ಗ್ರಹ ಸಂಚಾರ: ಜನವರಿಯಲ್ಲಿದೆ 4 ಗ್ರಹ ಸಂಚಾರ, ಈ 5 ರಾಶಿಯವರಿಗೆ ಅದೃಷ್ಟಕರ

ಗ್ರಹಗಳು ನಮ್ಮ ರಾಶಿಯ ಮೇಲೆ ತುಂಬಾನೇ ಪ್ರಭಾವ ಬೀರುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ, ಹೊಸ ವರ್ಷದ ಮೊದಲ ತಿಂಗಳಿನಲ್ಲಿ ಬುಧ, ಸೂರ್ಯ, ಮಂಗಳ, ಶುಕ್ರ ಗ್ರಹಗಳ ಸಂಚಾರವಿದೆ, ಗ್ರಹಗಳ ಸಂಚಾರ ಈ 5 ರಾಶಿಗಳಿಗೆ ತುಂಬಾನೇ ಅನುಕೂಲಕರವಾಗಿದೆ ನೋಡಿ:

ಜನವರಿಯಲ್ಲಿ ಗ್ರಹಗಳ ಸಂಚಾರ
ವೃಶ್ಚಿಕ ರಾಶಿಯಲ್ಲಿ ಬುಧನ ನೇರ ಸಂಚಾರ: ಜನವರಿ 2ಕ್ಕೆ ವೃಶ್ಚಿಕ ರಾಶಿಯಲ್ಲಿ ಬುಧ ನೇರವಾಗಿ ಸಂಚರಿಸಲಿದೆ.
ಧನು ರಾಶಿಯಲ್ಲಿ ಬುಧ ಸಂಚಾರ: ಜನವರಿ 7ಕ್ಕೆ ಬುಧನು ಧನು ರಾಶಿಗೆ ಸಂಚರಿಸಲಿದೆ.
ಸೂರ್ಯ ಸಂಚಾರ: ಬುಧನು ಜನವರಿ 15ಕ್ಕೆ ಮಕರ ರಾಶಿಗೆ ಸಂಚರಿಸಲಿದೆ.
ಧನು ರಾಶಿಯಲ್ಲಿ ಮಂಗಳ ಗ್ರಹದ ಸಂಚಾರ: ಜನವರಿ 16ಕ್ಕೆ ಮಂಗಳ ಅಸ್ತವಾಗಿದ್ದ ಮಂಗಳ ಗ್ರಹ ಉದಯವಾಗುತ್ತಿದೆ
ಧನು ರಾಶಿಯಲ್ಲಿ ಶುಕ್ರ ಸಂಚಾರ: ಜನವರಿ 18ಕ್ಕೆ ಶುಕ್ರ ಧನು ರಾಶಿಗೆ ಸಂಚರಿಸಿದೆ.

Planet Transit In January 2024

ಈ ರಾಶಿಗಳಿಗೆ ತುಂಬಾ ಒಳ್ಳೆಯದು
ಮೇಷ ರಾಶಿ: ವರ್ಷದ ಮೊದಲ ತಿಂಗಲೇ ನಿಮ್ಮ ಪಾಲಿಗೆ ಅದೃಷ್ಟದ ತಿಂಗಳಾಗಿದೆ. ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆ ಕಂಡು ಬರಲಿದೆ. ನಿಮ್ಮಲ್ಲಿ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ನಿಮಗೆ ಹೊಸ ಜವಾಬ್ದಾರಿ ಸಿಗಲಿದೆ. ನಿಮ್ಮ ಜೀವನ ಸಂಗಾತಿ ಜೊತೆಗೆ ಉತ್ತಮ ಸಮಯ ಕಳೆಯುವಿರಿ, ನಿಮ್ಮ ಬಾಂಧವ್ಯ ಹೆಚ್ಚಾಗಲಿದೆ.

ಕನ್ಯಾ ರಾಶಿ: ಆರ್ಥಿಕ ಸ್ಥಿತಿ ಉತ್ತಮವಾಗಲಿದೆ
ಜನವರಿ ತಿಂಗಳು ನಿಮಗೆ ತುಂಬಾ ಅನುಕೂಲಕರವಾಗಿದೆ, ಜನವರಿ ತಿಂಗಳು ನಿಮಗೆ ಅದೃಷ್ಟದ ತಿಂಗಳಾಗಿದೆ. ಪ್ರೀತಿಯ ಜೀವನ ತುಂಬಾ ಚೆನ್ನಾಗಿರಲಿದೆ, ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ನಿಮ್ಮ ಸಂಬಂಧ ತುಂಬಾ ಚೆನ್ನಾಗಿರಲಿದೆ.

ಮಕರ ರಾಶಿ: ಧಾರ್ಮಿಕಕಾರ್ಯಗಳಿಗೆ ಒಲವು ಹೆಚ್ಚಾಗುವುದು, ಕುಟುಂಬದ ಜೊತೆಗೆ ಉತ್ತಮವಾಗಿ ಸಮಯ ಕಳೆಯುತ್ತೀರಿ
ಈ ವಾರ ನಿಮಗೆ ಅದೃಷ್ಟದ ತಿಂಗಳಾಗಿದೆ. ಧಾರ್ಮಿಕ ಒಲವು ಹೆಚ್ಚಾಗಲಿದೆ. ಮಕ್ಕಳ ಜೊತೆಗೆ ಉತ್ತಮ ಸಮಯ ಕಳೆಯುತ್ತೀರಿ, ಕುಟುಂಬದಲ್ಲಿರುವ ಎಲ್ಲಾ ಭಿನ್ನಾಭಿಪ್ರಾಯ ದೂರಾಗಲಿದೆ, ವೃತ್ತಿ ಜೀವನ ಅನುಕೂಲಕರವಾಗಿದೆ.

ಸೂರ್ಯ ಹಾಗೂ ಮಂಗಳ ಗ್ರಹದ ಸಂಚಾರ ಈ ರಾಶಿಗಳ ಮೇಲೆ ಪ್ರಭಾವ ಬೀರಲಿದೆ
ಮೇಷ ರಾಶಿ
ಆರ್ಥಿಕವಾಗಿ ಹೇಳುವುದಾದರೆ ಹೂಡಿಕೆಗೆ ಈ ಅವಧಿ ನಿಮಗೆ ಉತ್ತಮವಾಗಿದೆ, ನೀವು ನಿಮ್ಮ ವೃತ್ತಿ ಜೀವನದ ಕಡೆಗೆ ತುಂಬಾನೇ ಗಮನ ಹರಿಸುತ್ತೀರಿ, ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ, ಆರ್ಥಿಕವಾಗಿ ಈ ಅವಧಿ ಚೆನ್ನಾಗಿದೆ.

ವೃಷಭ ರಾಶಿ'
ಲಕ್ಷ್ಮಿ ನಾರಾಯಣ ಯೋಗದಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ವಾಹನ ಖರೀದಿಸಲು ಯೋಚಿಸಬಹುದು. ವೃತ್ತಿ ಜೀವನದಲ್ಲಿ ಅನುಕೂಲಕರವಾಗಿದೆ. ವೃತ್ತಿ ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ಕಾಣುತ್ತೀರಿ.

ಕನ್ಯಾ ರಾಶಿ
ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಈ ಅವಧಿ ನಿಮಗೆ ಅನುಉಕೂಲಕರವಾಗಿದೆ, ನೀವು ಕೆಲವೊಂದು ಹೊಸ ಯೋಜನೆಗಳನ್ನು ಹಾಕಿಕೊಳ್ಳುತ್ತೀರಿ.

ಮಕರ ರಾಶಿ
ಮಕರ ರಾಶಿಯವರಿಗೆ ಈ ತಿಂಗಳು ಅನುಕೂಲಕರವಾಗಿದೆ, ಆರ್ಥಿಕವಾಗಿ ಬೆಳವಣಿಗೆಯನ್ನು ಕಾಣುತ್ತೀರಿ. ಹೊಸ ಅವಕಾಶಗಳು ನಿಮಗೆ ದೊರೆಯಲಿದೆ.

ಸೂರ್ಯ ಸಂಚಾರ: ಈ ತಿಂಗಳಿನಲ್ಲಿ ಸೂರ್ಯ ಮಕರ ರಾಶಿಗೆ ಸಂಚರಿಸಿದಾಗ ಮಕರ ಸಂಕ್ರಾಂತಿ ಉಂಟಾಗುವುದು. ಮಕರ ಸಂಕ್ರಾಂತಿ ವೈದಿಕ ದೃಷ್ಟಿಯಿಂದ ತುಂಬಾ ವಿಶೇಷವಾದ ದಿನವಾಗಿದೆ. ಇಲ್ಲಿಂದ ಉತ್ತರಾಯಣಕಾಲ ಪ್ರಾರಂಭ. ಸೂರ್ಯ ಉತ್ತರದ ಕಡೆಗೆ ಪ್ರಯಾಣ ಆರಂಭಿಸಿದಾಗ ಇದನ್ನು ಶ್ರೇಷ್ಠ ಸಮಯ ಎಂದು ಪರಿಗಣಿಸಲಾಗಿದೆ.

ಪುಣ್ಯಕಾಲ
ಉತ್ತರಾಯಣ ಪ್ರಾರಂಭವಾದಾಗಿನಿಂದ 20 ಘಳಿಗೆಯನ್ನು ಪುಣ್ಯಕಾಲ ಎಂದು ಹೇಳಲಾಗುವುದು. ಈ ಅವಧಿಯನ್ನು ತುಂಬಾ ಶ್ರೇಷ್ಠವೆಂದು ಹೇಳಲಾಗುವುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Planet Transit In January 2024 And It's Affects In Kannada

Planet Transit In January 2024: There are 4 planet transit In January 2024, lucky to these 5 zodiac signs, read on...
Story first published: Tuesday, January 2, 2024, 12:23 [IST]
X
Desktop Bottom Promotion