Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
ಮೀನ ರಾಶಿ ವಾರ್ಷಿಕ ಭವಿಷ್ಯ 2026: ಈ ವರ್ಷ ಹಣ ದುಪ್ಪಟ್ಟು! ಉದ್ಯೋಗ ಲಾಭ!
2025ರಲ್ಲಿ ಮೀನ ರಾಶಿಯವರಿಗೆ ಅದೃಷ್ಟಗಳಿಂದ ತುಂಬಿತ್ತು. ಈ ಸಮಯದಲ್ಲಿ ನೀವು ಹಲವು ರೀತಿಯ ಲಾಭಗಳ ನೋಡಿದ್ದೀರಿ. ಹಾಗೆ 2026ರಲ್ಲೂ ಸಹ ಮೀನ ರಾಶಿ ಜನರಿಗೆ ಅನುಕೂಲಕರ ವಿದ್ಯಮಾನಗಳು, ಆರಂಭಗಳು, ಯೋಗಗಳು ಅದಷ್ಟ ತರಲಿದೆ. ಶನಿಯು ವರ್ಷವಿಡೀ ನಿಮ್ಮ ಜಾತಕದ ಮೊದಲ ಮನೆಯಲ್ಲಿರುತ್ತಾನೆ. ಆದ್ದರಿಂದ ಕೆಲವೊಂದು ಕೆಲಸಗಳಲ್ಲಿ ಅಡ್ಡಿಗಳನ್ನು ಕೂಡ ನೀವು ನೋಡಬಹುದು.
ವರ್ಷದ ಆರಂಭವು ಹೆಚ್ಚು ಕೆಲಸಗಳಿಂದ ಆರಂಭವಾಗಬಹುದು. ನಿಮ್ಮ ಪ್ರಗತಿ ಸಂಬಂಧಿತ ವಿಚಾರವಾಗಿ ಮೊದಲ 3 ತಿಂಗಳ ಕಾಲ ಓಟಾಟಗಳು, ಬಯಕೆಗಳ ಇಟ್ಟುಕೊಂಡ ಕೆಲಸಗಳನ್ನು ಮಾಡಬಹುದು. ಈ ವರ್ಷ ಮೀನ ರಾಶಿ ಜನರಲ್ಲಿ ಆದಾಯ ಸಂಬಂಧಿತ ಶುಭವಿದೆ. ಆದ್ರೆ ವೃತ್ತಿ ಜೀವನ, ಆರೋಗ್ಯ, ದಾಂಪತ್ಯ ವಿಚಾರಗಳಲ್ಲಿ ಒಂದಿಷ್ಟು ಹಿನ್ನಡೆ, ವಿಳಂಬಗಳ ನೋಡಬಹುದು.

ಶನಿಯ ಪ್ರಭಾವದಿಂದಾಗಿ ನಿಮಗೆ ಹಲವು ಕೆಲಸಗಳಲ್ಲಿ ಅಡ್ಡಿಗಳ ನೋಡಬಹುದು. ಹಲವು ರೀತಿಯ ನಿಮ್ಮ ವೈಯಕ್ತಿಕ ವಿಚಾರಗಳು ನಿಧಾನವಾಗುವುದನ್ನು ವರ್ಷ ನೋಡಬಹುದು. ಇನ್ನು ವರ್ಷದ ಅಂತ್ಯದ ವೇಳೆಗೆ ನಿಮ್ಮಲ್ಲಿ ಹಲವು ರೀತಿಯ ದುಂದುವೆಚ್ಚಗಳು ಆರ್ಥಿಕ ವಿಚಾರದಲ್ಲಿ ಸವಾಲುಗಳ ತರಲಿವೆ. ಹಾಗಾದ್ರೆ ಈ ವರ್ಷದಲ್ಲಿ ಯಾವೆಲ್ಲಾ ರೀತಿಯ ಶುಭ ನೋಡಬಹುದು ಎಂಬುದನ್ನು ತಿಳಿದುಕೊಳ್ಳೋಣ.
ವ್ಯವಹಾರ ಮತ್ತು ಆರ್ಥಿಕತೆ
2026ರಲ್ಲಿ ಮೀನ ರಾಶಿಯವರಿಗೆ ಆರ್ಥಕ ಸಮಸ್ಯೆಗಳು ನಿವಾರಣೆಯಾಗಲಿದೆ. ನಿಮ್ಮ ಸಾಲದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುವುದು ನೋಡಬಹುದು. ಇದು ನಿಮ್ಮ ಹಲವು ಹಣಕಾಸಿನ ಸಮಸ್ಯೆಗಳಲ್ಲಿ ಸುಧಾರಣೆ ತರಲು ಕಾರಣವಾಗಲಿದೆ. ವರ್ಷದ ಮಧ್ಯಂತರದಿಂದ ನಿಮ್ಮ ಆದಾಯ ತರುವ ಮೂಲವೊಂದರಿಂದ ದ್ವಿಗುಣ ಲಾಭ ನೋಡಬಹುದು. ಇನ್ನು ವರ್ಷಾಂತ್ಯಕ್ಕೆ ನಿಮ್ಮ ಬಯಕೆಯ ವಸ್ತುವೊಂದನ್ನು ಖರೀದಿಸಲು ಮುಂದಾಗುವಿರಿ. ಹಾಗೆ ನಿfಮ ಉಳಿತಾಯ ಹಾಗೂ ಹೂಡಿಕೆಗಳಲ್ಲಿ ಧನಾತ್ಮಕ ಬದಲಾವಣೆಗಳ ನೋಡಬಹುದು.
