಾರಣೆಯಾಗಲಿದೆ. ಸಂತೋಷ ಹೆಚ್ಚಿಸುವ ಘಟನೆಗಳು ನಡೆಯಲಿವೆ. ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲಿದ್ದೀರಿ. ಇದು ಆರ್ಥಿಕವಾಗಿ ನಿಮ್ಮನ್ನು ಸದೃಢರನ್ನಾಗಿ ಮಾಡಲಿದೆ. ನಿಮ್ಮ ಹೊಸ ಆದಾಯ ಮೂಲಗಳಿಂದ ಹಣದ ಹರಿವು ಹೆಚ್ಚಾಗಲಿದೆ. ನೀವು ಬಹಳ ಸಮಯದಿಂದ ದುಬಾರಿ ವಸ್ತುಗಳನ್ನು ಖರೀದಿಸಬಹುದು. ಆಪ್ತರಿಂದ ನಿಮಗೆ ಸಂತೋಷದ ದಿನಗಳ ನೋಡಬಹುದು. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಗ್ರಹ ಬದಲಾವಣೆ ಮತ್ತು ಸೂರ್ಯಗ್ರಹಣವು ಉತ್ತಮ ಫಲಿತಾಂಶಗಳನ್ನು ತರಲಿದೆ. ಈ ರಾಶಿಯವರು ಅವರ ಅದೃಷ್ಟದಿಂದಾಗಿ ಹಲವು ರೀತಿಯ ಲಾಭಗಳ ನೋಡಬಹುದು. ನಿಮ್ಮ ಬಹಳ ಹಳೆಯ ಕೆಲಸ ಅಥವಾ ಕನಸೊಂದು ಈಡೇರಲಿದೆ. ಹಲವರಲ್ಲಿ ಈ ಸಮಯ ಅದೃಷ್ಟದ ಕಾರಣದಿಂದ ಯಾರ ಬಳಿಯಾದರು ಹಣ ಸಿಲುಕಿದ್ದರೆ ನಿಮ್ಮ ಕೈ ಸೇರಲಿದೆ. ಆರೋಗ್ಯದಿಂದ ನಿಮಗೆ ಕೆಲಸಗಳಲ್ಲಿ ಯಶಸ್ಸು ಇದೆ. ವಿವಾಹ ಸಂಬಂಧ ಧನಾತ್ಮಕ ವಿಚಾರಗಳು ಇರಲಿದೆ.
ಧನು ರಾಶಿ
ಧನು ರಾಶಿಯವರಿಗೆ ಸಹ ಇದು ಒಳ್ಳೆಯ ಸಮಯ ಆಗಿರಲಿದೆ. ತಮ್ಮ ವೃತ್ತಿಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ನೋಡುತ್ತಾರೆ. ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ಉತ್ತಮವಾಗಿರುತ್ತದೆ. ನಿಮ್ಮ ವ್ಯಾಪಾರದಲ್ಲಿ ಪ್ರಗತಿ ಇರುತ್ತದೆ. ಆಸ್ತಿ ಖರೀದಿ ವಿಚಾರವಾಗಿ ನಿಮಗೆ ಉತ್ತಮ ಸಮಯ ಆಗಿರಲಿದೆ. ಪೋಷಕರ ಆರೋಗ್ಯದಲ್ಲಿ ಚೇತರಿಕೆ ನೋಡುವಿರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications











