Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
30 ವರ್ಷಗಳ ನಂತರ ಶನಿ-ರಾಹು ಸಂಯೋಗದಿಂದ ಪಿಶಾಚಿ ಯೋಗ: ಈ ರಾಶಿಯವರಿಗೆ ಸಂಕಷ್ಟ..!!
ಜ್ಯೋತಿಷ್ಯಶಾಸ್ತ್ರದಲ್ಲಿ ಎಲ್ಲಾ ಗ್ರಹಗಳಿಗೂ ಪ್ರಾಮುಖ್ಯತೆ ನೀಡಲಾಗುತ್ತದೆ. ಎಲ್ಲಾ ಗ್ರಹಗಳು ನಿರ್ಧಿಷ್ಟ ಸಮಯದಲ್ಲಿ ತಮ್ಮ ಸ್ಥಾನ ಬದಲಿಸುವುದು ನೋಡಬಹುದು. ಇದು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ಕೂಡ ನಾವು ನೋಡುತ್ತಿರುತ್ತೇವೆ. ಎಲ್ಲಾ ರಾಶಿಗಳಲ್ಲೂ ನಿಗಧಿತ ಸಮಯದಲ್ಲಿ ಗ್ರಹಗಳ ಚಲನೆ ಹಲವು ರೀತಿ ಯೋಗಗಳು ತರುವುದು ಕೂಡ ನಾವು ನೋಡಬಹುದು.
ನಾವಿಂದು ಶನಿ ಗ್ರಹದ ಚಲನೆಯ ಕುರಿತಾಗಿ ತಿಳಿದುಕೊಳ್ಳೋಣ. ಅದರಲ್ಲೂ ಶನಿ ಗ್ರಹವು ಅತ್ಯಂತ ನಿಧಾನಗತಿಯಲ್ಲಿ ಚಲಿಸುವ ಗ್ರಹವಾಗಿ ಶನಿ ಚಲನೆಯು ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಉಂಟು ಮಾಡುತ್ತದೆ. ಹಾಗೆ ಎಲ್ಲಾ ಗ್ರಹಗಳಲ್ಲಿಯೂ ಶನಿ ಚಲಿಸುತ್ತಾನೆ, ಹಾಗೆ ಶನಿ ಚಲಿಸುವ ಗ್ರಹದಲ್ಲಿ ಉಂಟಾಗುವ ಸಂಯೋಗಗಳು ಹಲವು ರೀತಿಯ ಯೋಗಕ್ಕೆ ಕಾರಣವಾಗುತ್ತದೆ.

ಶನಿ ಒಂದೇ ರಾಶಿಯಲ್ಲಿ ಎರಡೂವರೆ ವರ್ಷ ಚಲಿಸುತ್ತಾನೆ. ಹಾಗೆ ಚಲಿಸುವಾಗ ಮತ್ತೆ ಉಳಿದ ಗ್ರಹಗಳು ಆತನ ಜೊತೆಗೆ ಸಂಯೋಗವಾಗುತ್ತವೆ. ಈಗ ಶನಿ ಕುಂಭ ರಾಶಿಯಲ್ಲಿ ಚಲಿಸುತ್ತಿದ್ದಾನೆ. ಆದ್ರೆ ಮಾರ್ಚ್ ಕೊನೆಯಲ್ಲಿ ಶನಿಯು ಮೀನ ರಾಶಿಗೆ ಚಲಸಲಿದ್ದಾನೆ. ಈ ಬಾರಿ ಮೀನ ರಾಶಿಯಲ್ಲಿ ಹಲವು ಗ್ರಹಗಳ ಸಂಯೋಗವಾಗುತ್ತಿದೆ. ಈಗ ಮೀನ ರಾಶಿಗೆ ಶನಿ ಚಲಿಸುವುದು ಅಲ್ಲಿ ರಾಹುವಿನ ಸಂಯೋಗಕ್ಕೆ ಕಾರಣವಾಗುತ್ತಿದೆ.
ರಾಹುವಿನ ಸಂಯೋಗವು ಹಲವು ಬಾರಿ ಶುಭ ಹಾಗೂ ಅಶುಭಕ್ಕೆ ಕಾರಣವಾಗುತ್ತದೆ. ರಾಹುವನ್ನು ನೆರಳಿನ ಗ್ರಹ ಹಾಗೆ ಕೆಡುಕು ತರುವಂತಹ ಗ್ರಹ ಎಂದು ಹೇಳಲಾಗಿದೆ. ಈಗ ಮೀನ ರಾಶಿಯಲ್ಲಿ ಶನಿ ಹಾಗೂ ರಾಹುವಿನ ಸಂಯೋಗವು ಪಿಶಾಚಿ ಯೋಗಕ್ಕೆ ಕಾರಣವಾಗುತ್ತಿದೆ. ಇದು ಹಲವು ರಾಶಿಯವರಿಗೆ ಸಂಕಷ್ಟದ ಸೂಚಕವಾಗಿದೆ, ಹಾಗಾದ್ರೆ ಯಾವ ರಾಶಿಯವರಿಗೆ ಇದು ಕಂಟಕಪ್ರಾಯವಾಗಿ ಕಾಡಲಿದೆ ಎನ್ನುವುದನ್ನು ನಾವಿಂದು ತಿಳಿದುಕೊಳ್ಳೋಣ.