ಏಪ್ರಿಲ್ ವರೆಗೆ ನಿಮ್ಮ ವ್ಯವಹಾರವು ವೇಗ ಪಡೆದುಕೊಳ್ಳಲಿದೆ. ಹಾಗೆ ವರ್ಷದ ಮಧ್ಯಾಂತರದಲ್ಲಿ ನೀವು ದೊಡ್ಡ ಒಪ್ಪಂದಗಳು, ಸಾಲ, ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಭೂಮಿ, ಆಸ್ತಿ, ಬ್ಯಾಂಕಿಂಗ್, ಹೂಡಿಕೆಯಂತಹ ವಿಚಾರಗಳಲ್ಲಿ ಈ ವರ್ಷದ ಅಂತ್ಯವು ಶುಭಕರವಾಗಿರಲಿದೆ. ನೀವು ಶಿಕ್ಷಣ, ಬರವಣಿಗೆ, ವಿನ್ಯಾಸ, ಆಸ್ಪತ್ರೆ ವಲಯ, ಸೃಜನಶೀಲ ಕ್ಷೇತ್ರದಲ್ಲಿದ್ದರೆ, ಹೊಸ ಅವಕಾಶಗಳು ಹೊರಹೊಮ್ಮಬಹುದು. ಸ್ವಂತ ಉದ್ಯಮದಾರರಿಗೆ ಈ ವರ್ಷ ಕಠಿಣವಾಗಿದ್ದರೂ ನಿಮ್ಮ ಆದಾಯದಲ್ಲಿ ಏರಿಕೆ ಗಮನಿಸಬಹುದು.
ವರ್ಷದ ಕೊನೆಯ ಭಾಗವು ಸ್ಥಿರತೆಯನ್ನು ತರುತ್ತದೆ. ನಿಮ್ಮ ವೃತ್ತಿಜೀವನವು ದೊಡ್ಡ ಜಿಗಿತವನ್ನು ಕಾಣದಿದ್ದರೂ, ನೀವು ಮಾಡುತ್ತಿರುವ ಕೆಲಸದಲ್ಲಿ ಶುಭವಾಗುತ್ತದೆ. ದೊಡ್ಡ ಹಣಕಾಸಿನ ವಿಚಾರವೊಂದರಿಂದ ನಿಮಗೆ ಶುಭವಿದೆ.
2026ರಲ್ಲಿ ಮೀನ ರಾಶಿಯರಿಗಿರುವ ಅನಾನುಕೂಲವೇನು?
ಈ ವರ್ಷ ನಿಮ್ಮಲ್ಲಿ ಹಲವು ರೀತಿ ಅನುಕೂಲದೊಂದಿಗೆ ಅನಾನುಕೂಲಗಳು ಕೂಡ ಇವೆ. ದಾಂಪತ್ಯ ವಿಚಾರದಲ್ಲಿ ಈ ವರ್ಷ ನೋವಿನ ಸಂಗತಿ ಕೇಳುವ ಸಾಧ್ಯತೆಗಳಿವೆ. ಕುಟುಂಬದ ಹಣಕಾಸು ವಿಚಾರದಲ್ಲಿ ಮನಸ್ತಾಪಗಳು, ಮುನಿಸುಗಳು ಬರಲಿವೆ. ಪ್ರೀತಿ ಪ್ರೇಮದ ವಿಚಾರಗಳಲ್ಲಿ ನೀವು ಬಯಸಿದ ದಿನಗಳಿರುವುದಿಲ್ಲ. ವರ್ಷದ ಅಂತ್ಯದಲ್ಲಿ ನಿಮ್ಮ ಆದಾಯ ಸಂಬಂಧಿತ ನಿರ್ಧಾರವೊಂದು ಸಾಲ ಮಾಡಲು ಪ್ರೇರೇಪಿಸಬಹುದು. ಆಪ್ತರೊಬ್ಬರಿಗೆ ನೀಡುವ ಹಣ ನಿಮ್ಮ ಕೈ ಸೇರುವುದು ಮುಂದೂಡಬೇಕಾಗುತ್ತದೆ. ವಾಹನ ಖರ್ಚುಗಳು ಹೆಚ್ಚಾಗುವುದು.
(ಹಕ್ಕುತ್ಯಾಗ: ಮೇಲೆ ಒದಗಿಸಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಇದನ್ನು ಮಾಹಿತಿಯಾಗಿ ಮಾತ್ರ ತೆಗೆದುಕೊಳ್ಳಬೇಕು. ಯಾವುದೇ ಮಾಹಿತಿ ಅಥವಾ ಊಹೆಯನ್ನು ಅಭ್ಯಾಸ ಮಾಡುವ ಅಥವಾ ಕಾರ್ಯನಿರ್ವಹಿಸುವ ಮೊದಲು ದಯವಿಟ್ಟು ಅರ್ಹ ವೃತ್ತಿಪರರನ್ನು ಸಂಪರ್ಕಿಸಿ.)



Click it and Unblock the Notifications











