Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಮಾರ್ಚ್ ತಿಂಗಳಿನಲ್ಲಿದೆ ಈ ಪ್ರಮುಖ ಗ್ರಹಗಳ ಸಂಚಾರ: ಈ 5 ರಾಶಿಯವರಿಗೆ ಅದ್ಭುತ ಸಮಯವಿದು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್ ತಿಂಗಳು ತುಂಬಾ ವಿಶೇಷವಾಗಿದೆ, ಏಕೆಂದರೆ ಮಾರ್ಚ್ ತಿಂಗಳಿನಲ್ಲಿದೆ ಹಲವು ಪ್ರಮುಖ ಗ್ರಹಗಳ ಸಂಚಾರ, ಈ ಮಾಸದಲ್ಲಿ ಶನಿಯು ಕೂಡ ರಾಶಿ ಬದಲಾವಣೆ ಮಾಡುತ್ತಿದೆ. ಶನಿಯು ಎರಡೂವರೆ ವರ್ಷಗಳ ಬಳಿಕ ರಾಶಿ ಬದಲಾವಣೆ ಮಾಡುತ್ತಿದೆ, ಹೀಗಾಗಿ ಈ ಕಾರಣ ಮಾರ್ಚ್ ತಿಂಗಳು ತುಂಬಾನ ವಿಶೇಷವಾಗಿದೆ.
ಮಾರ್ಚ್‌ನಲ್ಲಿ ಯಾವೆಲ್ಲಾ ಗ್ರಹಗ ಸಂಚಾರವಿದೆ ಯಾವ ರಾಶಿಯವರು ಈ ಗ್ರಹಗ ಸಂಚಾರದಿಂದ ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ ಎಂದು ನೋಡೋಣ ಬನ್ನಿ:

ಮಾರ್ಚ್‌ನಲ್ಲಿದೆ ಈ ಗ್ರಹಗಳ ಸಂಯೋಗ
ಮಾರ್ಚ್ 14ಕ್ಕೆ ಸೂರ್ಯ-ಬುಧ- ಶುಕ್ರ ಈ ಮೂರು ಗ್ರಗಳ ಸಂಯೋಗವಾಗಲಿದೆ
ಈ ತ್ರಿಗ್ರಹಗಳ ಸಂಯೋಗ ಏಪ್ರಿಲ್ 14ರವರೆಗೆ ಇರಲಿದೆ.
ಮಾರ್ಚ್ 28ಕ್ಕೆ ಚಂದ್ರ- ಬುಧ- ಶುಕ್ರ-ರಾಹುಗಳ ಸಂಯೋಗ ಮೀನ ರಾಶಿಯಲ್ಲಿ ಉಂಟಾಗಲಿದೆ, ಈ ಸಂಯೋಗ ಮಾರ್ಚ್ 30ರವರೆಗೆ ಇರಲಿದೆ.
ಶನಿ ಮತ್ತು ರಾಹು ಸಂಯೋಗ ಮಾರ್ಚ್ 29ಕ್ಕೆ ಉಂಟಾಗಲಿದೆ
ಸೂರ್ಯ-ಬುಧ-ಶನಿ, ಚಂದ್ರ-ಶುಕ್ರ- ರಾಹುಗಳ ಸಂಯೋಗ ಕೂಡ ಮಾರ್ಚ್ 29ಕ್ಕೆ ಉಂಟಾಗಲಿದೆ.
ಯಾವೆಲ್ಲಾ ಗ್ರಹಗಳ ರಾಶಿ ಬದಲಾವಣೆಯಿದೆ
ಸೂರ್ಯ ಮಾರ್ಚ್ 14ಕ್ಕೆ ಮೀನ ರಾಶಿಗೆ ಸಂಚರಿಸಲಿದೆ.
ಶನಿಯು ಮಾರ್ಚ್ 29ಕ್ಕೆ ಮೀನ ರಾಶಿಗೆ ಸಂಚರಿಸಲಿದೆ.
ಗ್ರಹಗಳ ಈ ಸಂಚಾರ ಈ ರಾಶಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ:
ಮೇಷ ರಾಶಿ
ಮಾರ್ಚ್ ತಿಂಗಳ ಗ್ರಹಗಳ ಸಂಚಾರ ಮೇಷ ರಾಶಿಯವರಿಗೆ ತುಂಬಾನೇ ಪ್ರಯೊಜನಕಾರಿಯಾಗಿದೆ, ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ತುಂಬಾನೇ ಚೆನ್ನಾಗಿರಲಿದೆ. ನಿಮ್ಮ ಸುತ್ತಲಿನ ಪರಿಸ್ಥಿತಿ ನಿಮಗೆ ಅನುಕೂಲಕರವಾಗಿ ಬದಲಾಗಲಿದೆ. ಇನ್ನು ಕೆಲಸದ ಬದಲಾವಣೆ ಬಗ್ಗೆ ಆಲೋಚನೆ ಮಾಡುತ್ತಿದ್ದರೆ ನಿಮಗೆ ತುಂಬಾನೇ ಅನುಕೂಲಕರವಾಗಿದೆ, ನೀವು ನಿರೀಕ್ಷೆ ಮಾಡಿದಂತೆ ಉತ್ತಮ ಕೆಲಸ ಸಿಗಬಹುದು. ಅಲ್ಲದೆ ವಿದೇಶಕ್ಕೆ ಪ್ರಯಾಣಿಸಲು ಬಯಸುವವರೆಗೆ ಈ ಸಮಯ ತುಂಬಾನೇ ಅನುಕೂಲಕರವಾಗಿದೆ.
ಮಿಥುನ ರಾಶಿ
ಮಿಥುನ ರಾಶಿಯವರು ಈ ಗ್ರಹಗ ಸಂಚಾರದಿಂದ ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ. ಆದರೆ ಬರಿ ಅದೃಷ್ಟ ನಂಬಿ ಕೂರದೆ ನೀವು ಹೆಚ್ಚಿನ ಶ್ರಮ ಹಾಕಿ, ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಲು ಸಾಧ್ಯವಾಗುವುದು. ವ್ಯಾಪರಸ್ಥರಾಗಿದ್ದರೆ ನೀವು ಹೆಚ್ಚಿ ಲಭ ಪಡೆಯಲು ಸಾಧ್ಯವಾಗಲಿದ, ಹಣಕಾಸಿನ ವಿಚಾರದಲ್ಲಿ ಮಾರ್ಚ್ ತಿಂಗಳು ನಿಮಗೆ ಅನುಕೂಲಕರವಾಗಿದೆ. ಇನ್ನು ಆಸ್ತಿ ಸಂಬಂಧಿಸಿದ ವ್ಯವಹಾರ ಮಾಡಲು ಬಯಸುವವರೆಗೆ ಮಾರ್ಚ್ ತಿಂಗಳು ಹೆಚ್ಚು ಅನುಕೂಲಕರವಾಗಿದೆ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ಗ್ರಹಗಳ ರಾಶಿ ಬದಲಾವಣೆ ತುಂಬಾನೇ ಪ್ರಯೋಜನಕಾರಿಯಾಗಿದೆ. ನೀವು ನಿಮ್ಮ ವೃತ್ತಿ ಬದುಕಿನಲ್ಲಿ ತುಂಬಾನೇ ಬದಲಾವಣೆ ಕಾಣುತ್ತೀರಿ. ವೃತ್ತಿ ಬದುಕಿನಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುವುದು, ಇನ್ನು ಹೊಸ ವ್ಯಾಪಾರೆ ಅಥವಾ ಉದ್ಯಮ ಪ್ರಾರಂಭ ಮಾಡಬೇಕು ಎಂದು ಬಯಸುವವರೆಗೆ ಈ ಅವಧಿ ತುಂಬಾನ ಪ್ರಯೋಜನಕಾರಿಯಾಗಿದೆ.
ಕುಂಭ ರಾಶಿ
ಮಾರ್ಚ್ ಮಾಸದಲ್ಲಿ ಆಗುವ ಗ್ರಹಗಳ ಸಂಚಾರ ಕುಂಭ ರಾಶಿಯವರಿಗೂ ಅನುಕೂಲಕರವಾಗಿದೆ, ವೃತ್ತಿ ಜೀವನದಲ್ಲಿ ನಿಮಗೆ ಉತ್ತಮ ಅವಕಾಶಗಳು ದೊರೆಯಲಿದೆ, ಆರ್ಥಿಕ ಪ್ರಯೋಜನ ಕಾಣುತ್ತೀರಿ. ಬಡ್ತಿ ನಿರೀಕ್ಷೆಯಲ್ಲಿರುವವರೆಗೆ ಈ ಅವಧಿ ಅನುಕೂಲಕರವಾಗಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ಮೀನ ರಾಶಿ
ಮೀನ ರಾಶಿಯವರು ಈ ಅವಧಿಯಲ್ಲಿ ತುಂಬಾನೇ ಪ್ರಯೋಜನ ಪಡೆಯುತ್ತೀರಿ. ಸಂಬಂಧದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ, ಆರ್ಥಿಕ ಪರಿಸ್ಥಿತಿಯಲ್ಲಿ ತುಂಬಾನೇ ಪ್ರಯೋಜನ ಪಡೆಯುತ್ತೀರಿ. ಈ ಅವಧಿಯಲ್ಲಿ ನೀವು ಎಲ್ಲಾ ರೀತಿಯಿಂದಲೂ ತುಂಬಾ ಉತ್ತಮವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