ಮೀನ ರಾಶಿ
ಮೀನ ರಾಶಿಯ ಮೊದಲ ಮನೆಯಲ್ಲಿ ಪಿಶಾಚಿ ಯೋಗ ರೂಪುಗೊಳ್ಳುತ್ತದೆ. ಇದರಿಂದಾಗಿ ಈ ರಾಶಿ ಜನರು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜೀವನದಲ್ಲಿನ ಶಾಂತಿ ಮತ್ತು ಸಂತೋಷವು ದೂರಾಗಬಹುದು. ನಿಮ್ಮ ಜೀವನದಲ್ಲಿನ ಅತ್ಯಂತ ಮುಖ್ಯ ನಿರ್ಧಾರದಿಂದ ಸಮಸ್ಯೆ ಎದುರಿಸಬೇಕಾಗಬಹುದು. ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ಅಡೆತಡೆಗಳು, ಸಮಸ್ಯೆಗಳು ಎದುರಾಗಬಹುದು. ಉದ್ಯೋಗದಲ್ಲಿ ಒತ್ತಡ ಹಾಗೆ ಕಠಿಣವಾಗುತ್ತಾ ಸಾಗಬಹುದು, ವ್ಯಾಪಾರ ವ್ಯವಹಾರದಲ್ಲಿ ನಷ್ಟ ಎದುರಾಗಬಹುದು.
ಸಿಂಹ ರಾಶಿ
ಸಿಂಹ ರಾಶಿಯ 8ನೇ ಮನೆಯಲ್ಲಿ ಪಿಶಾಚಿ ಯೋಗವು ರೂಪುಗೊಳ್ಳುತ್ತದೆ. ಇದರಿಂದ ಈ ರಾಶಿ ಜನರ ಆರೋಗ್ಯದಲ್ಲಿ ಏರುಪೇರು ನೋಡಬಹುದು. ಹಣಕಾಸು ವಿಚಾರದಲ್ಲಿ ಬಹಳ ಜಾಗೃತೆ ವಹಿಸಬೇಕಾಗುತ್ತದೆ. ಹಳೆಯ ಕಾಯಿಲೆಗಳು ನಿಮ್ಮನ್ನು ಕಾಡಲಿವೆ. ಹಾಗೆ ಅನಗತ್ಯ ಖರ್ಚು, ಈ ಖರ್ಚಿಗಾಗಿ ಅಧಿಕ ಶ್ರಮ ಪಡೆಬೇಕಾಗುತ್ತದೆ. ಸಂಬಂಧಗಳಲ್ಲಿ ಮನಸ್ತಾಪ ಮೂಡಬಹುದು. ದಾಂಪತ್ಯ, ಸ್ನೇಹಿತರಿಂದಲೂ ನೋವು ಉಂಟಾಗಬಹುದು. ಯಾವ ಕೆಲಸವು ನಿಮ್ಮ ಪರವಾಗಿ ಆಗದೆ ಇರುವ ಪರಿಸ್ಥಿತಿ ಎದುರಿಸಬೇಕಾಗಬಹುದು. ಕುಟುಂಬಸ್ಥರಲ್ಲಿ ಅನಾರೋಗ್ಯ ಕಾಡಬಹುದು.
ವೃಷಭ ರಾಶಿ
ವೃಷಭ ರಾಶಿಯ 11 ನೇ ಮನೆಯಲ್ಲಿ ಪಿಶಾಚಿ ಯೋಗವು ರೂಪುಗೊಳ್ಳುತ್ತದೆ. ಇದರಿಂದಾಗಿ ಈ ರಾಶಿ ಜನರು ಬಹಳ ಕಾಲದಿಂದ ಅನುಭವಿಸಿದ್ದ ಶಾಂತಿಯಿಂದ ದೂರಾಗಬೇಕಾಗುತ್ತದೆ. ಕುಟುಂಬ, ಸ್ನೇಹಿತರು, ಸಂಬಂಧಿಕರಿಂದ ನಿಮಗೆ ಸಮಸ್ಯೆ ಮೂಡಬಹುದು. ಎಲ್ಲಾ ಕೆಲಸದಲ್ಲಿ ಅಡೆತಡೆ, ಸಂಭಾವ್ಯ ಸಮಸ್ಯೆಗಳ ಎದುರಿಸಬೇಕಾಗುತ್ತದೆ. ರಿಯಲ್ ಎಸ್ಟೇಟ್, ಆಸ್ತಿ, ಉಳಿತಾಯ, ಹಣಕಾಸು ವಿಚಾರವಾಗಿ ನಿಮಗೆ ಸಮಸ್ಯೆ ಎದುರಾಗಬಹುದು. ಮಕ್ಕಳಿಗೆ ಸಂಬಂಧಿಸಿದಂತೆ ಒಂದಿಷ್ಟು ಸಂಕಷ್ಟ ಎದುರಿಸಬೇಕಾಗಬಹುದು. ಹಾಗೆ ಉದರ ಸಂಬಂಧಿ ಸಮಸ್ಯೆಗಳು ನಿಮಗೆ ಕಾಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications


