Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜೂನ್‌ನಲ್ಲಿದೆ 5 ಪ್ರಮುಖ ಗ್ರಹಗಳ ಸಂಚಾರ: ಈ 5 ರಾಶಿಗಳಿಗೆ ಜೂನ್ ತಿಂಗಳು ಪೂರ್ತಿ ತುಂಬಾ ಚೆನ್ನಾಗಿರಲಿದೆ
ಮೇ ಕಳೆದು ಜೂನ್ ಶುರುವಾಗಲಿದೆ. ವೈದಿಕ ದೃಷ್ಟಿಯಿಂದ ನೋಡುವುದಾದರೆ ಜೂನ್ ಮೊದಲ ದಿನವೇ ಗ್ರಹದ ಸಂಚಾರವಿದೆ. ಈ ಮಾಸದಲ್ಲಿ ಪ್ರಮುಖ ಗ್ರಹಗಳ ಸಂಚಾರವಿದೆ, ಈ ತಿಂಗಳಿನಲ್ಲಿ ಹಲವರು ಗ್ರಹಗಳ ಸಂಚಾರವಿದೆ.
ಈ ತಿಂಗಳಿನಲ್ಲಿ ಪ್ರಮುಖ ಗ್ರಹಗಳ ಸಂಚಾರ ಪ್ರತಿಯೊಂದು ರಾಶಿಯ ಮೇಲೆ ಪ್ರಭಾವ ಬೀರಲಿದೆ. ಆದರೆ ಈ ರಾಶಿಗಳು ಈ ಅವಧಿಯಲ್ಲಿ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ.

ಜೂನ್ ಮಾಸದಲ್ಲಿದೆ ಈ ಗ್ರಹಗಳ ಸಂಚಾರ
ಜೂನ್ 1ಕ್ಕೆ ಮಂಗಳ ಗ್ರಹದ ಸಂಚಾರವಿದೆ
ಜೂನ್ 12ಕ್ಕೆ ಶುಕ್ರವು ಮಿಥುನ ರಾಶಿಗೆ ಪ್ರವೇಶಿಸಲಿದೆ
ಜೂನ್ 12ಕ್ಕೆ ಬುಧ ಕೂಡ ಮಿಥುನ ರಾಶಿಗೆ ಸಂಚರಿಸಲಿದೆ.
ಜೂನ್ 15 ಸೂರ್ಯ ಕೂಡ ಮಿಥುನ ರಾಶಿಗೆ ಸಂಚರಿಸಲಿದೆ,
ಜೂನ್ 29ಕ್ಕೆ ಶನಿಯು ಹಿಮ್ಮುಖ ಚಲನೆ ಮಾಡಲಿದೆ.
ಈ ಎಲ್ಲಾ ಗ್ರಹಗಳ ಸಂಚಾರ ಈ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ಗ್ರಹಗಳ ಸಂಚಾರ ಅನುಕೂಲಕರವಾಗಿದೆ. ಅವಧಿ ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ಅಪೂರ್ಣವಾಗಿರುವ ಕೆಲಸ ಪೂರ್ಣವಾಗಲಿದೆ. ಕೆಲಸದಲ್ಲಿ ನೀವು ಬಡ್ತಿ ಪಡೆಯುತ್ತೀರಿ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಚೆನ್ನಾಗಿರಲಿದೆ. ರಾಜಕಾರಣಿಗಳಿಗೆ ಅನುಕೂಕರವಾಗಿದೆ, ವ್ಯಾಪಾರಿಗಳು ಲಾಭ ಗಳಿಸಲು ಸಾಧ್ಯವಾಗುವುದು. ಉದ್ಯೋಗಿಗಳು ವೃತ್ತಿ ಬದುಕಿನಲ್ಲಿ ಬಡ್ತಿ ಪಡೆಯುತ್ತೀರಿ
ವೃಷಭ ರಾಶಿ
ಈ ಎಲ್ಲಾ ಗ್ರಹಗಳ ಸಂಚಾರ ನಿಮಗೆ ತುಂಬಾನೇ ಅನುಕೂಲಕರವಾಗಿದೆ. ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣುತ್ತೀರಿ, ಆರ್ಥಿಕವಾಗಿ ಬೆಳವಣಿಗೆ ಕಂಡು ಬರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರುವುದರಿಂದ ಈ ಅವಧಿಯಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಾವುದೇ ಸಮಸ್ಯೆ ಇರಲ್ಲ. ಉದ್ಯೋಗಿಗಳು ಬಡ್ತಿ ಪಡೆಯುತ್ತೀರಿ, ವ್ಯಾಪಾರಿಗಳಿಗೆ ಅನುಕೂಲರವಾಗಿದೆ. ಇನ್ನು ಹೊಸ ಕೆಲಸಕ್ಕೆ ಪ್ರಯತ್ನಿಸುತ್ತಿರುವವರಿಗೆ, ಹೊಸ ವ್ಯಾಪಾರ ಮಾಡಲು ಬಯಸುವವರಿಗೆ ಈ ಅವಧಿ ಅನುಕೂಲಕರವಾಗಿದೆ.
ಸಿಂಹ ರಾಶಿ
ಈ ಎಲ್ಲಾ ಗ್ರಹಗಳ ಸಂಚಾರದಿಂದಾಗಿ ಸಿಂಹ ರಾಶಿಯವರು ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ. ಆರ್ಥಿಕವಾಗಿ ಈ ಸಮಯ ತುಂಬಾ ಚೆನ್ನಾಗಿರಲಿದೆ. ನಿಮ್ಮ ಎಲ್ಲಾ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ. ವೈವಾಹಿಕ ಮತ್ತು ಕೌಟುಂಬಿಕ ಜೀವನ ಚೆನ್ನಾಗಿರಲಿದೆ. ಗ್ರಹಗಳು ನಿಮ್ಮ ಪರವಾಗಿ ಧನಾತ್ಮಕ ಫಲಿತಾಂಶ ನೀಡಲಿದೆ, ಹೀಗಾಗಿ ಈ ಸಮಯವನ್ನು ನೀವು ತುಂಬಾ ಖುಷಿಯಿಂದ ಕಳೆಯುತ್ತೀರಿ.
ಕನ್ಯಾ ರಾಶಿ
ಈ ಪ್ರಮುಖ ಗ್ರಹಗಳ ಸಂಚಾರ ಕನ್ಯಾ ರಾಶಿಯವರಿಗೂ ತುಂಬಾನೇ ಪ್ರಯೋಜನಕಾರಿಯಾಗಿದೆ, ಈ ಅವಧಿಯಲ್ಲಿ ಅದೃಷ್ಟದ ಬೆಂಬಲ ನಿಮಗಿರುವುದರಿಂದ ಕೆಲಸ ಕಾರ್ಯಗಳಲ್ಲಿ ಪ್ರಯೋಜನ ಪಡೆಯುತ್ತೀರಿ. ಈ ಗ್ರಹಗಳು ನಿಮ್ಮ ಜೀವನದ ಮೇಲೆ ಮಂಗಳಕರ ಪ್ರಭಾವ ಬೀರಲಿದೆ. ಲಾಭದ ಅವಕಾಶಗಳು ಹೆಚ್ಚಾಗಲಿವೆ. ವಾಹನ, ಆಸ್ತಿ ಈ ಬಗೆಯ ಆಸೆ ಹೆಚ್ಚಾಗಲಿದೆ.ನಿಮ್ಮ ಮನೆಯ ಸೌಕರ್ಯ ಹೆಚ್ಚಿಸಲು ಗಮನಹರಿಸುತ್ತೀರಿ.
ಧನು ರಾಶಿ
ಧನು ರಾಶಿಯವರಿಗೆ ಈ ಮಾಸ ಅದ್ಭುತವಾಗಿರುತ್ತದೆ, ಗ್ರಹಗಳ ಶುಭ ಅಂಶದಿಂದಾಗಿ ತಿಂಗಳು ಪೂರ್ತಿ ಆರ್ಥಿಕ ಲಾಭದ ಅವಕಾಶಗಳಿವೆ. ವ್ಯಾಪಾರಿಗಳು ಒಳ್ಳೆಯ ಲಾಭ ಗಳಿಸುತ್ತೀರಿ. ಆರ್ಥಿಕವಾಗಿ ನೋಡುವುದಾರೆ ಈ ತಿಂಗಳ ನಿಮಗೆ ಯಾವುದೇ ಸಮಸ್ಯೆ ಇರಲ್ಲ. ಈ ಮಾಸ ನಿಮಗೆ ತುಂಬಾ ಚೆನ್ನಾಗಿರಲಿದೆ. ಕುಟುಂಬ ಜೀವನವೂ ಚೆನ್ನಾಗಿರಲಿದೆ.
ಈ ಮಾಸ ಸಂಚರಿಸುವ ಗ್ರಹಗಳು ಮಾತ್ರವಲ್ಲ ವೃಷಭದಲ್ಲಿ ಇರುವ ಗುರು ಕೂಡ ಈ ರಾಶಿಯವರಿಗೆ ತುಂಬಾನೇ ಅನುಕೂಲಕರವಾಗಿದೆ. ಈ 5 ರಾಶಿಯವರು ಉಳಿದ ರಾಶಿಗಳಿಗಿಂತ ತುಂಬಾನೇ ಉತ್ತಮ ಪ್ರಯೋಜನ ಪಡೆಯುತ್ತಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications