ಮೀನ ರಾಶಿಯಲ್ಲಿ 4 ಗ್ರಹಗಳ ಸಂಯೋಗ: ಈ 4 ರಾಶಿಗಳ ಬದುಕು ಬದಲಾಗಲಿದೆ

ಮಾರ್ಚ್‌ ಮಾಸದಲ್ಲಿದೆ ತ್ರಿಗ್ರಹಿ ಯೋಗ, ಚತುರ್ಗ್ರಹಿ ಯೋಗ ಉಂಟಾಗಲಿದೆ. ಈ ಮಾಸ 3 ಗ್ರಹಗಳು ಹಾಗೂ 4 ಪ್ರಮುಖ ಗ್ರಹಗಳು ಮೀನ ರಾಶಿಯಲ್ಲಿ ಸಂಯೋಗವಾಗಲಿದೆ. ಈ ಗ್ರಹಗಳ ಸಂಯೋಗ ಜ್ಯೋತಿಷ್ಯ ದೃಷ್ಟಿಯಿಂದ ತುಂಬಾನೇ ಮಹತ್ವದ್ದಾಗಿದೆ. ನಾಲ್ಕು ಪ್ರಮುಖ ಗ್ರಹಗಳು ಒಂದೇ ರಾಶಿಯಲ್ಲಿ ಬರುವಾಗ ಅದರ ಪ್ರಭಾವ ಕೂಡ ಅಷ್ಟೇ ಬಲವಾಗಿರುತ್ತದೆ. ಈ ಗ್ರಹಗಳ ಸಂಯೋಗ ರಾಶಿಗಳ ಮೇಲೆ ಪ್ರಯೋಜನ ಬೀರಲಿದ್ದು ಕೆಲ ರಾಶಿಗಳ ಮೇಲೆ ಅದ್ಭುತ ಪ್ರಯೋಜನ ಬೀರಲಿದೆ.

Planet Conjunction

ಮಾರ್ಚ್‌ ಮಾಸದಲ್ಲಿ ಈ ಪ್ರಮುಖ ಗ್ರಹಗಳ ಸಂಯೋಗವಿದೆ
ಮಾರ್ಚ್‌ 14ಕ್ಕೆ ಸೂರ್ಯ ಗ್ರಹ, ಬುಧ ಗ್ರಹ ಹಾಗೂ ಶುಕ್ರ ಗ್ರಹದ ಸಂಯೋಗವಾಗಲಿದೆ. ಈ ಮೂರು ಗ್ರಹಗಳ ಸಂಯೋಗ ಏಪ್ರಿಲ್‌ 14ರವರೆಗೆ ಇರಲಿದೆ.

ಮಾರ್ಚ್‌ 28ರಿಂದ ಚತುರ್ಗ್ರಹಿ ಯೋಗ
ಮಾರ್ಚ್‌ 28ರಿಂದ ಮೀನ ರಾಶಿಯಲ್ಲಿ ಚಂದ್ರ, ಬುಧ ಗ್ರಹ, ಶುಕ್ರ ಗ್ರಹ ಹಾಗೂ ರಾಹುವಿನ ಸಂಯೋಗವಾಗಲಿದೆ. ಈ ಸಂಯೋಗ ಎರಡು ದಿನ ಇರಲಿದೆ.

ಮಾರ್ಚ್‌ 29ಕ್ಕೆ 5 ಗ್ರಹಗಳು ಮೀನ ರಾಶಿಯಲ್ಲಿ ಸಂಯೋಗ ವಾಗಲಿದೆ.
ಮಾರ್ಚ್‌ 29ಕ್ಕೆ ಸೂರ್ಯಗ್ರಹ, ಬುಧ ಗ್ರಹ, ಚಂದ್ರ ಗ್ರಹ, ಶುಕ್ರ ಗ್ರಹ, ರಾಹು ಗ್ರಹಗಳ ಸಂಯೋಗವಾಗಲಿದೆ.

ಈ ಮಾರ್ಚ್‌ನಲ್ಲಿ ಸೂರ್ಯ ಮತ್ತು ಶನಿ ಸಂಯೋಗದಿಂದಾಗ ಈ ಗ್ರಹಗಳ ಸಂಯೋಗವಾಗಲಿದೆ.

ಈ ಗ್ರಹಗಳ ಯುತಿ ತುಂಬಾ ಓಳ್ಳೆಯ ಪ್ರಭಾವ ಬೀರಲಿದೆ
ಕೆಲ ರಾಶಿಗಳಿಗೆ ಈ ಗ್ರಹಗಳ ಸಂಯೋಗ ತುಂಬಾನೇ ಉಪಯುಕ್ತವಾಗಲಿದೆ, ಈ ಅವಧಿ ಆರ್ಥಿಕ ದೃಷ್ಟಿಯಿಂದ ತುಂಬಾನೇ ಪ್ರಯೋಜನಕಾರಿಯಾಗಿದೆ. ಅದರಲ್ಲಿಯೂ ಈ ರಾಶಿಯವರು ತುಂಬಾನೇ ಉತ್ತಮ ಪ್ರಯೋಜನ ಪಡೆಯುತ್ತೀರಿ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ಗ್ರಹಗಳ ಸಂಯೋಗ ತುಂಬಾನೇ ಪ್ರಯೋಜನಕಾರಿಯಾಗಿದೆ. ಇಷ್ಟು ದಿನ ನೀವು ಯಾವದೋ ವಿಷಯಕ್ಕೆ ಪ್ರಯತ್ನಿಸುತ್ತಿದ್ದರೆ ಅದಕ್ಕೆ ಉತ್ತಮ ಪ್ರತಿಫಲ ನೀಡಲಿದೆ. ಆರ್ಥಿಕವಾಗಿ ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ. ವ್ಯಾಪಾರಿಗಳು ಈ ಅವಧಿಯಲ್ಲಿ ತುಂಬಾನೇ ಉತ್ತಮ ಆರ್ಥಿಕ ಲಾಭ ಪಡೆಯುತ್ತೀರಿ. ಇನ್ನು ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ನೀವು ಉತ್ತಮ ಆರ್ಥಿಕ ಪ್ರಯೋಜನ ಪಡೆಯುತ್ತೀರಿ.

ಇನ್ನು ಸಾಲ ಮಾಡಿದ್ದರೆ ಆ ಸಾಲ ತೀರಿಸಲು ಸಾಧ್ಯವಾಗಲಿದೆ. ಈ ಗ್ರಹಗಳ ಸಂಯೋಗ ಕುಟುಂಬ ಜೀವನದ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಚತುರ್ಗ್ರಹಿ , ತ್ರಿಗ್ರಹಿ ಯೋಗ ತುಂಬಾನೇ ಪ್ರಯೋಜನಕಾರಿಯಾಗಲಿದೆ. ಚಂದ್ರ, ಶುಕ್ರ, ಬುಧ, ಸೂರ್ಯ ಈ ಗ್ರಹಗಳ ಪ್ರಭಾವ ನಿಮಗೆ ಅನುಕೂಲಕರವಾಗಿರಲಿದೆ. ಹಣದ ವಿಷಯದಲ್ಲಿ ಈ ದಿನ ಉತ್ತಮವಾಗಿರಲಿದೆ. ನಿಮ್ಮ ಹಣದ ಪ್ರಯತ್ನಕ್ಕೆ ನೀವು ಉತ್ತಮ ಪ್ರತಿಫಲ ಪಡೆಯುತ್ತೀರಿ. ನಿಮ್ಮ ಕೆಲಸ ಕಾರ್ಯಗ್ರಳಲ್ಲಿ ಯಶಸ್ಸು ದೊರೆಯಲಿದೆ.

ಆಸ್ತಿ ವ್ಯವಹಾರ ಮಾಡುವವರು ತುಂಬಾ ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ಇನ್ನು ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ನಿಮ್ಮ ಮದುವೆಗೆ ದಿನಾಂಕ ನೋಡುತ್ತೀರಿ, ನಿಮ್ಮ ಬದುಕಿನಲ್ಲಿ ಹೊಸ ವ್ಯಕ್ತಿಯ ಆಗಮನವಾಗಲಿದೆ. ವಿವಾಹಿತರಿಗೂ ಈ ಸಮಯ ಪ್ರಯೋಜನಕಾರಿಯಾಗಿದೆ.

ಸಿಂಹ ರಾಶಿ
ಈ ಗ್ರಹಗಳ ಸಂಯೋಗ ಸಿಂಹ ರಾಶಿಯವರಿಗೂ ತುಂಬಾನೇ ಪ್ರಯೋಜನಕಾರಿಯಾಗಿದೆ. ಹಣದ ದೃಷ್ಟಿಯಿಂದ ಈ ಸಮಯ ನಮಗೆ ಅನುಕೂಲಕರವಾಗಿದೆ. ನೀವು ಕೆಲಸದಲ್ಲಿ ಬಯಸಿದ ಫಲಿತಾಂಶ ಪಡೆಯುತ್ತೀರಿ, ಹಣದ ಹೂಡಿಕೆಗೆ ಈ ಸಮಯ ಅನುಕೂಲಕರವಾಗಿದೆ. ಹೊಸ ಹೂಡಿಕೆಗಳು ನಿಮಗೆ ಲಾಭ ತರಲಿದೆ. ವ್ಯಾಪಾರಸ್ಥರು ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ.

ಆರೋಗ್ಯದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ, ಕುಟುಂಬದಲ್ಲಿ ಪರಿಸ್ಥಿತಿ ತುಂಬಾ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಸಮನ್ವಯ ಉತ್ತಮವಾಗಿರಲಿದೆ.

ವೃಶ್ಚಿಕ ರಾಶಿ
ಈ ಗ್ರಹಗಳ ಸಂಯೋಗ ವೃಶ್ಚಿಕ ರಾಶಿಯವರಿಗೂ ತುಂಬಾನೇ ಪ್ರಯೋಜನಕಾರಿಯಾಗಿದೆ, ನಿಮ್ಮ ಕೆಲಸ ಕಾರ್ಯವು ಯಾವುದೇ ಅಡೆತಡೆಯಿಲ್ಲದೆ ಪೂರ್ಣವಾಗಲಿದೆ. ನೀವು ಬೇರೆ ಕಡೆ ಕೆಲಸಕ್ಕೆ ಪ್ರಯತ್ನ ಮಾಡಿದ್ದರೆ ನೀವು ಬಯಸಿದ ಕೆಲಸ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ. ಹಣಕಾಸು ಉತ್ತಮವಾಗಿರಲಿದೆ, ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗಲಿದೆ. ಈ ಅವಧಿಯಲ್ಲಿ ಆರೋಗ್ಯ ಕೂಡ ಚೆನ್ನಾಗಿರಲಿದೆ.

ಗ್ರಹಗಳ ಅಧಿಪತಿ ಸೂರ್ಯಗ್ರಹ ಮೀನ ರಾಶಿಗೆ ಸಂಚಾರ
ಸೂರ್ಯನು ಪ್ರತಿ ತಿಂಗಳು ರಾಶಿ ಬದಲಾವಣೆ ಮಾಡುತ್ತಿರುತ್ತಾನೆ, ಹೀಗೆ ಪ್ರತಿ ಬಾರಿ ರಾಶಿ ಬದಲಾವಣೆ ಮಾಡಿದಾಗೆಲ್ಲಾ ಅದರ ಪ್ರಭಾವ ಪ್ರತಿಯೊಂದು ರಾಶಿ ಮೇಲೆ ಇರಲಿದೆ. ಇದೀಗ ಮಾರ್ಚ್‌ 14ಕ್ಕೆ ಮೀನ ರಾಶಿಗೆ ಸಂಚಾರಮಾಡುವ ಸೂರ್ಯ ಏಪ್ರಿಲ್ 14ರವರೆಗೆ ಇದೇ ರಾಶಿಯಲ್ಲಿದ್ದು ನಂತರ ರಾಶಿ ಬದಲಾವಣೆ ಮಾಡಲಿದೆ. ಅಲ್ಲಿಯವರೆ ಸೂರ್ಯನು ರಾಶಿಯ ಯಾವ ಮನೆಯಲ್ಲಿದೆಯೋ ಅದರಂತೆ ಪ್ರಭಾವ ಬೀರಲಿದೆ.

ಶನಿ ಸಂಚಾರ
ಕರ್ಮದ ದೇವತೆಯಾದ ಶನಿಯು ಮೀನ ರಾಶಿ ರಾಶಿಗೆ ಸಂಚರಿಸಲಿದೆ, ಹೀಗೆ ಸಂಚಾರ ಮಾಡಿದಾಗ ಅದರ ಪ್ರಭಾವ ಪ್ರತಿಯೊಂದು ರಾಶಿಗಳ ಮೇಲೆ ದೀರ್ಘವಾಗಿರುತ್ತದೆ. ಸೂರ್ಯ ಮತ್ತು ಶನಿ ಪರಸ್ಪರ ಶತ್ರು ಗ್ರಹಗಳಾದರು ಈ ಗ್ರಹಗಳ ಸಂಯೋಗ ಈ ಮೇಲಿನ ರಾಶಿಗಳಿಗೆ ಪ್ರಯೋಜನಕಾರಿಯಾಗಿದೆ.

ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Planet Conjunction In Meena Rashi: Brings Changes In These Zodiac Signs Life

Planet Conjunction In Meena Rashi: More lucky to these 4 zodiac signs, read on...
Story first published: Thursday, March 6, 2025, 15:00 [IST]
X
Desktop Bottom Promotion