ಗ್ರಹಗಳ ಪಥ ಸಂಚಲನ: ಯಾವ ರಾಶಿಯವರಿಗೆ ಇದು ಶುಭ ಕಾಲ ಗೊತ್ತಾ?

ಜನವರಿ 21ರಂದು ಆಗಸದಲ್ಲಿ ವಿಶೇಷ ವಿದ್ಯಮಾನವೊಂದು ನಡೆಯುತ್ತಿದೆ. 6 ಗ್ರಹಗಳು ಒಂದೇ ರೇಖೆಯ ಮೇಲೆ ಚಲಿಸಲಿವೆ. ಇದು ಅಪರೂಪದಲ್ಲಿ ಅಪರೂಪದ ಖಗೋಳ ವಿದ್ಯಮಾನವಗಿದೆ. ಹಾಗೆ ಈ ಗ್ರಹಗಳ ಸಂಚಾರವನ್ನು ನಾವು ಬರಿಗಣ್ಣಿನಿಂದ ನೋಡಬಹುದಾಗಿದೆ. ಕಳೆದ ವರ್ಷ ಜುಲೈ ಮಾಸದಲ್ಲೂ ಈ ರೀತಿಯ ವಿದ್ಯಮಾನವೊಂದಕ್ಕೆ ನಾವು ಸಾಕ್ಷಿಯಾಗಿದ್ದೆವು.

ಈ ಗ್ರಹಗಳ ಒಂದೇ ರೇಖೆಯಲ್ಲಿ ಸಂಚಾರವು ಜ್ಯೋತಿಷ್ಯಶಾಸ್ತ್ರದಲ್ಲೂ ಬಹಳ ಮಹತ್ವ ಪಡೆದುಕೊಂಡಿದೆ. ಗ್ರಹಗಳ ಈ ರೀತಿಯ ಸಂಚಾರವು ಹಲವು ರಾಶಿಗಳ ಮೇಲೆ ಪರಿಣಾಮ ಬೀರುವುದು ಖಚಿತವಾಗಿದೆ. ಹಾಗೆ ಈ ವಿದ್ಯಮಾನವು ಹಲವು ದಿನಗಳ ಕಾಲ ನೋಡಬಹುದು. ಹಾಗೆ ಫೆಬ್ರವರಿಯಲ್ಲೂ ಕೂಡ ಇದೇ ರೀತಿಯ ವಿದ್ಯಮಾನ ಉಂಟಾಗುತ್ತಿದೆ. ಅದರಲ್ಲೂ 7 ಗ್ರಹಗಳು ಒಂದೇ ರೇಖೆಯಲ್ಲಿ ಚಲಿಸಲಿವೆ.

Planet Parade Discover the Lucky Zodiac Signs

ಹಾಗಾದ್ರೆ ಈ ವಿಶೇಷ ವಿದ್ಯಮಾನದಿಂದಾಗಿ ಯಾವೆಲ್ಲಾ ರಾಶಿಯವರಿಗೆ ಶುಭ ಕಾಲವಾಗುತ್ತಿದೆ. ನಾಳೆಯಿಂದ ಯಾರಿಗೆ ಶುಭವಾಗುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ

ಈ ಸಮಯದಲ್ಲಿ ಮೇಷ ರಾಶಿಯವರಿಗೆ ಲಾಭದಾಯಕವಾಗಿ ಪರಿಣಮಿಸಲಿದೆ. ನೀವು ಕೃಷಿ ಸಂಬಂಧಿ ಕೆಲಸ ಕಾರ್ಯಗಳ ಮಾಡುತ್ತಿದ್ದರೆ, ಯಂತ್ರೋಪಕರಣಗಳ ಮಾರಾಟ ಮಾಡುವವರಾಗಿದ್ದರೆ ಲಾಭದಾಯಕವಾಗಬಹುದು. ಇದು ನಿಮ್ಮ ಲಾಭಗಳ ಹೆಚ್ಚಳಕ್ಕೆ ಕಾರಣವಾಗಬಹುದು. ನಿಮ್ಮ ದೈನಂದಿನ ಕೆಲಸ ಕಾರ್ಯಗಳು ಅಡ್ಡಿ ಇಲ್ಲದೆ ಮುಗಿಯಬಹುದು. ಹಾಗೆ ಶುಭ ಕಾರ್ಯದ ಕಡೆಗೆ ಯೋಚಿಸಲು ಇದು ಶುಭ ಕಾಲವಾಗುತ್ತದೆ.

ಕರ್ಕ ರಾಶಿ

ಮಂಗಳನ ಪ್ರಭಾವವನ್ನು ಹೊಂದಿರುವ ಕರ್ಕ ರಾಶಿಯು ಈ ಸಮಯದಲ್ಲಿ ಅಧಿಕ ಲಾಭಕ್ಕೆ ಕಾರಣವಾಗುತ್ತದೆ. ಪ್ರಮುಖ ಸಮಸ್ಯೆಯೊಂದು ದೂರಾಗುತ್ತದೆ. ಅದರಲ್ಲೂ ಅನಾರೋಗ್ಯ ಸಮಸ್ಯೆ ನಿವಾರಣೆಯ ಸಮಯ ಇದಾಗಲಿದೆ. ನಿಮ್ಮ ಸಂಬಂಧಗಳು ಮತ್ತಷ್ಟು ಬಲಗೊಳ್ಳುತ್ತವೆ. ನೀವು ಪಾಲುದಾಯಕ ವ್ಯವಹಾರದಲ್ಲಿದ್ದರೆ ನಿಮಗೆ ಲಾಭವಾಗುವ ಸಂಭವ ಹೆಚ್ಚು, ನೀವು ಹೊಸ ಉದ್ಯಮ, ವ್ಯವಹಾರ ಆರಂಭಿಸುತ್ತಿದ್ದರೆ ಆರಂಭದಲ್ಲಿ ನಿಮ್ಮ ಬಯಕೆಯಂತೆ ತೃಪ್ತಿದಾಯಕವಾಗಿ ಆರಂಭಗೊಳ್ಳಲಿದೆ.

ಸಿಂಹ ರಾಶಿ

ಈ ಗ್ರಹಗಳ ಸಂಚಾರದಿಂದಾಗಿ ಸಿಂಹ ರಾಶಿಯವರಿಗೆ ಹೆಚ್ಚುವರಿ ಲಾಭಕ್ಕೆ ಕಾರಣವಾಗುತ್ತಿದೆ. ನಿಮ್ಮ ಬಯಕೆಗಳು ಈ ಸಮಯದಲ್ಲಿ ಈಡೇರಲಿದೆ. ನಿಮ್ಮ ಬಹುದಿನಗಳ ಕನಸೊಂದು ಈ ಸಮಯದಲ್ಲಿ ಇಡೇರಲಿದೆ. ನಿಮ್ಮ ಸೂಕ್ಷ್ಮತೆ ಹಾಗೂ ದೃಢ ಸಂಕಲ್ಪಗಳು ಬಹುಮುಖ್ಯ ಕೆಲಸವೊಂದಕ್ಕೆ ಕಾರಣವಾಗಲಿದೆ. ಯಾವಾಗಲು ನಿಮ್ಮಲ್ಲಿ ಧನಾತ್ಮಕ ಶಕ್ತಿ ಇರಲಿದೆ. ನಿಮ್ಮ ವ್ಯಾಪಾರದಲ್ಲಿ ಪ್ರಗತಿ ಕಾಣಲಿದ್ದೀರಿ. ಆರ್ಥಿಕವಾಗಿ ನೀವು ಬಲಗೊಳ್ಳುವ ದಿನಗಳು ಹತ್ತಿರವಾಗುತ್ತವೆ.

ಕನ್ಯಾ ರಾಶಿ

ಈ ಗ್ರಹಗಳ ಸಂಚಾರವು ಕನ್ಯಾ ರಾಶಿಯರಲ್ಲಿ ಲಾಭಕ್ಕೆ ಕಾರಣವಾಗಲಿದೆ. ಹಲವು ದಿನಗಳಿಂದ ಕಾಡುತ್ತಿರುವ ಅನಾರೋಗ್ಯ ಸಮಸ್ಯೆಯೊಂದು ದೂರಾಗಲಿದೆ. ನಿಮ್ಮ ಮನೆಯಲ್ಲಿರುವ ಒಂದು ಸಮಸ್ಯೆ ದೂರಾಗಬಹುದು. ಹಾಗೆ ನಿಮ್ಮ ಮನದಲ್ಲಿದ್ದ ಗೊಂದಲವೊಂದಕ್ಕೆ ಈ ಸಮಯದಲ್ಲಿ ಉತ್ತರ ಸಿಗಬಹುದು. ಮನೆಯಲ್ಲಿ ಶುಭ ಕಾರ್ಯಕ್ಕೆ ಮಾತುಕತೆ ನಡೆಯಬಹುದು. ಎಲ್ಲಾ ವಿಚಾರದಲ್ಲೂ ನಿಮಗೆ ಶುಭವಾಗುತ್ತದೆ. ಅನವಶ್ಯಕವಾಗಿ ಹಣ ಖರ್ಚು ಮಾಡುವುದನ್ನು ತಡೆಯುವುದು ಒಳಿತು.

ಮೀನ ರಾಶಿ

ಗ್ರಹಗತಿಗಳ ಸಂಚಾರವು ಮೀನ ರಾಶಿಯವರಲ್ಲಿ ಲಾಭದಾಯಕವಾಗಿ ಪರಿಣಮಿಸುತ್ತದೆ. ಈ ಸಮಯದಲ್ಲಿ ನಿಮ್ಮ ಬಹುಮುಖ್ಯ ಕಾರ್ಯಗಳು ಅಡ್ಡಿ ಇಲ್ಲದೆ ನಡೆಯಬಹುದು. ದೇವಾಲಯ ಭೇಟಿಯಂತಹ ಕೆಲಸದಲ್ಲಿ ನೀವು ಭಾಗಿಯಾಗಬಹುದು. ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಬಹಳ ಲಾಭವಾಗಲಿದೆ. ವಿದೇಶ ಪ್ರವಾಸ, ಆಸ್ತಿ ವಿವಾದಗಳಲ್ಲಿ ನಿಮಗೆ ಯಶಸ್ಸು ಸಿಗಬಹುದು.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ.)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Planet Parade: Discover the Lucky Zodiac Signs

This type of planetary movement is sure to affect many zodiac signs. This phenomenon can be seen for many days. A similar phenomenon is also happening in February.
Story first published: Monday, January 20, 2025, 18:30 [IST]
X
Desktop Bottom Promotion